Accident news: The vehicle in which the media was traveling met with an accident

Accident news: ಮಾಧ್ಯಮದವರು ತೆರಳುತ್ತಿದ್ದ ವಾಹನ ಅಪಘಾತಕ್ಕೀಡು… ಏಳು ಮಂದಿಗೆ ಗಾಯ..!

Accident news: ಮಾಧ್ಯಮದವರು ತೆರಳುತ್ತಿದ್ದ ವಾಹನ ಅಪಘಾತಕ್ಕೀಡು… ಏಳು ಮಂದಿಗೆ ಗಾಯ..!

ಸಕಲೇಶಪುರ: ಎತ್ತಿನಹೊಳೆ ಯೋಜನೆಯ ಮೊದಲನೇ ಹಂತದ ಲೋಕಾರ್ಪಣೆ ಕಾರ್ಯಕ್ಕೆ ಇಂದು ಸಿಎಂ, ಡಿಸಿಎಂ ಚಾಲನೆ ನೀಡಿದ್ದು, ಈ ವೇಳೆ ಅವಘಡವೊಂದು ಸಂಭವಿಸಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡನಗರ ಗ್ರಾಮದಲ್ಲಿ ಆಯೋಜಿಸಿದ್ದ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಮೀಡಿಯಾ ವರದಿಗಾರರ ಕರೆದೊಯ್ಯಲು ವಾರ್ತಾ ಇಲಾಖೆ ಕಳುಹಿಸಿದ್ದ ವಾಹನ ಬ್ರೇಕ್ ಫೇಲ್ ಆಗಿದೆ.

ಕಾರ್ಯಕ್ರಮಕ್ಕೆ ವರದಿಗಾರರು ತೆರಳುತ್ತಿದ್ದ ವಾಹನ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಬಾಳುಪೇಟೆ ಬಳಿ ಚಲಿಸುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಬ್ರೇಕ್ ಫೇಲ್ಯೂರ್ ಕಾರಣ ವಾಹನ ಲಾರಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ.

ಸದ್ಯ, ಅಪಘಾತದಲ್ಲಿ ಏಳು ಮಂದಿ ವರದಿಗಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: ಗಂಗಾ ಕಲ್ಯಾಣ ಸೇರಿ ವಿವಿಧ ಯೋಜನೆಯಡಿ ಅರ್ಜಿ‌ ಸಲ್ಲಿಸಿ: ಕಾಶಪ್ಪನವರ ಕರೆ (ವಿಡಿಯೋ ನೋಡಿ)

ಈ ಘಟನೆಗೆ ಸರ್ಕಾರವೇ ಕಾರಣ. ರಾಜಕೀಯ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುತ್ತಾರೆ. ಆದರೆ ಪ್ರತ್ಯೇಕ ವಾಹನ ವ್ಯವಸ್ಥೆ ಕಲ್ಪಿಸಲು ಹಿಂದೆ ಮುಂದೆ ನೋಡುತ್ತಾರೆ ಎಂದು ವರದಿಗಾರರು ಕಿಡಿಕಾರಿದ್ದಾರೆ.

Latest News

ಜೂ.19 ರಂದು ಪಕ್ಷಾತೀತವಾಗಿ ವ್ಯಾಪಾರಸ್ಥರಿಂದ ಮುದ್ದೇಬಿಹಾಳ ಸ್ವಯಂಪ್ರೇರಿತ ಬಂದ್

ಜೂ.19 ರಂದು ಪಕ್ಷಾತೀತವಾಗಿ ವ್ಯಾಪಾರಸ್ಥರಿಂದ ಮುದ್ದೇಬಿಹಾಳ ಸ್ವಯಂಪ್ರೇರಿತ ಬಂದ್

ಮುದ್ದೇಬಿಹಾಳ : ಶಾಸಕ ಸಿ.ಎಸ್.ನಾಡಗೌಡ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಜೂ.19

