ಮುದ್ದೇಬಿಹಾಳ : ಬರಗಾಲ ಬಿದ್ದಿದೆ.ಹೊಲದಲ್ಲಿ ಬಿತ್ತಿರುವ ಬೆಳೆಗಳು ಒಣಗಿ ಹೋಗುತ್ತಿವೆ.ದನ-ಕರುಗಳಿಗೆ ಕುಡಿಯಲು ನೀರಿಲ್ಲ. ಹೊಲಕ್ಕೆ ಹೋದಾಗ ಒಣಗಿದ ಬೆಳೆಗಳನ್ನು ನೋಡಿದರೆ ಕಣ್ಣೀರು ಬರುತ್ತದೆ. ಅಧಿಕಾರಿಗಳು ಕಾಲುವೆಗೆ ನೀರು ಬಿಡಿ ಎಂದರೆ ತಯಾರಿಲ್ಲ.ಹೀಗೆ ಬದುಕುವ ಬದಲು ಸಾಯಲು ಅಧಿಕಾರಿಗಳೇ ವಿಷ ಕೊಡಿ ಎಂದು ರೈತ ಸಿದ್ದಪ್ಪ ಮಾದರ ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕೃಷ್ಣಾ ಭಾಗ್ಯ ಜಲ ನಿಗಮದ ಎ.ಎಲ್.ಬಿ.ಸಿ. ಉಪ ವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ ಬುಧವಾರ ಆಗಮಿಸಿದ್ದ ತಾಲ್ಲೂಕಿನ ಚವನಭಾವಿ ಗ್ರಾಮದ ರೈತರು,ಇಲಾಖೆಯ ಎಂಜಿನಿಯರ್ಗಳಾದ ಬಿ.ಎಂ. ಸಾತಿಹಾಳ ಹಾಗೂ ಎಸ್.ಕೆ. ದೊಡಮನಿ ಅವರಿಗೆ ಮನವಿ ಸಲ್ಲಿಸಿದರು.
ಅಲಮಟ್ಟಿ ಜಲಾಶಯದ ಚಿಮ್ಮಲಗಿ ಎ.ಎಲ್.ಬಿ.ಸಿ. ಎಡದಂಡೆ ಕಾಲುವೆಯ ಡಿಸ್ಟ್ರಿಬ್ಯೂಟರ್-40ನೇ ಕಾಲುವೆಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎಂಬ ಸಮಸ್ಯೆಯನ್ನು ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ.ಮಾಧ್ಯಮಗಳಲ್ಲಿ ವರದಿ ಆದರೂ ಗಣನೆಗೆ ತೆಗೆದುಕೊಳ್ಳದೇ ನಿರ್ಲಕ್ಷö್ಯ ವಹಿಸಿದ್ದಾರೆ.
ನೀರಿಲ್ಲದೆ ಬೆಳೆಗಳು ಒಣಗಿ ಹೋಗಿದ್ದು, ಸಾಲದ ಹೊರೆ ಹೆಚ್ಚಾಗಿ ರೈತರು ಕಣ್ಣೀರಿನಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಎ.ಎಲ್.ಬಿ.ಸಿ. ಕಾಲುವೆ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸಿ ಬೆಳೆಗಳನ್ನು ಉಳಿಸುವ ಜತೆಗೆ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ನೀರು ಹರಿಯುವ ಸಂದರ್ಭದಲ್ಲಿ ಟೇಲ್ ಎಂಡ್ಗೆ ತೆರಳಿ ಫೋಟೋ ತೆಗೆದು ಕಾಲುವೆಯಲ್ಲಿ ನೀರು ಹರಿಯುತ್ತಿದೆ ಎಂಬ ದಾಖಲೆ ಸೃಷ್ಟಿಸುವ ಬದಲು, ನಿಜವಾದ ನೀರಾವರಿ ಅವಧಿಯಲ್ಲಿ ಡ್ಯಾಂನಿAದ ಬಿಡುವ ನೀರು ಟೇಲ್ ಎಂಡ್ವರೆಗೆ ಸಮರ್ಪಕವಾಗಿ ತಲುಪುತ್ತಿದೆಯೇ ಎಂಬುದನ್ನು ಸ್ಥಳದಲ್ಲೇ ಅಳತೆ ಮಾಡಿ ದಾಖಲಿಸಬೇಕು ಎಂದು ರೈತರು ಒತ್ತಾಯಿಸಿದರು.
. ಕಾಲುವೆಯಲ್ಲಿನ ಹೂಳು, ಕಳೆ, ಅಡಚಣೆ, ಸೋರಿಕೆ, ಒಡೆತ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸ್ಥಳ ಪರಿಶೀಲನಾ ವರದಿ ಹಾಗೂ ಪಂಚನಾಮೆ ಸಿದ್ಧಪಡಿಸಿ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದಪ್ಪ ಗುರಿಕಾರ, ಮಲ್ಲಪ್ಪ ಮಾಲಿನ, ಹುಲಪ್ಪ ಗುಂಡಕರಜಗಿ, ಯಮನಪ್ಪ ಬಿರಾದಾರ, ಸಂಗಪ್ಪ ಬಿರಾದಾರ, ಮೌನೇಶ ಬಿರಾದಾರ, ಸಿದ್ದಪ್ಪ ಮದರಿ, ದೇವಪ್ಪ ಜಂಗಡಭಾವಿ, ಸಿದ್ದಪ್ಪ ವಾಲಿಕಾರ, ಹಣಮಂತ ಗೋಗಿ, ಜಕ್ಕಪ್ಪ ನಾಲತವಾಡ ಸೇರಿದಂತೆ ಚವನಬಾವಿ ಗ್ರಾಮದ ರೈತರು ಉಪಸ್ಥಿತರಿದ್ದರು.







