ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಶೇ.100ರಷ್ಟು ಹಾಜರಾತಿ

ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಶೇ.100ರಷ್ಟು ಹಾಜರಾತಿ

ಮುದ್ದೇಬಿಹಾಳ : ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯಾದ್ಯಂತ ಶನಿವಾರದಿಂದ ಆರಂಭಗೊAಡಿದ್ದು ತಾಲ್ಲೂಕಿನ ಏಳು ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವಾಗದಂತೆ ಶಾಂತಿಯುತವಾಗಿ ಪರೀಕ್ಷೆಗಳು ಆರಂಭಗೊoಡಿವೆ.ಏತನ್ಮಧ್ಯೆ ಪ್ರಶ್ನೆ ಪತ್ರಿಕೆ ಲೀಕ್, ನಕಲು ಸಮಸ್ಯೆಗೆ ಪರಿಹಾರವಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ರೂಪಿಸಿರುವ ವೆಬ್ ಕಾಸ್ಟಿಂಗ್ ವ್ಯವಸ್ಥೆಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುದ್ದೇಬಿಹಾಳ ಪಟ್ಟಣದ ನಾಲ್ಕು,ನಾಗರಬೆಟ್ಟದ ಎರಡು,ನಾಲತವಾಡದ ಒಂದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಸುಗಮವಾಗಿ ನಡೆದಿವೆ.ನಾಗರಬೆಟ್ಟದ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಶೇ.100ರಷ್ಟು ಹಾಜರಾತಿ ದಾಖಲಾಗಿದೆ. ಪರೀಕ್ಷೆಗೆ ನೋಂದಾಯಿಸಿಕೊoಡಿದ್ದ 375 ವಿದ್ಯಾರ್ಥಿಗಳ ಪೈಕಿ 375 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ದಾಖಲೆ ಮಾಡಿದ್ದಾರೆ.

ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 1020 ವಿದ್ಯಾರ್ಥಿಗಳ ಪೈಕಿ 1016 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ ನಾಲತವಾಡದ ಶ್ರೀ ವೀರೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ 147ರಲ್ಲಿ 133 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಎಸ್.ಎಸ್.ಶಿವಾಚಾರ್ಯ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 821ರಲ್ಲಿ 760 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಜ್ಞಾನಭಾರತಿ ವಿದ್ಯಾಮಂದಿರ ಪರೀಕ್ಷಾ ಕೇಂದ್ರದಲ್ಲಿ 542ರಲ್ಲಿ 531 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಸರಕಾರಿ ಪಪೂ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 395ರಲ್ಲಿ 360 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಎಂ.ಜಿ.ವಿ.ಸಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 431ರಲ್ಲಿ 402 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಎಲ್ಲ ಸೆಂಟರ್‌ಗಳಲ್ಲಿ ಪೊಲೀಸರು ಸೂಕ್ತ ಬಿಗಿ ಬಂದೋಬಸ್ತ್ ವಹಿಸಿದ್ದರು.

ಮೂರು ಕಾಲೇಜಿನಲ್ಲಿ ಶೂನ್ಯ ದಾಖಲಾತಿ:
ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿಯ ಎಸ್.ಡಿ.ಆರ್ ಪದವಿ ಪೂರ್ವ ಕಾಲೇಜು, ಬಳಬಟ್ಟಿಯ ಬಿ.ಎಂ.ದಡ್ಡಿ ಪಿಯು ಕಾಲೇಜು,ಮುದ್ದೇಬಿಹಾಳದ ಎಸ್.ಡಿ.ಪಾಟೀಲ ಸ್ವತಂತ್ರö್ಯ ಪಿಯು ಕಾಲೇಜಿನಿಂದ ಒಬ್ಬ ವಿದ್ಯಾರ್ಥಿಯೂ ಪರೀಕ್ಷೆಗೆ ನೋಂದಾಯಿಸಿಕೊAಡಿಲ್ಲ ಎಂಬುದು ಪಿಯು ಬೋರ್ಡ್ನ ಮಾಹಿತಿಯಲ್ಲಿ ಬಹಿರಂಗವಾಗಿದೆ.

Latest News

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ:                ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ: ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಮುದ್ದೇಬಿಹಾಳ : ವಾಯುವಿಹಾರಕ್ಕೆಂದು ಹೋಗಿದ್ದ ಮೂವರು ಯುವಕರ ತಂಡವೊoದರ ಕಣ್ಣಿಗೆ ಬಿದ್ದ ಅಸ್ವಸ್ಥಗೊಂಡ ನರಿ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು;           ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು; ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಮುದ್ದೇಬಿಹಾಳ : ಇಲ್ಲಿಯ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ ಬರುವುದಿಲ್ಲ.ಪಂಚ ಗ್ಯಾರಂಟಿ ಹಿಡಿದು ಗಂಗಾಕಲ್ಯಾಣ,ಮಕ್ಕಳ ಸ್ಕಾಲರಶಿಪ್ ಸೇರಿದಂತೆ ಸರ್ಕಾರಿ ಯೋಜನೆಗಳು ನಿಮಗೆ ದೊರೆಯುವುದಿಲ್ಲ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಎಲ್‌ಎ-2 ಗಳಿಗಾಗಿ ಏರ್ಪಡಿಸಿದ್ದ ಎಸ್‌ಆಯ್‌ಆರ್ ಪ್ರಕ್ರಿಯೆ ಕುರಿತು ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ಮತದಾನ ನಿಮ್ಮ ಜೀವನದ ಹಕ್ಕು.ಸರ್ಕಾರದ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಎನ್ರೋಲಮೆಂಟ್ ಆಗುವುದು ಕಡ್ಡಾಯವಾಗಿದೆ.ಈ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು:                         ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು: ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಐತಿಹಾಸಿಕ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ವಿಗ್ರಹವನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು ಭಕ್ತರು ಹಾಗೂ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಘಟನೆ ಹಿನ್ನೆಲೆ : ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗಿನ ಜಾವ ಆರ್ಚಕರು ಕರೆ ಮಾಡಿ ದೇವಸ್ಥಾನದ ವಿಗ್ರಹ ಕಾಣಿಸುತ್ತಿಲ್ಲ, ಕಳ್ಳತನವಾಗಿದೆ ಎಂದು ಕರೆ ಮಾಡಿ ತಿಳಿಸಿದ ಕೂಡಲೇ ಆಡಳಿತ ಮಂಡಳಿಯ ಸದಸ್ಯರೆಲ್ಲ ಸೇರಿ ಪೊಲೀಸರಿಗೆ ಮಾಹಿತಿ ನೀಡಿದೆವು.ದೇವಸ್ಥಾನದ ಸಿಸಿ