ಕಬ್ಬು ಪೂರೈಸಲು ರೈತರಿಗೆ ಮನವಿ: ನ.20 ಕ್ಕೆ ಸುಣಕಲ್ ಆರ್.ಬಿ.ಶುಗರ‍್ಸ್ ಕಾರ್ಯಾರಂಭ

ಕಬ್ಬು ಪೂರೈಸಲು ರೈತರಿಗೆ ಮನವಿ: ನ.20 ಕ್ಕೆ ಸುಣಕಲ್ ಆರ್.ಬಿ.ಶುಗರ‍್ಸ್ ಕಾರ್ಯಾರಂಭ

ಮುದ್ದೇಬಿಹಾಳ : ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಒಡೆತನದ ಆರ್.ಬಿ.ಶುಗರ‍್ಸ್ನಲ್ಲಿ ನ.20 ರಂದು ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದ್ದು ಈ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಪೂರೈಕೆ ಮಾಡಿ ಕಾರ್ಖಾನೆಯೊಂದಿಗೆ ಸಹಕರಿಸಬೇಕು ಎಂದು ಸುಣಕಲ್ ಆರ್.ಬಿ.ಶುರ‍್ಸ್ನ ತಾಂತ್ರಿಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಎಸ್.ಆರ್.ಕುಂದರಗಿ ತಿಳಿಸಿದರು.

ಪಟ್ಟಣದ ಪಂಜುರ್ಲಿ ಹೊಟೇಲ್ ಸಭಾಂಗಣದಲ್ಲಿ ಬುಧವಾರ ಅವರು ಮಾತನಾಡಿದರು.ನಿತ್ಯವೂ 5000 ಟನ್ ಕಬ್ಬು ನುರಿಸುವ ಸಾಮರ್ಥ್ಯವನ್ನು ಕಾರ್ಖಾನೆ ಹೊಂದಿದೆ.ಮುದ್ದೇಬಿಹಾಳ ತಾಲ್ಲೂಕಿನಲ್ಲಿ 3000 ಎಕರೆ ಕಬ್ಬು ಪ್ರದೇಶದಲ್ಲಿ ಬೆಳೆದ ಕಬ್ಬು ಕಾರ್ಖಾನೆಗೆ ಪೂರೈಸುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ.ಈಗಾಗಲೇ ಕಾರ್ಖಾನೆಯಿಂದ ರೈತರಿಗೆ ಕಬ್ಬಿನ ಬೀಜಗಳನ್ನು ವಿತರಿಸಲಾಗಿದೆ.ಕಾರ್ಖಾನೆಯೊಂದಿಗೆ 7500 ರೈತರು ಒಪ್ಪಂದ ಮಾಡಿಕೊಂಡಿದ್ದಾರೆ.ನಮ್ಮ ಕಾರ್ಖಾನೆಯಿಂದ 40 ಸಾವಿರ ಎಕರೆ ಗುರಿ ಇಟ್ಟುಕೊಂಡಿದ್ದು ಈಗಾಗಲೇ ವಿಜಯಪುರ,ಬಾಗಲಕೋಟ,ಯಾದಗಿರಿ,ರಾಯಚೂರು ಜಿಲ್ಲೆಗಳ 60ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಬ್ಬು ಕ್ಷೇತ್ರ ಇದೆ ಎಂದು ತಿಳಿಸಿದರು.

ಕಬ್ಬು ಪೂರೈಸುವ ರೈತರಿಗೆ ಕಾರ್ಖಾನೆಯಿಂದ ಟನ್‌ಗೆ ನೀಡುವ ದರವನ್ನು ನ.20 ರಂದು ಆಡಳಿತ ಮಂಡಳಿ ಘೋಷಣೆ ಮಾಡಲಿದೆ ಎಂದು ತಿಳಿಸಿದರು.

ಕೋ ಆರ್ಡಿನೇಟರ್ ಅಮೀತ ನಲವಡೆ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಆರಂಭಗೊಳ್ಳುತ್ತಿರುವ ಮೊದಲ ಸಕ್ಕರೆ ಕಾರ್ಖಾನೆ ಇದಾಗಿದ್ದು ಸಕ್ಕರೆ ಉತ್ಪಾದನೆ ಮೊದಲ ಆದ್ಯತೆ ಆಗಿರಲಿದೆ.ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ವಿದ್ಯುತ್ ಕಾರ್ಖಾನೆಯ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಮುದ್ದೇಬಿಹಾಳ ತಾಲ್ಲೂಕಿನ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಪ್ರತಿಸ್ಪರ್ಧಿ,ಪೈಪೋಟಿ ನೀಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಾರ್ಖಾನೆಯ ಅಧಿಕಾರಿಗಳು, ಬಾಗಲಕೋಟ ಜಿಲ್ಲೆಯಲ್ಲಿ ಆರಕ್ಕೂ ಹೆಚ್ಚು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ.ಸಾವಿರಾರು ಟನ್ ಕಬ್ಬು ನುರಿಸುತ್ತಿವೆ.ಆದರೆ ಒಬ್ಬರಿಂದ ಮತ್ತೊಬ್ಬರಿಗೆ ಆರೋಗ್ಯಕರ ಬೆಳವಣಿಗೆ ಇದೆ.ಯಾರ ವಿರುದ್ಧವೂ ನಮ್ಮ ಸ್ಪರ್ಧೆ ಅಲ್ಲ ಎಂದು ಉತ್ತರಿಸಿದರು. ಕಾರ್ಖಾನೆಯ ಡಿಜಿಎಂ ಬಿ.ಬಿ.ಪಾಟೀಲ,ಕ್ಷೇತ್ರಾಧಿಕಾರಿ ಹಣಮಂತ ಹುಲ್ಲೂರ ಇದ್ದರು.

