BREAKING.. ಭಾರತಕ್ಕೆ ಭಾರೀ ಆಘಾತ

BREAKING.. ಭಾರತಕ್ಕೆ ಭಾರೀ ಆಘಾತ

ಕೊಲಂಬೊ: ಭಾರತ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲೂ ಶ್ರೀಲಂಕಾ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತ್ತು. ಸುಲಭ ಗುರಿ ಬೆನ್ನು ಹತ್ತಿದ್ದ ಭಾರತ ತಂಡ ಉತ್ತಮ ಆರಂಭ ಕಂಡರೂ ಗುರಿ ತಲುಪುವಲ್ಲಿ ವಿಫಲವಾಗಿದೆ.

241 ರನ್‌ಗಳ ಟಾರ್ಗೆಟ್ ಬೆನ್ನು ಹತ್ತಿದ ಭಾರತ ತಂಡ ಉತ್ತಮ ಆರಂಭ ಕಂಡರೂ ರೋಹಿತ್, ಗಿಲ್ ಔಟಾದ ಮೇಲೆ ಪತನ ಕಂಡಿತು. ನಡುವೆ ಅಕ್ಸ‌ರ್ ಪಟೇಲ್ 44 ರನ್ ಗಳಿಸಿ ಗೆಲುವಿನ ಆಸೆ ಮೂಡಿಸಿದರು. ಆದರೆ ಕೊನೆವರೆಗೂ ಕೊಂಡೊಯ್ಯಲಿಲ್ಲ.

ರೋಹಿತ್ 64, ಗಿಲ್ 35, ಕೊಹ್ಲಿ 14, ದುಬೆ 0, ಶ್ರೇಯಸ್ 7, ರಾಹುಲ್ 0, ಸುಂದರ್ 15, ಸಿರಾಜ್ 4, ಕುಲದೀಪ್ 7, ಅರ್ಶದೀಪ್ 3 ರನ್ ಗಳಿಸಿದರು. ಈ ಮೂಲಕ 2ನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ 32 ರನ್‌ಗಳ ಗೆಲುವು ಕಂಡಿತು.

ಅವಿಷ್ಕ ಫೆರ್ನಾಂಡೋ 40, ಕುಶಾಲ್ ಮೆಂಡಿಸ್ 30, ವೆಲ್ಲಲಾಗೆ 39, ಕಮಿಂಡು ಮೆಂಡಿಸ್ ರನ್ ಗಳಿಸಿದರು. ಭಾರತ ಪರ ವಾಷಿಂಗ್‌ಟನ್ ಸುಂದರ್ 3, ಕುಲದೀಪ್ 2, ಸಿರಾಜ್ 1, ಅಕ್ಸರ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿ ಎಡವಿದ್ದ ಭಾರತ, ಮೊದಲ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಮತ್ತೆ ಮಾಡಿ ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ಮೊದಲನೇ ಪಂದ್ಯ ಟೈ ಆಗಿತ್ತು.

Latest News

ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ :                                      ಟನ್ ಕಬ್ಬಿಗೆ 3600 ರೂ.ದರ ಘೋಷಣೆ ಮಾಡಿದ ಬಾಲಾಜಿ ಶುಗರ್ಸ್

ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ : ಟನ್ ಕಬ್ಬಿಗೆ 3600 ರೂ.ದರ ಘೋಷಣೆ ಮಾಡಿದ ಬಾಲಾಜಿ ಶುಗರ್ಸ್

ಮುದ್ದೇಬಿಹಾಳ : ತಾಲೂಕಿನ ಯರಗಲ್ಲ ಗ್ರಾಮದಲ್ಲಿರುವ ಶ್ರೀ ಬಾಲಾಜಿ ಶುಗರ್ಸ್ ಅಂಡ್ ಕೆಮಿಕಲ್ಸ್ ಪ್ರೈವೇಟ್

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ:      ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ: ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುದ್ದೇಬಿಹಾಳ : ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ

ಸಿಎಂ ಡಿಕೆಶಿ ನೇತೃತ್ವದ ಸಭೆ :                                           ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆ ಭಾಗಿ

