ಭ್ರಷ್ಟಾಚಾರದ ಒಲಿಂಪಿಕ್ಸ್‌ನಲ್ಲಿ ಇವರೇ ಫಸ್ಟ್, ಸೆಕೆಂಡ್, ಥರ್ಡ್..!

ಭ್ರಷ್ಟಾಚಾರದ ಒಲಿಂಪಿಕ್ಸ್‌ನಲ್ಲಿ ಇವರೇ ಫಸ್ಟ್, ಸೆಕೆಂಡ್, ಥರ್ಡ್..!

ಬೆಂಗಳೂರು: ವಿಶ್ವದ ಬಹುದೊಡ್ಡ ಕ್ರೀಡಾ ಕೂಟ ಒಲಿಂಪಿಕ್ಸ್ ಈ ಬಾರಿ ಪ್ಯಾರಿಸ್‌ನಲ್ಲಿ ನಡೆಯುತ್ತಿದ್ದು, ಭಾರತದ ಕ್ರೀಡಾಪಟುಗಳು ಒಂದೊಂದಾಗಿ ಪದಕಗಳನ್ನು ಗೆದ್ದು ಕೊಡುತ್ತಿದ್ದಾರೆ. ಆದರೆ, ಇದೇ ಸಂದರ್ಭ ರಾಜ್ಯದಲ್ಲಿ ಒಲಿಂಪಿಕ್ಸ್ ವಿಚಾರವನ್ನು ಹಿಡಿದುಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಾಜಕಾರಣ ಮಾಡುತ್ತಿವೆ.

ಹಗರಣ, ಭ್ರಷ್ಟಾಚಾರಗಳಲ್ಲಿ ಈ ನಾಯಕರಿಗೆ ಚಿನ್ನ, ಬೆಳ್ಳಿ, ಕಂಚಿನ ಪದಕ ಕೊಡಬೇಕೆಂದು ಉಭಯ ಪಕ್ಷಗಳು ಟೀಕೆ ಮಾಡುತ್ತಿವೆ.

ಈ ಬಗ್ಗೆ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆ ಭ್ರಷ್ಟಾಚಾರದ ಒಲಂಪಿಕ್ಸ್ ನಲ್ಲಿ ಬಿಜೆಪಿಯೇ ನಂ1. ಗೋಲ್ಡು, ಸಿಲ್ವ‌ರ್, ಕಂಚು ಎಲ್ಲವೂ ಬಿಜೆಪಿ ಪಾಲು! ಎಂದು ಬರೆದಿದ್ದು, ಅದರೊಂದಿಗೆ ಫೋಟೋವನ್ನು ಬಿಡುಗಡೆ ಮಾಡಿದೆ.

ಫೋಟೋದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಚಿನ್ನ, ವಿಪಕ್ಷ ನಾಯಕ ಆ‌ರ್ ಅಶೋಕ್ ಗೆ ಬೆಳ್ಳಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಂಚಿನ ಪದಕ ಧರಿಸಿರುವ ರೀತಿ ಎಡಿಟ್ ಮಾಡಿ, ಇವರು ಭ್ರಷ್ಟಾಚಾರದ ಒಲಂಪಿಕ್ಸ್ ನಲ್ಲಿ ಹೆಚ್ಚು ಪದಕ ಪಡೆದವರು ಎಂದು ಬರೆದು ಟೀಕಿಸಿದೆ.

ಇತ್ತ, ಬಿಜೆಪಿಯೂ ಕಾಂಗ್ರೆಸ್‌ಗೆ ತಿರುಗೇಟು ನೀಡಿ ಮತ್ತೊಂದು ಫೋಟೋವನ್ನು ಹಂಚಿಕೊಂಡಿದೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ ಚಿನ್ನ, ಮಾಜಿ ಸಚಿವ ನಾಗೇಂದ್ರ ಬೆಳ್ಳಿ ಹಾಗೂ ಬಸವನಗೌಡ ದದ್ದಲ್ ಕಂಚಿನ ಪದಕ ಧರಿಸಿರುವ ರೀತಿ ಫೋಟೋವನ್ನು ಎಡಿಟ್ ಮಾಡಲಾಗಿದ್ದು, ಸ್ಕ್ಯಾಮ್ 2024, ₹500 ಕೋಟಿ ಎಂದು ಬರೆದು ಬಿಜೆಪಿ ಟೀಕಿಸಿದೆ.

