ಮುದ್ದೇಬಿಹಾಳ : ಸಹಕಾರ ಚಳುವಳಿಯಿಂದ ಗ್ರಾಮೀಣ ಪ್ರದೇಶದಲ್ಲಿ ರೈತರು,ದುರ್ಬಲ ವರ್ಗದವರ ಏಳ್ಗೆಗೆ ಆಸರೆಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮನಗೌಡ ಬಿರಾದಾರ ಹೇಳಿದರು.
ತಾಲ್ಲೂಕಿನ ಹಡಲಗೇರಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ ನಿಯಮಿತ,ಜಿಲ್ಲಾ ಸಹಕಾರಿ ಯೂನಿಯನ್ ವಿಜಯಪುರ,ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘ ಹಡಲಗೇರಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಹಕಾರ ಚಳವಳಿಯನ್ನು ಮುಂಚೂಣಿಗೆ ತಂದಿರುವ ಸಣಸಿದ್ಧರಾಮನಗೌಡ ಪಾಟೀಲ ಅವರ ಪ್ರೇರಣೆಯಿಂದ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಕೋಟ್ಯಾಂತರ ಜನರಿಗೆ ಆರ್ಥಿಕ ಶಕ್ತಿ ತುಂಬಿವೆ ಎಂದರು.
ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ಮಾತನಾಡಿ, 73ನೇ ವರ್ಷದ ಸಹಕಾರ ಸಪ್ತಾಹದ ವಿಷಯ ಪರಿಸರ ಸಂರಕ್ಷಣೆ,ಲಿAಗ ಸಮಾನತೆ ಮತ್ತು ವಿಶ್ವಶಾಂತಿಗಾಗಿ ಸಹಕಾರ ಸಂಸ್ಥೆಗಳು ಎಂದು ಘೋಷಿಸಲಾಗಿದೆ.ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ,ತಂತ್ರಜ್ಞಾನ,ಕೌಶಲ್ಯಾಧಾರಿತ ವೃತ್ತಿಪರ ಸೇವೆ ಕಾರಣವಾಗುತ್ತವೆ ಎಂದರು.
ಸಾನಿಧ್ಯ ವಹಿಸಿದ್ದ ಗುಬ್ಬೇವಾಡ ಸೋಮೇಶ್ವರ ಆಶ್ರಮದ ಕನ್ನಯ್ಯ ಮಹಾರಾಜರು, ವಕೀಲರಾದ ಬಿ.ಆರ್.ನಾಡಗೌಡರ,ನಾಲತವಾಡ ವೀರೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎಸ್.ಪಾಟೀಲ,ಡಿಸಿಸಿ ಬ್ಯಾಂಕ್ ನಿವೃತ್ತ ಅಧಿಕಾರಿ ಆರ್.ಎಂ.ಬಣಗಾರ ಮತ್ತಿತರರು ಮಾತನಾಡಿದರು.
ಹಡಲಗೇರಿ ಪಿಕೆಪಿಎಸ್ ಅಧ್ಯಕ್ಷ ಸಂಗಪ್ಪ ಮುದ್ನಾಳ,ಸಹಕಾರಿ ಧುರೀಣರಾದ ಶಶಿಧರ ಬೆಣ್ಣೂರ,ಬಸವರಾಜ ಕುಂಬಾರ,ಹಣಮAತ ಖಿಲಾರಹಟ್ಟಿ,ಭೀಮಪ್ಪ ಹಾರಿವಾಳ,ಪುಂಡಲೀಕಪ್ಪ ವಾಲೀಕಾರ,ಹೊಳೆಪ್ಪ ಗಂಜಿಹಾಳ,ಸಹಕಾರ ಅಭಿವೃದ್ಧಿ ಅಧಿಕಾರಿ ವಿ.ಎಸ್.ಉತ್ನಾಳ,ತಾಲ್ಲೂಕು ನೋಡಲ್ ಅಧಿಕಾರಿ ಎಸ್.ಎಸ್.ಉಣ್ಣಿಬಾವಿ, ಕ್ಷೇತ್ರಾಧಿಕಾರಿ ಎನ್.ಸಿ.ಸಾಸನೂರ,ಸಿಇಒ ಸಂಗಣ್ಣ ಮುದ್ನಾಳ ಇದ್ದರು.ವಿವಿಧ ಸೊಸೈಟಿ,ಬ್ಯಾಂಕುಗಳಿಗೆ ಉತ್ತಮ ಸಹಕಾರಿ ಸಂಸ್ಥೆಗಳಿಗೆ ನೀಡಲಾಯಿತು.







