ನಾಳೆ ಬೆಳಗಾವಿಯಲ್ಲಿ ಅಧಿಕೃತ ಘೋಷಣೆ; ಕಬ್ಬಿಗೆ 3500 ರೂ.ಮೇಲೆಯೇ ದರ ಫಿಕ್ಸ್..?!!

ನಾಳೆ ಬೆಳಗಾವಿಯಲ್ಲಿ ಅಧಿಕೃತ ಘೋಷಣೆ; ಕಬ್ಬಿಗೆ 3500 ರೂ.ಮೇಲೆಯೇ ದರ ಫಿಕ್ಸ್..?!!

ಮುದ್ದೇಬಿಹಾಳ : ಬರಗಾಲದ ಸಮಯದಲ್ಲಿ ರೈತರು ಬೆಳೆದಿರುವ ಕಬ್ಬು ಕಾರ್ಖಾನೆಗೆ ಸಾಗಿಸದಿದ್ದರೆ ಬಂದಷ್ಟು ಫಸಲು ಕೈಗೆ ಸಿಗುವುದಿಲ್ಲ ಎಂಬ ರೈತರ ಕಾಳಜಿಯನ್ನಿಟ್ಟುಕೊಂಡು ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರ ಮಧ್ಯೆ ಒಂದು ಒಪ್ಪಂದಕ್ಕೆ ಬರಲಾಗಿದ್ದು ವಿಜಯಪುರ ಜಿಲ್ಲೆಯ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಹೋರಾಟ ಅಂತ್ಯಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

ತಾಲ್ಲೂಕಿನ ಹುಲ್ಲೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ ಹೋರಾಟದಲ್ಲಿ ಅವರು ಮಾತನಾಡಿದರು.

