ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ ಮಾಡಲಾಗಿದೆ.ಅಧ್ಯಕ್ಷ,ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರೆ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಸಲಾಯಿತು.

ನೂತನ ಅಧ್ಯಕ್ಷರಾಗಿ ಅಲ್ಲಾಭಕ್ಷö್ಯ ದೇಸಾಯಿ, ಕಾರ್ಯದರ್ಶಿಯಾಗಿ ನೂರೇಹುಸೇನ್ ನದಾಫ,ಖಜಾಂಚಿಯಾಗಿ ಲಾಲಸಾಬ ಮೋಮಿನ ಅವಿರೋಧವಾಗಿ ಆಯ್ಕೆಯಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಸುಲೇಮಾನ ಮಮದಾಪೂರ ಹಾಗೂ ಇರ್ಫಾನ್ ಕೂಡಗಿ ಮಧ್ಯೆ ಪೈಪೋಟಿ ನಡೆಯಿತು.ಇದರಲ್ಲಿ ಕೈ ಎತ್ತುವ ಮೂಲಕ ಮತದಾನ ಮಾಡಲಾಯಿತು.16 ಮತಗಳ ಬಹುಮತದೊಂದಿಗೆ ಇರ್ಫಾನ್ ಕೂಡಗಿ ಉಪಾಧ್ಯಕ್ಷರಾಗಿ ಚುನಾಯಿತರಾದರೆ ಅವರ ಪ್ರತಿಸ್ಪರ್ಧಿ ಸುಲೇಮಾನಗೆ 9 ಮತಗಳು ಲಭಿಸಿ ಚುನಾವಣೆಯಲ್ಲಿ ಪರಾಭವಗೊಂಡರು.

ಆಯ್ಕೆ ಪ್ರಕ್ರಿಯೆ ನಡೆಸಿದ ಅಂಜುಮನ್ ಆಡಳಿತಾಧಿಕಾರಿ ಹಾಗೂ ವಕ್ಭ್ ಬೋರ್ಡ್ ಜಿಲ್ಲಾ ಅಧಿಕಾರಿ ತಬಸ್ಸುಮ್ ಮಹೇಶವಾಡಗಿ(ಮುಲ್ಲಾ), ಕಮೀಟಿಯ ನಿಯಮಾವಳಿಯಂತೆ ಚುನಾವಣೆ ನಡೆಸಲಾಗಿದೆ.ನೋಟಿಸ್ ಕೊಡುವ ವಿಚಾರದಲ್ಲಿ ಉಂಟಾಗಿದ್ದ ಗೊಂದಲದ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ವ ಸದಸ್ಯರು ಪದಾಧಿಕಾರಿಗಳ ಆಯ್ಕೆಗೆ ನಮ್ಮ ಸಹಮತ ಇದೆ ಎಂದು ತಿಳಿಸಿದ್ದರಿಂದ ತ್ವರಿತವಾಗಿ ಪದಾಧಿಕಾರಿಗಳ ಆಯ್ಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಕೊಡುವುದರಲ್ಲಿ ವಿಳಂಬಗೊoಡಿರುವ ಕುರಿತು ಸುದ್ದಿಗಾರರು ಪ್ರಶ್ನೆ ಮಾಡಿದಾಗ ಉತ್ತರಿಸಿದ ವಕ್ಭ್ ಅಧಿಕಾರಿ ಮುಲ್ಲಾ, ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿ ಚುನಾಯಿತ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಗಿದೆ.ವಿಳಂಬವಾಗಿರುವುದು ನಿಜ.ಸೋಮವಾರದಂದೇ ಎಲ್ಲ ಸದಸ್ಯರಿಗೂ ಪ್ರಮಾಣ ಪತ್ರ ನೀಡಲಾಗಿದೆ ಎಂದು ಉತ್ತರಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಚುನಾಯಿತರಾದ 25 ಸದಸ್ಯರು ಆಯ್ಕೆ ಪ್ರಕ್ರಿಯೆಯಲ್ಲಿ ಹಾಜರಾಗಿದ್ದರು.

ಚುನಾವಣೆ ಪ್ರಕ್ರಿಯೆಯಲ್ಲಿ ಹಾಜರಿದ್ದ ಸದಸ್ಯರು:
ಅಬ್ದುಲಮಜೀದ ಮಕಾನದಾರ,ಡೋಂಗ್ರಿಸಾಬ ಢವಳಗಿ,ಅಲ್ಲಾಭಕ್ಷ ದೇಸಾಯಿ,ಇರ್ಫಾನಅಲಿ ಕೂಡಗಿ,ರಂಜಾನ್ ನದಾಫ,ನೂರೇಹುಸೇನ್ ನದಾಫ, ಅಬ್ದುಲಗಫೂರ ಮಕಾನದಾರ,ಲಾಲಸಾಬ ಮೋಮಿನ,ಅಬ್ದುಲಅಜೀಜ ನಾಯ್ಕೋಡಿ,ಇಸಾಕಶಾ ಮಕಾನದಾರ,ಮಹ್ಮದರಫೀಕ ನಾಗರಾಳ,ಹುಸೇನಬಾದಶಾ ಸಾಲಿಮನಿ, ಯಾಸೀನ ಸೋಠೆ,ಅತಾವುಲ್ಲಾಷಾ ಮಕಾನದಾರ,ಇಸ್ಮಾಯಿಲ್ ಗೊಳಸಂಗಿ,ಅಸ್ಲA ನಾಗೂರ,ಶಬ್ಬೀರ ಕಲ್ಮನಿ,ಇಸ್ಮಾಯಿಲ ಗೋಲಂದಾಜ,ಮಹೆಬೂಬ ಮುಲ್ಲಾ,ಉಮರಫಾರೂಕ

