ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ: ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ: ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಮುದ್ದೇಬಿಹಾಳ : ಬಿಜೆಪಿಗೆ ಮರಳಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಾಪಸ್ ಕರೆತರುವ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿರುವ ವಿಚಾರ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಹೇಳಿದರು.

ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಮುದ್ದೇಬಿಹಾಳ ನಗರಕ್ಕೆ ಸೋಮವಾರ ಆಗಮಿಸಿದ್ದ ಅವರಿಗೆ ಮುದ್ದೇಬಿಹಾಳ ಬಿಜೆಪಿ ಮಂಡಲದ ವತಿಯಿಂದ ನೀಡಲಾದ ಅದ್ದೂರಿ ಸ್ವಾಗತದ ಬಳಿಕ ಅಂಬೇಡ್ಕರ್ ವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಸಕ ಯತ್ನಾಳ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಜೈನಮುನಿಗಳ ಕಾರ್ಯಕ್ರಮದಲ್ಲಿ ಆಕಸ್ಮಿಕವಾದ ಭೇಟಿಯಾಗಿದ್ದಿದೆ.ನಾನು ಅಲ್ಲಿಯೇ ಇದ್ದೆ. ಯಾವದೇ ಚರ್ಚೆಯಾಗಿಲ್ಲ. ಅವರು ಪಕ್ಷಕ್ಕೆ ಸೇರಿದರೆ ಆಗುವ ಲಾಭ-ಹಾನಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ತಳ್ಳಿಕೇರಿ ಅವರು, ಯತ್ನಾಳ ಅವರ ಬಗ್ಗೆ ನನ್ನ ನಿಲವು ತಟಸ್ಥವಾಗಿದೆ. ಅವರು ಬಿಜೆಪಿಯಲ್ಲಿದ್ದಾಗ ನಮ್ಮ ನಾಯಕರು, ಪಕ್ಷದ ಆಚೆ ಇದ್ದಾಗ ಅಲ್ಲವೆಂದ ಅವರು ಹಿಂದುಳಿದ ನಾಯಕ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಂಡಿರುವ ರೀತಿ ಹಿಂದುಳಿದ ವರ್ಗಕ್ಕೆ ಮಾಡಿದ ಅಪಮಾನವಾಗಿದೆ. ಅದನ್ನು ಜನರು ಬರಲಿರುವ ಚುನಾವಣೆಯಲ್ಲಿ ತೋರಿಸುತ್ತಾರೆ.ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಎನ್ನುವುದು ತಲೆ ತಗ್ಗಿಸುವ ವಿಚಾರವಾಗಿದ್ದು ಅದು ವಾಮಾಚಾರ ಮತ್ತು ಕಗ್ಗೊಲೆಗಿಂತ ಪಾಪದ ಕೆಲಸ ಎಂದು ಹೇಳಿದರು.

ಬಿಜೆಪಿ ಮಂಡಲ ಕಾರ್ಯದರ್ಶಿ ಸಂಗಮೇಶ ಗುಂಡಕನಾಳ ಮಾತನಾಡಿ,ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರ ಮಾರ್ಗದರ್ಶನದಲ್ಲಿ ಪಕ್ಷದ ನಾಯಕರಾದ ಶರಣು ತಳ್ಳಿಕೇರಿ ಅವರ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.ಬಿಜೆಪಿ ಪಕ್ಷ ಉನ್ನತ ಸ್ಥಾನಮಾನವನ್ನು ತಳ್ಳಿಕೇರಿ ಅವರಿಗೆ ನೀಡಿದೆ.ಅವರು ತಮ್ಮ ಕ್ಷೇತ್ರದಲ್ಲಿ ಶಾಸಕರನ್ನಾಗಿ ಮಾಡಲು ಕಾರ್ಯಕರ್ತರು ತುದಿಗಾಲ ಮೇಲೆ ನಿಂತಿದ್ದಾರೆ ಎಂದರು.

ಪಟ್ಟಣದ ಪಿಲೇಕೆಮ್ಮ ದೇವಸ್ಥಾನದಿಂದ ತಳ್ಳಿಕೇರಿ ಅವರನ್ನು ಸ್ವಾಗತಿಸಲಾಯಿತು. ಬಸವೇಶ್ವರ ವೃತ್ತದಲ್ಲಿ ಶರಣು ತಳ್ಳಿಕೇರಿ ಅವರಿಗೆ ಬೃಹತ್ ಹೂ ಮಾಲೆ ಹಾಕಿ ಸನ್ಮಾನಿಸಿದರು. ಈ ವೇಳೆ ಜೆಸಿಬಿಯಲ್ಲಿ ಅಭಿಮಾನಿಗಳು ನಿಂತು ತಳ್ಳಿಕೇರಿ ಅವರ ಮೇಲೆ ಪುಷ್ಪಾರ್ಚನೆ ಮಾಡಿದರು.

