ಮೇ.3 ರಂದು ಮುದ್ದೇಬಿಹಾಳದಲ್ಲಿ ಬೃಹತ್ ಉದ್ಯೋಗಮೇಳ

ಮೇ.3 ರಂದು ಮುದ್ದೇಬಿಹಾಳದಲ್ಲಿ ಬೃಹತ್ ಉದ್ಯೋಗಮೇಳ

ಮುದ್ದೇಬಿಹಾಳ : ಬಿಎಎಸ್ ಸ್ಟಾಫಿಂಗ್ ಸಲೂಷನ್ಸ್ ಪ್ರೆöÊವೆಟ್ ಲಿಮಿಟೆಡ್ ಕಂಪನಿಯಿoದ ಮೇ.3 ರಂದು ಮುದ್ದೇಬಿಹಾಳದಲ್ಲಿ ಬೃಹತ್ ಉದ್ಯೋಗಮೇಳ ಆಯೋಜಿಸಲಾಗಿದೆ ಎಂದು ಬಿಎಎಸ್ ಇಂಟರನ್ಯಾಶನಲ್ ಸ್ಕೂಲ್ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಹೇಳಿದರು.

ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ನರ್ಸರಿಯಿಂದ ನೌಕರಿಯವರೆಗೆ ಕಲ್ಪನೆಯಡಿ ದೇಶದ ಪ್ರಮುಖ ಯಂತ್ರೋಪಕರಣ ತಯಾರಿಕೆ ಘಟಕಗಳಾದ ಟಾಟಾ,ಐಫೊನ್ ಫಾಕ್ಸಕಾನ್,ಮಹೀಂದ್ರಾ ಸೇರಿದಂತೆ ಹತ್ತಕ್ಕೂ ಹೆಚ್ಚು ಕಂಪನಿಗಳಲ್ಲಿ ಉದ್ಯೋಗವಕಾಶ ಕಲ್ಪಿಸಲಾಗುತ್ತಿದ್ದು ಅಭ್ಯರ್ಥಿಗಳಿಗೆ ನೇರಸಂದರ್ಶನ ಇರಲಿದೆ.ಪುರುಷ ಹಾಗೂ ಮಹಿಳೆಯರಿಗೆ ಉದ್ಯೋಗವಕಾಶಕ್ಕೆ ಆದ್ಯತೆ ಇದೆ.ಎಸ್.ಎಸ್.ಎಲ್.ಸಿ,ಪಿಯುಸಿ,ಐಟಿಐ.ಡಿಪ್ಲೋಮಾ ಹಾಗೂ ಯಾವುದೇ ಪದವಿ ಉತ್ತೀರ್ಣರಾಗಿರಲಿ,ಅನುತ್ತೀರ್ಣರಾಗಿದ್ದರೂ ಉದ್ಯೋಗ ನೀಡಲಾಗುತ್ತದೆ.ಬೆಂಗಳೂರು,ಕೋಲಾರ ಹಾಗೂ ದೊಡ್ಡಬಳ್ಳಾಪೂರದಲ್ಲಿ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಸುಮಂಗಲಾ ಎಸ್.ಬಿರಾದಾರ ಮಾತನಾಡಿ, ಮೇ.3 ರಂದು ಬೆಳಗ್ಗೆ 10ಗಂಟೆಯಿoದ ಮುದ್ದೇಬಿಹಾಳ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರನ್ಯಾಶನಲ್ ಶಾಲೆಯ ಆವರಣದಲ್ಲಿ ಈ ಉದ್ಯೋಗಮೇಳ ನಡೆಯಲಿದೆ ಎಂದು ತಿಳಿಸಿದರು. ಮೇಲ್ವಿಚಾರಕ ಸತೀಶ ವಾಲೀಕಾರ, ಪ್ರಾಚಾರ್ಯ ಅಶೋಕ ತುಪ್ಪದ, ಆಯ್ಕೆಯಾದವರಿಗೆ ಆಕರ್ಷಕ ವೇತನ,ಒವರ್‌ಟೈಮ್ ಪ್ರೋತ್ಸಾಹಧನ,ಉದ್ಯೋಗಭದ್ರತೆ ,ಉಚಿತ ಊಟ ವಸತಿ,ಇಎಸ್‌ಐ,ಪಿಎಫ್ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.ಹೆಚ್ಚಿನ ಮಾಹಿತಿಗಾಗಿ ಮೊ.9108445003,9187229281,9108445005 ಸಂಪರ್ಕಿಸಬಹುದಾಗಿದೆ.

