ಮುದ್ದೇಬಿಹಾಳ : ಜೀವ ಪಣಕ್ಕಿಟ್ಟು ಅಂತರಾಜ್ಯದ ಕಳ್ಳರನ್ನು ಹೆಡೆಮುರಿ ಕಟ್ಟಿದ ದಕ್ಷ ಅಧಿಕಾರಿ ಸಂಜಯ ತಿಪರೆಡ್ಡಿ ಭವಿಷ್ಯದಲ್ಲಿ ತಾವು ಸಲ್ಲಿಸುವ ಇಲಾಖೆಯಲ್ಲಿ ಉನ್ನತ ಸೇವೆ ಗಳಿಸುವಂತಾಗಲಿ ಎಂದು ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯ ನಿರ್ದೇಶಕ ಸುರೇಶಗೌಡ ಪಾಟೀಲ ಇಂಗಳಗೇರಿ ಹೇಳಿದರು.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವರ್ಗಾವಣೆಗೊಂಡಿರುವ ಪಿಎಸ್ಐ ಸಂಜಯ ತಿಪರೆಡ್ಡಿ ದಂಪತಿಯ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ನೇರ,ನಿಷ್ಠುರ ಅಧಿಕಾರಿಯಾಗಿದ್ದ ತಿಪರೆಡ್ಡಿ ಅವರು ರಾಜ್ಯದಲ್ಲಿಯೇ ಮಾದರಿ ಸೇವೆ ನೀಡಿದವರು.ಅಂತವರಿಗೆ ಪದೋನ್ನತಿಯವರೆಗೂ ನಮ್ಮಲ್ಲಿ ಉಳಿಸಿಕೊಳ್ಳಲಾಗಲಿಲ್ಲವಲ್ಲ ಎಂಬ ಬೇಸರ ನಮ್ಮನ್ನು ಕಾಡುತ್ತಿದೆ ಎಂದರು.
ಸಿಪಿಐ ಮೊಹ್ಮದ ಫಸಿವುದ್ದೀನ,ಮುಖಂಡ ಸಂಗನಗೌಡ ಕರೇಕಲ್ ಮಾತನಾಡಿ, ಮುದ್ದೇಬಿಹಾಳ ಠಾಣೆಗೆ ಗೌರವ ಬರುವಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ರಾಜ್ಯದಲ್ಲಿಯೇ ಕಳ್ಳತನ ಪ್ರಕರಣವೊಂದರಲ್ಲಿ ಉತ್ತಮ ಸೇವೆ ಸಲ್ಲಿಸಿದ ತಿಪರೆಡ್ಡಿ ಅವರ ಜೀವನ ಭವಿಷ್ಯದಲ್ಲಿ ಸಂತಸದಿoದ ಕೂಡಿರಲಿ ಎಂದು ಹೇಳಿದರು.
ಪಿಎಸೈ ಸಂಜಯ ತಿಪರೆಡ್ಡಿ ಹಾಗೂ ಅವರ ಪತ್ನಿ ಉಷಾ ತಿಪರೆಡ್ಡಿ ಅವರನ್ನು ಸನ್ಮಾನಿಸಲಾಯಿತು.ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಸದಸ್ಯ ಬಸನಗೌಡ ಪಾಟೀಲ,ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ,ತಾಪಂ ಇಓ ಸಂಗನಗೌಡ ಬಿರಾದಾರ,ಪುರಸಭೆ ಮಾಜಿ ಸದಸ್ಯೆ ಸಹನಾ ಬಡಿಗೇರ,ಮಾಜಿ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ,ನಿoಗರಡ್ಡಿ ಮಂಗ್ಯಾಳ,ರಾಯನಗೌಡ ತಾತರೆಡ್ಡಿ,ಅಪ್ಪು ನಾಡಗೌಡ,ಅಶೋಕ ನಾಡಗೌಡ,ರುದ್ರಗೌಡ ಅಂಗಡಗೇರಿ,ಶoಕ್ರಮ್ಮ ಪಾಟೀಲ,ಬಾಪುಗೌಡ ಪಾಟೀಲ,ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯ ಆಡಳಿತಾಧಿಕಾರಿ ಸಚಿನಗೌಡ ಪಾಟೀಲ,ಚಂದ್ರಶೇಖರ ಕುಪ್ಪಿ,ರಾಜಶೇಖರ ಕರಡ್ಡಿ,ಮುತ್ತಣ್ಣ ಕಡಿ, ವೀರೇಶ ಪಾಟೀಲ ಸೇರಿದಂತೆ ಬಾಲಾಜಿ ಶುಗರ್ಸ್ ನಿರ್ದೇಶಕ ಮಂಡಳಿ ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪುರಸಭೆ,ತಾಪಂ ,ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ಪದಾಧಿಕಾರಿಗಳು ಪಿಎಸೈ ತಿಪರೆಡ್ಡಿ ದಂಪತಿಯನ್ನು ಸನ್ಮಾನಿಸಿದರು.ಸಿದ್ದು ಹೆಬ್ಬಾಳ ಹಾಗೂ ಮಹದೇವ ಕುಂಬಾರ ನಿರೂಪಿಸಿದರು.







