ಬರಗಾಲದಲ್ಲಿ ಸನ್ಮಾನ ಸಾಮಗ್ರಿ ತರಬೇಡಿ-ಶಾಸಕ ಸಿ.ಎಸ್.ನಾಡಗೌಡ

ಬರಗಾಲದಲ್ಲಿ ಸನ್ಮಾನ ಸಾಮಗ್ರಿ ತರಬೇಡಿ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಕೆಲವರು ತಮ್ಮ ರಾಜಕೀಯ ಲಾಭಕ್ಕೋಸ್ಕರ ಜನರಲ್ಲಿ ಇಲ್ಲಸಲ್ಲದ ವಿಚಾರಗಳನ್ನು ತುಂಬುವುದು.ಇರುವAತಹ ವಾತಾವರವನ್ನು ಹದಗೆಡಿಸುವುದು ಮಾಡುತ್ತಾರೆ.ಜನರು ಇಂತಹದ್ದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ತಾಲ್ಲೂಕಿನ ಹಿರೇಮುರಾಳದಲ್ಲಿ ಲೋಕೋಪಯೋಗಿ ಇಲಾಖೆಯಿಂದ 2025-26ನೇ ಸಾಲಿನ ಶಿರಾಡೋಣ ಲಿಂಗಸೂರ ರಾಜ್ಯ ಹೆದ್ದಾರಿ-41ರಲ್ಲಿ ಬರುವ ಸೇತುವೆಗಳ ಪುನರ್‌ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಾನು ಯಾವತ್ತೂ ಜನರಿಗೆ,ಶಾಲೆ,ಕಾಲೇಜು ಮಕ್ಕಳಿಗೆ ಡಾಬಾಗೆ ಹೋಗು,10 ಸಾವಿರ ರೂ.ತಗೆದಕೊಂಡು ಊಟ ಮಾಡು ಎಂದು ಹೇಳುವ ಅಭ್ಯಾಸ ನನಗಿಲ್ಲ. ಹುಡುಗರು ಹಾಳಾಗುವಂತಹದ್ದು ಕೆಲವರಿಗೆ ಬೇಕು. ನೀರಾವರಿ ಯೋಜನೆ ಪೂರ್ಣಗೊಳಿಸುವುದಕ್ಕೆ ಸಂಪೂರ್ಣ ಪ್ರಯತ್ನ ಮಾಡುತ್ತೇನೆ.ಭೂಮಿಗೆ ಹೆಚ್ಚಿನ ನೀರು ಕೊಡುವುದಕ್ಕೆ ಶ್ರಮಿಸುತ್ತೇನೆ.ಜನರ ಸಹಕಾರ ಇದ್ದಾಗ ಮಾತ್ರ ಸರಕಾರ ಸರಿಯಾಗಿ ಕೆಲಸ ಮಾಡಲು ಸಾಧ್ಯವಿದೆ.2017-18ರಲ್ಲಿ ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಮಂಜೂರಾತಿ ಕೊಡಿಸಿ ಕೆಲಸ ಆರಂಭಿಸಿದೆವು.ಸುಮಾರು 300 ಕೋಟಿ ರೂ.ಯೋಜನೆಯನ್ನು ಅಂದಿನ ಗ್ರಾಮ ಪಂಚಾಯತಿ ಅಧ್ಯಕ್ಷ ಲಿಂಗರಾಜ ನಾಡಗೌಡರು ಭೂಮಿಪೂಜೆ ಮಾಡಿದ್ದರು.ನಾನು ಎಂದಿಗೂ ಪೂಜೆಗಾಗಿ ಕೆಲಸವನ್ನು ನಿಲ್ಲಿಸಿಲ್ಲ.ಈಗಿನ ಸಮಯದಲ್ಲಿ ರಾಜಕಾರಣಿಗಳು ಎಷ್ಟು ಹೇಳಿದರೂ ಕೆಲಸ ಆಗುತ್ತಿಲ್ಲ.ಗುತ್ತಿಗೆದಾರರು ಅಧಿಕಾರಿಗಳನ್ನು ಭೇಟಿಯಾಗಿ ಕೆಲಸ ಮಾಡಿಸಿಕೊಂಡು ಬರುತ್ತಾರೆ.ಮುಂಚೆ ಕೇವಲ ಪತ್ರ ಬರೆದರೆ ಸಾಕು ಯೋಜನೆಗೆ ಮಂಜೂರಾತಿ ದೊರೆಯುತ್ತಿತ್ತು ಎಂದು ನಾಡಗೌಡರು ಹೇಳಿದರು.