ಬಿಎಎಸ್ ಸ್ಕೂಲ್‌ಗೆ ಸಿಬಿಎಸ್‌ಇ ಮಾನ್ಯತೆ: ಸ್ಟೇಟ್ ಸಿಲೆಬಸ್‌ನಿಂದ ಸಿಬಿಎಸ್‌ಇ ಬೋರ್ಡ್ನ ಮಾನ್ಯತೆ ಬಿಎಎಸ್ ಶಾಲೆಗೆ ದೊರಕಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ, ಕಾರ್ಯದರ್ಶಿ ಸುಮಂಗಲಾ ಶಿವನಗೌಡ ಬಿರಾದಾರ ಹೇಳಿದರು.ಶಾಲೆ ಸಂಕೇತ ಸಂಖ್ಯೆ 47447 ಇದ್ದು ಸಿಬಿಎಸ್‌ಇ ಬೋರ್ಡ್ನ ಮಾನ್ಯತೆ ಸಂಖ್ಯೆ 831763 ಇದೆ ಎಂದು ತಿಳಿಸಿದರು.

Latest News

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ಬರಗಾಲದ ಕುರಿತು ಕರೆದಿದ್ದ ನಾಲ್ಕು ದಿನಗಳ ವಿಶೇಷ ಅಧಿವೇಶನದಲ್ಲಿ ರಾಜ್ಯದ ರೈತರಿಗೆ

ಕಬ್ಬಿಗೆ 5500 ರೂ.ದರ ನಿಗದಿಗೆ ಆಗ್ರಹ:                                            ಸೆ.29 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮನೆಗೆ ಮುತ್ತಿಗೆ

ಕಬ್ಬಿಗೆ 5500 ರೂ.ದರ ನಿಗದಿಗೆ ಆಗ್ರಹ: ಸೆ.29 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮನೆಗೆ ಮುತ್ತಿಗೆ

ಮುದ್ದೇಬಿಹಾಳ : ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆಯನ್ನು 60 ರೂ.ಗಳಿಗೆ ಹೆಚ್ಚಿಸಬೇಕು.ಸಬ್ 2026-27ನೇ ಸಾಲಿನಲ್ಲಿ

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಮುದ್ದೇಬಿಹಾಳ : ಔಷಧಗಳ ಬಳಕೆ, ಪ್ರಮಾಣ ಹಾಗೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ

ಥ್ರೋಬಾಲ್ : ಬಿದರಕುಂದಿ ಕೆಪಿಎಸ್ ಆದರ್ಶ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಥ್ರೋಬಾಲ್ : ಬಿದರಕುಂದಿ ಕೆಪಿಎಸ್ ಆದರ್ಶ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿಯ ಕೆಪಿಎಸ್ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಥ್ರೋಬಾಲ್ ಬಾಲಕರು,ಬಾಲಕಿಯರ ವಿಭಾಗದಲ್ಲಿ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಾಗಲಿ-ಸಿ.ಎಸ್.ನಾಡಗೌಡ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಾಗಲಿ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರ ವೈಯಕ್ತಿಕ ಪ್ರತಿಭೆಯ ಜತೆಗೆ ಅವರು ಪ್ರತಿನಿಧಿಸುವ ಪ್ರದೇಶದ ಹೆಸರೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತದೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು. ಪಟ್ಟಣದ ಓಸ್ವಾಲ್ ಹಾಲ್‌ನಲ್ಲಿ ರವಿವಾರ ನಡೆದ ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಏಕಲವ್ಯ ರೋಲರ್ ಸ್ಕೆಟಿಂಗ್ ಅಕಾಡೆಮಿಯ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಏಕಲವ್ಯ ರೋಲರ್

ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ :                                      ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ : ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಮುದ್ದೇಬಿಹಾಳ : ಭೀಕರ ಬರಗಾಲದ ಸಮಯದಲ್ಲಿ ನೇಕಾರರಿಗೂ ಸಮರ್ಪಕ ಕಚ್ಚಾನೂಲು,ಬೀಮ್ ಪೂರೈಕೆ ಆಗುತ್ತಿಲ್ಲ.ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನಡೆಸುವ ನೇಕಾರರು ಗ್ರಾಮೀಣ ಭಾಗದಲ್ಲಿ ಸಂಕಷ್ಟದಲ್ಲಿದ್ದು ಅವರಿಗೆ ಸರ್ಕಾರ ಸೂಕ್ತ ನೆರವು ಒದಗಿಸಬೇಕು ಎಂದು ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಂಕರ ಈ.ಹೆಬ್ಬಾಳ ಹೇಳಿದರು. ಪಟ್ಟಣದ ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ 27ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.ನೇಕಾರರ ಬದುಕು