ಮುದ್ದೇಬಿಹಾಳ : ಬಲವಂತದ ಬಂದ್ ಕರೆ ಅಗತ್ಯವಿಲ್ಲ-ಪಂಪಣ್ಣವರ

ಮುದ್ದೇಬಿಹಾಳ : ಬಲವಂತದ ಬಂದ್ ಕರೆ ಅಗತ್ಯವಿಲ್ಲ-ಪಂಪಣ್ಣವರ

ಮುದ್ದೇಬಿಹಾಳ ; ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಅವರಿಗೆ ಅವರ ಸರ್ಕಾರದಲ್ಲಿ ಸಚಿವ ಸ್ಥಾನ ದೊರಕಲಿ.ಅವರ

‘ಶಾಸಕ ಸಿ.ಎಸ್.ನಾಡಗೌಡರಿಗೆ ಮಂತ್ರಿ ಮಾಡಿ,ಇಲ್ಲವೇ ನಮ್ಮ ರಾಜೀನಾಮೆ ಪಡೆದುಕೊಳ್ಳಿ’

‘ಶಾಸಕ ಸಿ.ಎಸ್.ನಾಡಗೌಡರಿಗೆ ಮಂತ್ರಿ ಮಾಡಿ,ಇಲ್ಲವೇ ನಮ್ಮ ರಾಜೀನಾಮೆ ಪಡೆದುಕೊಳ್ಳಿ’

ಮುದ್ದೇಬಿಹಾಳ : ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡರಿಗೆ ನೂತನ

ತಾಳಿಕೋಟಿ : ಸಿಲಿಂಡರ್ ಸ್ಫೋಟದಿಂದ ಮೃತ ಕುಟುಂಬಗಳಿಗೆ ಅಸ್ಕಿ ಫೌಂಡೇಶನ್ ನೆರವು

ತಾಳಿಕೋಟಿ : ಸಿಲಿಂಡರ್ ಸ್ಫೋಟದಿಂದ ಮೃತ ಕುಟುಂಬಗಳಿಗೆ ಅಸ್ಕಿ ಫೌಂಡೇಶನ್ ನೆರವು

ತಾಳಿಕೋಟಿ : ಪಟ್ಟಣದಲ್ಲಿ ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮೃತಪ್ಪಟ ಕಟ್ಟಡ ಕಾರ್ಮಿಕರಾದ ಶಕೀಲಅಹ್ಮದ್

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಸಂಬoಧಿಸಿದoತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜೂ.8 ರಿಂದ ಆಲಮಟ್ಟಿ ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ ಕಚೇರಿ ಮುಂದೆ ರೈತರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ತಿಳಿಸಿದರು. ಪಟ್ಟಣದ ಹುಡ್ಕೋದಲ್ಲಿರುವ ಪಂಜುರ್ಲಿ ಹೊಟೇಲ್ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ರೈತ

ಎಲ್ಲೆಡೆ ಶಾಲಾ ಆರಂಭೋತ್ಸವ:                                            ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಎಲ್ಲೆಡೆ ಶಾಲಾ ಆರಂಭೋತ್ಸವ: ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಲಿ ಎಂಬ ಸದುದ್ಧೇಶದಿಂದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ರಾಜ್ಯಾದ್ಯಾಂತ ಜೂ.1 ರಿಂದ ಸರ್ಕಾರಿ ಶಾಲೆಗಳ ಆರಂಭೋತ್ಸವಕ್ಕೆ ಸೂಚನೆ ನೀಡಿದಂತೆ ತಾಲ್ಲೂಕಿನೆಲ್ಲೆಡೆ ವೈಭವದಿಂದ ಶಾಲೆಗಳನ್ನು ಶಿಕ್ಷಕರು ಆರಂಭಿಸಿದ್ದಾರೆ. ಕೆಲವಡೆ ಮಕ್ಕಳಿಗೆ ಸರ್ಕಾರದಿಂದ ಪೂರೈಕೆಯಾಗಿರುವ ಪಠ್ಯಪುಸ್ತಕಗಳು,ಬಟ್ಟೆ ಕೊಟ್ಟು ಸ್ವಾಗತಿಸಿಕೊಂಡರೆ ಇನ್ನು ಕೆಲವೆಡೆ ಶಾಲಾ ಮಕ್ಕಳನ್ನು ಎತ್ತಿನ ಬಂಡಿಯಲ್ಲಿ ಕೂರಿಸಿಕೊಂಡು ಊರಿನ ತುಂಬೆಲ್ಲ ಮೆರವಣಿಗೆ ನಡೆಸಿ