ಸುಡುಗಾಡ ಸಿದ್ಧರ ಕುಟುಂಬಗಳಿಗೆ ನೆರವು: ಸಿಎಂ ಪರಿಹಾರ ನಿಧಿಯಿಂದ ಆರು ಲಕ್ಷ ರೂ. ಪರಿಹಾರ ಧನ ಬಿಡುಗಡೆ

ಸುಡುಗಾಡ ಸಿದ್ಧರ ಕುಟುಂಬಗಳಿಗೆ ನೆರವು: ಸಿಎಂ ಪರಿಹಾರ ನಿಧಿಯಿಂದ ಆರು ಲಕ್ಷ ರೂ. ಪರಿಹಾರ ಧನ ಬಿಡುಗಡೆ

ಮುದ್ದೇಬಿಹಾಳ : ತಾಲ್ಲೂಕಿನ ಶಿರೋಳ ಗ್ರಾಮದ ಹತ್ತಿರ ಕಾಲುವೆಯಲ್ಲಿ ನ.11, 2025ರಂದು ಒಂದೇ ಕುಟುಂಬದ ಮೂವರು ಮುಳುಗಿ ಮೃತಪಟ್ಟ ಘಟನೆಗೆ ಸಂಬoಧಿಸಿದoತೆ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೆ ತಲಾ ಎರಡು ಲಕ್ಷ ರೂಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಿದೆ.

ಈ ಕುರಿತು ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ರಮೇಶ ಕೋನರೆಡ್ಡಿ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಅವರ ಪತ್ರದ ಆಧಾರದ ಮೇಲೆ ಶಿರೋಳ ಗ್ರಾಮದ ಬಳಿ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಬಸಮ್ಮ ಕೊಣ್ಣೂರ ಕಾಲು ಜಾರಿ ಬಿದ್ದಿದ್ದ ಸಂದರ್ಭದಲ್ಲಿ ಇವರನ್ನು ರಕ್ಷಿಸಲು ಹೋಗಿ ಸಂತೋಷ ಕೊಣ್ಣೂರ, ರವಿ ಕೊಣ್ಣೂರ ಮುಳುಗಿ ಮೃತಪಟ್ಟಿದ್ದು ಸದರಿ ಕುಟುಂಬದವರು ಸುಡುಗಾಡ ಸಿದ್ಧರ ಸಮುದಾಯಕ್ಕೆ ಸೇರಿದ್ದು ಕಡುಬಡವರಾಗಿದ್ದಾರೆ.ಅವರ ಕುಟುಂಬಕ್ಕೆ ಮಾನವೀಯತೆಯ ದೃಷ್ಟಿಯಿಂದ ವಿಶೇಷ ಪ್ರಕರಣದಡಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಗರಿಷ್ಠ ನೆರವು ನೀಡುವಂತೆ ಶಾಸಕರು ಕೋರಿದ್ದರು.

ಅದರಂತೆ ವಿಜಯಪುರ ಜಿಲ್ಲಾಧಿಕಾರಿಗಳ ಖಾತೆಗೆ ಸಿಎಂ ಪರಿಹಾರ ನಿಧಿಯಿಂದ ಫೆ.17 ರಂದು ಆರು ಲಕ್ಷ ರೂ.ಹಣ ಜಮೆಯಾಗಿದೆ.ಶೀಘ್ರದಲ್ಲಿ ನೊಂದ ಕುಟುಂಬದವರಿಗೆ ಪರಿಹಾರಧನ ಆದೇಶ ಪ್ರತಿ ನೀಡಲಾಗುವುದು ಎಂದು ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ರೈತರ ಮಕ್ಕಳು ವೈದ್ಯರಾಗಬೇಕು-ಇದು ನನ್ನ ಕನಸು-ಎಂ.ಎಸ್.ಪಾಟೀಲ

ರೈತರ ಮಕ್ಕಳು ವೈದ್ಯರಾಗಬೇಕು-ಇದು ನನ್ನ ಕನಸು-ಎಂ.ಎಸ್.ಪಾಟೀಲ

ಮುದ್ದೇಬಿಹಾಳ : ನನ್ನ ಕನಸು ಸೈನ್ಸ್ ಕಾಲೇಜು ಆರಂಭಿಸಬೇಕು ಎಂಬುದಿತ್ತು.ದುಡ್ಡು ಮಾಡುವುದಕ್ಕಾಗಿ ಸೈನ್ಸ್ ಕಾಲೇಜು

ಪತ್ನಿ ಕೊಲೆಗೈದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ, 1.50 ಲಕ್ಷ ರೂ.ದಂಡ

ಪತ್ನಿ ಕೊಲೆಗೈದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ, 1.50 ಲಕ್ಷ ರೂ.ದಂಡ

ಮುದ್ದೇಬಿಹಾಳ : ಪತ್ನಿ ತವರು ಮನೆಯಲ್ಲಿದ್ದಿರುವುದನ್ನು ಸಹಿಸದೇ ಆಕೆಗೆ ಮೇಲೆ ಹೊಲಿಗೆ ಮಷಿನ್ ಎತ್ತಿ

