ಗ್ರಾಮೋದ್ಧಾರ ಎಲ್ಲರ ಗುರಿಯಾಗಲಿ: ಶಾಸಕ ಕಾಶಪ್ಪನವರ್

ಗ್ರಾಮೋದ್ಧಾರ ಎಲ್ಲರ ಗುರಿಯಾಗಲಿ: ಶಾಸಕ ಕಾಶಪ್ಪನವರ್

ಹುನಗುಂದ: ಭಾರತ ಹಳ್ಳಿಗಳ ದೇಶ. ಹಳ್ಳಿಗಳ ಉದ್ಧಾರವಾಗದೆ ದೇಶದ ಉದ್ಧಾರವಾಗದು. ಗಾಂಧೀಜಿಯವರ ಕನಸನ್ನು ನನಸಾಗಿಸುವಲ್ಲಿ, ಗ್ರಾಮ ಜೀವನವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತಲಿವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಹುನಗದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾವರಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ, ಶಿಬಿರದಲ್ಲಿ ಗಳಿಸಿದ ಅನುಭವವನ್ನು ವಿದ್ಯಾರ್ಥಿಗಳು ಮುಂಬರುವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆಕೊಟ್ಟರು.

ವಿಶೇಷ ಆಹ್ವಾನಿತರಾಗಿ ಹಾಜರಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿ, ಭಾವೈಕ್ಯತೆ, ಭ್ರಾತೃತ್ವ, ಪರಸ್ಪರ ಅವಲಂಬನೆ ಯಂತಹ ಹಲವಾರು ಗುಣಗಳನ್ನು ಇಂತಹ ಶಿಬಿರಗಳು ಉತ್ತೇಜಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಪ್ರಾಚಾರ್ಯ ಡಾ.ಹೆಚ್ ಎಸ್ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಮಹಾಂತೇಶ ಕಾಶಪ್ಪನವರ್ ಹಾಗೂ ಶಿಬಿರಾರ್ಥಿಗಳು ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರು,ಸಿ.ಡಿ.ಸಿ ಸದಸ್ಯರು ಉಪಸ್ಥಿತರಿದ್ದರು. ಸಂಚಾಲಕರಾದ ಶ್ರೀ ಬಿ ವೈ ಆಲೂರ ಸ್ವಾಗತಿಸಿದರು, ಶ್ರೀದೇವಿ ಕಡಿವಾಲ ವಂದಿಸಿದರು.

Latest News

ಅ.30 ರಂದು ಗಂಗೂರಿನಲ್ಲಿ ಅಂಕಲಿಮಠದ ಶ್ರೀಗಳ ತುಲಾಭಾರ

ಅ.30 ರಂದು ಗಂಗೂರಿನಲ್ಲಿ ಅಂಕಲಿಮಠದ ಶ್ರೀಗಳ ತುಲಾಭಾರ

ಮುದ್ದೇಬಿಹಾಳ : ದಸರಾ  ನಿಮಿತ್ಯವಾಗಿ  ತಾಲ್ಲೂಕಿನ  ಗಂಗೂರ  ಗ್ರಾಮದಲ್ಲಿ ಅ.30  ರಂದು ಬೆಳಗ್ಗೆ 11.30ಕ್ಕೆ

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ:                    ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ: ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಮುದ್ದೇಬಿಹಾಳ : ಬಿಜೆಪಿಗೆ ಮರಳಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಾಪಸ್ ಕರೆತರುವ

ಶಾಸಕ ನಾಡಗೌಡರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ:  ‘ನಿನ್ನ ಹಾಗೆ ಹವಾಯಿ ಚಪ್ಪಲಿ ಹಾಕಿಕೊಂಡು ನಾನು ನಾಟಕ ಮಾಡಿಲ್ಲ’-ನಡಹಳ್ಳಿ’

ಶಾಸಕ ನಾಡಗೌಡರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ: ‘ನಿನ್ನ ಹಾಗೆ ಹವಾಯಿ ಚಪ್ಪಲಿ ಹಾಕಿಕೊಂಡು ನಾನು ನಾಟಕ ಮಾಡಿಲ್ಲ’-ನಡಹಳ್ಳಿ’

