ಮುದ್ದೇಬಿಹಾಳ : ಬೈಕ್‌ವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತಂಗಡಗಿ ರಸ್ತೆಯ ಕೋಳೂರು ಕ್ರಾಸ್‌ನಲ್ಲಿ ಭಾನುವಾರ ನಡೆದಿದೆ.
ಕೂಡಲಸಂಗಮ ಮೂಲದ ಶರಣಬಸಯ್ಯ ನಿಜಗುಣಯ್ಯ ಹಿರೇಮಠ(43) ಮೃತಪಟ್ಟಿರುವ ವ್ಯಕ್ತಿ. ಬೈಕ್ ಚಲಾಯಿಸುತ್ತಿದ್ದ ಸವಾರ ಅಮರೇಶ ಸಂಗಪ್ಪ ಗುಗ್ಗರಿಗೂ ಗಂಭೀರವಾದ ಗಾಯಳಾಗಿದ್ದು ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಿಫ್ಟ್ ಡಿಜೈರ್ ಕಾರ ನಂಬರ್ ಕೆ.ಎ-37, ಎನ್-3584 ಚಾಲಕನು ಮುದ್ದೇಬಿಹಾಳ ಕಡೆಯಿಂದ ಹುನಗುಂದ ಕಡೆಗೆ ಅತೀ ವೇಗವಾಗಿ ಮತ್ತು ರಾಂಗ್ ಸೈಡ್‌ನಲ್ಲಿ ಚಲಾಯಿಸಿಕೊಂಡು ಹೋಗಿ ಕೋಳೂರ ಕ್ರಾಸ್ ಹತ್ತಿರ ಎದುರಿಗೆ ರಸ್ತೆಯ ಎಡಬದಿಯಲ್ಲಿ ಬರುತ್ತಿದ್ದ ಮೋಟರ್ ಸೈಕಲ್‌ಗೆ ಹಾಯಿಸಿ ಸ್ಥಳದಿಂದ ಕಾರು ಚಾಲಕ ಪರಾರಿಯಾಗಿದ್ದಾನೆ.ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







