ಮುದ್ದೇಬಿಹಾಳ : ನವರಾತ್ರಿ ದಸರಾ ಉತ್ಸವ ಸಂಚಲನ ಸಮಿತಿ ವತಿಯಿಂದ ನವದುರ್ಗೆಯರ ಕಡೆಗೆ ನಮ್ಮ ನಡಿಗೆ (ದುರ್ಗಾ ದೌಡ) ಹಾಗೂ ನವರಾತ್ರಿ ನವಶಕ್ತಿ ವೈಭವ–ಧರ್ಮ ಜಾಗೃತಿ ಸಮಾರಂಭದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಮಹಿಳೆಯರ ಧಾರ್ಮಿಕ ಪಥಸಂಚಲನ ಗಮನ ಸೆಳೆಯಿತು.
ಪಟ್ಟಣದ ಶ್ರೀ ಬನಶಂಕರಿ ದೇವಾಲಯದಿಂದ ಧಾರ್ಮಿಕ ಸಂಚಲನ ಆರಂಭಗೊAಡಿತು.ಅಲ್ಲಿOದ ಗ್ರಾಮದೇವತೆ ಕಟ್ಟೆ, ಸರಾಫ್ ಬಜಾರ್, ಕಿಲ್ಲಾಗಲ್ಲಿಯ ಕಾಳಿಕಾದೇವಿ ಮಂದಿರ, ಕುಂಬಾರ ಓಣಿಯ ಗ್ರಾಮದೇವತೆ ಮಂದಿರ, ದುರ್ಗಾದೇವಿ ಹಾಗೂ ನಾಡದೇವಿ ಮಂದಿರ, ಬಸವೇಶ್ವರ ವೃತ್ತ, ತಂಗಡಗಿ ರಸ್ತೆ, ಲಕ್ಷ್ಮೀ ಚಿತ್ರಮಂದಿರದ ಹಿಂಭಾಗದ ಅಂಬಾಭವಾನಿ ಮಂದಿರ, ಏಳು ಮಕ್ಕಳ ತಾಯಿ ಮಂದಿರ, ಲಕ್ಷ್ಮೀ ವೆಂಕಟೇಶ್ವರ ಮಂದಿರ, ದುರ್ಗಾ ಮಂದಿರ ಹಾಗೂ ಶ್ರೀ ಶಾರದಾದೇವಿ,ಪದ್ಮಾವತಿ ದೇವಿ ಮಂದಿರ, ಪಿಲೇಕಮ್ಮ ಮಂದಿರ ಹಾಗೂ ನೇತಾಜಿ ಗಲ್ಲಿಯ ಬನ್ನಿ ಮಹಾಕಾಳಿ ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸಲಾಯಿತು.ಬಳಿಕ ಸಂಚಲನವು ಶ್ರೀ ರಾಘವೇಂದ್ರ ಮಂಗಲ ಕಾರ್ಯಾಲಯ ತಲುಪಿತು.
ಕಾರ್ಯಕ್ರಮದಲ್ಲಿ ನವರಾತ್ರಿ ದಸರಾ ಉತ್ಸವ ಸಂಚಲನ ಸಮಿತಿಯ ಪ್ರಮುಖರಾದ ಸಹನಾ ಬಡಿಗೇರ,ಸೀಮಾ ದಂಡಾವತಿ,ಸ್ನೇಹಾ ನಲವಡೆ,ಶೈಲಾ ಗೊಂಗಡಿ,ಜ್ಯೋತಿ ಮಾಯಾಚಾರಿ,ನೀಲಾ ತೇಲಂಗಿ, ಮೋಹನಲಾಲ್ ಓಸ್ವಾಲ್, ಪುಟ್ಟು ಕುಲಕರ್ಣಿ, ವಾಸುದೇವ ಶಾಸ್ತ್ರೀ, ನೇತಾಜಿ ನಲವಡೆ, ಉದಯಸಿಂಗ್ ರಾಯಚೂರು,ಅನೀಲಕುಮಾರ ತೇಲಂಗಿ,ಹಣಮAತ ನಲವಡೆ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಹಿಂದೂ ಸಮಾಜದ ಬಾಂಧವರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಸಾರೋಟಿನಲ್ಲಿ ನಾಡದೇವಿ ಪ್ರತಿಮೆ ಇರಿಸಿ ಮೆರವಣಿಗೆ ನಡೆಸಲಾಯಿತು.ಮಕ್ಕಳು ದೇವಿಯವರ ವೇಷಭೂಷಣಗಳಲ್ಲಿ ಗಮನ ಸೆಳೆದರು.







