ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ : ಬಿ.ಕೆ. ಶೃತಿ

ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ : ಬಿ.ಕೆ. ಶೃತಿ

ವಿಜಯಪುರ: ನಾವು ನಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಲು ದುಶ್ಚಟಗಳಿಂದ ದೂರ ಇರಬೇಕೆಂದು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಂಚಾಲಕಿ ಬಿ.ಕೆ.ಶೃತಿ ಕರೆ ನೀಡಿದರು.

ಅವರು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಓಂ ಶಾಂತಿ ಸಂಸ್ಥೆ ಹಮ್ಮಿಕೊಂಡಿದ್ದ ನಶಾಮುಕ್ತ ಮಹಾ ಅಭಿಯಾನದಲ್ಲಿ ಅಂಚೆ ನೌಕರರಿಗೆ ವ್ಯಸನಗಳಿಂದ ದೂರ ಇರುವ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು. ಆರೋಗ್ಯವಂತ ಹಾಗೂ ಸ್ವಾಸ್ಥ್ಯಭರಿತ ಸಮಾಜ ನಿರ್ಮಾಣದಲ್ಲಿ ನಾವೆಲ್ಲರೂ ಮಹತ್ವದ ಪಾತ್ರ ವಹಿಸಬೇಕು. ಮಾದಕ ವ್ಯಸನಗಳು ಹಾಗೂ ದುಶ್ಚಟಗಳಿಗೆ ಒಳಗಾಗದೆ, ಶುದ್ಧ ಹಾಗೂ ಸದೃಢ ವ್ಯಕ್ತಿತ್ವ ರೂಪಿಸಿಕೊಂಡು ಆರೋಗ್ಯಕರ ಬದುಕು ನಡೆಸಬೇಕು ಎಂದು ಅವರು ಹೇಳಿದರು.

ಇಂದಿನ ಯುವಜನತೆಯಲ್ಲಿ ಮಾದಕ ದ್ರವ್ಯಗಳ ಬಳಕೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಉಲ್ಬಣಿಸುತ್ತಿದ್ದು, ಕುಟುಂಬ ಮತ್ತು ಸಮಾಜದ ಸ್ವಾಸ್ಥ್ಯಕ್ಕೂ ನಶೆ ಮಾರಕವಾಗುತ್ತಿದೆ ಎಂದರು.
ನೌಕರರು ದುಶ್ಚಟಗಳ ದಾಸರಾದರೆ ಮನೆಯ ಸದಸ್ಯರು ನೆಮ್ಮದಿಯಿಂದ ಬದುಕಲು ಆಗುವುದಿಲ್ಲ. ಇದು ಮನೆಯ ಎಲ್ಲ ಸದಸ್ಯರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ವ್ಯಸನ ಅಪರಾಧ ಜಗತ್ತಿನತ್ತ ಕೊಂಡೊಯ್ಯುವ ಅಪಾಯವಿದ್ದು, ಆರಂಭದಲ್ಲೇ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಓಂ ಶಾಂತಿ ಕೇಂದ್ರದ ಬಿ.ಕೆ.ಕಮಲೇಶ ಪ್ರಾಸ್ತಾವಿಕವಾಗಿ ಮಾತನಾಡಿ,ಅತೀಯಾದ ಮೊಬೈಲ್ ವೀಕ್ಷಣೆ, ರೀಲ್ಸ ನೋಡುತ್ತಲೇ ಹೊತ್ತು ಕಳೆಯುವುದು, ಕುಡಿತ, ಧೂಮಪಾನ, ತಂಬಾಕು ಅಗಿಯುವ, ಸುಳ್ಳು ಹೇಳುವ ಯಾವುದೇ ದುಶ್ಚಟಗಳು ವ್ಯಕ್ತಿಯ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.ಆರೋಗ್ಯಕರ ಆಹಾರ ಪದ್ಧತಿ, ಉತ್ತಮ ಸ್ನೇಹಿತರ ಒಡನಾಟ ಬೆಳೆಸಿಕೊಂಡು ಉತ್ತಮ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ನಶಾಮುಕ್ತ ಭಾರತದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದವರು ಹೇಳಿದರು.

ಓಂ ಶಾಂತಿ ಆಶ್ರಮದ ಬಿ.ಕೆ. ಹಿರೇಮಠ ಜಿ.ಎಸ್., ಬಿ.ಕೆ.ಪ್ರಭು, ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಎಂ.ಓ.ತದ್ದೇವಾಡಿ, ಡಿ.ಪಿ.ಎಂ. ಭಜಂತ್ರಿ, ಅಕೌಂಟೆಂಟ್ ಕಿರಣ ಅಂಗಡಿ, ಎ.ಪಿ.ಎಂ. ಎಂ.ಎಸ್.ಗಡೇದ, ಶಿವಾನಂದ ದಳವಾಯಿ, ಗೌರೀಶ ಸಾಂಗೋಲಿ, ಸುಧಾ ನಾಟೀಕಾರ, ಸುರೇಶ ಪಾಟೀಲ, ಚಿದಾನಂದ ತೇಲಿ, ಶಿವಣ್ಣ ರೊಳ್ಳಿ, ಮಲ್ಲಮ್ಮ ಪಾಟೀಲ, ಭುವನೇಶ್ವರಿ, ಗೀತಾ ಪಾಟೀಲ, ಹಡಪದ, ಬಳಮಕರ, ಶಿವು ಕಾಂಬಳೆ, ಸುಭಾಸ ಇತರರು ಉಪಸ್ಥಿತರಿದ್ದರು.

