ಮುದ್ದೇಬಿಹಾಳ : ಪಟ್ಟಣದ ಬಿದರಕುಂದಿ ರಸ್ತೆಯಲ್ಲಿರುವ ಗುರಡ್ಡಿ ಪೆಟ್ರೋಲ್ ಪಂಪ್ ಹತ್ತಿರದಲ್ಲಿರುವ ಆಕ್ಸಫರ್ಡ್ಸ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ಸ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ
ಫೆ.22 ರಂದು ಬೆಳಗ್ಗೆ 10ಕ್ಕೆ ಆಕ್ಸಫರ್ಡ್ ಚಾಂಪಿಯನ್ ಅವಾರ್ಡ ಪರೀಕ್ಷೆ ಹಾಗೂ ನಾಗರಬೆಟ್ಟದಲ್ಲಿ ಅದೇ ದಿನ ಆಕ್ಸಫರ್ಡ್ ಪಾಟೀಲ್ಸ್ ಸೀನಿಯರ್ ಜೀನಿಯಸ್ ಅವಾರ್ಡ್ ಪರೀಕ್ಷೆಗಳನ್ನು ತರಗತಿವಾರು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಎಂ.ಪಾಟೀಲ ತಿಳಿಸಿದರು.
ಪಟ್ಟಣದ ಬಿದರಕುಂದಿ ರಸ್ತೆಯಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಯ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಮುದ್ದೇಬಿಹಾಳದ ಆಕ್ಸಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರಸಕ್ತ ವರ್ಷದಿಂದಲೇ ಜೆಇಇ ಪರೀಕ್ಷೆಗೆ ತರಬೇತಿ ಆರಂಭಿಸಲಾಗುತ್ತಿದೆ.ನೀಟ್ ತರಬೇತಿಗೆ ನಾಗರಬೆಟ್ಟದ ಶಾಲೆಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.ಈ ವರ್ಷದ ಜೆಇಇ ಪ್ರಥಮ ಹಂತದ ಪರೀಕ್ಷೆಯಲ್ಲಿ ಕಾಲೇಜಿನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೇ.90ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದು ಅದರಲ್ಲಿ ಮೂವರು ಜಿಲ್ಲೆಗೆ ಪ್ರಥಮ ಮೂರು ಸ್ಥಾನಗಳನ್ನು ಪಡೆದುಕೊಂಡು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
ಪ್ರಾಥಮಿಕ,ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಚಾಂಪಿಯನ್ ಪರೀಕ್ಷೆ :
ಮುದ್ದೇಬಿಹಾಳದ ಗುರಡ್ಡಿ ಪೆಟ್ರೋಲ್ ಬಂಕ್ ಹತ್ತಿರ ಇರುವ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿರುವ ಪರೀಕ್ಷೆಯಲ್ಲಿ 10 ಲಕ್ಷ ರೂ. ಶಿಷ್ಯವೇತನ ನೀಡಲಾಗುತ್ತದೆ. ಆಕ್ಸಫರ್ಡ್ ಚಾಂಪಿಯನ್ ಪರೀಕ್ಷೆಗೆ 5, 8, 9 ಮತ್ತು 10ನೇ ತರಗತಿಯ ರಾಜ್ಯ, ಐಸಿಎಸ್‌ಇ, ಸಿಬಿಎಸಿ ಪಠ್ಯಕ್ರಮದ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಪರೀಕ್ಷೆಗಳಲ್ಲಿ ತರಗತಿವಾರು 1-5 ರ‍್ಯಾಂಕ್ ಪಡೆಯುವವರಿಗೆ ಒಂದು ವರ್ಷದ ಸಂಪೂರ್ಣ ಉಚಿತ ಶಿಕ್ಷಣ ಕೊಡಲಾಗುತ್ತದೆ. 6-7 ರ‍್ಯಾಂಕ್ ಪಡೆಯುವವರಿಗೆ ಶುಲ್ಕದಲ್ಲಿ ಶೇ.75ರಷ್ಟು, 8-9 ರ‍್ಯಾಂಕ್ ಪಡೆಯುವವರಿಗೆ ಶುಲ್ಕದಲ್ಲಿ ಶೇ.50 ರಷ್ಟು, 10-11 ರ‍್ಯಾಂಕ್ ಪಡೆಯುವವರಿಗೆ ಶುಲ್ಕದಲ್ಲಿ ಶೇ.25 ರಿಯಾಯಿತಿ ನೀಡಲಾಗುತ್ತದೆ.ನಗದು ಬಹುಮಾನ ಪ್ರಾಥಮಿಕ,ಪ್ರೌಢಶಾಲಾ ವಿಭಾಗಕ್ಕೆ ಇರುವುದಿಲ್ಲ ಎಂದು ತಿಳಿಸಿದರು.ಪರೀಕ್ಷೆಯಲ್ಲಿ ಶೇ 40 ಅಂಕ ಗಳಿಸುವ ಎಲ್ಲ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ 10 ರಿಯಾಯಿತಿ ಇದೆ.ಆಸಕ್ತರು ಮೊ:8792156682 ಸಂಖ್ಯೆಗೆ ತಮ್ಮ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಮೊ:8431936945, 7847981398 ಸಂಖ್ಯೆಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.
