ಸದನದಲ್ಲಿ ಶಾಸಕ ಸಿ.ಎಸ್.ನಾಡಗೌಡ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿಕೆಶಿ ಉತ್ತರ: ಮಾರ್ಚ್ ಅಂತ್ಯಕ್ಕೆ ನಾಗರಬೆಟ್ಟ ಏತನೀರಾವರಿ ಯೋಜನೆ ಪೂರ್ಣ

ಸದನದಲ್ಲಿ ಶಾಸಕ ಸಿ.ಎಸ್.ನಾಡಗೌಡ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿಕೆಶಿ ಉತ್ತರ: ಮಾರ್ಚ್ ಅಂತ್ಯಕ್ಕೆ ನಾಗರಬೆಟ್ಟ ಏತನೀರಾವರಿ ಯೋಜನೆ ಪೂರ್ಣ

ಮುದ್ದೇಬಿಹಾಳ : ತಾಲ್ಲೂಕಿನ ಮಹತ್ವಾಕಾಂಕ್ಷೆ ನೀರಾವರಿ ಯೋಜನೆಗಳಲ್ಲಿ ಒಂದಾಗಿರುವ ನಾಗರಬೆಟ್ಟ ಏತ ನೀರಾವರಿ ಯೋಜನೆಯ ಎಲ್ಲ ಕೆಲಸಗಳನ್ನು 2026ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದಿರುವ ಚಳಿಗಾಲದ ಅಧಿವೇಶನದಲ್ಲಿ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಅವರು ಕೇಳಿದ 53ನೇ ಚುಕ್ಕೆ ಗುರುತಿನ ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಸಂಬoಧಿಸಿದ ಪ್ರಶ್ನೆಗೆ ಉತ್ತರಿಸಿರುವ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ ಅವರು, ಮುದ್ದೇಬಿಹಾಳ ತಾಲ್ಲೂಕಿನ 3200 ಹೆಕ್ಟೇರ್ ನೀರಾವರಿ ವಂಚಿತ ಕ್ಷೇತ್ರಕ್ಕೆ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಕೃಷ್ಣಾ ನದಿ ನೀರನ್ನು ಎತ್ತಿ ನೀರಾವರಿಗೊಳಪಡಿಸುವ ನಾಗರಬೆಟ್ಟ ಏತ ನೀರಾವರಿ ಯೋಜನೆ 170.70 ಕೋಟಿ ರೂ.ಅಂದಾಜು ಮೊತ್ತಕ್ಕೆ ಸೆ.12,2017ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು ಯೋಜನೆಯನ್ನು ಮೂರು ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗಿತ್ತದೆ ಎಂದು ತಿಳಿಸಿದ್ದಾರೆ.

ಪ್ಯಾಕೇಜ್-1ರಲ್ಲಿ ಮುಖ್ಯಸ್ಥಾವರ ಮತ್ತು ಎಲೆಕ್ಟೊçÃ(ELECTRO) ಮೆಕ್ಯಾನಿಕಲ್ ಟರ್ನ್ಕೀ(TURN KEY) ಆಧಾರಿತ ಕಾಮಗಾರಿ 49.39 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು ನವೆಂಬರ್ 2025ರ ವರೆಗೆ ಆರ್ಥಿಕ ಪ್ರಗತಿ 48.64 ಕೋಟಿ ರೂ.ಗಳಾಗಿದೆ.ಕಾಮಗಾರಿ ಪೂರ್ಣಗೊಂಡಿದ್ದು ಅ.25,2023ರಂದು ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಗಿದೆ.ಪ್ರಸ್ತುತ ನಿರ್ವಹಣಾ ಹಂತದಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಪ್ಯಾಕೇಜ್-2 ರಲ್ಲಿ 3200 ಹೆಕ್ಟೇರ್‌ಗೆ ನೀರಾವರಿ ಒದಗಿಸುವ ಕಾಲುವೆ ಜಾಲದ ಕಾಮಗಾರಿ ಒಟ್ಟು 54.25ಕಿ.ಮೀ ಪೈಕಿ 50.40 ಕಿ.ಮೀ ಉದ್ದದ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಬಾಕಿ ಉಳಿದ 3.85 ಕಿ.ಮೀ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ಯಾಕೇಜ್ ನಂ-3ರಲ್ಲಿ 30.70 ಕಿ.ಮೀ ಉದ್ದ ಅಚ್ಚುಕಟ್ಟು ರಸ್ತೆ ಕಾಮಗಾರಿ ಪೈಕಿ 27.ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಪೂರ್ಣಗೊಂಡಿದ್ದು ಬಾಕಿ ಉಳಿದಿರುವ 3.70 ಕಿ.ಮೀ ಉದ್ದದ ರಸ್ತೆಯ ಪೈಕಿ 2 ಕಿ.ಮೀ ರಸ್ತೆಯ ಜಿ.ಎಸ್.ಬಿ ಕೆಲಸ ಪೂರ್ಣಗೊಂಡಿರುತ್ತದೆ.ಬಾಕಿ ಉಳಿದ 1.70 ಕಿ.ಮೀ ರಸ್ತೆಯನ್ನು ರೈತರ ಮನವೊಲಿಸಿ ಮಾರ್ಚ್ 2026ರೊಳಗಾಗಿ ಪೂರ್ಣಗೊಳಿಸಲು ಕ್ರಮ ಜರುಗಿಸಲಾಗುವುದು ಎಂದು ಸಚಿವರು ವಿಧಾನಸಭೆಯಲ್ಲಿ ಒದಗಿಸಿದ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ. –NEWS BY: HEBBAL PUBLICITY