ಪಟ್ಟಣದ ಎಲ್ಲ ವೃತ್ತಗಳಿಗೆ ತಳ್ಳಿಕೇರಿ ಅವರು ಪುಷ್ಪನಮನ ಸಲ್ಲಿಸಿದರು.ಬಳಿಕ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರ ತೋಟದ ಮನೆಗೆ ತೆರಳಿ ಅಲ್ಲಿ ಸನ್ಮಾನ ಸ್ವೀಕರಿಸಿದರು.

ಶರಣು ತಳ್ಳಿಕೇರಿ ಅವರ ಭವ್ಯ ಮೆರವಣಿಗೆ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣನವರ,ಮಲಕೇoದ್ರಗೌಡ ಪಾಟೀಲ್,ಸಂಗಮೇಶ ಕರಬಂಟನಾಳ,ಗಿರೀಶಗೌಡ ಪಾಟೀಲ್, ಲಕ್ಷ್ಮಣ ಬಿಜ್ಜೂರ, ಬಸವರಾಜ ಮುರಾಳ, ವಿಜಯಕುಮಾರ್ ಬಡಿಗೇರ,ವೈ.ಟಿ ಗೌಡರ,ಅಶೋಕ ರಾಠೋಡ, ಅಶೋಕ ಚಿನಿವಾರ, ರಾಜು ಬಳ್ಳೊಳ್ಳಿ,ಸೋಮನಗೌಡ ಬಿರಾದಾರ,ಸಂಗಣ್ಣ ಹತ್ತಿ, ನಾಗೇಶ ಕವಡಿಮಟ್ಟಿ, ಅನಿಲ್ ನಾಯಕ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ನರಸಮ್ಮ ಗುಬಚಿ, ನಿರ್ಮಲಾ ಪುರಾಣಿಕಮಠ ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Latest News

ಬಿಜೆಪಿ ಕಾರ್ಯಕರ್ತರಿಂದ ಸ್ವಾಗತಕ್ಕೆ ಸಿದ್ಧತೆ:                            ಅ.26 ರಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ತಳ್ಳಿಕೇರಿ ಪ್ರವಾಸ

ಬಿಜೆಪಿ ಕಾರ್ಯಕರ್ತರಿಂದ ಸ್ವಾಗತಕ್ಕೆ ಸಿದ್ಧತೆ: ಅ.26 ರಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ತಳ್ಳಿಕೇರಿ ಪ್ರವಾಸ

ಮುದ್ದೇಬಿಹಾಳ : ರಾಜ್ಯ ಬಿಜೆಪಿ ಕಾರ್ಯದರ್ಶಿಯಾದ ನಂತರ ಮುದ್ದೇಬಿಹಾಳ ಭಾಗದಲ್ಲಿ ಪ್ರವಾಸ ಕೈಗೊಂಡಿರುವ ಶರಣು

ರಾಣಿಬೆನ್ನೂರಿನ ಭವಾನಿ ಹಾಸ್ಪಿಟಲ್ ನೇತೃತ್ವ:                                                                                         ಜನರ ಸೇವೆಗೆ ಅವಕಾಶ ದೊರಕಿದ್ದೇ ನನ್ನ ಸೌಭಾಗ್ಯ-ಡಾ.ತಿರುಪತಿ ನಾಯಕ

ರಾಣಿಬೆನ್ನೂರಿನ ಭವಾನಿ ಹಾಸ್ಪಿಟಲ್ ನೇತೃತ್ವ: ಜನರ ಸೇವೆಗೆ ಅವಕಾಶ ದೊರಕಿದ್ದೇ ನನ್ನ ಸೌಭಾಗ್ಯ-ಡಾ.ತಿರುಪತಿ ನಾಯಕ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಬರುವ ಬಹುತೇಕ ಗ್ರಾಮಗಳಲ್ಲಿ ಫ್ಲೋರೈಡ್ ಅಂಶವಿರುವ ನೀರು

