ಬಿಜೆಪಿ ಕಾರ್ಯಕರ್ತರಿಂದ ಸ್ವಾಗತಕ್ಕೆ ಸಿದ್ಧತೆ: ಅ.26 ರಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ತಳ್ಳಿಕೇರಿ ಪ್ರವಾಸ

ಬಿಜೆಪಿ ಕಾರ್ಯಕರ್ತರಿಂದ ಸ್ವಾಗತಕ್ಕೆ ಸಿದ್ಧತೆ: ಅ.26 ರಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ತಳ್ಳಿಕೇರಿ ಪ್ರವಾಸ

ಮುದ್ದೇಬಿಹಾಳ : ರಾಜ್ಯ ಬಿಜೆಪಿ ಕಾರ್ಯದರ್ಶಿಯಾದ ನಂತರ ಮುದ್ದೇಬಿಹಾಳ ಭಾಗದಲ್ಲಿ ಪ್ರವಾಸ ಕೈಗೊಂಡಿರುವ ಶರಣು ತಳ್ಳಿಕೇರಿ ಅವರನ್ನು ಅ.26 ರಂದು ಬಿಜೆಪಿ ಮಂಡಲದಿoದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸುವ ಸಿದ್ಧತೆ ಮಾಡಿಕೊಂಡಿರುವುದಾಗಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸಂಗಮೇಶ ಗುಂಡಕನಾಳ( ನಾಗೂರ) ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಅ.26 ರಂದು ಬೆಳಗ್ಗೆ 11 ಗಂಟೆಗೆ ಮುದ್ದೇಬಿಹಾಳ ನಗರಕ್ಕೆ ಆಗಮಿಸಲಿರುವ ರಾಜ್ಯ ಬಿಜೆಪಿ ಕಾರ್ಯದರ್ಶಿ ಶರಣು ತಳ್ಳಿಕೇರಿ ಅವರನ್ನು ಪಟ್ಟಣದ ತಂಗಡಗಿ ರಸ್ತೆಯ ಶ್ರೀ ಪಿಲೇಕಮ್ಮ ದೇವಾಲಯದಲ್ಲಿ ಸ್ವಾಗತಿಸಿ ಸನ್ಮಾನಿಸಲಾಗುವುದು.ಅಲ್ಲಿಂದ ಮುದ್ದೇಬಿಹಾಳ ಬಿಜೆಪಿ ಮಂಡಲದ ಮುಖಂಡರೂAದಿಗೆ ಕಾಲ್ನಡಿಗೆ ಮೂಲಕ ಬಸವೇಶ್ವರ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಪಾದಯಾತ್ರೆ ನಡೆಸಲಿದ್ದಾರೆ ಎಂದು ಹೇಳಿದರು.

ಪಕ್ಷದಿಂದ ಸುಮಾರು 500 ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದು ವಿವಿಧ ಕಲಾ ತಂಡಗಳ ಮೂಲಕ ಸ್ವಾಗತಿಸಲಾಗುತ್ತದೆ ಎಂದು ತಿಳಿಸಿದರು. ಖಾಸಗಿ ಕಾರ್ಯಕ್ರಮ ನಿಮಿತ್ತ ಮುದ್ದೇಬಿಹಾಳ ನಗರದ ಮಾರ್ಗದಿಂದ ದೇವರಹಿಪ್ಪರಗಿಗೆ ತಳ್ಳಿಕೇರಿ ತೆರಳಲಿದ್ದಾರೆ.ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡುವರು ಎಂದು ತಿಳಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಗಮ್ಮ ಎಚ್.ದೇವರಳ್ಳಿ, ಮುಖಂಡ ಲಕ್ಷ್ಮಣ ಬಿಜ್ಜೂರ ಮಾತನಾಡಿ,ಮುದ್ದೇಬಿಹಾಳ ನಗರಕ್ಕೆ ಆಗಮಿಸಲಿರುವ ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಅವರನ್ನು ಮುದ್ದೇಬಿಹಾಳ ಮಂಡಲದ ವತಿಯಿಂದ ಅದ್ದೂರಿಯಾಗಿ ಬರ ಮಾಡಿಕೂಳ್ಳಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಮುಖಂಡರು, ವಿವಿಧ ಮೋರ್ಚಾದ ಪದಾಧಿಕಾರಿಗಳು ಭಾಗವಹಿಸಲು ವಿನಂತಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಒಬಿಸಿ ಮೋರ್ಚಾ ಅಧ್ಯಕ್ಷ ವೈ.ಟಿ ಗೌಡರ,ಮುಖಂಡರಾದ ಶಂಕರಗೌಡ ಶಿವಣಗಿ, ವೈ.ಬಿ ನಾಯ್ಕೋಡಿ, ಪರಶುರಾಮ ಕೆಂಗುತ್ತಿ,ಸoಗಪ್ಪ ಬಿಸಲದಿನ್ನಿ,ಹುಲಗಪ್ಪ ಕಿಲಾರಹಟ್ಟಿ, ಸಂಗಣ್ಣ ಹತ್ತಿ,ನಾಗೇಶ ಕವಡಿಮಟ್ಟಿ, ವಿರೇಶ ಜೋಗಂಡಬಾವಿ,ಶಿವರಾಜಗೌಡ ಬಿರಾದಾರ, ರಾಮನಗೌಡ ಪಾಟೀಲ್, ಸಂತೋಷ ತಾಳಿಕೋಟೆ, ನರಸಮ್ಮ ಗುಬಚಿ,ಅಮರೇಶ ಕೂಡಲಗಿ, ಯಲ್ಲಾಲಿಂಗ ಕುರಿ ಮುಂತಾದವರು ಉಪಸ್ಥಿತರಿದ್ದರು.

