ಮುದ್ದೇಬಿಹಾಳ : ವಿಜಯಪುರದಲ್ಲಿ ಆ.23 ರಂದು ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಾತ್ರೆಯನ್ನು ಯಶಸ್ವಿಗೊಳಿಸುವಂತೆ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ವಿನಂತಿಸಿದರು.
ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಿಜಯಪುರದ ದರ್ಬಾರ ಹೈಸ್ಕೂಲ್ ಮೈದಾನದಲ್ಲಿ ಆ.23ರಂದು ಮದ್ಯಾಹ್ನ 12ಗಂಟೆಗೆ ಸಂಗೊಳ್ಳಿ ರಾಯಣ್ಣನ ಜಾತ್ರೆಯ ಸಮಾರಂಭವಿದ್ದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ಪ.ಪೂ. ನಿರಂಜನಾನOದಪುರಿ ಮಹಾಸ್ವಾಮೀಜಿಗಳು, ವಿವಿಧ ಜಿಲ್ಲೆಗಳ ಹರಗುರು ಚರಮೂರ್ತಿಗಳು, ಹುಲಜಂತಿ ಮಾಳಿಂಗರಾಯ ಮಹಾರಾಜರು, ರಾಜ್ಯದ ಮಂತ್ರಿ ಮಹೋದಯರು, ವಿದ್ವಾಂಸರು, ಅಧಿಕಾರಿಗಳು, ಎಸ್.ಟಿ. ಮೀಸಲಾತಿಯ ಪ್ರಮುಖ ಹೋರಾಟಗಾರರು ಆಗಮಿಸುವರು ಎಂದು ತಿಳಿಸಿದರು.
ಮುದ್ದೇಬಿಹಾಳ ತಾಲ್ಲೂಕಿನಿಂದ ಸುಮಾರು ಐದು ಸಾವಿರ ಜನರು ರಾಯಣ್ಣನವರ ಜಾತ್ರೆಯಲ್ಲಿ ಹಾಲುಮತ ಸಮಾಜದ ಬಾಂಧವರು ಪಾಲ್ಗೊಳ್ಳುವ ನಿರೀಕ್ಷೆ ಇದೆ.ಸ್ವಾತಂತ್ರ ಸಂಗ್ರಾಮದಲ್ಲಿ ರಾಯಣ್ಣನವರ ಹೋರಾಟ ಅವೀಸ್ಮರಣೀಯವಾಗಿದ್ದು ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಜಾತ್ರೆಯನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಮುಖಂಡರಾದ ಸಾಬಣ್ಣ ನಡಗೇರಿ,ಸಂಗಣ್ಣ ಬೀಸಲದಿನ್ನಿ,ವಕೀಲರಾದ ಎಚ್.ಟಿ.ಪೂಜಾರಿ ಇದ್ದರು.