ಮಾಜಿ ಶಾಸಕ ನಡಹಳ್ಳಿಗೆ ಶಾಸಕ ನಾಡಗೌಡ ಬುದ್ಧಿಮಾತು: ಕ್ಷೇತ್ರದ ಜನಕ್ಕೆ ಬುದ್ದಿ ಇಲ್ಲ ಎಂದವರಿಗೆ ಸ್ವಾಭಿಮಾನಿ ಮತದಾರರಿಂದ ತಕ್ಕಪಾಠ-ನಾಡಗೌಡ

ಮಾಜಿ ಶಾಸಕ ನಡಹಳ್ಳಿಗೆ ಶಾಸಕ ನಾಡಗೌಡ ಬುದ್ಧಿಮಾತು: ಕ್ಷೇತ್ರದ ಜನಕ್ಕೆ ಬುದ್ದಿ ಇಲ್ಲ ಎಂದವರಿಗೆ ಸ್ವಾಭಿಮಾನಿ ಮತದಾರರಿಂದ ತಕ್ಕಪಾಠ-ನಾಡಗೌಡ

ಮುದ್ದೇಬಿಹಾಳ : ಮತಕ್ಷೇತ್ರದಲ್ಲಿ 2.50 ಲಕ್ಷ ಜನರು ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.ಪ್ರತಿ

ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಶಾಖೆ ಉದ್ಘಾಟನೆ: ಶ್ರಮಿಕ ಜನರ ಆರ್ಥಿಕ ಮಟ್ಟದ ಸುಧಾರಣೆಗೆ ಶ್ರಮಿಸಿ-ನಾಡಗೌಡ

ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಶಾಖೆ ಉದ್ಘಾಟನೆ: ಶ್ರಮಿಕ ಜನರ ಆರ್ಥಿಕ ಮಟ್ಟದ ಸುಧಾರಣೆಗೆ ಶ್ರಮಿಸಿ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ಭಾಗದ ಶ್ರಮಿಕರು, ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಆಸರೆಯಾಗುವ ಕಾರ್ಯ ಮಾಡುವ ಮೂಲಕ

ಮುದ್ದೇಬಿಹಾಳ : ಬೈಕ್ ಡಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

ಮುದ್ದೇಬಿಹಾಳ : ಬೈಕ್ ಡಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

ಮುದ್ದೇಬಿಹಾಳ : ರಸ್ತೆ ಕ್ರಾಸ್ ಮಾಡುತ್ತಿದ್ದ ವೇಳೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ನೇಬಗೇರಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಯರಗಲ್ ಗ್ರಾಮದ ರೇವಣಸಿದ್ದಪ್ಪ ಶಿವಪ್ಪ ಬೆಣಕಣ್ಣವರ(36)ಎಂದು ಗುರುತಿಸಲಾಗಿದೆ. ಮುದ್ದೇಬಿಹಾಳದಿಂದ ಹುನಗುಂದ ಕಡೆಗೆ ಬೈಕ್ ನಂ.ಕೆಎ-33, ಇಇ-6348ರ ಸವಾರ ಅತೀ ವೇಗವಾಗಿ ನಿರ್ಲಕ್ಷದಿಂದ ಬೈಕ್ ಚಲಾಯಿಸಿಕೊಂಡು ಹೊರಟು ರಸ್ತೆ ಕ್ರಾಸ್ ಮಾಡುತ್ತಿದ್ದ ರೇವಣಸಿದ್ದಪ್ಪನಿಗೆ ಡಿಕ್ಕಿ ಹೊಡೆಸಿದ್ದಾನೆ.ಇದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ

ಫೆ.14 ರಂದು ನೂತನ ಸ್ಕೂಲ್‌ ಕಟ್ಟಡದ ಉದ್ಘಾಟನೆ:                    ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಪ್ರಥಮ ವಾರ್ಷಿಕೋತ್ಸವದ ಸಂಭ್ರಮ

ಫೆ.14 ರಂದು ನೂತನ ಸ್ಕೂಲ್‌ ಕಟ್ಟಡದ ಉದ್ಘಾಟನೆ: ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಪ್ರಥಮ ವಾರ್ಷಿಕೋತ್ಸವದ ಸಂಭ್ರಮ

ಮುದ್ದೇಬಿಹಾಳ : ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್‌ನ್ಯಾಶನಲ್ ಶಾಲೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಫೆ.14 ರಂದು ಮದ್ಯಾಹ್ನ 3.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ ತಿಳಿಸಿದರು. ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಳಂದ,ಜಾಲವಾದ,ನAದವಾಡಗಿ ಹಿರೇಮಠದ ಮಹಾಂತಲಿAಗ ಶಿವಾಚಾರ್ಯರು, ನಂದವಾಡಗಿ ಹಿರೇಮಠದ ಚನ್ನಬಸಯ ಶಿವಾಚಾರ್ಯರು ವಹಿಸುವರು.ಬಿದರಕುಂದಿ-ಕಪ್ಪತಗುಡ್ಡ ಶಿವಯೋಗಾಶ್ರಮದ