ಭೀಕರವಾದ ಬರಗಾಲವಿದ್ದು ಕುಡಿವ ನೀರಿಗೂ ಕಷ್ಟ ಇದೆ.ನೀರನ್ನು ಆದ್ಯತೆ ಮೇಲೆ ಮಿತವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.ಪಿಡಬ್ಲೂö್ಯಡಿ ಎಇಇ ಅಯ್ಯಪ್ಪಗೌಡ ರೆಡ್ಡಿ ಮಾತನಾಡಿದರು. ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಎಸ್.ಪಾಟೀಲ(ಜಮ್ಮಲದಿನ್ನಿ),ಮುಖಂಡ ರಾಜುಗೌಡ ಕೊಂಗಿ,ಪಿಕೆಪಿಎಸ್ ಅಧ್ಯಕ್ಷ ಮಲ್ಲನಗೌಡ ಪಾಟೀಲ,ನಾಗರಾಜ ರಾಮೋಡಗಿ,ಪ್ರಸನ್ನಕುಮಾರ ಜಹಾಗೀರದಾರ,ಸಿದ್ದರೆಡ್ಡೆಪ್ಪಗೌಡ ಯಾಳವಾರ,ಬಸವಂತ್ರಾಯ ನಾಗರತ್ತಿ,ಗುರುಸಂಗಯ್ಯ ಹಿರೇಮಠ,ಕಲ್ಲಣ್ಣ ಪ್ಯಾಟಿ ಮೊದಲಾದವರು.ಅಯ್ಯಪ್ಪ ತಂಗಡಗಿ ನಿರೂಪಿಸಿದರು.

ಶಾಸಕರು ಭಾಷಣ ಮಾಡುವ ಮಧ್ಯೆದಲ್ಲಿ ವ್ಯಕ್ತಿಯೋರ್ವ ಮಧ್ಯೆ ಮಧ್ಯೆ ಜೋರಾಗಿ ಪ್ರತಿಕ್ರಿಯಿಸುವುದನ್ನು ಮಾಡುತ್ತಿದ್ದ.ಇದನ್ನು ಗಮನಿಸಿದ ಶಾಸಕರು, ನಿನಗೆ ಕಾರ್ಯಕ್ರಮ ಇಷ್ಟವಾಗಲಿಲ್ಲ ಎಂದರೆ ಇಲ್ಲಿಂದ ಎದ್ದು ಹೊರಗೆ ಹೋಗು ಎಂದು ಖಡಕ್ ಆಗಿ ಸೂಚನೆ ನೀಡಿದರು.ಶಾಸಕರ ಗನ್‌ಮ್ಯಾನ ಸಂಗನಗೌಡ ಹಾಗೂ ಪೊಲೀಸರು ಆ ವ್ಯಕ್ತಿಯನ್ನು ಕಾರ್ಯಕ್ರಮದ ಸ್ಥಳದಿಂದ ಹೊರಗೆ ಕಳಿಸಿದ ಪ್ರಸಂಗ ನಡೆಯಿತು.

ಸನ್ಮಾನಕ್ಕೆ ಶಾಲು,ಹಾರು ತರಬೇಡಿ:
ಬರಗಾಲದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸುವುದಿಲ್ಲ.ಸನ್ಮಾನ,ಹಾರ ತುರಾಯಿ ಇರುವುದಿಲ್ಲ.ಯಾರೂ ತಗೆದುಕೊಂಡು ಬರಬಾರದು ಎಂದು ಶಾಸಕ ನಾಡಗೌಡರು ತಮಗೆ ಸನ್ಮಾನ ಮಾಡಲು ಬಂದ ಪಂಚಾಯಿತಿ ಸಿಬ್ಬಂದಿ,ಅಭಿಮಾನಿಗಳಿಗೆ ತಿಳಿಸಿದರು.

Latest News

ಅ.25 ರಂದು ಯರಝರಿಯಲ್ಲಿ ನವರಾತ್ರೋತ್ಸವ,ಸಾಮೂಹಿಕ ವಿವಾಹ

ಅ.25 ರಂದು ಯರಝರಿಯಲ್ಲಿ ನವರಾತ್ರೋತ್ಸವ,ಸಾಮೂಹಿಕ ವಿವಾಹ

ಮುದ್ದೇಬಿಹಾಳ : ನವರಾತ್ರೋತ್ಸವದ ಅಂಗವಾಗಿ ತಾಲ್ಲೂಕಿನ ಯರಝರಿಯ ಯಲ್ಲಾಲಿಂಗೇಶ್ವರ ಮಠದಲ್ಲಿ ಮಲ್ಲಾರಲಿಂಗ ಮಹಾರಾಜರ ನೇತೃತ್ವದಲ್ಲಿ

ಬಂಜಾರ ಸಮಾಜದಲ್ಲಿ ಮತಾಂತರ ಪಿಡುಗಿನ ಜಾಗೃತಿ-ರವಿ ನಾಯಕ

ಬಂಜಾರ ಸಮಾಜದಲ್ಲಿ ಮತಾಂತರ ಪಿಡುಗಿನ ಜಾಗೃತಿ-ರವಿ ನಾಯಕ

ಮುದ್ದೇಬಿಹಾಳ : ನಮ್ಮ ತಾಂಡಾಗಳಲ್ಲಿರುವ ಬಂಜಾರಾ ಜನಾಂಗದವರಲ್ಲಿ ಕೆಲವರು ಮತಾಂತರದ ಪಿಡುಗಿಗೆ ಬಲಿಯಾಗುತ್ತಿದ್ದಾರೆ.ಅಂತಹ ಪ್ರಕರಣಗಳು

ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಪಿಂಜಾರ ಸಮುದಾಯ ಶ್ರಮಿಕ ಸಮಾಜವಾಗಿದ್ದು ಎಲ್ಲ ಸಮಾಜದವರೊಂದಿಗೆ ಬೆರೆಯುವ ಜನಾಂಗವಾಗಿದ್ದಾರೆ.ನೀವು ಯಾವ

ಮುದ್ದೇಬಿಹಾಳದಲ್ಲಿ ಐತಿಹಾಸಿಕ ನವರಾತ್ರಿ ನವಶಕ್ತಿ ವೈಭವ

ಮುದ್ದೇಬಿಹಾಳದಲ್ಲಿ ಐತಿಹಾಸಿಕ ನವರಾತ್ರಿ ನವಶಕ್ತಿ ವೈಭವ

ಮುದ್ದೇಬಿಹಾಳ : ನವರಾತ್ರಿ ದಸರಾ ಉತ್ಸವ ಸಂಚಲನ ಸಮಿತಿ ವತಿಯಿಂದ ನವದುರ್ಗೆಯರ ಕಡೆಗೆ ನಮ್ಮ

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಮುದ್ದೇಬಿಹಾಳ : ರಾಜ್ಯದ ಸಕ್ಕರೆ ಕಾರ್ಖಾನೆಗಳ ಅಸೋಶಿಯೇಷನ್‌ದಲ್ಲಿ ಯಾವ ತೀರ್ಮಾನ ಕೈಗೊಂಡಿದೆಯೋ ಅದರಂತೆ ನಮ್ಮ ಕಾರ್ಖಾನೆಯು ನಡೆದುಕೊಳ್ಳಲಿದ್ದು ಜಿಲ್ಲಾಧಿಕಾರಿಗಳ ನಿರ್ದೇಶನದ ನಂತರವೇ ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹಣಮಂತಗೌಡ ಪಾಟೀಲ್ ಹೇಳಿದರು. ತಾಲ್ಲೂಕಿನ ಯರಗಲ್ ಮದರಿಯಲ್ಲಿರುವ ಶ್ರೀ ಬಾಲಾಜಿ ಶುಗರ್ಸ್ ಅಂಡ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ನ ಕಾರ್ಖಾನೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾಯ್ಲರ್ ಪ್ರದೀಪನ ಕಾರ್ಯಕ್ರಮದಲ್ಲಿ ತಮ್ಮನ್ನು

ಮಾಜಿ ಶಾಸಕ ಎ.ಎಸ್;ಪಾಟೀಲ ನಡಹಳ್ಳಿ ಆಕ್ರೋಶ:         ಆಲಮಟ್ಟಿ ಆಣೆಕಟ್ಟು ಎತ್ತರ ವಿರೋಧಿಸಿದ ತೆಲಂಗಾಣಕ್ಕೆ ಕೃಷ್ಣೆ ನೀರು..!

ಮಾಜಿ ಶಾಸಕ ಎ.ಎಸ್;ಪಾಟೀಲ ನಡಹಳ್ಳಿ ಆಕ್ರೋಶ: ಆಲಮಟ್ಟಿ ಆಣೆಕಟ್ಟು ಎತ್ತರ ವಿರೋಧಿಸಿದ ತೆಲಂಗಾಣಕ್ಕೆ ಕೃಷ್ಣೆ ನೀರು..!

ಮುದ್ದೇಬಿಹಾಳ : ತೆಲಂಗಾಣಕ್ಕೆ ಅಧಿಕೃತ ಆದೇಶವಿಲ್ಲದೆ ಸಿಎಂ ಮೌಖಿಕ ಸೂಚನೆ ಮೇರೆಗೆ ಕೃಷ್ಣಾ ನದಿ ನೀರು ಹರಿಸಲಾಗುತ್ತಿದೆ.ಇದು ಗಂಭೀರ ವಿಚಾರವಾಗಿದೆ. ಉತ್ತರ ಕರ್ನಾಟಕದ ರೈತರ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವ ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ರಾಜಧಾನಿಯಲ್ಲಿರುವ ಆಡಳಿತ ಸೌಧಕ್ಕೆ ತಲುಪಿಸುವ ಕಾರ್ಯವನ್ನು ಪತ್ರಿಕೆ ಮತ್ತು ಟಿವಿ ಮಾಧ್ಯಮಗಳು ಮಾಡಬೇಕು ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮನವಿ ಮಾಡಿದರು. ಪಟ್ಟಣದ ತಮ್ಮ ದಾಸೋಹ ನಿಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.