ಮುದ್ದೇಬಿಹಾಳ : ದಸರಾ ನಿಮಿತ್ಯವಾಗಿ ತಾಲ್ಲೂಕಿನ ಗಂಗೂರ ಗ್ರಾಮದಲ್ಲಿ ಅ.30 ರಂದು ಬೆಳಗ್ಗೆ 11.30ಕ್ಕೆ ಸಾಮೂಹಿಕ ವಿವಾಹ, 108 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅಂಕಲಿಮಠದ ಸ್ವಾಮೀಜಿಗಳ ತುಲಾಭಾರ,ಧರ್ಮಸಭೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂಕಲಿಮಠದ ವೀರಭದ್ರ ಸ್ವಾಮೀಜಿಗಳು ,ಯರಝರಿ ಮಲ್ಲಾರಲಿಂಗ ಸ್ವಾಮೀಜಿ,ಕುಂಟೋಜಿ ಚೆನ್ನವೀರ ಶಿವಾಚಾರ್ಯರು,ತುರುವಿಹಾಳದ ಅಮರಗುಂಡ ಶಿವಾಚಾರ್ಯರು,ಹೊಸಮಠದ ಅಮರೇಶ್ವರ ದೇವರು,ಸರೂರಿನ ಕಾಡಯ್ಯ ಗುರುವಿನ,ಅಡಿವಯ್ಯ ಹಿರೇಮಠ ದಿವ್ಯ ಸಾನಿಧ್ಯ ವಹಿಸುವರು.
ವಿಜಯಪುರ ಸಿಕ್ಯಾಬ್ ಕಾಲೇಜಿನ ಉಪನ್ಯಾಸಕ ಯು.ಎನ್.ಕುಂಟೋಜಿ ಉಪನ್ಯಾಸ ನೀಡುವರು.ಶಾಸಕ ಸಿ.ಎಸ್.ನಾಡಗೌಡ ಅಧ್ಯಕ್ಷತೆ ವಹಿಸುವರು.
ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಉಮೇಶ ಮೇಟಿ,ರಾಜುಗೌಡ ಪಾಟೀಲ,ಸುನೀಲಗೌಡ ಪಾಟೀಲ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ,ಮಾಜಿ ಸಚಿವ ೆಸ್.ಆರ್.ಪಾಟೀಲ,ಬಾಲಾಜಿ ಶುಗರ್ಸ್ ಅಧ್ಯಕ್ಷ ಹಣಮಂತಗೌಡ ಪಾಟೀಲ,ಬಿಜೆಪಿ ಮುಖಂಡ ಆರ್.ಎಸ್.ಪಾಟೀಲ ಕೂಚಬಾಳ,ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ,ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ,ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ,ಉದ್ದಿಮೆದಾರ ಮಹಾಂತೇಶ ಗಂಗನಗೌಡರ,ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ,ಉದ್ಯಮಿ ಎ.ಗಣೇಶ ,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ,ವಕೀಲರಾದ ಎಂ.ಎಸ್.ನಾವದಗಿ ಸೇರಿದಂತೆ ಹಲವು ರಾಜಕೀಯ ಗಣ್ಯರು,ಸಂಘ ಸಂಸ್ಥೆಗಳ ಮುಖಂಡರು ಆಗಮಿಸುವರು ಎಂದು ಜಾತ್ರಾ ಕಮೀಟಿ ಸಂಚಾಲಕ ನಾಗಪ್ಪ ಲಕ್ಕಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ







