ಇಂದು ವಿಜಯಪುರ ನಗರಕ್ಕೆ  ಸಿಎಂ, ಡಿಸಿಎಂ ಭೇಟಿ:

ಇಂದು ವಿಜಯಪುರ ನಗರಕ್ಕೆ  ಸಿಎಂ, ಡಿಸಿಎಂ ಭೇಟಿ:

ಮುಖ್ಯಮಂತ್ರಿ,  ಉಪ ಮುಖ್ಯಮಂತ್ರಿಗಳಿಂದ ಹಲವು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

ವಿಜಯಪುರ : ಬಸ್ ನಿಲ್ದಾಣದ ಆವರಣದಲ್ಲಿ  ಪ್ರತಿಷ್ಠಾಪಿಸಿರುವ ವೀರರಾಣಿ ಕಿತ್ತೂರ ಚೆನ್ನಮ್ಮನವರ ಪುತ್ಥಳಿ ಅನಾವರಣ ಸೇರಿದಂತೆ ಜಿಲ್ಲೆಯ ವಿವಿಧ ಯೋಜನೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭವು ಇಂದು ನಗರದ ವಿ.ಬಿ ದರ್ಬಾರ ಮೈದಾನದ ಆವರಣದಲ್ಲಿ ನಡೆಯಲಿದೆ.

ಇಂದು ಬೆಳಿಗ್ಗೆ 11:45ಕ್ಕೆ ನಡೆಯುವ ಜಿಲ್ಲೆಯ ವಿವಿಧ ಯೋಜನೆಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ.

ಉಪ ಮುಖ್ಯಮಂತ್ರಿಗಳಾದ ಹಾಗೂ ಜಲ ಸಂಪನ್ಮೂಲ ಸಚಿವರು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ. ಕೆ. ಶಿವಕುಮಾರ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರುಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ. ಬಿ. ಪಾಟೀಲ ಅವರು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಲಿದ್ದಾರೆ. ನಗರದ ಶಾಸಕರಾದ ಬಸನಗೌಡ ಆರ್. ಪಾಟೀಲ (ಯತ್ನಾಳ) ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ, ಇಂಧನ ಸಚಿವರಾದ ಕೆ.ಜೆ. ಜಾರ್ಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ ಗುಂಡೂರಾವ್, ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್. ಸಿ. ಮಹದೇವಪ್ಪ, ಕಂದಾಯ ಸಚಿವರಾದ ಕೃಷ್ಣಬೈರೆಗೌಡ, ವಸತಿ, ವಕ್ಸ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಬಿ. ಝಡ್ ಜಮೀರ್ ಅಹ್ಮದಖಾನ್, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ಎಸ್.

ತಂಗಡಗಿ, ನಗರಾಭಿವೃದ್ಧಿ ಮತ್ತು ನಗರ ಯೋಜನೆ (ಕೆಯುಡಬ್ಲ್ಯೂಎಸ್ ಡಿಬಿ/ಕೆಯುಐಡಿಎಫ್‌ಸಿ) ಸಚಿವರಾದ ಸುರೇಶ.ಬಿ.ಎಸ್ ಉನ್ನತ ಶಿಕ್ಷಣ ಸಚಿಮಾದ ಡಾ.ಎಂ.ಸಿ. ಸುಧಾಕರ ಅವರು ಗೌರವ ಉಪಸ್ಥಿತರಿರಲಿದ್ದಾರೆ.

