ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿರುವ ಜನಪದ ಕಲೆಗಳನ್ನು,ಕಲಾವಿದರನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದು ಎಸ್.ಜಿ.ವಿ.ಸಿ ವಿದ್ಯಾಪ್ರಸಾರಕ ಟ್ರಸ್ಟ್ ಕಾರ್ಯದರ್ಶಿ ಅಶೋಕ ತಡಸದ ಹೇಳಿದರು.
ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಜಾನಪದ ಕಲೆಗಳನ್ನು ಬಲ್ಲವರು ಗ್ರಾಮೀಣ ಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ.ಆದರೆ ಅವರಿಗೆ ಆರ್ಥಿಕ ಶಕ್ತಿ ಇಲ್ಲವಾಗಿದೆ.ಪರಿಷತ್ತಿನ ಮೂಲಕ ಆರ್ಥಿಕ ಶಕ್ತಿ ತುಂಬಲು ಸರ್ಕಾರದ ಅನುದಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಪರಿಷತ್ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಸರಕೋಡ ಪವಾಡ ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಕೆ.ವಾಯ್.ಬಿರಾದಾರ ಮಾತನಾಡಿ, ಜನರ ಜೀವನದಲ್ಲಿ ಜನಪದ ಕಲೆ ಹಾಸು ಹೊಕ್ಕಾಗಿದೆ.ಹಂತಿಪದ,ಸೋಬಾನೆ ಪದ,ಬೀಸುವಕಲ್ಲಿನ ಪದ,ಒಗಟು ಸೇರಿದಂತೆ ಜನಪದ ಸಾಹಿತ್ಯದ ಕ್ಷೇತ್ರದ ಅಗಾಧವಾಗಿದೆ.ಈ ಕ್ಷೇತ್ರದ ಉಳಿವಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಉಪನ್ಯಾಸಕ ಪ್ರಕಾಶ ನರಗುಂದ ಸಂಪಾದನೆಯ ಜನಪದ ಚರಗ ಕೃತಿಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.ಕುಂಟೋಜಿ ಭಾವೈಕ್ಯತೆ ಹಿರೇಮಠದ ಚೆನ್ನವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು.ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್.ಪಾಟೀಲ,ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ,ಹಾಲಿ ಅಧ್ಯಕ್ಷ ಕಾಮರಾಜ ಬಿರಾದಾರ,ಪಿಡಬ್ಲೂö್ಯಡಿ ಎಇಇ ಎ.ಬಿ.ರೆಡ್ಡಿ,ಶಸಾಪ ಅಧ್ಯಕ್ಷ ಸಿ.ಜಿ.ನಾಗರಾಳ,ರಾಜ್ಯ ಖಾಸಗಿ ಐಟಿಐ ಕಾಲೇಜುಗಳ ಸಂಘದ ಅಧ್ಯಕ್ಷ ಎಸ್.ಎಂ.ನೆರಬೆAಚಿ,ಸಮಾಜ ಸೇವಕಿ ಕಾಶೀಬಾಯಿ ರಾಂಪೂರ,ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಎ.ಆರ್.ಮುಲ್ಲಾ,ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷಿö್ಮÃ ಹಿರೇಮಠ ಇದ್ದರು.
ವಿವಿಧ ಗ್ರಾಮಗಳ ಜಾನಪದ ಕಲಾವಿದರಾದ ಗುರುಪಾದಪ್ಪ ಚಲವಾದಿ, ಬಿ.ಎಸ್.ಬಿರಾದಾರ,ಬಂದಗೀಸಾಬ ಬಿಲಕೇರಿ,ಸುಭಾಷ ಚಲವಾದಿ, ಶೇಖಪ್ಪ ಕತ್ತಿ,ಸಿದ್ದಪ್ಪ ಅಂಕನಾಳ,ರಮೇಶ ಭಜಂತ್ರಿ,ಚೆನ್ನಮ್ಮ ಪಾಟೀಲ,ಶಿವಪ್ಪ ಅಮರಗೋಳ,ಎಂ.ಪಿ.ವಾಳದವರ,ಸುಪ್ರೀತಾ ಗೋನಾಳ,ಎಸ್.ಕೆ.ಘಾಟಿ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಕರ್ನಾಟಕ ಜಾನಪದ ಪರಿಷತ್ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು.ಚಂದ್ರಶೇಖರ ಕಲಾಲ ಸ್ವಾಗತಿಸಿದರು.ಎಸ್.ಕೆ.ಘಾಟಿ ನಿರೂಪಿಸಿದರು.







