ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಮುದ್ದೇಬಿಹಾಳ : ಔಷಧಗಳ ಬಳಕೆ, ಪ್ರಮಾಣ ಹಾಗೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಔಷಧ ತಜ್ಞರ ಪಾತ್ರ ಮಹತ್ವದ್ದಾಗಿದೆ ಎಂದು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಂಗನಾಥ್ ವೈದ್ಯ ಹೇಳಿದರು.

ವಿಶ್ವ ಔಷಧ ತಜ್ಞರ ದಿನಾಚರಣೆ ಅಂಗವಾಗಿ ಮುದ್ದೇಬಿಹಾಳ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ಶುಕ್ರವಾರ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ಹಾಗೂ ಬಿಸ್ಕತ್ ವಿತರಿಸಿ ಅವರು ಮಾತನಾಡಿದರು.

ವೈದ್ಯರು ರೋಗಿಗಳಿಗೆ ಔಷಧಗಳನ್ನು ಸೂಚಿಸುತ್ತಾರೆ. ಆದರೆ ಔಷಧವನ್ನು ಹೇಗೆ, ಎಷ್ಟು ಪ್ರಮಾಣದಲ್ಲಿ ಹಾಗೂ ಯಾವ ಸಮಯದಲ್ಲಿ ಸೇವಿಸಬೇಕು, ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಉಂಟಾಗಬಹುದಾದ ಪರಿಣಾಮಗಳೇನು ಎಂಬ ಕುರಿತು ರೋಗಿಗಳಿಗೆ ಮಾಹಿತಿ ನೀಡುವಲ್ಲಿ ಫಾರ್ಮಾಸಿಸ್ಟ್ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರ ಕಾರ್ಯಕ್ಕೆ ಔಷಧ ತಜ್ಞರು ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ವಿಜಯಪುರ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹಾಗೂ ಕೆಸಿಡಿಎ ಆಡಳಿತ ಮಂಡಳಿ ಸದಸ್ಯ ಕೆ.ಆರ್. ಎತ್ತಿನಮನಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಔಷಧ ತಜ್ಞರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್, ಬಿಸ್ಕತ್ ಹಾಗೂ ಸೇಬು ವಿತರಿಸುವ ಮೂಲಕ ನಮ್ಮ ಕೈಲಾದ ಸೇವೆ ಸಲ್ಲಿಸುತ್ತಿದ್ದೇವೆ ಎಂದರು.

ಔಷಧ ತಜ್ಞರ ದಿನಾಚರಣೆಯ ಅಂಗವಾಗಿ ರೋಗಿಗಳಿಗೆ ಫಲಾಹಾರ ವಿತರಿಸಿದ ಔಷಧ ವ್ಯಾಪಾರಸ್ಥರ ಸಂಘದ ಸದಸ್ಯರಿಗೆ ಆಸ್ಪತ್ರೆಯ ವೈದ್ಯರು ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಿ.ಎಂ.ಹಿರೇಮಠ, ಜಿಲ್ಲಾ ಸಹ ಕಾರ್ಯದರ್ಶಿ ಎಸ್.ವಿ.ಸಿದ್ದಾಪೂರ,ಕಾರ್ಯದರ್ಶಿ ಆಯ್.ಎ.ಮಾಗಿ,ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ವಿಠ್ಠಲ ಕಿಲಾರಹಟ್ಟಿ, ಮುದ್ದೇಬಿಹಾಳದ ಔಷಧ ವ್ಯಾಪಾರಸ್ಥರು, ಔಷಧ ಅಂಗಡಿ ಮಾಲೀಕರು ಹಾಗೂ ಫಾರ್ಮಾಸಿಸ್ಟ್ಗಳು ಉಪಸ್ಥಿತರಿದ್ದರು.

Latest News

ಪೌರಕಾರ್ಮಿಕರಿಗೆ 3.50 ಲಕ್ಷ ರೂ.ವಿಶೇಷ ಭತ್ಯೆ: ಪೌರಕಾರ್ಮಿಕರು ನಗರಗಳ ಸ್ವಚ್ಛತೆಯ ಸೈನಿಕರು-ಬಿರಾದಾರ

ಪೌರಕಾರ್ಮಿಕರಿಗೆ 3.50 ಲಕ್ಷ ರೂ.ವಿಶೇಷ ಭತ್ಯೆ: ಪೌರಕಾರ್ಮಿಕರು ನಗರಗಳ ಸ್ವಚ್ಛತೆಯ ಸೈನಿಕರು-ಬಿರಾದಾರ

ಮುದ್ದೇಬಿಹಾಳ : ಪೌರಕಾರ್ಮಿಕರು ನಗರಗಳ ಸ್ವಚ್ಛತೆಯ ಸೈನಿಕರಂತೆ ಕಾರ್ಯನಿರ್ವಹಿಸುತ್ತಿದ್ದು ಅವರ ಸೇವೆ ಅನನ್ಯವಾದದ್ದು ಎಂದು