ವಿಧಾನ ಪರಿಪತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ರವಿಕುಮಾರ ಎನ್. ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ-2 ಹಾಗೂ ಶಾಸದಕರಾದಪ್ರಕಾಶ ಬಿ. ಹುಕ್ಕೇರಿ, ಕರ್ನಾಟಕ ಸೋಪ್ಸ್ ಮತ್ತು ಡಿಟಜೆರ್ಂಟ್‌ನ ಅಧ್ಯಕ್ಷರೂ ಆದ ಶಾಸಕರಾದ ಅಪ್ಪಾಜಿ ಸಿ.ಎಸ್. ನಾಡಗೌಡ, ಸಂಸದರಾದ ರಮೇಶ ಜಗಜಿಣಗಿ, ಡಾ.ಸುಧಾ ಮೂರ್ತಿ, ಶಾಸಕರಾದ ಯಶವಂತರಾಯಗೌಡ ವಿ ಪಾಟೀಲ, ಹಣಮಂತ ಆರ್. ನಿರಾಣಿ,ಸುನೀಲಗೌಡ,ಬಿ. ಪಾಟೀಲ, ಪಿ.ಹೆಚ್.ಪೂಜಾರ, ವಿಠಲ ಕಟಕಧೋಂಡ, ಭೀಮನಗೌಡ(ರಾಜುಗೌಡ) ಬಸನಗೌಡ ಪಾಟೀಲ, ಅಶೋಕ  ಮನಗೂಳಿ, ಕೇಶವ ಪ್ರಸಾದ ಎಸ್. ಕೌಶಲ್ಯಾಭಿವೃದ್ಧಿ ನಿಗಮ ಅಧ್ಯಕ್ಷರಾದ  ಶ್ರೀಮತಿ ಕಾಂತಾ ನಾಯ್ಕ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಬಿ. ಎಸ್. ಕವಲಗಿ, ಕಲಬುರ್ಗಿ ಕ.ಕ.ರ.ಸಾ.ನಿಗಮದ ಅಧ್ಯಕ್ಷರಾದ ಅರುಣಕುಮಾರ ಎಂ. ವೈ. ಪಾಟೀಲ, ಮಹಾನಗರ ಪಾಲಿಕೆ ಮಹಾಪೌರರಾದ ಮಡಿವಾಳಪ್ಪ ಸಿದ್ದರಾಮಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಕನಾನ್ ಮುಶ್ರೀಫ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಇಲಿಯಾಸ ಬೋರಾಮಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇಂಧನ ಮತ್ತು ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತ, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ, ರಿತೇಶ್ ಕುಮಾರ ಸಿಂಗ್, ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ ಕಟಾರಿಯಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಹರ್ಷ ಗುಪ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವೀನ್‌ ರಾಜ್ ಸಿಂಗ್, ಅಲ ಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ. ಶಮ್ಲಾ ಇಕ್ವಾಲ್, ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ. ಎನ್. ವಿ. ಪ್ರಸಾದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀಮತಿ ತುಳಸಿ ಮದ್ದಿನೇನಿ, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಿ. ರಂದೀಪ್, ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಖುಷ್ಟೂ ಬಿ. ಚೌಧು, ನಗರಾಭಿವೃದ್ಧಿ ಇಲಾಖೆ (ನಗರಸಭೆ ಮತ್ತು ಮರಸಭೆಗಳು)ಸರ್ಕಾರದ ಕಾರ್ಯದರ್ಶಿಗಳಾದ ಶೀಮತಿ ದೀಪಾ ಚೋಳನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಾಕಾರಿ ನಿರ್ದೇಶಕರಾದ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಉಜ್ವಲ್ ಕುಮಾರ ಘೋಷ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಎಂ. ಕನಗವಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಜೆ.ಮಂಜುನಾಥ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ಕೆ. ಎಂ. ಜಾನಕಿ, ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Latest News

34 ವಿದ್ಯಾರ್ಥಿಗಳು ತಾಲ್ಲೂಕುಮಟ್ಟಕ್ಕೆ ಆಯ್ಕೆ:                      ಹುಲ್ಲೂರು ಎಸ್‌ಎನ್‌ಡಿ ನ್ಯಾಶನಲ್ ಪಬ್ಲಿಕ್ ಶಾಲೆ ಸಾಧನೆ

34 ವಿದ್ಯಾರ್ಥಿಗಳು ತಾಲ್ಲೂಕುಮಟ್ಟಕ್ಕೆ ಆಯ್ಕೆ: ಹುಲ್ಲೂರು ಎಸ್‌ಎನ್‌ಡಿ ನ್ಯಾಶನಲ್ ಪಬ್ಲಿಕ್ ಶಾಲೆ ಸಾಧನೆ

ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಹತ್ವದ

ಬೆಂಗಳೂರು ದಕ್ಷಿಣ ತಂಡ ಸೋಲಿಸಿದ ಎಸ್.ಎಸ್.ಶಿವಾಚಾರ್ಯ ಕಾಲೇಜು:                                  ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲೆಗೆ ಐತಿಹಾಸಿಕ ಗೆಲುವು

ಬೆಂಗಳೂರು ದಕ್ಷಿಣ ತಂಡ ಸೋಲಿಸಿದ ಎಸ್.ಎಸ್.ಶಿವಾಚಾರ್ಯ ಕಾಲೇಜು: ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲೆಗೆ ಐತಿಹಾಸಿಕ ಗೆಲುವು

ಮುದ್ದೇಬಿಹಾಳ : ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ಈಚೇಗೆ ಜರುಗಿದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯ ಫೈನಲ್

ವಿಜಯಪುರ ಜಿಲ್ಲೆಯ ಮೊದಲ ಕಾರ್ಖಾನೆ ಹೆಗ್ಗಳಿಕೆ:       ಯರಗಲ್ ಬಾಲಾಜಿ ಶುಗರ‍್ಸ್’ನಿಂದ  ಟನ್ ಕಬ್ಬಿಗೆ ನಾಲ್ಕು ಸಾವಿರ ರೂ.ಘೋಷಣೆ

ವಿಜಯಪುರ ಜಿಲ್ಲೆಯ ಮೊದಲ ಕಾರ್ಖಾನೆ ಹೆಗ್ಗಳಿಕೆ: ಯರಗಲ್ ಬಾಲಾಜಿ ಶುಗರ‍್ಸ್’ನಿಂದ ಟನ್ ಕಬ್ಬಿಗೆ ನಾಲ್ಕು ಸಾವಿರ ರೂ.ಘೋಷಣೆ

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸಿರುವ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ –ಮದರಿ ಬಾಲಾಜಿ

ಕಬ್ಬು ಪೂರೈಸಲು ರೈತರಿಗೆ ಮನವಿ:                                                                 ನ.20 ಕ್ಕೆ ಸುಣಕಲ್ ಆರ್.ಬಿ.ಶುಗರ‍್ಸ್ ಕಾರ್ಯಾರಂಭ

ಕಬ್ಬು ಪೂರೈಸಲು ರೈತರಿಗೆ ಮನವಿ: ನ.20 ಕ್ಕೆ ಸುಣಕಲ್ ಆರ್.ಬಿ.ಶುಗರ‍್ಸ್ ಕಾರ್ಯಾರಂಭ

ಮುದ್ದೇಬಿಹಾಳ : ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಒಡೆತನದ ಆರ್.ಬಿ.ಶುಗರ‍್ಸ್ನಲ್ಲಿ ನ.20 ರಂದು ಕಬ್ಬು

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ:      ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ: ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುದ್ದೇಬಿಹಾಳ : ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ ನಡೆಯಲಿದ್ದ ಬೃಹತ್ ರೈತರ ಪ್ರತಿಭಟನಾ ಸಮಾವೇಶಕ್ಕೆ ಮುದ್ದೇಬಿಹಾಳ ತಾಲ್ಲೂಕಿನಿಂದ ತೆರಳುತ್ತಿದ್ದ ರೈತ ಮುಖಂಡರನ್ನು ಬೆಳಗಾವಿ ಬಳಿಯ ಪಂಚಗಾವ ಬಳಿ ಪೊಲೀಸರು ತಡೆದು ನಿಲ್ಲಿಸಿ ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದ ಘಟನೆ ನಡೆದಿದೆ. ತಾಲ್ಲೂಕಿನ ಹುಲ್ಲೂರಿನಲ್ಲಿ ರೈತ ಸಂಘದ ಹೋರಾಟ ಮುಕ್ತಾಯಗೊಳಿಸಿ ಗುರುವಾರ ಬೆಲೆ ನಿಗದಿ ಖಚಿತವೆಂದು ತೆರಳಿದ್ದ ರೈತ ಮುಖಂಡರುಗಳಿಗೆ ಮತ್ತೆ ನಿರಾಸೆ

ಸಿಎಂ ಡಿಕೆಶಿ ನೇತೃತ್ವದ ಸಭೆ :                                           ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆ ಭಾಗಿ

ಸಿಎಂ ಡಿಕೆಶಿ ನೇತೃತ್ವದ ಸಭೆ : ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆ ಭಾಗಿ

ಮುದ್ದೇಬಿಹಾಳ : ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ "ನಮ್ಮ ಶಾಲೆ - ನಮ್ಮ ಜವಾಬ್ದಾರಿ" ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಬಸವ ಇಂಟರನ್ಯಾಶನಲ್ ಶಾಲೆಯ ಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದ್ದು ಅದರಲ್ಲಿ ವಿಜಯಪುರ ಜಿಲ್ಲೆಯ ನಾಲ್ಕು ಪ್ರತಿಷ್ಠಿತ ಶಾಲೆಗಲ್ಲಿ ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆಯನ್ನು