ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಮುದ್ದೇಬಿಹಾಳ : ತಂಗಡಗಿ ಇಳಿಜಾರಿನಿಂದ ಶಿರೋಳ ಗ್ರಾಮದ ಬಳಿ ಹಾಯ್ದು ಹೋಗಿರುವ ಕೆಬಿಜೆಎನ್‌ಎಲ್‌ನ ಎಡದಂಡೆ ಕಾಲುವೆಯ ಅಕ್ಕಪಕ್ಕದಲ್ಲಿ ಒಂದು ಕಿ.ಮೀವರೆಗೆ ರಕ್ಷಣಾ ಗೋಡೆ ನಿರ್ಮಿಸಬೇಕು ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ತಿಳಿಸಿದ್ದಾರೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ್ದ ಅವರು, ಕಾಲುವೆಯಲ್ಲಿ ಬಿದ್ದು ಮೃತಪಟ್ಟ ಕೊಣ್ಣೂರ ಕುಟುಂಬದವರಿಗೆ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಭಾಗದಲ್ಲಿ ಕೆಬಿಜೆಎನ್‌ಎಲ್ ಕಾಲುವೆ ಹಾಯ್ದು ಹೋಗಿದ್ದು ಪ್ರತಿ ಎರಡ್ಮೂರು ತಿಂಗಳಿಗೊಮ್ಮೆ ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.ಇದನ್ನು ಅಪಾಯದ ವಲಯ ಎಂದು ಗುರುತಿಸಿ ರಕ್ಷಣಾ ಗೋಡೆ ನಿರ್ಮಿಸಲು ಕ್ರಮ ಜರುಗಿಸಬೇಕು ಎಂದು ಹೇಳಿದರು.

ಪರಿಶಿಷ್ಟ ಜಾತಿಯಲ್ಲಿ ಬರುವ ಸುಡಗಾಡಸಿದ್ದ ಸಮಾಜ ಅತ್ಯಂತ ಕಡುಬಡತನದಲ್ಲಿದ್ದು ಮೂವರು ಓದುತ್ತಿದ್ದರು.ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾಗಲೀ, ಸರ್ಕಾರದಿಂದ ಸ್ಥಾಪಿಸಲಾದ ಅಲೆಮಾರಿ ನಿಗಮದಿಂದ ಸಹಾಯಧನ ದೊರಕಿಸಿಕೊಡುವ ಕಾರ್ಯವನ್ನು ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಮಾಡಬೇಕು ಎಂದು ಒತ್ತಾಯಿಸುವುದಾಗಿ ಹೇಳಿದರು.ಇದೇ ವೇಳೆ ಅಸ್ಕಿ ಫೌಂಡೇಶನ್‌ದಿoದ ಮೃತರ ಕುಟುಂಬದವರಿಗೆ 50 ಸಾವಿರ ರೂ.ಧನಸಹಾಯ ಮಾಡಿದರು.

ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಕಾಂಗ್ರೆಸ್ ಮುಖಂಡ ವಾಯ್.ಎಚ್.ವಿಜಯಕರ್,ರಾಮನಗೌಡ ಹೊಸಮನಿ, ಬಸಲಿಂಗಪ್ಪ ರಕ್ಕಸಗಿ,ಉದಯ ರಾಯಚೂರ,ರಂಜಾನ್ ನದಾಫ ಮೊದಲಾದವರು ಇದ್ದರು.

Latest News

ಕಂದಗನೂರ-ಮುದೂರ ರಸ್ತೆ ದುರಸ್ತಿ : ರೈತರ ಹೊಲಗಳ ದರ ದುಪ್ಪಟ್ಟು-ಶಾಸಕ ಸಿ.ಎಸ್.ನಾಡಗೌಡ

ಕಂದಗನೂರ-ಮುದೂರ ರಸ್ತೆ ದುರಸ್ತಿ : ರೈತರ ಹೊಲಗಳ ದರ ದುಪ್ಪಟ್ಟು-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿ ಹಳ್ಳಿಗಳನ್ನು ಸಂಪರ್ಕಿಸುವ ರೈತರ ಹೊಲಗಳಿಗೆ ಹೋಗುವ ರಸ್ತೆಗಳ ಸುಧಾರಣೆಯಿಂದ

ನಾನು  ಕಾಂಗ್ರೆಸ್  ಹೈಕಮಾಂಡ್  ಲಿಸ್ಟ್’ನಲ್ಲಿರುವೆ-C.S.ನಾಡಗೌಡ

ನಾನು  ಕಾಂಗ್ರೆಸ್  ಹೈಕಮಾಂಡ್  ಲಿಸ್ಟ್’ನಲ್ಲಿರುವೆ-C.S.ನಾಡಗೌಡ

ಮುದ್ದೇಬಿಹಾಳ : ‘ಕೆಲವರು ನಾನು ಡಿಕೆಶಿ ಲಿಸ್ಟ್’ನಲ್ಲಿರುವೆ,ಇನ್ನು ಕೆಲವರು ಸಿದ್ಧರಾಮಯ್ಯ ಲಿಸ್ಟ್’ನಲ್ಲಿರುವೆ ಎನ್ನುತ್ತಿದ್ದಾರೆ.ನಾನು ಅವರಿಬ್ಬರ