ಹಿಂದುಳಿದ ವರ್ಗದವರಿಗೆ ಜಿಪಂ,ತಾಪo ಕ್ಷೇತ್ರ ವಿಂಗಡಣೆಯಲ್ಲಿ ಅನ್ಯಾಯ:
ಮುದ್ದೇಬಿಹಾಳ ಮತಕ್ಷೇತ್ರದ ಕೆಲವು ಜಿಲ್ಲಾ ಪಂಚಾಯಿತಿ,ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗುವಂತೆ ಮೀಸಲಾತಿ ಪ್ರಕಟಿಸಲಾಗಿದೆ.ಈಗಾಗಲೇ ಬಸರಕೋಡ ಭಾಗದಲ್ಲಿ ಆಕ್ಷೇಪಣೆಯನ್ನು ಆ ಭಾಗದ ನಾಯಕರು ಸಲ್ಲಿಸಿದ್ದಾರೆ.ಯರಝರಿ ಭಾಗದಲ್ಲೂ ನಾವು ಪ್ರಕಟಿತ ಮೀಸಲಾತಿಗೆ ಆಕ್ಷೇಪಣೆ ಸಲ್ಲಿಸುವುದಾಗಿ ಮುಖಂಡ ಸಂಗಮೇಶ ಗುಂಡಕನಾಳ ತಿಳಿಸಿದರು.

Latest News

ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಪಿಂಜಾರ ಸಮುದಾಯ ಶ್ರಮಿಕ ಸಮಾಜವಾಗಿದ್ದು ಎಲ್ಲ ಸಮಾಜದವರೊಂದಿಗೆ ಬೆರೆಯುವ ಜನಾಂಗವಾಗಿದ್ದಾರೆ.ನೀವು ಯಾವ

ಮುದ್ದೇಬಿಹಾಳದಲ್ಲಿ ಐತಿಹಾಸಿಕ ನವರಾತ್ರಿ ನವಶಕ್ತಿ ವೈಭವ

ಮುದ್ದೇಬಿಹಾಳದಲ್ಲಿ ಐತಿಹಾಸಿಕ ನವರಾತ್ರಿ ನವಶಕ್ತಿ ವೈಭವ

ಮುದ್ದೇಬಿಹಾಳ : ನವರಾತ್ರಿ ದಸರಾ ಉತ್ಸವ ಸಂಚಲನ ಸಮಿತಿ ವತಿಯಿಂದ ನವದುರ್ಗೆಯರ ಕಡೆಗೆ ನಮ್ಮ

ಯಲಗೂರ ಕ್ರಾಸ್‌ನ ಹೋರಾಟಕ್ಕೆ ಡಿಸಿ,ಎಸ್ಪಿ ಭೇಟಿ:                         ದರ ಘೋಷಿಸಿದ ನಂತರವೇ ಕಾರ್ಖಾನೆ ಆರಂಭ-ಡಿಸಿ ಡಾ.ಆನಂದ್

ಯಲಗೂರ ಕ್ರಾಸ್‌ನ ಹೋರಾಟಕ್ಕೆ ಡಿಸಿ,ಎಸ್ಪಿ ಭೇಟಿ: ದರ ಘೋಷಿಸಿದ ನಂತರವೇ ಕಾರ್ಖಾನೆ ಆರಂಭ-ಡಿಸಿ ಡಾ.ಆನಂದ್

ವಿಜಯಪುರ : ಯಾವುದೇ ಕಾರ್ಖಾನೆ ದರ ನಿಗದಿಪಡಿಸದೇ ಚಾಲನೆ ಮಾಡಬಾರದು ಎಂದು ಕಬ್ಬು ಬೆಳಗಾರರ

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಅ.

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ:                           ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ: ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಮುದ್ದೇಬಿಹಾಳ : ದೆಹಲಿಯಲ್ಲಿ ಕೇಂದ್ರ ಸರ್ಕಾರ ರೈತ ಸಂಘಟನೆಗಳೊAದಿಗೆ ಅ.12 ರಂದು ನಡೆಯಲಿರುವ ಉನ್ನತಮಟ್ಟದ ಸಭೆಯಲ್ಲಿ ರೈತಪರವಾದ ನಿಲುವು ಪ್ರಕಟಗೊಳ್ಳದಿದ್ದರೆ ಅ.13ರಿಂದ ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ತಿಳಿಸಿದರು. ಪಟ್ಟಣದ ಪಂಜುರ್ಲಿ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಕಬ್ಬಿಗೆ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಕಬ್ಬು ಬೆಳೆಗಾರರಿಗೆ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ :                    ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ : ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಅರಿವು ಮೂಡಿಸಲು ಯುವ ಸಂಸತ್ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಸರ್ಕಾರದಿಂದ ನಡೆಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಸಂತಿ ಮಠ ಹೇಳಿದರು. ಪಟ್ಟಣದ ಶಾ ಎಸ್.ಪಿ.ಓಸ್ವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಯುವ ಸಂಸತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಾಸಕಾಂಗ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿಕೊಡುವುದು ಈ ಕಾರ್ಯಕ್ರಮ ಉದ್ದೇಶವಾಗಿದ್ದು ಮುಂದಿನ ಪೀಳಿಗೆ ಪ್ರಜಾಪ್ರಭುತ್ವದ ಸೌಂದರ್ಯವನ್ನು