ಮುದ್ದೇಬಿಹಾಳ : ಭಾರಿ ಬಿರುಗಾಳಿಗೆ ಬೃಹತ್ ಬೇವಿನ ಮರವೊಂದು ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಅಸುನೀಗಿದ ಘಟನೆ ತಾಲ್ಲೂಕಿನ ಢವಳಗಿ-ವಿಜಯಪುರ ರಸ್ತೆಯಲ್ಲಿ ಢವಳಗಿ ಗ್ರಾಮದ ಹತ್ತಿರ ಗುರುವಾರ ನಡೆದಿದೆ.
ಬಿದರಕುಂದಿ ಗ್ರಾಮದ ಕೆಎಸ್ಆರ್ಟಿಸಿ ನಿವೃತ್ತ ಕಂಟ್ರೋಲರ್ ಬಸಲಿಂಗಪ್ಪ ದೊಡ್ಡಬಸಪ್ಪ ಕಡೂರ(64)
ಅವರ ಮೇಲೆ ಭಾರಿ ಪ್ರಮಾಣದ ಮರ ಬಿದ್ದು ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.ಸಾಯಂಕಾಲ ಒಮ್ಮಿಂದೊಮ್ಮೆಲೆ ಬಿರುಗಾಳಿ ಬೀಸಿದೆ.ಇದರ ರಭಸಕ್ಕೆ ರಸ್ತೆ ಬದಿ ಇದ್ದ ಮರ ಉರುಳಿ ಬಿದ್ದಿದೆ.ಅದರ ಬುಡದಲ್ಲಿ ಬಸಲಿಂಗಪ್ಪ ಸಿಲುಕಿಕೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರ ಬಿದ್ದು ಸಂಚಾರ ಸ್ಥಗಿತಕೊಂಡಿದ್ದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪಿಎಸೈ ಸಂಜಯ ತಿಪರೆಡ್ಡಿ,ಪೊಲೀಸರು,ಅರಣ್ಯ ಇಲಾಖೆಯ ಸಿಬ್ಬಂದಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.