Latest News

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ:      ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ: ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುದ್ದೇಬಿಹಾಳ : ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ

ಸಿಎಂ ಡಿಕೆಶಿ ನೇತೃತ್ವದ ಸಭೆ :                                           ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆ ಭಾಗಿ

ಸಿಎಂ ಡಿಕೆಶಿ ನೇತೃತ್ವದ ಸಭೆ : ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆ ಭಾಗಿ

ಮುದ್ದೇಬಿಹಾಳ : ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ

ನಾಳೆ ಬೆಳಗಾವಿಯಲ್ಲಿ ಅಧಿಕೃತ ಘೋಷಣೆ;                         ಕಬ್ಬಿಗೆ 3500 ರೂ.ಮೇಲೆಯೇ ದರ ಫಿಕ್ಸ್..?!!

ನಾಳೆ ಬೆಳಗಾವಿಯಲ್ಲಿ ಅಧಿಕೃತ ಘೋಷಣೆ; ಕಬ್ಬಿಗೆ 3500 ರೂ.ಮೇಲೆಯೇ ದರ ಫಿಕ್ಸ್..?!!

ಮುದ್ದೇಬಿಹಾಳ : ಬರಗಾಲದ ಸಮಯದಲ್ಲಿ ರೈತರು ಬೆಳೆದಿರುವ ಕಬ್ಬು ಕಾರ್ಖಾನೆಗೆ ಸಾಗಿಸದಿದ್ದರೆ ಬಂದಷ್ಟು ಫಸಲು

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ:                                 ತಡ ರಾತ್ರಿಯವರೆಗೂ ನಡೆಯಲಿದೆ ಸಂಧಾನ ಸಭೆ…!?

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ತಡ ರಾತ್ರಿಯವರೆಗೂ ನಡೆಯಲಿದೆ ಸಂಧಾನ ಸಭೆ…!?

ಮುದ್ದೇಬಿಹಾಳ : ಕಬ್ಬು ಬೆಳೆಗಾರರಿಗೆ ಮಂಗಳವಾರ ಸಿಹಿ ಸುದ್ದಿ ಸಿಗಲಿದೆ ಎಂಬ ನಿರೀಕ್ಷೆ ಇನ್ನೂ

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ:  ಕಾರ್ಖಾನೆಯವರು ಉಲ್ಟಾ ಹೊಡೆದಿದ್ದಾರೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ: ಕಾರ್ಖಾನೆಯವರು ಉಲ್ಟಾ ಹೊಡೆದಿದ್ದಾರೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶನಿವಾರ ಕರೆ ನೀಡಲಾಗಿದ್ದ ಮುದ್ದೇಬಿಹಾಳ ತಾಲ್ಲೂಕು ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು ರೈತರ ಹೋರಾಟಕ್ಕೆ ಸಾರ್ವಜನಿಕವಾಗಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ,ಮುಖಂಡರಾದ ಹುಲಗಪ್ಪ ನಾಯಕಮಕ್ಕಳ ಮತ್ತಿತರರ ನೇತೃತ್ವದಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ವ್ಯಾಪಾರಸ್ಥರಿಗೆ ಹಾಗೂ ಹೊಟೇಲ್ ಮಾಲೀಕರುಗಳಿಗೆ ಅಂಗಡಿಗಳನ್ನು ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ

ಬೆಳೆ ಸರ್ವೆಯಲ್ಲಿ ಭಾರೀ ಲೋಪ; ಅಧಿಕಾರಿಗಳು,ಜನಪ್ರತಿನಿಧಿಗಳು ರೈತರ ಕತ್ತು ಕೊಯ್ಯಬೇಡಿ-ಶಾಂತಗೌಡ ಪಾಟೀಲ್

ಬೆಳೆ ಸರ್ವೆಯಲ್ಲಿ ಭಾರೀ ಲೋಪ; ಅಧಿಕಾರಿಗಳು,ಜನಪ್ರತಿನಿಧಿಗಳು ರೈತರ ಕತ್ತು ಕೊಯ್ಯಬೇಡಿ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಳೆದ ಬಾರಿ ರೈತರಿಗೆ ಬೆಳೆ ವಿಮೆ ನೀಡುವ ಸಮಯದಲ್ಲಿ ಸಮೀಕ್ಷೆ ಸರಿಯಾಗಿ ಮಾಡಿಲ್ಲ.ಮೂಕಿಹಾಳ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಹಾರವೇ ಬಂದಿಲ್ಲ.ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಮತ್ತೆ ರೈತರಿಗೆ ಮೋಸ ಮಾಡುವ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ಆರೋಪಿಸಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ತಂಗಡಗಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ,ಸಿಬ್ಬಂದಿ ನಮ್ಮ ಹೊಲದ ಪಕ್ಕದಲ್ಲಿ ನೀರಾವರಿ ಆಶ್ರಿತ