ಬಿದರಕುಂದಿ : ಮದ್ಯವರ್ಜನಾ ಶಿಬಿರಕ್ಕೆ ಚಾಲನೆ: ದುಶ್ಚಟಗಳಿಂದ ಮುಕ್ತರಾಗಿ ಒಳ್ಳೆಯ ಬದುಕು ಸಾಗಿಸಿ-ಸಂತೋಷಕುಮಾರ

ಬಿದರಕುಂದಿ : ಮದ್ಯವರ್ಜನಾ ಶಿಬಿರಕ್ಕೆ ಚಾಲನೆ: ದುಶ್ಚಟಗಳಿಂದ ಮುಕ್ತರಾಗಿ ಒಳ್ಳೆಯ ಬದುಕು ಸಾಗಿಸಿ-ಸಂತೋಷಕುಮಾರ

ಮುದ್ದೇಬಿಹಾಳ : ಧರ್ಮಸ್ಥಳದ ಧರ್ಮಾಧಿಕಾರ ವೀರೇಂದ್ರ ಹೆಗ್ಗಡೆಯವರು ಸಮಾಜದ ಕೆಳಸ್ತರದಲ್ಲಿರುವವಷ್ಟೇ ಅಲ್ಲದೇ ಮದ್ಯದ ವ್ಯಸನಿಗಳು ದುಶ್ಚಟಗಳಿಂದ ದೂರವಾಗಿ ಗೌರವದ ಬದುಕು ನಡೆಸುವಂತಾಗಬೇಕು ಎಂಬ ಸದುದ್ಧೇಶ ಹೊಂದಿದ ಕಾರ್ಯಕ್ರಮವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸಂತೋಷಕುಮಾರ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಮುದ್ದೇಬಿಹಾಳ ತಾಲೂಕು,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ ಬೆಳ್ತಂಗಡಿ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ ವಿಜಯಪುರ ,ಶ್ರೀ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ, ಉಜಿರೆ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಬಿದರಕುಂದಿ ಗ್ರಾಮದಲ್ಲಿ ಶುಕ್ರವಾರದಿಂದ ಹಮ್ಮಿಕೊಂಡಿರುವ 2027 ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಡಿವೈಎಸ್ಪಿ ಎಸ್.ಎಸ್.ಹುಲ್ಲೂರು ಮಾತನಾಡಿ, ಪರಿವರ್ತನೆ ಜಗದ ನಿಯಮ ಎಂಬAತೆ ಅರಿತು ಅಥವಾ ಅರಿಯದೆ ಮಾಡಿದ ದುಶ್ಚಟದಿಂದ ಮುಕ್ತರಾಗಿ ಉತ್ತಮ ಜೀವನವನ್ನು ಕಟ್ಟಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಜೀವನವನ್ನು ಸಾಗಿಸಬೇಕು ಎಂದು ತಿಳಿಸಿದರು.

ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾಂತಗೌಡ ಸಿ ಬಿರಾದಾರ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಡಾ. ವೀರೇಶ ಪಾಟೀಲ್ ,ತಾಲ್ಲೂಕು ಯೋಜನಾಧಿಕಾರಿ ನಾಗೇಶ್, ಯೋಜನಾಧಿಕಾರಿ ಶಿವಾನಂದ .ಪಿ, ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಇದ್ದರು.ನಿಂಗನಗೌಡ ಪಾಟೀಲ್ ನಿರೂಪಿಸಿದರು.ಜಗದೀಶ ಸುರ್ವೆ ವಂದಿಸಿದರು.

Latest News

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ:                                 ತಡ ರಾತ್ರಿಯವರೆಗೂ ನಡೆಯಲಿದೆ ಸಂಧಾನ ಸಭೆ…!?

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ತಡ ರಾತ್ರಿಯವರೆಗೂ ನಡೆಯಲಿದೆ ಸಂಧಾನ ಸಭೆ…!?

ಮುದ್ದೇಬಿಹಾಳ : ಕಬ್ಬು ಬೆಳೆಗಾರರಿಗೆ ಮಂಗಳವಾರ ಸಿಹಿ ಸುದ್ದಿ ಸಿಗಲಿದೆ ಎಂಬ ನಿರೀಕ್ಷೆ ಇನ್ನೂ

ಟೆನ್ನಿಸ್‌ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್:                      ಆರ್.ಎ.ಸಿ.ಸಿ ತಂಡ ಚಾಂಪಿಯನ್-ಒಂದು ಲಕ್ಷ ರೂ.ಬಹುಮಾನ

ಟೆನ್ನಿಸ್‌ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್: ಆರ್.ಎ.ಸಿ.ಸಿ ತಂಡ ಚಾಂಪಿಯನ್-ಒಂದು ಲಕ್ಷ ರೂ.ಬಹುಮಾನ

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ನಡೆದ ಮುದ್ದೇಬಿಹಾಳ ಟೆನ್ನಿಸ್ ಕ್ರಿಕೇಟ್

