ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ: ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ: ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಮುದ್ದೇಬಿಹಾಳ : ಇದೇ ಪ್ರಥಮ ಬಾರಿಗೆ ಲಿಂಗಸುಗೂರಿನಲ್ಲಿ ಜ.11 ರಂದು ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಕಾಲೇಜಿನಿಂದ ಮಾಸ್ಟರ್ ಮೈಂಡ್ ಆವಾರ್ಡ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಎಂ.ಪಾಟೀಲ ತಿಳಿಸಿದ್ದಾರೆ. ಪರೀಕ್ಷೆಯನ್ನು 10ನೇ ತರಗತಿ ಸ್ಟೇಟ್ ಬೋರ್ಡ್,ಐಸಿಎಸ್‌ಇ,ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪರೀಕ್ಷೆ ತಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವ ವಿದ್ಯಾರ್ಥಿಗೆ 50 ಸಾವಿರ,ದ್ವಿತೀಯ ಸ್ಥಾನ 40 ಸಾವಿರ, ಮೂರನೇ ಸ್ಥಾನ 30 ಸಾವಿರ, ನಾಲ್ಕನೇ ಸ್ಥಾನ 15 ಸಾವಿರ ,ಐದನೇ ಸ್ಥಾನ 10 ಸಾವಿರ, ಆರನೇ ಸ್ಥಾನ 5 ಸಾವಿರ ರೂ.ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೇ ಅತೀ ಹೆಚ್ಚು ಅಂಕ ಪಡೆದುಕೊಳ್ಳುವ ಮೊದಲ 10 ವಿದ್ಯಾರ್ಥಿಗಳಿಗೆ 2500 ರೂ.ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.ಆಸಕ್ತ ವಿದ್ಯಾರ್ಥಿಗಳು ತಮ್ಮ ಮಾಹಿತಿಯನ್ನು ಮೊ.9380095756ಗೆ ಕಳಿಸಬಹುದಾಗಿದೆ.

ಪರೀಕ್ಷೆ ನಡೆಯುವ ಸ್ಥಳ,ಸಮಯ : ಶ್ರೀ ಜ್ಞಾನ ಸಂಜೀವಿನಿ ಪ್ರೆöÊಮರಿ & ಹೈಸ್ಕೂಲ್ ಮಸ್ಕಿ ಬೈಪಾಸ್ ರಸ್ತೆ, ಚರ್ಚ್ ಎದುರಿಗೆ, ಲಿಂಗಸುಗೂರ ಇಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ ಮೊ.7483147040,8310035858 ಸಂಪರ್ಕಿಸಬಹುದಾಗಿದೆ.

Latest News

34 ವಿದ್ಯಾರ್ಥಿಗಳು ತಾಲ್ಲೂಕುಮಟ್ಟಕ್ಕೆ ಆಯ್ಕೆ:                      ಹುಲ್ಲೂರು ಎಸ್‌ಎನ್‌ಡಿ ನ್ಯಾಶನಲ್ ಪಬ್ಲಿಕ್ ಶಾಲೆ ಸಾಧನೆ

34 ವಿದ್ಯಾರ್ಥಿಗಳು ತಾಲ್ಲೂಕುಮಟ್ಟಕ್ಕೆ ಆಯ್ಕೆ: ಹುಲ್ಲೂರು ಎಸ್‌ಎನ್‌ಡಿ ನ್ಯಾಶನಲ್ ಪಬ್ಲಿಕ್ ಶಾಲೆ ಸಾಧನೆ

ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಹತ್ವದ

ಬೆಂಗಳೂರು ದಕ್ಷಿಣ ತಂಡ ಸೋಲಿಸಿದ ಎಸ್.ಎಸ್.ಶಿವಾಚಾರ್ಯ ಕಾಲೇಜು:                                  ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲೆಗೆ ಐತಿಹಾಸಿಕ ಗೆಲುವು

ಬೆಂಗಳೂರು ದಕ್ಷಿಣ ತಂಡ ಸೋಲಿಸಿದ ಎಸ್.ಎಸ್.ಶಿವಾಚಾರ್ಯ ಕಾಲೇಜು: ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲೆಗೆ ಐತಿಹಾಸಿಕ ಗೆಲುವು

