ಬಸರಕೋಡದಲ್ಲಿ ಹಬ್ಬದ ಸಂಭ್ರಮ: ಪವಾಡ ಬಸವೇಶ್ವರರ ನೂತನ ಮೂರ್ತಿ ಪ್ರತಿಷ್ಠಾಪನೆ

ಬಸರಕೋಡದಲ್ಲಿ ಹಬ್ಬದ ಸಂಭ್ರಮ: ಪವಾಡ ಬಸವೇಶ್ವರರ ನೂತನ ಮೂರ್ತಿ ಪ್ರತಿಷ್ಠಾಪನೆ

ಮುದ್ದೇಬಿಹಾಳ : ತಾಲ್ಲೂಕಿನ ಐತಿಹಾಸಿಕ ಸುಕ್ಷೇತ್ರ ಬಸರಕೋಡ ಗ್ರಾಮದಲ್ಲಿ ಮಂಗಳವಾರ ಗೌರಿ ಹುಣ್ಣಿಮೆಯ ದಿನದಂದು ಸಂಭ್ರಮದಿoದ ಪವಾಡ ಬಸವೇಶ್ವರ ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.ವಿಶೇಷ ರುದ್ರಾಭಿಷೇಕ ನಡೆಸಿ ದೇವರ ಮೂರ್ತಿಯನ್ನು ಅನಾವರಣಗೊಳಿಸಲಾಯಿತು.

ನೂತನ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಸಿ.ಎಸ್ ನಾಡಗೌಡ, ನೂತನ ಪ್ರತಿಮೆ ದರ್ಶನ ಪಡೆದರು.ಬಳಿಕ ತಮ್ಮ ಕುಟುಂಬದಿAದ ಒಂದು ಕೆಜಿ ಬೆಳ್ಳಿ ದಾನವಾಗಿ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ.ಎಸ್.ನಾಡಗೌಡ, ಪವಾಡ ಬಸವೇಶ್ವರರು ಭಕ್ತರಿಗೆ ಬೇಡಿದ ವರವನ್ನು ಅವರ ಕಷ್ಟಗಳನ್ನು ದೂರ ಮಾಡುತ್ತಾರೆ. ಈ ಪವಾಡ ಬಸವೇಶ್ವರರ ಈ ಹಿಂದಿನ ಬೆಳ್ಳಿ ಪ್ರತಿಮೆ ಸಹ ಕಳ್ಳತನವಾಗಿ ಮರಳಿ ಬಂದಿರೋದು ಸಹ ಒಂದು ಪವಾಡವೇ ಸರಿ. ಹೊಸ ಪ್ರತಿಮೆಗೆ ಎಲ್ಲಾ ಭಕ್ತರು ನೀಡಿದ ಬೆಳ್ಳಿಯನ್ನು ಸೇರಿಸಿ ನೂತನ ಪ್ರತಿಮೆ ಪ್ರತಿಷ್ಠಾಪನೆ ಆಗಿದ್ದು ಸಹ ಒಂದು ಪವಾಡವಾಗಿದೆ. ವರ್ಷದಲ್ಲಿ ಎಲ್ಲಾ ಭಕ್ತರು ಸೇರಿ 3 ಜಾತ್ರೆಯನ್ನು ಮಾಡುತ್ತಾರೆ.ದೇವಸ್ಥಾನ ಕಮೀಟಿ ಹಗಲಿರಳು ಭಕ್ತರ ಭಾವನೆಗಳನ್ನು ಗೌರವಿಸುವ ಕೆಲಸ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಕರನಂದಪ್ಪ ಬಿರಾದಾರ ಹಾಗೂ ಆಡಳಿತ ಮಂಡಳಿ ಸದಸ್ಯ, ಪವಾಡ ಬಸವೇಶ್ವರ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಶ್ರೀಶೈಲ್ ಮೇಟಿ ಮಾತನಾಡಿ, ನೂತನ ಬೆಳ್ಳಿ ಪ್ರತಿಮೆಯನ್ನು 40 ಕೆಜಿ ಬೆಳ್ಳಿ ಹಾಗೂ ದೇವರ ಪ್ರಭಾವಳಿ 15 ಒಟ್ಟು 55 ಕಜಿ ಬೆಳ್ಳಿಯಲ್ಲಿ ನೂತನ ಪ್ರತಿಮೆ ಇಂದು ಪ್ರಾಣ ಪ್ರತಿಷ್ಠಾಪನೆ ಮೂಲಕ ಭಕ್ತರ ದರ್ಶನಕ್ಕೆ ಲೋಕಾರ್ಪಣೆ ಮಾಡಲಾಗಿದೆ ಎಂದರು.