ಮುದ್ದೇಬಿಹಾಳ : ನಾನು ನಿಮ್ಮ ಹಾಗೆ ಹವಾಯಿ ಚಪ್ಪಲ ಹಾಕಿಕೊಂಡು ನಾಟಕ ಮಾಡಿಲ್ಲ.ಬೆಂಗಳೂರು ತುಂಬ

ಬರಗಾಲದಲ್ಲಿ ಸನ್ಮಾನ ಸಾಮಗ್ರಿ ತರಬೇಡಿ-ಶಾಸಕ ಸಿ.ಎಸ್.ನಾಡಗೌಡ

ಬರಗಾಲದಲ್ಲಿ ಸನ್ಮಾನ ಸಾಮಗ್ರಿ ತರಬೇಡಿ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಕೆಲವರು ತಮ್ಮ ರಾಜಕೀಯ ಲಾಭಕ್ಕೋಸ್ಕರ ಜನರಲ್ಲಿ ಇಲ್ಲಸಲ್ಲದ ವಿಚಾರಗಳನ್ನು ತುಂಬುವುದು.ಇರುವAತಹ ವಾತಾವರವನ್ನು

ಬಂಜಾರ ಸಮಾಜದಲ್ಲಿ ಮತಾಂತರ ಪಿಡುಗಿನ ಜಾಗೃತಿ-ರವಿ ನಾಯಕ

ಬಂಜಾರ ಸಮಾಜದಲ್ಲಿ ಮತಾಂತರ ಪಿಡುಗಿನ ಜಾಗೃತಿ-ರವಿ ನಾಯಕ

ಮುದ್ದೇಬಿಹಾಳ : ನಮ್ಮ ತಾಂಡಾಗಳಲ್ಲಿರುವ ಬಂಜಾರಾ ಜನಾಂಗದವರಲ್ಲಿ ಕೆಲವರು ಮತಾಂತರದ ಪಿಡುಗಿಗೆ ಬಲಿಯಾಗುತ್ತಿದ್ದಾರೆ.ಅಂತಹ ಪ್ರಕರಣಗಳು ಹೆಚ್ಚಬಾರದೆಂಬ ಉದ್ದೇಶದಿಂದ ನಮ್ಮ ಧರ್ಮ,ಜನಾಂಗದ ಜಾತ್ರೆ ಉತ್ಸವಗಳಲ್ಲಿ ಮತಾಂತರ ಪಿಡುಗಿನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಎಸ್.ಎಸ್.ಶಿವಾಚಾರ್ಯ ಕಾಲೇಜಿನ ಆಡಳಿತಾಧಿಕಾರಿ,ಬಂಜಾರಾ ಸಮಾಜದ ಮುಖಂಡ ರವಿ ಎನ್.ನಾಯಕ ಹೇಳಿದರು. ತಾಲೂಕಿನ ಕೋಳೂರು ತಾಂಡಾದಲ್ಲಿ ನವರಾತ್ರಿ ದಸರಾ ಹಬ್ಬದ ಅಂಗವಾಗಿ ಶ್ರೀ ದುರ್ಗಾದೇವಿ ಹಾಗೂ ಶ್ರೀ ಸಂತಸೇವಾಲಾಲ ಮಹಾರಾಜರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಪಿಂಜಾರ ಸಮುದಾಯ ಶ್ರಮಿಕ ಸಮಾಜವಾಗಿದ್ದು ಎಲ್ಲ ಸಮಾಜದವರೊಂದಿಗೆ ಬೆರೆಯುವ ಜನಾಂಗವಾಗಿದ್ದಾರೆ.ನೀವು ಯಾವ ಧರ್ಮದಲ್ಲಿದ್ದಿರೋ ಮಕ್ಕಳಿಗೆ ಆ ಧರ್ಮದ ಸಂಸ್ಕಾರ ಕೊಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ,ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಭವಿಷ್ಯದಲ್ಲಿ