ಅ.25 ರಂದು ಯರಝರಿಯಲ್ಲಿ ನವರಾತ್ರೋತ್ಸವ,ಸಾಮೂಹಿಕ ವಿವಾಹ

ಅ.25 ರಂದು ಯರಝರಿಯಲ್ಲಿ ನವರಾತ್ರೋತ್ಸವ,ಸಾಮೂಹಿಕ ವಿವಾಹ

ಮುದ್ದೇಬಿಹಾಳ : ನವರಾತ್ರೋತ್ಸವದ ಅಂಗವಾಗಿ ತಾಲ್ಲೂಕಿನ ಯರಝರಿಯ ಯಲ್ಲಾಲಿಂಗೇಶ್ವರ ಮಠದಲ್ಲಿ ಮಲ್ಲಾರಲಿಂಗ ಮಹಾರಾಜರ ನೇತೃತ್ವದಲ್ಲಿ

ಬಂಜಾರ ಸಮಾಜದಲ್ಲಿ ಮತಾಂತರ ಪಿಡುಗಿನ ಜಾಗೃತಿ-ರವಿ ನಾಯಕ

ಬಂಜಾರ ಸಮಾಜದಲ್ಲಿ ಮತಾಂತರ ಪಿಡುಗಿನ ಜಾಗೃತಿ-ರವಿ ನಾಯಕ

ಮುದ್ದೇಬಿಹಾಳ : ನಮ್ಮ ತಾಂಡಾಗಳಲ್ಲಿರುವ ಬಂಜಾರಾ ಜನಾಂಗದವರಲ್ಲಿ ಕೆಲವರು ಮತಾಂತರದ ಪಿಡುಗಿಗೆ ಬಲಿಯಾಗುತ್ತಿದ್ದಾರೆ.ಅಂತಹ ಪ್ರಕರಣಗಳು

ರಾಷ್ಟ್ರೀಯ ಹೆದ್ದಾರಿ 50-ಸ್ತಬ್ಧ :                                               ರೈತರು ಯಾರ ಗುಲಾಮರೂ ಅಲ್ಲ- ಶಾಂತಗೌಡ ಪಾಟೀಲ್

ರಾಷ್ಟ್ರೀಯ ಹೆದ್ದಾರಿ 50-ಸ್ತಬ್ಧ : ರೈತರು ಯಾರ ಗುಲಾಮರೂ ಅಲ್ಲ- ಶಾಂತಗೌಡ ಪಾಟೀಲ್

ವಿಜಯಪುರ : ಕಬ್ಬಿನ ಎಂ.ಎಸ್.ಪಿ ದರ ಹೆಚ್ಚಳ,ಕೇಂದ್ರ ಸರ್ಕಾರ ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೇನಾಲ್‌ನ್ನು ಖರೀದಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ಜಿಲ್ಲೆಯ ಯಲಗೂರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-50ನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ 8 ಗಂಟೆಯಿAದಲೇ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ಕಿಲೋಮೀಟರ್‌ದವರೆಗೆ ಅಂತರಾಜ್ಯಗಳಿಗೆ ಸಂಚರಿಸುವ ವಾಹನಗಳು ರಸ್ತೆಯ ಪಕ್ಕದಲ್ಲಿ ನಿಂತಿದ್ದ ದೃಶ್ಯ

ಕಬ್ಬು ಬೆಳೆಗಾರರ ಜೊತೆ ಕೇಂದ್ರದ ಚರ್ಚೆ ವಿಫಲ:              ಅ.13 ರಿಂದ ನಿಡಗುಂದಿ-ಆಲಮಟ್ಟಿ ಹೈವೆಯಲ್ಲಿ ರಸ್ತೆ ತಡೆ

ಕಬ್ಬು ಬೆಳೆಗಾರರ ಜೊತೆ ಕೇಂದ್ರದ ಚರ್ಚೆ ವಿಫಲ: ಅ.13 ರಿಂದ ನಿಡಗುಂದಿ-ಆಲಮಟ್ಟಿ ಹೈವೆಯಲ್ಲಿ ರಸ್ತೆ ತಡೆ

ವಿಜಯಪುರ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅ.13ರಿಂದ ನಿಡಗುಂದಿ-ಆಲಮಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆದು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ತಿಳಿಸಿದ್ದಾರೆ. ದೂರವಾಣಿಯೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಇಂದು ಕೇಂದ್ರ ಸರಕಾರದ ಮಾತುಕತೆ ಮುರಿದು ಬಿದ್ದಿದೆ.ಯಾವುದೇ ಸ್ಪಷ್ಟ ತೀರ್ಮಾನವನ್ನು ಸಚಿವರು ಕೈಗೊಳ್ಳುವಲ್ಲಿ ವಿಫಲರಾಗಿದ್ದು