ಕಾರ್ಖಾನೆಯವರೊಂದಿಗೆ ಎರಡು ದಿನಗಳ ಮಧ್ಯೆ ಒಂದು ಒಪ್ಪಂದಕ್ಕೆ ಬಂದಿದ್ದೇವೆ.ಕೇoದ್ರ ಸರ್ಕಾರದವರು ಎಂ.ಎಸ್.ಪಿ ಹೆಚ್ಚಿಸಿದರೆ ರಾಜ್ಯ ಸರ್ಕಾರದವರು ಎಸ್‌ಎಪಿ ಹೆಚ್ಚಿಸುತ್ತೇವೆ ಎಂದು ಹೊಸ ನಾಟಕ ಶುರು ಮಾಡಿದ್ದಾರೆ.ಹಾಗಾಗಿ ರೈತರ ಕಬ್ಬು ಹಾಳಾಗಬಾರದು ಎಂಬ ಉದ್ದೇಶದಿಂದ ಕಾರ್ಖಾನೆಯವರೊಂದಿಗೆ ಮಾತನಾಡಿ ಒಂದು ದರದ ಒಪ್ಪಂದಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಸದ್ಯಕ್ಕೆ ಆಗಿರುವ ಒಪ್ಪಂದAತೆ ಘೋಷಿತ ದರವು ಮಾರುಕಟ್ಟೆಯಲ್ಲಿ ಸಕ್ಕರೆ ದರವನ್ನು ಆಧರಿಸಿದ್ದು ಮೊದಲಿನ ಕಂತು ಬಿಡುಗಡೆ ಮಾಡಿದ ನಂತರ ಕಾರ್ಖಾನೆಯ ಆರಂಭದಿAದ ಕಬ್ಬು ನುರಿಸುವ ಹಂಗಾಮಿನವರೆಗೆ ಇದ್ದ ದರದ ಆಧಾರದ ಮೇಲೆ ಹೆಚ್ಚುವರಿ ದರವನ್ನು ನಿಗದಿ ಮಾಡಿ ರೈತರಿಗೆ ಕೊಡುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ದರದ ಕುರಿತು ರಾಜ್ಯಮಟ್ಟದಲ್ಲಿಯೇ ಘೋಷಣೆ ಹೊರಬೀಳಲಿ ಎಂಬ ಉದ್ದೇಶದಿಂದ ಬೆಳಗಾವಿಯಲ್ಲಿ ನ.5 ರಂದು ಕಾರ್ಖಾನೆಗಳ ಮಾಲೀಕರು,ರಾಜ್ಯದ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಅಧಿಕೃತವಾಗಿ ದರ ಘೋಷಣೆ ಮಾಡಲಿದ್ದಾರೆ.ಎಂ.ಎಸ್.ಪಿ ದರವನ್ನು ಕೇಂದ್ರ ಸರ್ಕಾರ ನ.26ರಂದು ತಿಳಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಭರವಸೆ ನೀಡಿದ್ದಾರೆ.ಅದರಂತೆ ಅಧಿಕೃತವಾಗಿ ಸರ್ಕಾರದಿಂದ ಬೆಲೆ ಪ್ರಕಟವಾಗಲಿದ್ದು ಎಲ್ಲ ಕಬ್ಬು ಬೆಳೆಗಾರರು ಬೆಳಗಾವಿಗೆ ನಾಳಿನ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಮಾತನಾಡಿದರು.
ನಾಲ್ಕು ದಿನಗಳ ಕಾಲ ಸತತವಾಗಿ ಹೋರಾಟದಲ್ಲಿ ಭಾಗಿಯಾದ ರೈತರಾದ ಅರಳದಿನ್ನಿ ಶಿವಯ್ಯ ಹಿರೇಮಠ,ಶ್ರೀಶೈಲ ಕಲಾದಗಿ,ಸಂಗಪ್ಪ ತೋಟದ,ಶರಣಪ್ಪ ಕೊಪ್ಪ,ಅಜ್ಜಪ್ಪ ಅಂಟರದಾನಿ,ಬಸಪ್ಪ ತೋಳಮಟ್ಟಿ,ನಿಂಗಪ್ಪ ವಾಲೀಕಾರ,ಶಂಕ್ರಪ್ಪ ಮಸೂತಿ,ಮುತ್ತು ಹುಲ್ಲೂರ,ಪರಶು ಜಟ್ಟಗಿ,ಮಹೆಬೂಬ ನಾಯ್ಕೋಡಿ,ಹಣಮಂತ ನಾಯ್ಕೋಡಿ,ಮುದ್ದಪ್ಪ ಹಾದಿಮನಿ,ಲಕ್ಷö್ಮಣ ನಾಶಿ,ಅಮೋಘಿ ಡೋಣೂರ,ಪ್ರಭು ಮನಗೂಳಿ,ಬಸ್ಸು ಗಂಜ್ಯಾಳ,ಲಕ್ಷö್ಮಣ ತೊಂಡಿಕಟ್ಟಿ,ಶಿವಪ್ರಸಾದ ಕೊಡಗಾನೂರ,ಹಣಮಂತ ಚಿಮ್ಮಲಗಿ,ನಿಂಗ್ಪ ಗಣಿ,ರಾಯಪ್ಪ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು.ಹೋರಾಟಗಾರರಾದ ಹುಲಗಪ್ಪ ನಾಯ್ಕಮಕ್ಕಳ,ಗುರು ರಾಯಗೊಂಡ,ದೇವರಾಜ ಗುಂಡಕನಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಮುದ್ದೇಬಿಹಾಳ ಪಿಎಸೈ ವಿಜಯಕುಮಾರ ತಳವಾರ,ಅಪರಾಧ ವಿಭಾಗದ ಪಿಎಸೈ ಆರ್.ಎಸ್.ಭಂಗಿ ಹಾಗೂ ಸಿಬ್ಬಂದಿ ಭದ್ರತೆ ಒದಗಿಸಿದ್ದರು.

