ಮುದ್ದೇಬಿಹಾಳ : ನವರಾತ್ರೋತ್ಸವದ ಅಂಗವಾಗಿ ತಾಲ್ಲೂಕಿನ ಯರಝರಿಯ ಯಲ್ಲಾಲಿಂಗೇಶ್ವರ ಮಠದಲ್ಲಿ ಮಲ್ಲಾರಲಿಂಗ ಮಹಾರಾಜರ ನೇತೃತ್ವದಲ್ಲಿ ಅ,24 ಹಾಗೂ 25ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅ.24 ರಂದು ಬೆಳಗ್ಗೆ ಪರಮಾನಂದರ ಉತ್ಸವದೊಂದಿಗೆ ಖಾದರಲಿಂಗ ದರ್ಗಾಕ್ಕೆ ಗಂಧ ಹೊರಡುತ್ತದೆ.ನಂತರ ಬಸರಕೋಡ ಪವಾಡ ಬಸವೇಶ್ವರರು ಉಪಯೋಗಿಸಿದ ವಸ್ತುಗಳನ್ನು ಮಠಕ್ಕೆ ಮೆರವಣಿಗೆ ಮೂಲಕ ಕರೆತರುವುದು.ನಂತರ ಹೊನಲು ಬೆಳಕಿನ ಪಗಡಿ ಪಂದ್ಯಾವಳಿ,ರಾತ್ರಿ 10ಕ್ಕೆ ಕಲಾ ಸಂಗಮ ಮೆಲೋಡಿಸ್ನಿಂದ ಹಾಸ್ಯ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗುವುದು.
ಅ.25 ರಂದು ಬೆಳಗ್ಗೆ 11ಕ್ಕೆ ಸಾಮೂಹಿಕ ವಿವಾಹ, ಶ್ರೀ ಮಠದ ಮಲ್ಲಾರಲಿಂಗ ಸ್ವಾಮಿಗಳ ಗುರುವಂದನಾ ಹಾಗೂ ತುಲಾಭಾರ ಕಾರ್ಯಕ್ರಮ ಜರುಗುವುದು.ನಂತರ ಸನ್ 2025-26ನೇ ಸಾಲಿನ ಎಸ್;ಎಸ್.ಎಲ್.ಸಿ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ,ಸಂಗೀತ ಸಿರಿ ಕಾರ್ಯಕ್ರಮ ಜರುಗುವುದು.ನಂತರ ದಸರಾ ದರ್ಬಾರ ಉತ್ಸವವು ಗ್ರಾಮದೇವತೆ ದೇವಾಲಯದವರೆಗೆ ಹೋಗಿ ಬರಲಿದೆ ಎಂದು ಜಾತ್ರಾ ಕಮೀಟಿ ಅಧ್ಯಕ್ಷ ಮಲಕೇಂದ್ರಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