Latest News

‘ಕಾಲುವೆಗೆ ನೀರು ಬಿಡಿ,ಇಲ್ಲವೇ ಸಾಯಲು ವಿಷ ಕೊಡಿ’

‘ಕಾಲುವೆಗೆ ನೀರು ಬಿಡಿ,ಇಲ್ಲವೇ ಸಾಯಲು ವಿಷ ಕೊಡಿ’

ಮುದ್ದೇಬಿಹಾಳ : ಬರಗಾಲ ಬಿದ್ದಿದೆ.ಹೊಲದಲ್ಲಿ ಬಿತ್ತಿರುವ ಬೆಳೆಗಳು ಒಣಗಿ ಹೋಗುತ್ತಿವೆ.ದನ-ಕರುಗಳಿಗೆ ಕುಡಿಯಲು ನೀರಿಲ್ಲ. ಹೊಲಕ್ಕೆ

ಕಲಾವಿದ,ಶಿಕ್ಷಕ ಗೋಪಾಲ ಹೂಗಾರ ಮಾದರಿ ನಡೆ: ಜನುಮದಿನದ ನಿಮಿತ್ಯ  ಸರ್ಕಾರಿ ಶಾಲೆಯ 500 ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್

ಕಲಾವಿದ,ಶಿಕ್ಷಕ ಗೋಪಾಲ ಹೂಗಾರ ಮಾದರಿ ನಡೆ: ಜನುಮದಿನದ ನಿಮಿತ್ಯ ಸರ್ಕಾರಿ ಶಾಲೆಯ 500 ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್

ಮುದ್ದೇಬಿಹಾಳ : ಹಾಸ್ಯ ಕಲಾವಿದ ,ಶಿಕ್ಷಕ ಗೋಪಾಲ ಎನ್.ಹೂಗಾರ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸುವ

ಹೈಕೋರ್ಟ್ ಕದ ತಟ್ಟಿದ್ದ ನಾಲ್ವರಿಗೂ ಗೆಲುವು:       ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆ ಫಲಿತಾಂಶ ಪ್ರಕಟ

ಹೈಕೋರ್ಟ್ ಕದ ತಟ್ಟಿದ್ದ ನಾಲ್ವರಿಗೂ ಗೆಲುವು: ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆ ಫಲಿತಾಂಶ ಪ್ರಕಟ

ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆಯ ಫಲಿತಾಂಶ

ಮುದ್ದೇಬಿಹಾಳ ;ಅಂಜುಮನ್‌ಗೆ 92.95% ರಷ್ಟು ಮತದಾನ

ಮುದ್ದೇಬಿಹಾಳ ;ಅಂಜುಮನ್‌ಗೆ 92.95% ರಷ್ಟು ಮತದಾನ

ಮುದ್ದೇಬಿಹಾಳ : ತೀವ್ರ ತುರುಸಿನಿಂದ ಕೂಡಿದ ಇಲ್ಲಿನ ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆಯಲ್ಲಿ ಸೋಮವಾರ

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಈ ವರ್ಷ ಹಿಂದೆoದಿಗಿoತಲೂ ಅಧಿಕ ಪ್ರಮಾಣದಲ್ಲಿ ಬರಗಾಲ ಕಾಡುತ್ತಿದೆ.ಆದರೆ ಕೆಲವರು ಬರಗಾಲವನ್ನು ಸರ್ಕಾರದ ಹೆಸರಿಗೆ ಕೆಟ್ಟ ಹೆಸರು ತರಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ದೇವರ ದಯೆಯಿಂದ ಮಹಾರಾಷ್ಟçದಲ್ಲಿ ಮಳೆಯಾಗಿ ಆಲಮಟ್ಟಿ ಡ್ಯಾಂಗೆ ನೀರು ಬಂದಿದೆ. ಕುಡಿಯಲು, ಜಾನುವಾರುಗಳಿಗೆ,ಸ್ವಲ್ಪ ಬೆಳೆಗಳಿಗೆ ಬಳಸಿಕೊಳ್ಳಲು ಅನುಕೂಲವಾಗಿದೆ.ಆದರೆ ಕೆಲವರು ನೆಪಕ್ಕೋಸ್ಕರ ಆಡಳಿತ

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ;              ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ; ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಮುದ್ದೇಬಿಹಾಳ / ನಾಲತವಾಡ : ಗ್ರಾಹಕರ ಉತ್ತಮ ಸಹಕಾರ ಹಾಗೂ ಶೇರುದಾರರ ಬೆಂಬಲ,ಆಡಳಿತ ಮಂಡಳಿಯ ಮಾರ್ಗದರ್ಶನ ಸಿಬ್ಬಂದಿ ವರ್ಗದವರ ನಿರಂತರ ಪರಿಶ್ರಮದಿಂದ ಬ್ಯಾಂಕಿಗೆ 1.15 ಕೋಟಿ ರೂ.ಲಾಭ ಗಳಿಸಿದೆ ಎಂದು ನಾಲತವಾಡದ ಶ್ರೀ ಶರಣ ವೀರೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎಸ್.ಪಾಟೀಲ ಹೇಳಿದರು. ಇಲ್ಲಿಯ ರತ್ನ ಸಂಗಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಸಂಘದ 30ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ಸುಮಾರು ಇಲ್ಲಿಯವರೆಗೆ