ಮುಗ್ಧ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬೇಡಿ-ಶಾಸಕ ಸಿ.ಎಸ್.ನಾಡಗೌಡ

ಮುಗ್ಧ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬೇಡಿ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಕಾಲುವೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ವಿಷಯದಲ್ಲಿ ಕೆಲವು ಮುಖಂಡರು ಮುಗ್ಧ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ.ಅದಕ್ಕೆ ರೈತರು ಕಿವಿಗೊಡಬಾರದು.ವಾರದಲ್ಲಿ ಕಾಲುವೆ ಮೂಲP ಕೆರೆಗಳನ್ನು ತುಂಬಿಸಲಾಗುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕೆರೆಗಳನ್ನು ತುಂಬಿಸಲು ವಿಳಂಬವಾಗಿದೆ.ನೀರು ಕೊಡಬಾರದು ಎಂಬ ಉದ್ದೇಶ ಸರ್ಕಾರಕ್ಕಾಗಲೀ,ಅಧಿಕಾರಿಗಳಿಗಾಗಲೀ ಇಲ್ಲ.ಬೇಸಿಗೆಯ ಸಮಯದಲ್ಲಿ ಕುಡಿವ ನೀರು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.ನಾನು ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರರ ಜೊತೆಗೆ ಮಾತನಾಡಿದ್ದೇನೆ.ವಿದ್ಯುತ್ ಗೋಪುರವೊಂದರ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಒಂದು ವಾರಗಳ ಕಾಲ ನೀರು ಹರಿಸುವ ಕಾರ್ಯ ವಿಳಂಬವಾಗಿದೆ.ಅದನ್ನು ತಿಳಿದುಕೊಳ್ಳದೇ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಆಗಬಾರದು ಎಂದು ನಾಡಗೌಡರು ಹೇಳಿದರು.

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ 2013 ರಿಂದ ಹಿಡಿದು ಈವರೆಗೂ ಕೇಂದ್ರ ಸರಕಾರ ಕೃಷ್ಣಾ ನದಿ ನೀರಿನ ಹಂಚಿಕೆಗೆ ನೋಟಿಫಿಕೇಶನ ಮಾಡುತ್ತಿಲ್ಲ.ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಆಗುತ್ತಿಲ್ಲ.ರೈತರ ಜಮೀನಿಗೆ ನೀರು ಹರಿಸಲು ಸಾಕಷ್ಟು ಸಿದ್ದತೆ ಮಾಡಿಕೊಂಡರೂ ರೈತರಿಗೆ ನೀರು ಕೊಡಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುತ್ತಿಲ್ಲ.ಪ್ರಧಾನಿಯವರನ್ನು ನೀರಾವರಿ ಮಂತ್ರಿ,ಸಚಿವರಾದ ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ ಭೇಟಿಯಾಗಿದ್ದಾರೆ.ಅವರು ನೋಟಿಫೀಕೇಶನ್ ಮಾಡುತ್ತಿಲ್ಲ ಎಂದು ದೂರಿದರು.

ಯಾವುದೇ ಕೆಲಸವಾಗಲೀ ನಾವು ಸಾಮೂಹಿಕವಾಗಿ ನಿರ್ಧಾರ ತಗೆದುಕೊಳ್ಳುತ್ತೇವೆ.ಪ್ರತಿಯೊಂದು ಕೆಲಸನ್ನು ಪ್ರಚಾರ ಮಾಡಿ ನಾವು ಮಾಡುವುದಿಲ್ಲ.ರೈತರು ಸಮಾಧಾನದಿಂದ ಇರಬೇಕು.ಕುಡಿಯುವುದಕ್ಕೆಂದು ನೀರು ಬಿಟ್ಟರೆ 5-10 ಎಚ್.ಪಿ ಮೋಟರ್ ಹಚ್ಚಿ ನೀರು ಜಮೀನಿಗೆ ಹೊಡೆದರೆ ಅಂತಹ ಮೋಟರ್‌ಗಳನ್ನು ಜಿಲ್ಲಾಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Latest News

ಮುದ್ದೇಬಿಹಾಳ : ಸಿ.ಜಿ.ನಾಗರಾಳ ಶರಣ ಸಾಹಿತ್ಯ ಪರಿಷತ್ತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆ

ಮುದ್ದೇಬಿಹಾಳ : ಸಿ.ಜಿ.ನಾಗರಾಳ ಶರಣ ಸಾಹಿತ್ಯ ಪರಿಷತ್ತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆ

ಮುದ್ದೇಬಿಹಾಳ : ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ

ನಾಲತವಾಡ ಪ.ಪಂ ಅಧ್ಯಕ್ಷ ಸ್ಥಾನ: ಲಲಿತಾ ಗೊರಬಾಳ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ನಾಲತವಾಡ ಪ.ಪಂ ಅಧ್ಯಕ್ಷ ಸ್ಥಾನ: ಲಲಿತಾ ಗೊರಬಾಳ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ನಾಲತವಾಡ ಪಟ್ಟಣ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದ

ಮಹಿಳೆ ಕಳೆದುಕೊಂಡ ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ತೋರಿದ ಯುವಕರು

ಮಹಿಳೆ ಕಳೆದುಕೊಂಡ ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ತೋರಿದ ಯುವಕರು

ಮುದ್ದೇಬಿಹಾಳ : ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುದ್ದೇಬಿಹಾಳ ನಗರದಿಂದ ಹಿರೇಮುರಾಳ ಗ್ರಾಮಕ್ಕೆ ತೆರಳುತ್ತಿದ್ದ

ಬಿಜೆಪಿ ರೈತ ಮೋರ್ಚಾ ಸ್ಥಾನಕ್ಕೆ ನಡಹಳ್ಳಿ ರಾಜೀನಾಮೆ ನೀಡಲಿ-ಸದ್ದಾಂ ಕುಂಟೋಜಿ

ಬಿಜೆಪಿ ರೈತ ಮೋರ್ಚಾ ಸ್ಥಾನಕ್ಕೆ ನಡಹಳ್ಳಿ ರಾಜೀನಾಮೆ ನೀಡಲಿ-ಸದ್ದಾಂ ಕುಂಟೋಜಿ

ಮುದ್ದೇಬಿಹಾಳ : ಬಾಗಲಕೋಟ ಉಪಚುನಾವಣೆಯಲ್ಲಿ ಬಾಗಲಕೋಟ ಜಿಲ್ಲೆಯ ರಾಂಪೂರ ಜಿಲ್ಲಾ ಪಂಚಾಯಿತಿಯಿAದ ಬಿಜೆಪಿಗೆ ಲೀಡ್

ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ನಿರ್ಲಕ್ಷ : ರೈತರ ಆಕ್ರೋಶ

ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ನಿರ್ಲಕ್ಷ : ರೈತರ ಆಕ್ರೋಶ

ಮುದ್ದೇಬಿಹಾಳ : ಕೆಬಿಜೆಎನ್‌ಎಲ್ ಅಡಿ ನಿರ್ಮಿಸಲಾದ ಕಾಲುವೆ ಸಂಖ್ಯೆ 16ಎ- ಲ್ಯಾಟರಲ್ ನಂ.2 ಕಾಲುವೆ ನಿರ್ಮಿಸಲು ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಸಂಬoಧಿಸಿದoತೆ ಎರಡು ದಶಕಗಳು ಕಳೆದರೂ ಈವರೆಗೂ ಬಾಧಿತ ರೈತರಿಗೆ ಯಾವುದೇ ರೀತಿಯಿಂದ ಪರಿಹಾರ ದೊರೆತಿಲ್ಲ.ಅಧಿಕಾರಿಗಳು ಪರಿಹಾರ ದೊರಕಿಸಿಕೊಡಬೇಕು ಎಂದು ತಾಲ್ಲೂಕಿನ ಮದರಿ ಮತ್ತು ಗರಸಂಗಿ ಗ್ರಾಮದ ರೈತರು ಕೆಬಿಜೆಎನ್‌ಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು. ಪಟ್ಟಣದ ಹುಡ್ಕೋದಲ್ಲಿರುವ ಕೆಬಿಜೆಎನ್‌ಎಲ್ ಎಎಲ್‌ಬಿಸಿ ವಿಭಾಗ-3 ಕಚೇರಿಗೆ ಆಗಮಿಸಿದ್ದ ರೈತರು,

ಸರ್ಕಾರಿ ಶಾಲೆಗಳಲ್ಲೇ ಗುಣಮಟ್ಟದ ಶಿಕ್ಷಣ-ಸಿ.ಎಸ್.ನಾಡಗೌಡ

ಸರ್ಕಾರಿ ಶಾಲೆಗಳಲ್ಲೇ ಗುಣಮಟ್ಟದ ಶಿಕ್ಷಣ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಖಾಸಗಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ಪಾಲಕರಲ್ಲಿರುವ ಅಭಿಪ್ರಾಯ ಸರಿಯಲ್ಲ.ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂಬುದನ್ನು ಮನಗಾಣಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಮಾರುತಿ ನಗರದಲ್ಲಿ ಶುಕ್ರವಾರ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಸರ್ಕಾರಿ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರನ್ನು ನಿಯೋಜಿಸಲಾಗಿರುತ್ತದೆ.ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಬಂದವರು ಇರುತ್ತಾರೆ.ಆದರೆ ಸ್ಪರ್ಧಾತ್ಮಕ