ನಾಗರಬೆಟ್ಟದಲ್ಲಿ ಪಿಯು ವಿದ್ಯಾರ್ಥಿಗಳಿಗೆ ಸೀನಿಯರ್ ಜೀನಿಯಸ್ ಪರೀಕ್ಷೆ ವಿವರ :
ನಾಗರಬೆಟ್ಟದ ಗುಡ್ಡದ ಹತ್ತಿರ ಇರುವ ಸೈನ್ಸ್ ಪಿಯು ಕಾಲೇಜಿನಲ್ಲಿ ಫೆ.22 ರಂದು ಬೆಳಗ್ಗೆ 11ಕ್ಕೆ ನಡೆಯುವ ನಗದು ಬಹುಮಾನ ಮತ್ತು ಶಿಷ್ಯವೇತನ ಒಳಗೊಂಡಿರುವ ಆಕ್ಸಫರ್ಡ ಪಾಟೀಲ್ಸ್ ಸೀನಿಯರ್ ಜೀನಿಯಸ್ ಅವಾರ್ಡ್ ಪರೀಕ್ಷೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ರಾಜ್ಯ, ಐಸಿಎಸ್‌ಇ, ಸಿಬಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.
ಬಹುಮಾನದ ವಿವರ : 1 ರಿಂದ 7ನೇ ಸ್ಥಾನ ಪಡೆಯುವವರಿಗೆ ಕ್ರಮವಾಗಿ ತಲಾ 50 ಸಾವಿರ ರೂ. 40 ಸಾವಿರ ರೂ.30 ಸಾವಿರ ರೂ.,20ಸಾವಿರ ರೂ., 10 ಸಾವಿರ ರೂ., ಐದು ಸಾವಿರ ರೂ., 2500 ರೂ.ನಗದು ಪುರಸ್ಕಾರ ನೀಡಲಾಗುತ್ತದೆ. ಇದಲ್ಲದೆ 1-10 ರ‍್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ಒಂದು ವರ್ಷದ ಪ್ರಥಮ ಪಿಯುಸಿ ವಸತಿ ಸಹಿತ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.11-20 ರ‍್ಯಾಂಕ್ ಪಡೆಯುವ ಟಾಪರ್‌ಗಳಿಗೆ ಒಂದು ವರ್ಷದ ಪ್ರಥಮ ಪಿಯುಸಿ ಬೋಧನಾ ಶುಲ್ಕದಲ್ಲಿ ಶೇ 100 ರಿಯಾಯಿತಿ ನೀಡಲಾಗುತ್ತದೆ.
ಪ್ರಶ್ನೆ ಪತ್ರಿಕೆ ಮಾದರಿ:
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ವಿಷಯಗಳ ಮೇಲೆ 60 ವಸ್ತುನಿಷ್ಠ ಮಾದರಿಯ ಪ್ರಶ್ನೆಗಳಿದ್ದು ಒಂದು ಘಂಟೆ ಕಾಲಾವಧಿ ಇರುತ್ತದೆ. ಪ್ರತಿ ಪ್ರಶ್ನೆಗೆ 4 ಅಂಕ ಇದ್ದು ತಪ್ಪು ಉತ್ತರಕ್ಕೆ ಒಂದು ಅಂಕ ಕಡಿತಗೊಳಿಸಲಾಗುತ್ತದೆ.
ಆಸಕ್ತರು ವಿದ್ಯಾರ್ಥಿ : ಹೆಸರು-ತರಗತಿ-ಶಾಲೆಯ ಹೆಸರು,ವಿಳಾಸ, ಮೊಬೈಲ್ ಸಂಖ್ಯೆ, ಮಾದರಿಯ ಎಸ್‌ಎಂಎಸ್ ಅಥವಾ ವಾಟ್ಸಪ್ ಸಂದೇಶವನ್ನು ಮೊ:9380095756 ಸಂಖ್ಯೆಗೆ ಕಳಿಸಬಹುದು.ಹೆಚ್ಚಿನ ವಿವರಗಳಿಗೆ ಮೊ:7483147040, 8310035858, 9019460665, 8971769144 ಸಂಖ್ಯೆಗಳನ್ನು ಸಂಪರ್ಕಿಸಲು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ದರ್ಶನಗೌಡ ಎಂ. ಪಾಟೀಲ, ಶಿಕ್ಷಕರಾದ ರಾಜಶೇಖರ ಹಿರೇಮಠ, ಆನಂದ ನಾವಿ ಇದ್ದರು.
ಬಸ್ ವ್ಯವಸ್ಥೆ: ಎರಡೂ ಪರೀಕ್ಷೆಗಳಿಗೆ ಬರುವ ವಿದ್ಯಾರ್ಥಿಗಳು,ಪಾಲಕರಿಗೆ ಮುದ್ದೇಬಿಹಾಳ ಬಸ್ ನಿಲ್ದಾಣದ ಹತ್ತಿರ ಶಾಲೆಯಿಂದಲೇ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.