Latest News

ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ :                                      ಟನ್ ಕಬ್ಬಿಗೆ 3600 ರೂ.ದರ ಘೋಷಣೆ ಮಾಡಿದ ಬಾಲಾಜಿ ಶುಗರ್ಸ್

ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ : ಟನ್ ಕಬ್ಬಿಗೆ 3600 ರೂ.ದರ ಘೋಷಣೆ ಮಾಡಿದ ಬಾಲಾಜಿ ಶುಗರ್ಸ್

ಮುದ್ದೇಬಿಹಾಳ : ತಾಲೂಕಿನ ಯರಗಲ್ಲ ಗ್ರಾಮದಲ್ಲಿರುವ ಶ್ರೀ ಬಾಲಾಜಿ ಶುಗರ್ಸ್ ಅಂಡ್ ಕೆಮಿಕಲ್ಸ್ ಪ್ರೈವೇಟ್

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ:      ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ: ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುದ್ದೇಬಿಹಾಳ : ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ

ಸಿಎಂ ಡಿಕೆಶಿ ನೇತೃತ್ವದ ಸಭೆ :                                           ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆ ಭಾಗಿ

ಸಿಎಂ ಡಿಕೆಶಿ ನೇತೃತ್ವದ ಸಭೆ : ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆ ಭಾಗಿ

ಮುದ್ದೇಬಿಹಾಳ : ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ

ನಾಳೆ ಬೆಳಗಾವಿಯಲ್ಲಿ ಅಧಿಕೃತ ಘೋಷಣೆ;                         ಕಬ್ಬಿಗೆ 3500 ರೂ.ಮೇಲೆಯೇ ದರ ಫಿಕ್ಸ್..?!!

ನಾಳೆ ಬೆಳಗಾವಿಯಲ್ಲಿ ಅಧಿಕೃತ ಘೋಷಣೆ; ಕಬ್ಬಿಗೆ 3500 ರೂ.ಮೇಲೆಯೇ ದರ ಫಿಕ್ಸ್..?!!

ಮುದ್ದೇಬಿಹಾಳ : ಬರಗಾಲದ ಸಮಯದಲ್ಲಿ ರೈತರು ಬೆಳೆದಿರುವ ಕಬ್ಬು ಕಾರ್ಖಾನೆಗೆ ಸಾಗಿಸದಿದ್ದರೆ ಬಂದಷ್ಟು ಫಸಲು

‘ಹೃದಯದ ಅಂತರoಗದ ಗೋಡೆಯಲ್ಲಿ ಕನ್ನಡ ಶಾಶ್ವತವಾಗಿ ನೆಲೆಸಲಿ’

‘ಹೃದಯದ ಅಂತರoಗದ ಗೋಡೆಯಲ್ಲಿ ಕನ್ನಡ ಶಾಶ್ವತವಾಗಿ ನೆಲೆಸಲಿ’

ಮುದ್ದೇಬಿಹಾಳ : ಇಂದಿನ ಆಧುನಿಕ ಕಾಲದಲ್ಲಿ ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದೆ ಎಂಬುದನ್ನು ನಾವು ಅಲ್ಲಗಳೆಯುವುದಿಲ್ಲ. ಆದರೆ ಇಂಗ್ಲಿಷ್ ನಮ್ಮ ಮನೆಯ ಹಾಲ್‌ನವರೆಗೆ ಬರಲಿ, ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಮ್ಮ ಅಡುಗೆಮನೆಯಲ್ಲಿ ಮಾತ್ರ ಕನ್ನಡದ ಪರಿಮಳವೇ ಇರಬೇಕು ಎಂದು ಬದುಕಿನ ಪ್ರತಿ ಹಂತದಲ್ಲೂ ಕನ್ನಡದ ಅಸ್ಮೀತೆ ಉಳಿಯಬೇಕು ಎಂದು ಮಡಿಕೇಶ್ವರ ಬಿ.ಜಿ.ತುಂಬಗಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕ ಬಸವರಾಜ ಹಂಚಲಿ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ:  ಕಾರ್ಖಾನೆಯವರು ಉಲ್ಟಾ ಹೊಡೆದಿದ್ದಾರೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ: ಕಾರ್ಖಾನೆಯವರು ಉಲ್ಟಾ ಹೊಡೆದಿದ್ದಾರೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶನಿವಾರ ಕರೆ ನೀಡಲಾಗಿದ್ದ ಮುದ್ದೇಬಿಹಾಳ ತಾಲ್ಲೂಕು ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು ರೈತರ ಹೋರಾಟಕ್ಕೆ ಸಾರ್ವಜನಿಕವಾಗಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ,ಮುಖಂಡರಾದ ಹುಲಗಪ್ಪ ನಾಯಕಮಕ್ಕಳ ಮತ್ತಿತರರ ನೇತೃತ್ವದಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ವ್ಯಾಪಾರಸ್ಥರಿಗೆ ಹಾಗೂ ಹೊಟೇಲ್ ಮಾಲೀಕರುಗಳಿಗೆ ಅಂಗಡಿಗಳನ್ನು ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