ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದು  ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾದ  ಸಿ.ಎಸ್.ನಾಡಗೌಡ  ತಿಳಿಸಿದ್ದಾರೆ.

 ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು,ತಾವು ಹಿಂದೆ ನ್ಯಾಮಗೌಡ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿಯೇ ಚುನಾವಣೆಯ ಉಸ್ತುವಾರಿ ವಹಿಸಿದ್ದಾಗಿ ತಿಳಿಸಿದರು ಅಲ್ಲದೇ, ಎಂ.ಬಿ.ಪಾಟೀಲರ ಉಪ ಚುನಾವಣೆ ಮಾಡಿದ್ದೇವೆ.ಬೆಳಗಾವಿ,ಧಾರವಾಡ ,ಬಳ್ಳಾರಿ ಚುನಾವಣೆಯಲ್ಲಿ ತನುಮನ ಧನದಿಂದ ಚುನಾವಣೆ ಮಾಡಿದ್ದೇವೆ ಎಂದು ತಿಳಿಸಿದರು.

          ಹಿರಿತನ,ಪಕ್ಷದ ದೃಷ್ಟಿಯಿಂದ ಕೊಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ ಎಂದು ನಾಡಗೌಡರು ಹೇಳಿದರು. ಸಿಎಂ ಡಿಕೆ ಶಿವಕುಮಾರ ಹಾಗೂ ನಾವು ಒಟ್ಟಿಗೆ  ಬೆಳೆದು ಬಂದಿದ್ದೇವೆ ಎಂಬುದು ಡಿಕೆಗೂ ಗೊತ್ತಿದೆ.ನಿರೀಕ್ಷೆಯಲ್ಲಿ ಇದ್ದರೂ ನನಗೆ ಮಂತ್ರಿ ಮಾಡಲಿಲ್ಲ.ಸಾಬೂನು ಮಾರ್ಜಕ ನಿಗಮವನ್ನು ಎರಡು ವರ್ಷದಲ್ಲಿ ಲಾಭದಲ್ಲಿ ಮುನ್ನಡೆಸಿದ್ದೇನೆ.ಉತ್ತರ ಕರ್ನಾಟಕದಲ್ಲಿ  ಹಿರಿಯ ಶಾಸಕನಾಗಿದ್ದರೂ ಪರಿಗಣಿಸಿಲ್ಲ ಎಂದು ಉತ್ತರಿಸಿದರು.

     ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಪಕ್ಷದ ವಿರೋಧಿ ಚಟುವಟಿಕೆ ಮಾಡುವುದಿಲ್ಲ..ರಾಜೀನಾಮೆ ಕೊಡುವ ಪ್ರಶ್ನೆಯೂ ಇಲ್ಲ.ರಾಜೀನಾಮೆ ಕೊಡುವ ವಿಷಯ ಬಂದರೆ ಜನರ ಮುಂದೆ ಹೋಗುತ್ತೇವೆ.ಹೈಕಮಾಂಡ್ ನವರು ಹೀಗೆ ಪಕ್ಷದಲ್ಲಿ ಷಡ್ಯಂತ್ರ ಮಾಡುವವರನ್ನು ಮುಂದಿಟ್ಟುಕೊಂಡು ಹೋಗುತ್ತದೆಯೇ ? ಎಂದು ಪ್ರಶ್ನಿಸಿದರು.ನನ್ನ ಜನರು ರಾಜೀನಾಮೆ ಕೊಡು ಎಂದರೆ  ಕೊಡುವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Latest News

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ:  ಕಾರ್ಖಾನೆಯವರು ಉಲ್ಟಾ ಹೊಡೆದಿದ್ದಾರೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ: ಕಾರ್ಖಾನೆಯವರು ಉಲ್ಟಾ ಹೊಡೆದಿದ್ದಾರೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ

ಬೆಳೆ ಸರ್ವೆಯಲ್ಲಿ ಭಾರೀ ಲೋಪ; ಅಧಿಕಾರಿಗಳು,ಜನಪ್ರತಿನಿಧಿಗಳು ರೈತರ ಕತ್ತು ಕೊಯ್ಯಬೇಡಿ-ಶಾಂತಗೌಡ ಪಾಟೀಲ್

ಬೆಳೆ ಸರ್ವೆಯಲ್ಲಿ ಭಾರೀ ಲೋಪ; ಅಧಿಕಾರಿಗಳು,ಜನಪ್ರತಿನಿಧಿಗಳು ರೈತರ ಕತ್ತು ಕೊಯ್ಯಬೇಡಿ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಳೆದ ಬಾರಿ ರೈತರಿಗೆ ಬೆಳೆ ವಿಮೆ ನೀಡುವ ಸಮಯದಲ್ಲಿ ಸಮೀಕ್ಷೆ ಸರಿಯಾಗಿ