ಹಸಿರು ಗುಲಾಲು,ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ: ಕಬ್ಬಿಗೆ ಒಂದು ದರ ನಿಗದಿಯಾಗಿರುವ ವಿಚಾರ ಹೊರಬೀಳುತ್ತಿದ್ದಂತೆ ಹುಲ್ಲೂರು ಗ್ರಾಮದಲ್ಲಿ ಕಬ್ಬು ಬೆಳಗಾರರು ಹಾಗೂ ರೈತ ಸಂಘದ ಹೋರಾಟಗಾರರು ಹಸಿರು ಗುಲಾಲು ಎರಚಿಕೊಂಡು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

3500 ರೂ.ಮೇಲೆಯೇ ದರ ಫಿಕ್ಸ್..?: ಬೆಳಗಾವಿಯಲ್ಲಿಯೇ ರಾಜ್ಯ ಮುಖಂಡರ ಎದುರಿಗೆ ಅಧಿಕೃತವಾಗಿ ಕಬ್ಬಿನ ದರ ಪ್ರಕಟವಾಗಲಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ತಿಳಿಸಿದರು.ಸುದ್ದಿಗಾರರು ದರ 4000 ರೂ.ಒಳಗಡೆ ಇರಲಿದೆಯೇ ಎಂದು ಪ್ರಶ್ನಿಸಿದಾಗ 3500 ರೂ.ಗಳಿಗಿಂತಲೂ ಮೇಲೆ ಇರಲಿದೆ ಎಂದು ಮುಖಂಡರಾದ ಪಾಟೀಲ ಹಾಗೂ ಸಗರ ಮಾಹಿತಿ ನೀಡಿದರು.ಆದರೆ ಅಧಿಕೃತವಾಗಿ ಇಷ್ಟೇ ಮೊತ್ತ ನಿಗದಿಯಾಗಿದೆ ಎಂಬುದನ್ನು ತಿಳಿಸಲಿಲ್ಲ.

Latest News

ನಿಯೋಜಿತ ಕನ್ನಡ ಸಾಹಿತ್ಯಭವನ ನಿರ್ಮಾಣಕ್ಕೆ ಸ್ಥಳ ನಿಗದಿ

ನಿಯೋಜಿತ ಕನ್ನಡ ಸಾಹಿತ್ಯಭವನ ನಿರ್ಮಾಣಕ್ಕೆ ಸ್ಥಳ ನಿಗದಿ

ಮುದ್ದೇಬಿಹಾಳ : ಸಾಹಿತ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಪಟ್ಟಣದ ಆಲಮಟ್ಟಿ ರಸ್ತೆಯ ಬಳಿ ಇರುವ ಸಾಯಿಮಂದಿರ

‘ಹೃದಯದ ಅಂತರoಗದ ಗೋಡೆಯಲ್ಲಿ ಕನ್ನಡ ಶಾಶ್ವತವಾಗಿ ನೆಲೆಸಲಿ’

‘ಹೃದಯದ ಅಂತರoಗದ ಗೋಡೆಯಲ್ಲಿ ಕನ್ನಡ ಶಾಶ್ವತವಾಗಿ ನೆಲೆಸಲಿ’

ಮುದ್ದೇಬಿಹಾಳ : ಇಂದಿನ ಆಧುನಿಕ ಕಾಲದಲ್ಲಿ ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದೆ ಎಂಬುದನ್ನು ನಾವು

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ:  ಕಾರ್ಖಾನೆಯವರು ಉಲ್ಟಾ ಹೊಡೆದಿದ್ದಾರೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ: ಕಾರ್ಖಾನೆಯವರು ಉಲ್ಟಾ ಹೊಡೆದಿದ್ದಾರೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ

ಬೆಳೆ ಸರ್ವೆಯಲ್ಲಿ ಭಾರೀ ಲೋಪ; ಅಧಿಕಾರಿಗಳು,ಜನಪ್ರತಿನಿಧಿಗಳು ರೈತರ ಕತ್ತು ಕೊಯ್ಯಬೇಡಿ-ಶಾಂತಗೌಡ ಪಾಟೀಲ್

ಬೆಳೆ ಸರ್ವೆಯಲ್ಲಿ ಭಾರೀ ಲೋಪ; ಅಧಿಕಾರಿಗಳು,ಜನಪ್ರತಿನಿಧಿಗಳು ರೈತರ ಕತ್ತು ಕೊಯ್ಯಬೇಡಿ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಳೆದ ಬಾರಿ ರೈತರಿಗೆ ಬೆಳೆ ವಿಮೆ ನೀಡುವ ಸಮಯದಲ್ಲಿ ಸಮೀಕ್ಷೆ ಸರಿಯಾಗಿ

