ಸಿಲಿಂಡರ್ ಸೋರಿಕೆ : ತಪ್ಪಿದ ಭಾರೀ ಅನಾಹುತ

ಸಿಲಿಂಡರ್ ಸೋರಿಕೆ : ತಪ್ಪಿದ ಭಾರೀ ಅನಾಹುತ

ಮುದ್ದೇಬಿಹಾಳ : ರೆಗ್ಯೂಲೆಟರ್‌ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ದಿನಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪಟ್ಟಣದ ಅವಟಿ ಗಲ್ಲಿಯಲ್ಲಿ ನಡೆದಿದೆ.

ಪಟ್ಟಣದ ಅವಟಿಗಲ್ಲಿ ನಿವಾಸಿ ಹುಸೇನಸಾಬ ನಾಗರಾಳ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.ಸಿಲಿಂಡರ್ ಸೋರಿಕೆಯಾಗುತ್ತಲೇ ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.ಬೆAಕಿಗೆ ಮನೆಯಲ್ಲಿದ್ದ ಪ್ರಿಡ್ಜ್,ಕುಕ್ಕರ್,ಬಟ್ಟೆಗಳು ಸೇರಿದಂತೆ ದಿನಬಳಕೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿಯ ಝಳಕ್ಕೆ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ.ಅಂದಾಜು 3 ಲಕ್ಷ ರೂ.ಹಾನಿ ಸಂಭವಿಸಿದೆ ಎಂದು ಅಗ್ನಿಶಾಮಕ ಠಾಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ಠಾಣಾಧಿಕಾರಿ ತಿಪ್ಪಣ್ಣ ನಾವದಗಿ, ಅಗ್ನಿಶಾಮಕ ದಳದ ಸಿಬ್ಬಂದಿ ಸುಭಾಷ ರಾಠೋಡ,ತಮ್ಮಣ್ಣ ಗೌಡರ,ಶರಣಬಸ್ಸು ಬಾಗೇವಾಡಿ,ಲಕ್ಷö್ಮಣ ಕರಿನಾಲಿಗಿ,ಬಸವರಾಜ ಭಜಂತ್ರಿ ಬೆಂಕಿ ನಂದಿಸಲು ಸಹಕರಿಸಿದರು ಎಂದು ಮೂಲಗಳು ತಿಳಿಸಿವೆ.ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

Latest News

ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಸನ್ಮಾನ ;                                      ಎರಡು ತಿಂಗಳಲ್ಲಿ ಬಾಕಿ ಹಣ ಬಿಡುಗಡೆಗೆ ಕ್ರಮ-ಸಚಿವ ಜಾರಕಿಹೊಳಿ

ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಸನ್ಮಾನ ; ಎರಡು ತಿಂಗಳಲ್ಲಿ ಬಾಕಿ ಹಣ ಬಿಡುಗಡೆಗೆ ಕ್ರಮ-ಸಚಿವ ಜಾರಕಿಹೊಳಿ

ವಿಜಯಪುರ : ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಸೇರಿದಂತೆ ಗುತ್ತಿಗೆದಾರರ ಬೇಡಿಕೆಗಳನ್ನು ಆದ್ಯತೆ ಮೇರೆಗೆ

ಶಿಕ್ಷಣ,ಆರ್ಥಿಕ  ಸಬಲತೆಗೆ ಒತ್ತು ನೀಡಿ:                                       ಸಮಾಜದ ಋಣ ತೀರಿಸುವ ಕಾರ್ಯ ಮಾಡೋಣ-ಎಂ.ಎಸ್.ಬಡದಾನಿ

ಶಿಕ್ಷಣ,ಆರ್ಥಿಕ ಸಬಲತೆಗೆ ಒತ್ತು ನೀಡಿ: ಸಮಾಜದ ಋಣ ತೀರಿಸುವ ಕಾರ್ಯ ಮಾಡೋಣ-ಎಂ.ಎಸ್.ಬಡದಾನಿ

ಮುದ್ದೇಬಿಹಾಳ : ಹಿಂದುಳಿದ ಸಮಾಜದಲ್ಲಿ ಜನಿಸಿದ್ದರೂ ಶಿಕ್ಷಣದಲ್ಲಿ ನಮ್ಮವರು ಎಂದಿಗೂ ಹಿಂದೆ ಬಿದ್ದಿಲ್ಲ.ಶಿಕ್ಷಣದೊಂದಿಗೆ ಜನಾಂಗವನ್ನು

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಮುದ್ದೇಬಿಹಾಳ : ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹುಲ್ಲೂರು ಗ್ರಾಮದ ಎಸ್.ಎನ್.ಡಿ. ನ್ಯಾಷನಲ್ ಪಬ್ಲಿಕ್ ಶಾಲೆಯ

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಪವಿತ್ರವಾದ ಸಂಸ್ಥೆಯಾಗಿದೆ. ಅಂಜುಮನ್ ಕಮೀಟಿ ಹದಿನೈದು ವರ್ಷಗಳಿಂದ ಅಭಿವೃದ್ಧಿ

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

ಮುದ್ದೇಬಿಹಾಳ : ರಾಜ್ಯಾದ್ಯಂತ ಬರದ ಪರಿಸ್ಥಿತಿ ಇದ್ದರೂ ವಿಜಯಪುರ ಜಿಲ್ಲೆಯಲ್ಲಿ ಕೇವಲ ಮೂರು ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿರುವ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ ಎಂದು ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡರಿಗೆ ರಾಜೀನಾಮೆ ನೀಡಿ ಮನೆಗೆ ಹೋಗುವಂತೆ ಆಗ್ರಹಿಸಿದ್ದಾರೆ. ಪಟ್ಟಣದ ಮಾರುತಿ ನಗರದಲ್ಲಿರುವ ಫಾರ್ಮ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಎಂ.ಎಸ್.ಬಡದಾನಿ ಅವರಿಗೆ ತಾಲ್ಲೂಕಿನ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು ಸನ್ಮಾನಿಸಿದರು. ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯ ಉಪಾದ್ಯಕ್ಷ ಗೋಪಾಲ ಹೂಗಾರ, ಸಿಆರ್‌ಪಿ ಜಿ.ಎಚ್.ಚವ್ಹಾಣ,ಸಂತ ಕನಕದಾಸ ಶಾಲೆಯ ಮುಖ್ಯಗುರು ಎಮ್.ಎನ್.ಯರಝರಿ, ಆರ್.ಎಸ್.ವಾಲೀಕಾರ,ಆರ್.ವಾಯ್.ಪಾಟೀಲ, ,ಎಮ್.ಸಿ.ಕಬಾಡೆ, ಶಂಕರ ಭಾರತಿ ಶಾಲೆಯ ಎಮ್.ಎಮ್.ಮಸ್ಕಿ, ಜ್ಞಾನ ಗಂಗೋತ್ರಿ ಶಾಲೆಯ ಎಂ.ಬಿ.ನದಾಫ, ತಂಗಡಗಿಯ ಚರಲಿಂಗೇಶ್ವರ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಎಲ್.ಮಾದರ , ಸಂಜೀವ ಜಾಲವಾದಿ ಉಪಸ್ಥಿತರಿದ್ದರು.