ಹುಲ್ಲೂರಿನಲ್ಲಿ ಕಬ್ಬು ಬೆಳೆಗಾರರ ಧರಣಿ:                                 ನಾಳೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನಿರೀಕ್ಷೆ-ಶಾಂತಗೌಡ ಪಾಟೀಲ್

ಹುಲ್ಲೂರಿನಲ್ಲಿ ಕಬ್ಬು ಬೆಳೆಗಾರರ ಧರಣಿ: ನಾಳೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನಿರೀಕ್ಷೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿoದ

ನಿಯೋಜಿತ ಕನ್ನಡ ಸಾಹಿತ್ಯಭವನ ನಿರ್ಮಾಣಕ್ಕೆ ಸ್ಥಳ ನಿಗದಿ

ನಿಯೋಜಿತ ಕನ್ನಡ ಸಾಹಿತ್ಯಭವನ ನಿರ್ಮಾಣಕ್ಕೆ ಸ್ಥಳ ನಿಗದಿ

ಮುದ್ದೇಬಿಹಾಳ : ಸಾಹಿತ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಪಟ್ಟಣದ ಆಲಮಟ್ಟಿ ರಸ್ತೆಯ ಬಳಿ ಇರುವ ಸಾಯಿಮಂದಿರ

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ನೇತೃತ್ವ:   ನಾಯನೇಗಲಿ,ಬಾಲಾಜಿ ಶುಗರ‍್ಸ್ ಸಕ್ಕರೆ ಗೋದಾಮುಗಳಿಗೆ ಬೀಗ

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ನೇತೃತ್ವ: ನಾಯನೇಗಲಿ,ಬಾಲಾಜಿ ಶುಗರ‍್ಸ್ ಸಕ್ಕರೆ ಗೋದಾಮುಗಳಿಗೆ ಬೀಗ

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯವ್ಯಾಪಿ ನಡೆಯುತ್ತಿರುವ ಹೋರಾಟದ ಮುಂದುವರೆದ ಭಾಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಸಂಘಟನೆ (ಚುನಪ್ಪ ಪೂಜೇರಿ ಬಣ) ವತಿಯಿಂದ ಮುದ್ದೇಬಿಹಾಳ ತಾಲೂಕಿನ ಬಾಲಾಜಿ ಶುಗರ‍್ಸ್ ಹಾಗೂ ನಾಯನೇಗಲಿ ಐಇಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಸಕ್ಕರೆ ಗೋದಾಮುಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು. ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಶುರ‍್ಸ್ ಆವರಣದಲ್ಲಿ ಸಕ್ಕರೆ ಗೋದಾಮಿಗೆ ಬೀಗ

ಅ.30 ರಂದು ಗಂಗೂರಿನಲ್ಲಿ ಅಂಕಲಿಮಠದ ಶ್ರೀಗಳ ತುಲಾಭಾರ

ಅ.30 ರಂದು ಗಂಗೂರಿನಲ್ಲಿ ಅಂಕಲಿಮಠದ ಶ್ರೀಗಳ ತುಲಾಭಾರ

ಮುದ್ದೇಬಿಹಾಳ : ದಸರಾ  ನಿಮಿತ್ಯವಾಗಿ  ತಾಲ್ಲೂಕಿನ  ಗಂಗೂರ  ಗ್ರಾಮದಲ್ಲಿ ಅ.30  ರಂದು ಬೆಳಗ್ಗೆ 11.30ಕ್ಕೆ  ಸಾಮೂಹಿಕ  ವಿವಾಹ, 108 ಮುತೈದೆಯರಿಗೆ  ಉಡಿ  ತುಂಬುವ ಕಾರ್ಯಕ್ರಮ ಹಾಗೂ ಅಂಕಲಿಮಠದ ಸ್ವಾಮೀಜಿಗಳ ತುಲಾಭಾರ,ಧರ್ಮಸಭೆ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಅಂಕಲಿಮಠದ ವೀರಭದ್ರ ಸ್ವಾಮೀಜಿಗಳು ,ಯರಝರಿ ಮಲ್ಲಾರಲಿಂಗ ಸ್ವಾಮೀಜಿ,ಕುಂಟೋಜಿ ಚೆನ್ನವೀರ ಶಿವಾಚಾರ್ಯರು,ತುರುವಿಹಾಳದ ಅಮರಗುಂಡ ಶಿವಾಚಾರ್ಯರು,ಹೊಸಮಠದ ಅಮರೇಶ್ವರ ದೇವರು,ಸರೂರಿನ ಕಾಡಯ್ಯ ಗುರುವಿನ,ಅಡಿವಯ್ಯ ಹಿರೇಮಠ ದಿವ್ಯ ಸಾನಿಧ್ಯ ವಹಿಸುವರು. ವಿಜಯಪುರ ಸಿಕ್ಯಾಬ್ ಕಾಲೇಜಿನ  ಉಪನ್ಯಾಸಕ ಯು.ಎನ್.ಕುಂಟೋಜಿ ಉಪನ್ಯಾಸ ನೀಡುವರು.ಶಾಸಕ ಸಿ.ಎಸ್.ನಾಡಗೌಡ