ಧರ್ಮಸಭೆ: ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ಯ ಧರ್ಮಸಭೆ ಜರುಗಿತು. ಕುಷ್ಟಗಿ ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಸ್ವಾಮೀಜಿ,ಕುಂಟೋಜಿ ಭಾವೈಕ್ಯತಾ ಮಠದ ಚನ್ನವೀರ ಶಿವಾಚಾರ್ಯರು, ಪಡೇಕನೂರ ದಾಸೋಹಮಠದ ಮಲ್ಲಿಕಾರ್ಜುನ ಸ್ವಾಮೀಜಿ,ಢವಳಗಿ ಗದ್ದುಗೆಮಠದ ಘನಮಠೇಶ್ವರ ಸ್ವಾಮೀಜಿ,ಶರಣ ಸೋಮನಾಳದ ಮಹಾದೇವಯ್ಯ ಶಾಸ್ತ್ರಿ,ಅರಳಿಚಂಡಿ ಶರಣರು ಸಾನಿಧ್ಯವಹಿಸಿದ್ದರು.ಆಡಳಿತ ಮಂಡಳಿಯ ಅಧ್ಯಕ್ಷ ಕೆ ವೈ ಬಿರಾದಾರ, ಕಾರ್ಯದರ್ಶಿ ಎಸ್ ಬಿ ನಾಡಗೌಡ,ಶ್ರೀಶೈಲ್ ಮೇಟಿ, ನೀಲಕಂಠರಾವ ನಾಡಗೌಡ ,ಅಪ್ಪು ಬಿರಾದಾರ, ಕೆ.ಎಸ್ ಕೂಟಗಿ, ಬಿ.ಸಿ ಕಲ್ಲೂರ,ವಿರೇಶ ಮಂಕಣಿ ಸೇರಿದಂತೆ ಬಸರಕೋಡ ಹಾಗೂ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು.ಶಿಕ್ಷಕ ಪ್ರಕಾಶ ಗೊಂಧಳೆ ನಿರೂಪಿಸಿ ವಂದಿಸಿದರು.

Latest News

ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ:                                 ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ: ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ವಿಶೇಷ ವರದಿ : ಶಂಕರ್ ಹೆಬ್ಬಾಳ ಮುದ್ದೇಬಿಹಾಳ : ಹಲವು ಆಶಾಭಾವನೆ ಹಾಗೂ ಭರವಸೆಗಳೊಂದಿಗೆ

ಹಜರತ್ ಟಿಪ್ಪು ಸುಲ್ತಾನ್ ಜಯಂತಿ:                                       ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

ಹಜರತ್ ಟಿಪ್ಪು ಸುಲ್ತಾನ್ ಜಯಂತಿ: ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

ಮುದ್ದೇಬಿಹಾಳ : ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಆಲ್ ಕಿದ್ಮತ್ ಫೌಂಡೇಶನ್ ವತಿಯಿಂದ

ಎರಡು ದಿನಗಳಲ್ಲಿ ಕಾಲುವೆಗಳಿಗೆ ನೀರು:  ಅಧಿಕಾರಿಗಳೊಂದಿಗೆಶಾಸಕ ನಾಡಗೌಡರ ಸಮಾಲೋಚನೆ

ಎರಡು ದಿನಗಳಲ್ಲಿ ಕಾಲುವೆಗಳಿಗೆ ನೀರು: ಅಧಿಕಾರಿಗಳೊಂದಿಗೆಶಾಸಕ ನಾಡಗೌಡರ ಸಮಾಲೋಚನೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ರೈತರ ಜಮೀನುಗಳಿಗೆ ನೀರು ಸಿಗದೆ ತೀವ್ರ ತೊಂದರೆಯಾಗುತ್ತಿರುವ

ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಗೆ ಅದ್ದೂರಿ ಸ್ವಾಗತ

ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಗೆ ಅದ್ದೂರಿ ಸ್ವಾಗತ

ಮುದ್ದೇಬಿಹಾಳ : ಕಳ್ಳತನವಾಗಿದ್ದ ಬೆಳ್ಳಿ ಮೂರ್ತಿ ಪೊಲೀಸರ ಚುರುಕಾದ ತನಿಖೆಯಿಂದ ಗಟ್ಟಿ ಬೆಳ್ಳಿ ರೂಪದಲ್ಲಿ

34 ವಿದ್ಯಾರ್ಥಿಗಳು ತಾಲ್ಲೂಕುಮಟ್ಟಕ್ಕೆ ಆಯ್ಕೆ:                      ಹುಲ್ಲೂರು ಎಸ್‌ಎನ್‌ಡಿ ನ್ಯಾಶನಲ್ ಪಬ್ಲಿಕ್ ಶಾಲೆ ಸಾಧನೆ

34 ವಿದ್ಯಾರ್ಥಿಗಳು ತಾಲ್ಲೂಕುಮಟ್ಟಕ್ಕೆ ಆಯ್ಕೆ: ಹುಲ್ಲೂರು ಎಸ್‌ಎನ್‌ಡಿ ನ್ಯಾಶನಲ್ ಪಬ್ಲಿಕ್ ಶಾಲೆ ಸಾಧನೆ

ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಶಿಕ್ಷಣಾಧಿಕಾರಿ ಎಂ.ಎಸ್. ಬಡದಾನಿ ಹೇಳಿದರು. ತಾಲ್ಲೂಕಿನ ಹುಲ್ಲೂರ ಗ್ರಾಮದ ಎಸ್‌ಎನ್‌ಡಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹುಲ್ಲೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳು ತಮ್ಮ ಮಾತುಗಳಿಗಿಂತ ಶಿಕ್ಷಕರ ಮಾತುಗಳಿಗೆ ಹೆಚ್ಚಿನ ಗೌರವ ಹಾಗೂ ಮಹತ್ವ ನೀಡುತ್ತಾರೆ. ಹೀಗಾಗಿ ಶಿಕ್ಷಕರು ಜವಾಬ್ದಾರಿಯಿಂದ

ಬೆಂಗಳೂರು ದಕ್ಷಿಣ ತಂಡ ಸೋಲಿಸಿದ ಎಸ್.ಎಸ್.ಶಿವಾಚಾರ್ಯ ಕಾಲೇಜು:                                  ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲೆಗೆ ಐತಿಹಾಸಿಕ ಗೆಲುವು

ಬೆಂಗಳೂರು ದಕ್ಷಿಣ ತಂಡ ಸೋಲಿಸಿದ ಎಸ್.ಎಸ್.ಶಿವಾಚಾರ್ಯ ಕಾಲೇಜು: ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲೆಗೆ ಐತಿಹಾಸಿಕ ಗೆಲುವು

ಮುದ್ದೇಬಿಹಾಳ : ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ಈಚೇಗೆ ಜರುಗಿದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ದಕ್ಷಿಣ ತಂಡವನ್ನು 40-04 ಅಂಕಗಳ ಭಾರಿ ಅಂತರದಿOದ ಪರಾಭವಗೊಳಿಸುವ ಮೂಲಕ ವಿಜಯಪುರ ಜಿಲ್ಲೆಯ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಈ ಸಾಧನೆಗೈದ ಮುದ್ದೇಬಿಹಾಳ ಪಟ್ಟಣದ ಎಸ್.ಎಸ್. ಶಿವಾಚಾರ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಸ್ಥೆಯ ಗೌರವಾಧ್ಯಕ್ಷ ಕುಂಟೋಜಿ ಚೆನ್ನವೀರ ಶಿವಾಚಾರ್ಯರು ಹಾಗೂ ಸಂಸ್ಥಾಪಕ ಕಾರ್ಯದರ್ಶಿ ರವಿ ಎನ್. ನಾಯಕ ಅವರ ನೇತೃತ್ವದಲ್ಲಿ