ಶಾಸಕ ನಾಡಗೌಡರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ:  ‘ನಿನ್ನ ಹಾಗೆ ಹವಾಯಿ ಚಪ್ಪಲಿ ಹಾಕಿಕೊಂಡು ನಾನು ನಾಟಕ ಮಾಡಿಲ್ಲ’-ನಡಹಳ್ಳಿ’

ಶಾಸಕ ನಾಡಗೌಡರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ: ‘ನಿನ್ನ ಹಾಗೆ ಹವಾಯಿ ಚಪ್ಪಲಿ ಹಾಕಿಕೊಂಡು ನಾನು ನಾಟಕ ಮಾಡಿಲ್ಲ’-ನಡಹಳ್ಳಿ’

ಮುದ್ದೇಬಿಹಾಳ : ನಾನು ನಿಮ್ಮ ಹಾಗೆ ಹವಾಯಿ ಚಪ್ಪಲ ಹಾಕಿಕೊಂಡು ನಾಟಕ ಮಾಡಿಲ್ಲ.ಬೆಂಗಳೂರು ತುಂಬ ಆಸ್ತಿ ಮಾಡಿಲ್ಲ.ಶಾಲಾ,ಕಾಲೇಜು ಮಕ್ಕಳಿಗೆ ಪುಸ್ತಕ ಕೊಟ್ಟರೂ ಇವರಿಗೆ ಸಂಕಟ.ನನ್ನ ಸಾಮಾಜಿಕ ಸೇವೆಯನ್ನು ತಿರುಚಿ ಮಾತನಾಡುತ್ತಿರುವ ಶಾಸಕ ನಾಡಗೌಡರಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ವಾಗ್ದಾಳಿ ಮಾಡಿದರು. ಪಟ್ಟಣದ ತಮ್ಮ ಫಾರಂ ಹೌಸ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿರೇಮುರಾಳದ ಕಾರ್ಯಕ್ರಮವೊಂದರಲ್ಲಿ ನನ್ನ ಹೆಸರು ಉಲ್ಲೇಖಿಸದೇ ಶಾಲಾ,ಕಾಲೇಜು ಮಕ್ಕಳಿಗೆ

ಬರಗಾಲದಲ್ಲಿ ಸನ್ಮಾನ ಸಾಮಗ್ರಿ ತರಬೇಡಿ-ಶಾಸಕ ಸಿ.ಎಸ್.ನಾಡಗೌಡ

ಬರಗಾಲದಲ್ಲಿ ಸನ್ಮಾನ ಸಾಮಗ್ರಿ ತರಬೇಡಿ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಕೆಲವರು ತಮ್ಮ ರಾಜಕೀಯ ಲಾಭಕ್ಕೋಸ್ಕರ ಜನರಲ್ಲಿ ಇಲ್ಲಸಲ್ಲದ ವಿಚಾರಗಳನ್ನು ತುಂಬುವುದು.ಇರುವAತಹ ವಾತಾವರವನ್ನು ಹದಗೆಡಿಸುವುದು ಮಾಡುತ್ತಾರೆ.ಜನರು ಇಂತಹದ್ದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ತಾಲ್ಲೂಕಿನ ಹಿರೇಮುರಾಳದಲ್ಲಿ ಲೋಕೋಪಯೋಗಿ ಇಲಾಖೆಯಿಂದ 2025-26ನೇ ಸಾಲಿನ ಶಿರಾಡೋಣ ಲಿಂಗಸೂರ ರಾಜ್ಯ ಹೆದ್ದಾರಿ-41ರಲ್ಲಿ ಬರುವ ಸೇತುವೆಗಳ ಪುನರ್‌ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ನಾನು ಯಾವತ್ತೂ ಜನರಿಗೆ,ಶಾಲೆ,ಕಾಲೇಜು ಮಕ್ಕಳಿಗೆ ಡಾಬಾಗೆ ಹೋಗು,10 ಸಾವಿರ ರೂ.ತಗೆದಕೊಂಡು ಊಟ ಮಾಡು ಎಂದು ಹೇಳುವ ಅಭ್ಯಾಸ