ಪತ್ರಕರ್ತರು ಒಗ್ಗಟ್ಟಾಗದಿದ್ದರೆ ರಾಜಕಾರಣಿಗಳು ಸವಾರಿ ಮಾಡುವರು : ಕೆ. ಶಿವಕುಮಾರ್

ಪತ್ರಕರ್ತರು ಒಗ್ಗಟ್ಟಾಗದಿದ್ದರೆ ರಾಜಕಾರಣಿಗಳು ಸವಾರಿ ಮಾಡುವರು : ಕೆ. ಶಿವಕುಮಾರ್

ಚಾಮರಾಜನಗರ : ಪತ್ರಕರ್ತರು ಒಗ್ಗಟ್ಟಾಗದಿದ್ದರೆ ರಾಜಕಾರಣಿಗಳು ನಿಮ್ಮಗಳ ಮೇಲೆ ಸವಾರಿ ಮಾಡುವರು ಎಂದು ವಿಧಾನ

ರೈತರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ತಾಲ್ಲೂಕು ಕೃಷಿ ಕಚೇರಿಗೆ ಮುತ್ತಿಗೆ

ರೈತರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ತಾಲ್ಲೂಕು ಕೃಷಿ ಕಚೇರಿಗೆ ಮುತ್ತಿಗೆ

ಬೀದರ್ ;- ರಾಜ್ಯದಲ್ಲಿ ಸಂಭವಿಸಿರುವ ನೆರೆ, ಬರ, ಪ್ರವಾಹ ಮೊದಲಾದ ಪ್ರಕೃತಿ ವಿಕೋಪಗಳಿಂದ ರೈತರು,

ಗುಳಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೈಕ್ ಸೌಂಡ್ ಸಿಸ್ಟಮ್ ದೇಣಿಗೆ

ಗುಳಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೈಕ್ ಸೌಂಡ್ ಸಿಸ್ಟಮ್ ದೇಣಿಗೆ

ಗುಳಬಾಳ : ಹುಣಸಗಿ ತಾಲ್ಲೂಕಿನ ಗುಳಬಾಳ ಗ್ರಾಮದ ನಿವಾಸಿಯಾದ ಶ್ರೀಮತಿ ಯಂಕಮ್ಮ ಬಮ್ಮನಳ್ಳಿ ಅವರು ಕಲಿತ ಶಾಲೆಗೆ ಮೈಕ್ ಸೌಂಡ್ ಸಿಸ್ಟಮ್ ದೇಣಿಗೆಯಾಗಿ ನೀಡಿದರು. "ನಾನು ಕಲಿತ ಶಾಲೆ ನನ್ನ ಹೆಮ್ಮೆ" ಎಂದು ತಿಳಿದು ಶಾಲೆಯಲ್ಲಿ ನಡೆಯುವ ರಾಷ್ಟ್ರೀಯ ಕಾರ್ಯಕ್ರಮಗಳು ಇನ್ನಿತರೆ ಜಯಂತಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ತಮ್ಮ ವೈಯಕ್ತಿಕ ಹಣದಲ್ಲಿ ಶಾಲೆಗೆ ದೇಣಿಗೆ ನೀಡಿದರು. ಹುಣಸಗಿ ತಾಲೂಕಿನ ಪದವಿದರರೂ ತಮ್ಮ ಊರಿನ ಶಾಲೆಗೆ ದೇಣಿಗೆ ನೀಡಿ ಮಾದರಿಯಾಗಿ

ಬಸರಕೋಡ ಪಿ.ಕೆ.ಪಿ.ಎಸ್ :                                         ಅಧ್ಯಕ್ಷರಾಗಿ ಹೇಮರೆಡ್ಡಿ ಮೇಟಿ, ಉಪಾಧ್ಯಕ್ಷರಾಗಿ ಬಾಬು ಸೂಳಿಭಾವಿ ಅವಿರೋಧ ಆಯ್ಕೆ

ಬಸರಕೋಡ ಪಿ.ಕೆ.ಪಿ.ಎಸ್ : ಅಧ್ಯಕ್ಷರಾಗಿ ಹೇಮರೆಡ್ಡಿ ಮೇಟಿ, ಉಪಾಧ್ಯಕ್ಷರಾಗಿ ಬಾಬು ಸೂಳಿಭಾವಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೇಮರೆಡ್ಡಿ ಮೇಟಿ,ಉಪಾಧ್ಯಕ್ಷರಾಗಿ ಬಾಬು ಸೂಳಿಭಾವಿ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ತಲಾ ಒಂದೊAದೇ ನಾಮಪತ್ರ ಸಲ್ಲಿಕೆ ಆದ ಹಿನ್ನೆಲೆಯಲ್ಲಿ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ, ಸಹಕಾರ ಅಭಿವೃದ್ಧಿ ಅಧಿಕಾರಿ ವಿ.ಎಸ್.ಉತ್ನಾಳ ತಿಳಿಸಿದರು. ಎರಡನೇ ಅವಧಿಗೆ