Latest News

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಮುದ್ದೇಬಿಹಾಳ : ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹುಲ್ಲೂರು ಗ್ರಾಮದ ಎಸ್.ಎನ್.ಡಿ. ನ್ಯಾಷನಲ್ ಪಬ್ಲಿಕ್ ಶಾಲೆಯ

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಪವಿತ್ರವಾದ ಸಂಸ್ಥೆಯಾಗಿದೆ. ಅಂಜುಮನ್ ಕಮೀಟಿ ಹದಿನೈದು ವರ್ಷಗಳಿಂದ ಅಭಿವೃದ್ಧಿ

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ  ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಮುದ್ದೇಬಿಹಾಳ : ಅಂಜುಮನ್ ಇಸ್ಲಾಂ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡುವ ಕಾರ್ಯ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ;                                        ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ; ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಮುದ್ದೇಬಿಹಾಳ : ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಮಹಾನ್ ಸಂತ ಬ್ರಹ್ಮಶ್ರೀ

ಟ್ಯಾಕ್ಸಿ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಭಾವೈಕ್ಯತೆ ಸಂದೇಶ

ಟ್ಯಾಕ್ಸಿ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಭಾವೈಕ್ಯತೆ ಸಂದೇಶ

ಮುದ್ದೇಬಿಹಾಳ : ಮುಸ್ಲಿಂರ ಹಬ್ಬಕ್ಕೆ ಹಿಂದೂಗಳು ಕೈಜೋಡಿಸುವುದು,ಹಿಂದೂಗಳ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಹಕಾರ ನೀಡುವ ಕಾರ್ಯಗಳಿಂದ ಸಮಾಜದಲ್ಲಿ ಭಾವೈಕ್ಯತೆ ಸೌಹಾರ್ದತೆ ನೆಲೆಸುತ್ತದೆ ಎಂದು ಗಣಿತ ಲೋಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಸವರಾಜ ಗುರವ ಹೇಳಿದರು. ಪಟ್ಟಣದ ಪುರಸಭೆ ಮುಂದೆ ಇರುವ ಗಜಾನನ ಟ್ಯಾಕ್ಸಿ ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಏರ್ಪಡಿಸಿದ್ದ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾತಿ,ಧರ್ಮಗಳ ಮಧ್ಯೆ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ದೇಶದ ಹಲವೆಡೆ ವಿಷಮ ಪರಿಸ್ಥಿತಿ ಸೃಷ್ಟಿಸುವ ಕಾರ್ಯ

ಹಸಿರು,ಅರ್ಧ ಚಂದ್ರ ಮುಸ್ಲಿಂರ ನಿಶಾನೆಯಲ್ಲ-ಲಾಲ್‌ಹುಸೇನ್ ಕಂದಗಲ್

ಹಸಿರು,ಅರ್ಧ ಚಂದ್ರ ಮುಸ್ಲಿಂರ ನಿಶಾನೆಯಲ್ಲ-ಲಾಲ್‌ಹುಸೇನ್ ಕಂದಗಲ್

ಮುದ್ದೇಬಿಹಾಳ : ಹಸಿರು ಬಣ್ಣ,ಅರ್ಧ ಚಂದ್ರಾಕೃತಿ,ನಕ್ಷತ್ರ ಇವು ಮುಸ್ಲಿಂರ ಗುರುತುಗಳಲ್ಲ.ಅದೇ ರೀತಿ ಕೇಸರಿ ಬಣ್ಣವೂ ಹಿಂದೂಗಳದ್ದಲ್ಲ.ಎಲ್ಲ ಬಣ್ಣಗಳು ಯಾವುದೇ ಒಂದು ಸಮುದಾಯಕ್ಕೆ ಸೇರಿಲ್ಲ.ಲಾಂಛನಗಳನ್ನು ನಾವು ಮಾಡಿಕೊಂಡು ನಮ್ಮ ನಮ್ಮಲ್ಲಿ ಬೇಧಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ ಎಂದು ಇಳಕಲ್‌ನ ಖ್ಯಾತ ಪ್ರವಚನಕಾರ ಲಾಲ್‌ಹುಸೇನ್ ಕಂದಗಲ್ ಹೇಳಿದರು. ಪಟ್ಟಣದ ಸಾರಿಗೆ ಘಟಕದಲ್ಲಿ ಬುಧವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವನ ಘನತೆ ಎತ್ತಿ ಹಿಡಿಯುವ ಕೆಲಸವನ್ನು ಪ್ರವಾದಿ