Latest News

ತಮ್ಮ ಸ್ವಂತ ರಾಜಕೀಯ ಲಾಭಕ್ಕೆ ಗುತ್ತಿಗೆದಾರರಿಂದ ಸಹಾಯ-ಸಿ.ಎಸ್.ನಾಡಗೌಡ

ತಮ್ಮ ಸ್ವಂತ ರಾಜಕೀಯ ಲಾಭಕ್ಕೆ ಗುತ್ತಿಗೆದಾರರಿಂದ ಸಹಾಯ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಕೆಲವು ಗುತ್ತಿಗೆದಾರರು ಸಹಾಯ ಮಾಡುವುದು ತಮ್ಮ ರಾಜಕೀಯ ಲಾಭಕ್ಕೋಸ್ಕರ ಮಾಡುತ್ತಾರೆಯೇ ಹೊರತು

ಹುಲ್ಲೂರ ಎಸ್‌ಎನ್‌ಡಿ ಪಬ್ಲಿಕ್ ಸ್ಕೂಲ್‌ಗೆ ಶೇ.100ರಷ್ಟು ಫಲಿತಾಂಶ

ಹುಲ್ಲೂರ ಎಸ್‌ಎನ್‌ಡಿ ಪಬ್ಲಿಕ್ ಸ್ಕೂಲ್‌ಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲೂಕಿನ ಹುಲ್ಲೂರ ಗ್ರಾಮದ ಎಸ್.ಎನ್.ಡಿ ನ್ಯಾಷನಲ್ ಪಬ್ಲಿಕ್ ಶಾಲೆಗೆ 2025-26ನೇ ಸಾಲಿನಲ್ಲಿ

ಎಸ್.ಎಸ್.ಎಲ್.ಸಿ ಪರೀಕ್ಷೆ:                                         ಕವಡಿಮಟ್ಟಿಯ ಆರ್ಚ್ ಏಂಜಲ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಎಸ್.ಎಸ್.ಎಲ್.ಸಿ ಪರೀಕ್ಷೆ: ಕವಡಿಮಟ್ಟಿಯ ಆರ್ಚ್ ಏಂಜಲ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲೂಕಿನ ಸರೂರ ಕ್ರಾಸ್ ಬಳಿ ಇರುವ ಕವಡಿಮಟ್ಟಿಯ ದಿ ಆರ್ಚ್ ಏಂಜಲ್

ಉತ್ತಮ ಕಾರ್ಯನಿರ್ವಹಣೆ :                                              KRIDL ಇಇ ಆನಂದಸ್ವಾಮಿ ಅವರಿಗೆ ಪ್ರಶಸ್ತಿ

ಉತ್ತಮ ಕಾರ್ಯನಿರ್ವಹಣೆ : KRIDL ಇಇ ಆನಂದಸ್ವಾಮಿ ಅವರಿಗೆ ಪ್ರಶಸ್ತಿ

ಮುದ್ದೇಬಿಹಾಳ : ವಿಜಯಪುರದ ಕೆ.ಆರ್.ಐ.ಡಿ.ಎಲ್ ಇಲಾಖೆಯ ಇಇ ಆನಂದಸ್ವಾಮಿ ಅವರು ಇಲಾಖೆಯಲ್ಲಿ ಸಲ್ಲಿಸುತ್ತಿರುವ ಉತ್ತಮ

ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗೆ ಆನಂದ ಪೂಜಾರಿ ನೇಮಕ

ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗೆ ಆನಂದ ಪೂಜಾರಿ ನೇಮಕ

ಮುದ್ದೇಬಿಹಾಳ : ಇಲ್ಲಿನ ಯುವ ಉದ್ಯಮಿ,ಕಾಂಗ್ರೆಸ್ ಪಕ್ಷದ ಮುಖಂಡ ಆನಂದ ಪೂಜಾರಿ ಅವರನ್ನು ಕಾಂಗ್ರೆಸ್ ಪಕ್ಷದ ಎಸ್.ಟಿ.ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರ ಶಿಫಾರಸ್ಸಿನ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮೀತಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಅಧ್ಯಕ್ಷ ಎಂ.ವಿಜಯನಾಯಕ ನೇಮಕ ಮಾಡಿ ಆದೇಶಿಸಿದ್ದಾರೆ.

ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ ಯಶಸ್ವಿಗೊಳಿಸಿ-ದಯಾನಂದಪುರಿ ಸ್ವಾಮೀಜಿ

ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ ಯಶಸ್ವಿಗೊಳಿಸಿ-ದಯಾನಂದಪುರಿ ಸ್ವಾಮೀಜಿ

ಮುದ್ದೇಬಿಹಾಳ : ದೇವಾಂಗ(ನೇಕಾರ)ಸಮುದಾಯದ ಸಂಘಟನೆ,ಜಾಗೃತಿಗಾಗಿ ಅಖಿಲ ಭಾರತ ದೇವಾಂಗ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ದಯಾನಂದಪುರಿ ಸ್ವಾಮೀಜಿಗಳ 36ನೇ ಪಟ್ಟಾಭಿಷೇಕ ಮಹೋತ್ಸವವನ್ನು ಮೇ.8 ಹಾಗೂ 9 ರಂದು ಬಾದಾಮಿ ತಾಲ್ಲೂಕು ಬನಶಂಕರಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಚಿತ್ತರಗಿ ಹೇಳಿದರು. ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಬುಧವಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಹಂಪಿ ಹೇಮಕೂಟ ಶ್ರೀ ಗಾಯತ್ರಿಪೀಠದ