ಸೀರತ್ ಅಭಿಯಾನ :                                                           ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ-ಅಕ್ಬರ್‌ಅಲಿ ಉಡುಪಿ

ಸೀರತ್ ಅಭಿಯಾನ : ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ-ಅಕ್ಬರ್‌ಅಲಿ ಉಡುಪಿ

ಮುದ್ದೇಬಿಹಾಳ : ಜಾತಿ, ಪಂಗಡಗಳ ಎಲ್ಲೆಗಳನ್ನು ಮೀರಿ ಮಾನವೀಯತೆ, ಪ್ರೀತಿ, ತ್ಯಾಗ ಹಾಗೂ ಸಮಾನತೆಯ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಾಗಲಿ-ಸಿ.ಎಸ್.ನಾಡಗೌಡ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಾಗಲಿ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರ ವೈಯಕ್ತಿಕ ಪ್ರತಿಭೆಯ ಜತೆಗೆ ಅವರು

ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ :                                      ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ : ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಮುದ್ದೇಬಿಹಾಳ : ಭೀಕರ ಬರಗಾಲದ ಸಮಯದಲ್ಲಿ ನೇಕಾರರಿಗೂ ಸಮರ್ಪಕ ಕಚ್ಚಾನೂಲು,ಬೀಮ್ ಪೂರೈಕೆ ಆಗುತ್ತಿಲ್ಲ.ಕೈಮಗ್ಗ ಹಾಗೂ

ಬಸರಕೋಡ ಪಿಕೆಪಿಎಸ್‌ನ 51ನೇ ವಾರ್ಷಿಕ ಸಭೆ:                       ಮಾಜಿ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ದಾವೆಗೆ ತೀರ್ಮಾನ-ಎಚ್.ಬಿ.ಮೇಟಿ

ಬಸರಕೋಡ ಪಿಕೆಪಿಎಸ್‌ನ 51ನೇ ವಾರ್ಷಿಕ ಸಭೆ: ಮಾಜಿ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ದಾವೆಗೆ ತೀರ್ಮಾನ-ಎಚ್.ಬಿ.ಮೇಟಿ

ಮುದ್ದೇಬಿಹಾಳ : ನಮ್ಮ ಸಂಘದ ಹಿಂದಿನ ಕಾರ್ಯದರ್ಶಿ ಮಾಡಿದ ಅವ್ಯವಹಾರದಿಂದ ಸಂಘಕ್ಕೆ ಲಾಭಾಂಶ ಕಡಿಮೆಯಾಗಿದೆ.ಅವರ ವ್ಯವಹಾರಗಳ ಬಗ್ಗೆ ಕೂಲಂಕಷ ತನಿಖೆ ನಡೆಸಲು ಅವರ ಮೇಲೆ ಕ್ರಿಮಿನಲ್ ದಾವೆ ಹೂಡಲು ಸಂಘ ತೀರ್ಮಾನಿಸಿದೆ ಎಂದು ಬಸರಕೋಡ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಹೇಮರೆಡ್ಡಿ ಮೇಟಿ ಹೇಳಿದರು. ತಾಲೂಕಿನ ಬಸರಕೋಡದ ಶ್ರೀ ಪವಾಡ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಸೋಮವಾರ ಬಸರಕೋಡ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ

16.17 ಲಕ್ಷ ರೂ.ಲಾಭ :                                                     ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

16.17 ಲಕ್ಷ ರೂ.ಲಾಭ : ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

ಮುದ್ದೇಬಿಹಾಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿoದ ಸನ್ 2025-26 ನೇ ಸಾಲಿನಲ್ಲಿ ಒಟ್ಟು ರೈತರಿಗೆ 8.18 ಕೋಟಿ ರೂ.ಸಾಲ ಹಂಚಿಕೆ ಮಾಡಲಾಗಿದೆ ಎಂದು ಮುದ್ದೇಬಿಹಾಳ ಪಿಕೆಪಿಎಸ್ ಮುಖ್ಯಕಾರ್ಯನಿರ್ವಹಣಾಧಿಕಾರಿ ವೀರೇಶ ಅಗ್ಗಿಮಠ ಹೇಳಿದರು. ತಾಲ್ಲೂಕಿನ ಕುಂಟೋಜಿಯಲ್ಲಿರುವ ಪಿಕೆಪಿಎಸ್‌ನ ಕಟ್ಟಡದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 51ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.2026ರ ಮಾರ್ಚ್ ಅಂತ್ಯಕ್ಕೆ 2353 ಶೇರು ಸದಸ್ಯರುಗಳಿದ್ದು 110.3 ಕೋಟಿ ರೂ.ಹೂಡಿಕೆ ಇದೆ ಎಂದು ತಿಳಿಸಿದರು.ಸ್ಥಾನಿಕ ಬ್ಯಾಂಕುಗಳ