ಅಸೂಯೆ,ಮತ್ಸರ ಬಿಟ್ಟು ಸಕಲರಿಗೆ ಲೇಸು ಬಯಸಿ-ಅಂಕಲಿಮಠ ಶ್ರೀ

ಅಸೂಯೆ,ಮತ್ಸರ ಬಿಟ್ಟು ಸಕಲರಿಗೆ ಲೇಸು ಬಯಸಿ-ಅಂಕಲಿಮಠ ಶ್ರೀ

ಮುದ್ದೇಬಿಹಾಳ : ಮಾನವ ಜನ್ಮದಲ್ಲಿ ಹುಟ್ಟಿ ಬಂದಿರುವ ಎಲ್ಲರೂ ಅಸೂಯೆ,ಮತ್ಸರದ ಭಾವನೆ ಬಿಟ್ಟು ಸಕಲರಿಗೆ

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ನೇತೃತ್ವ:   ನಾಯನೇಗಲಿ,ಬಾಲಾಜಿ ಶುಗರ‍್ಸ್ ಸಕ್ಕರೆ ಗೋದಾಮುಗಳಿಗೆ ಬೀಗ

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ನೇತೃತ್ವ: ನಾಯನೇಗಲಿ,ಬಾಲಾಜಿ ಶುಗರ‍್ಸ್ ಸಕ್ಕರೆ ಗೋದಾಮುಗಳಿಗೆ ಬೀಗ

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯವ್ಯಾಪಿ ನಡೆಯುತ್ತಿರುವ ಹೋರಾಟದ ಮುಂದುವರೆದ

ಸಿಜೆಪಿಯಿಂದ ದೇಶವನ್ನು ಅಸ್ಥಿರಗೊಳಿಸುವ ಹುನ್ನಾರ-ಎಸ್.ಕೆ.ಬೆಳ್ಳುಬ್ಬಿ

ಸಿಜೆಪಿಯಿಂದ ದೇಶವನ್ನು ಅಸ್ಥಿರಗೊಳಿಸುವ ಹುನ್ನಾರ-ಎಸ್.ಕೆ.ಬೆಳ್ಳುಬ್ಬಿ

ಮುದ್ದೇಬಿಹಾಳ : ಸರ್ವಾಧ್ಯಕ್ಷ ಆಡಳಿತವಿರುವ ದೇಶಗಳಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯನ್ನು ಕಾಕ್ರೋಚ ಜನತಾ ಪಾರ್ಟಿ ನಮ್ಮ ದೇಶದಲ್ಲೂ ಗೊಂದಲ ಸೃಷ್ಟಿಸಲು ಹುನ್ನಾರ ನಡೆಸುತ್ತಿದ್ದು ಅದಕ್ಕೆ ಎಂದಿಗೂ ಯಶಸ್ಸು ದೊರೆಯುವುದಿಲ್ಲ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು. ತಾಲ್ಲೂಕಿನ ಯರಝರಿ ಯಲ್ಲಾಲಿಂಗೇಶ್ವರ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮಸಭೆ,ನವರಾತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಸಂಸ್ಕೃತಿ,ಸoಪತ್ತು ಲೂಟಿ ಮಾಡಿದವ ಅವನತಿ ತಾನಾಗಿಯೇ ಆಗಿದೆ.ಜಗತ್ತಿಗೆ ಗುರುವಾಗಿ ಹಿಂದೂ ಧರ್ಮ ನಿಲ್ಲಲಿದೆ.ಮುಸ್ಲಿಂರ ಪವಿತ್ರ

ಬಿಜೆಪಿ ಕಾರ್ಯಕರ್ತರಿಂದ ಸ್ವಾಗತಕ್ಕೆ ಸಿದ್ಧತೆ:                            ಅ.26 ರಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ತಳ್ಳಿಕೇರಿ ಪ್ರವಾಸ

ಬಿಜೆಪಿ ಕಾರ್ಯಕರ್ತರಿಂದ ಸ್ವಾಗತಕ್ಕೆ ಸಿದ್ಧತೆ: ಅ.26 ರಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ತಳ್ಳಿಕೇರಿ ಪ್ರವಾಸ

ಮುದ್ದೇಬಿಹಾಳ : ರಾಜ್ಯ ಬಿಜೆಪಿ ಕಾರ್ಯದರ್ಶಿಯಾದ ನಂತರ ಮುದ್ದೇಬಿಹಾಳ ಭಾಗದಲ್ಲಿ ಪ್ರವಾಸ ಕೈಗೊಂಡಿರುವ ಶರಣು ತಳ್ಳಿಕೇರಿ ಅವರನ್ನು ಅ.26 ರಂದು ಬಿಜೆಪಿ ಮಂಡಲದಿoದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸುವ ಸಿದ್ಧತೆ ಮಾಡಿಕೊಂಡಿರುವುದಾಗಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸಂಗಮೇಶ ಗುಂಡಕನಾಳ( ನಾಗೂರ) ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಅ.26 ರಂದು ಬೆಳಗ್ಗೆ 11 ಗಂಟೆಗೆ ಮುದ್ದೇಬಿಹಾಳ ನಗರಕ್ಕೆ ಆಗಮಿಸಲಿರುವ ರಾಜ್ಯ ಬಿಜೆಪಿ ಕಾರ್ಯದರ್ಶಿ ಶರಣು ತಳ್ಳಿಕೇರಿ ಅವರನ್ನು