ಸಿಎಂ ಡಿಕೆಶಿ ನೇತೃತ್ವದ ಸಭೆ : ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆ ಭಾಗಿ

ಮುದ್ದೇಬಿಹಾಳ : ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ

ನಾಳೆ ಬೆಳಗಾವಿಯಲ್ಲಿ ಅಧಿಕೃತ ಘೋಷಣೆ;                         ಕಬ್ಬಿಗೆ 3500 ರೂ.ಮೇಲೆಯೇ ದರ ಫಿಕ್ಸ್..?!!

ನಾಳೆ ಬೆಳಗಾವಿಯಲ್ಲಿ ಅಧಿಕೃತ ಘೋಷಣೆ; ಕಬ್ಬಿಗೆ 3500 ರೂ.ಮೇಲೆಯೇ ದರ ಫಿಕ್ಸ್..?!!

ಮುದ್ದೇಬಿಹಾಳ : ಬರಗಾಲದ ಸಮಯದಲ್ಲಿ ರೈತರು ಬೆಳೆದಿರುವ ಕಬ್ಬು ಕಾರ್ಖಾನೆಗೆ ಸಾಗಿಸದಿದ್ದರೆ ಬಂದಷ್ಟು ಫಸಲು

‘ಹೃದಯದ ಅಂತರoಗದ ಗೋಡೆಯಲ್ಲಿ ಕನ್ನಡ ಶಾಶ್ವತವಾಗಿ ನೆಲೆಸಲಿ’

‘ಹೃದಯದ ಅಂತರoಗದ ಗೋಡೆಯಲ್ಲಿ ಕನ್ನಡ ಶಾಶ್ವತವಾಗಿ ನೆಲೆಸಲಿ’

ಮುದ್ದೇಬಿಹಾಳ : ಇಂದಿನ ಆಧುನಿಕ ಕಾಲದಲ್ಲಿ ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದೆ ಎಂಬುದನ್ನು ನಾವು ಅಲ್ಲಗಳೆಯುವುದಿಲ್ಲ. ಆದರೆ ಇಂಗ್ಲಿಷ್ ನಮ್ಮ ಮನೆಯ ಹಾಲ್‌ನವರೆಗೆ ಬರಲಿ, ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಮ್ಮ ಅಡುಗೆಮನೆಯಲ್ಲಿ ಮಾತ್ರ ಕನ್ನಡದ ಪರಿಮಳವೇ ಇರಬೇಕು ಎಂದು ಬದುಕಿನ ಪ್ರತಿ ಹಂತದಲ್ಲೂ ಕನ್ನಡದ ಅಸ್ಮೀತೆ ಉಳಿಯಬೇಕು ಎಂದು ಮಡಿಕೇಶ್ವರ ಬಿ.ಜಿ.ತುಂಬಗಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕ ಬಸವರಾಜ ಹಂಚಲಿ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ:  ಕಾರ್ಖಾನೆಯವರು ಉಲ್ಟಾ ಹೊಡೆದಿದ್ದಾರೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ: ಕಾರ್ಖಾನೆಯವರು ಉಲ್ಟಾ ಹೊಡೆದಿದ್ದಾರೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶನಿವಾರ ಕರೆ ನೀಡಲಾಗಿದ್ದ ಮುದ್ದೇಬಿಹಾಳ ತಾಲ್ಲೂಕು ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು ರೈತರ ಹೋರಾಟಕ್ಕೆ ಸಾರ್ವಜನಿಕವಾಗಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ,ಮುಖಂಡರಾದ ಹುಲಗಪ್ಪ ನಾಯಕಮಕ್ಕಳ ಮತ್ತಿತರರ ನೇತೃತ್ವದಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ವ್ಯಾಪಾರಸ್ಥರಿಗೆ ಹಾಗೂ ಹೊಟೇಲ್ ಮಾಲೀಕರುಗಳಿಗೆ ಅಂಗಡಿಗಳನ್ನು ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