ಮುದ್ದೇಬಿಹಾಳ : ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ಈಚೇಗೆ ಜರುಗಿದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯ ಫೈನಲ್

ವಿಜಯಪುರ ಜಿಲ್ಲೆಯ ಮೊದಲ ಕಾರ್ಖಾನೆ ಹೆಗ್ಗಳಿಕೆ:       ಯರಗಲ್ ಬಾಲಾಜಿ ಶುಗರ‍್ಸ್’ನಿಂದ  ಟನ್ ಕಬ್ಬಿಗೆ ನಾಲ್ಕು ಸಾವಿರ ರೂ.ಘೋಷಣೆ

ವಿಜಯಪುರ ಜಿಲ್ಲೆಯ ಮೊದಲ ಕಾರ್ಖಾನೆ ಹೆಗ್ಗಳಿಕೆ: ಯರಗಲ್ ಬಾಲಾಜಿ ಶುಗರ‍್ಸ್’ನಿಂದ ಟನ್ ಕಬ್ಬಿಗೆ ನಾಲ್ಕು ಸಾವಿರ ರೂ.ಘೋಷಣೆ

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸಿರುವ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ –ಮದರಿ ಬಾಲಾಜಿ

ಕಬ್ಬು ಪೂರೈಸಲು ರೈತರಿಗೆ ಮನವಿ:                                                                 ನ.20 ಕ್ಕೆ ಸುಣಕಲ್ ಆರ್.ಬಿ.ಶುಗರ‍್ಸ್ ಕಾರ್ಯಾರಂಭ

ಕಬ್ಬು ಪೂರೈಸಲು ರೈತರಿಗೆ ಮನವಿ: ನ.20 ಕ್ಕೆ ಸುಣಕಲ್ ಆರ್.ಬಿ.ಶುಗರ‍್ಸ್ ಕಾರ್ಯಾರಂಭ

ಮುದ್ದೇಬಿಹಾಳ : ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಒಡೆತನದ ಆರ್.ಬಿ.ಶುಗರ‍್ಸ್ನಲ್ಲಿ ನ.20 ರಂದು ಕಬ್ಬು

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ:      ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ: ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುದ್ದೇಬಿಹಾಳ : ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ ನಡೆಯಲಿದ್ದ ಬೃಹತ್ ರೈತರ ಪ್ರತಿಭಟನಾ ಸಮಾವೇಶಕ್ಕೆ ಮುದ್ದೇಬಿಹಾಳ ತಾಲ್ಲೂಕಿನಿಂದ ತೆರಳುತ್ತಿದ್ದ ರೈತ ಮುಖಂಡರನ್ನು ಬೆಳಗಾವಿ ಬಳಿಯ ಪಂಚಗಾವ ಬಳಿ ಪೊಲೀಸರು ತಡೆದು ನಿಲ್ಲಿಸಿ ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದ ಘಟನೆ ನಡೆದಿದೆ. ತಾಲ್ಲೂಕಿನ ಹುಲ್ಲೂರಿನಲ್ಲಿ ರೈತ ಸಂಘದ ಹೋರಾಟ ಮುಕ್ತಾಯಗೊಳಿಸಿ ಗುರುವಾರ ಬೆಲೆ ನಿಗದಿ ಖಚಿತವೆಂದು ತೆರಳಿದ್ದ ರೈತ ಮುಖಂಡರುಗಳಿಗೆ ಮತ್ತೆ ನಿರಾಸೆ

ಸಿಎಂ ಡಿಕೆಶಿ ನೇತೃತ್ವದ ಸಭೆ :                                           ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆ ಭಾಗಿ

ಸಿಎಂ ಡಿಕೆಶಿ ನೇತೃತ್ವದ ಸಭೆ : ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆ ಭಾಗಿ

ಮುದ್ದೇಬಿಹಾಳ : ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ "ನಮ್ಮ ಶಾಲೆ - ನಮ್ಮ ಜವಾಬ್ದಾರಿ" ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಬಸವ ಇಂಟರನ್ಯಾಶನಲ್ ಶಾಲೆಯ ಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದ್ದು ಅದರಲ್ಲಿ ವಿಜಯಪುರ ಜಿಲ್ಲೆಯ ನಾಲ್ಕು ಪ್ರತಿಷ್ಠಿತ ಶಾಲೆಗಲ್ಲಿ ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆಯನ್ನು