ಸರಕಾರಿ ನೌಕರರ ಸಂಘಕ್ಕೆ ಚುನಾವಣೆ : ಬಿರುಸಿನ ಮತದಾನ

ಸರಕಾರಿ ನೌಕರರ ಸಂಘಕ್ಕೆ ಚುನಾವಣೆ : ಬಿರುಸಿನ ಮತದಾನ

ಮುದ್ದೇಬಿಹಾಳ : ರಾಜ್ಯ ಸರ್ಕಾರಿ ನೌಕರರ ಸಂಘದ ಒಂದು ನಿರ್ದೇಶಕ ಸ್ಥಾನಕ್ಕೆ ಸೋಮವಾರ ಮತದಾನ ಕಾರ್ಯ ನಡೆದಿದ್ದು ಶಿಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದೆ.

ಶಿಕ್ಷಣ ಇಲಾಖೆಯ ಭಾಗ ಸಂಖ್ಯೆ 2 ರಲ್ಲಿ ಕಣದಲ್ಲಿ ಉಳಿದಿರುವ ಶಂಕರಗೌಡ ಬಿರಾದಾರ, ಬಂದಗಿಪಟೇಲ್ ಗಣಿಯಾರ ಮಧ್ಯೆ ಸ್ಪರ್ಧೆ ಇದೆ.
ಚುನಾವಣಾಧಿಕಾರಿ ಎಸ್.ಆರ್.ಕಟ್ಟಿಮನಿ , ಸಹಾಯಕ ಚುನಾವಣಾಧಿಕಾರಿ ಬಿ.ಎಚ್.ಹೂಗಾರ , ಸಹಾಯಕರಾಗಿ ವೆಂಕಟೇಶ ಅಂಬಿಗೇರ ಕಾರ್ಯನಿರ್ವಹಿಸುತ್ತಿದ್ದು ಬೆಳಗ್ಗೆ 9 ರಿಂದ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮದ್ಯಾಹ್ನ 12.30 ರವರೆಗಿನ ಮಾಹಿತಿಯಂತೆ 160 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಅಭ್ಯರ್ಥಿಗಳು ಪ್ರತ್ಯೇಕ ವಾಹನಗಳಲ್ಲಿ ಶಿಕ್ಷಕರನ್ನು ಕರೆತರುತ್ತಿರುವ ದೃಶ್ಯಗಳು ಕಂಡು ಬಂದವು. ಎ.ಎಸ್.ಐ ಬಿ.ಡಿ.ಪವಾರ ಅವರ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ.


ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳುವ ರೀತಿಯಲ್ಲಿ ಬಸವೇಶ್ವರ ವೃತ್ತಕ್ಕೆ ಪ್ರಚಾರದ ಬ್ಯಾನರ್ ಹಚ್ಚಿದ್ದು ಕಂಡು ಬಂದಿತು.



Latest News

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಅ.

ರಾಷ್ಟ್ರೀಯ ಹೆದ್ದಾರಿ 50-ಸ್ತಬ್ಧ :                                               ರೈತರು ಯಾರ ಗುಲಾಮರೂ ಅಲ್ಲ- ಶಾಂತಗೌಡ ಪಾಟೀಲ್

ರಾಷ್ಟ್ರೀಯ ಹೆದ್ದಾರಿ 50-ಸ್ತಬ್ಧ : ರೈತರು ಯಾರ ಗುಲಾಮರೂ ಅಲ್ಲ- ಶಾಂತಗೌಡ ಪಾಟೀಲ್

ವಿಜಯಪುರ : ಕಬ್ಬಿನ ಎಂ.ಎಸ್.ಪಿ ದರ ಹೆಚ್ಚಳ,ಕೇಂದ್ರ ಸರ್ಕಾರ ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೇನಾಲ್‌ನ್ನು ಖರೀದಿಸುವುದು

ಕಬ್ಬು ಬೆಳೆಗಾರರ ಜೊತೆ ಕೇಂದ್ರದ ಚರ್ಚೆ ವಿಫಲ:              ಅ.13 ರಿಂದ ನಿಡಗುಂದಿ-ಆಲಮಟ್ಟಿ ಹೈವೆಯಲ್ಲಿ ರಸ್ತೆ ತಡೆ

ಕಬ್ಬು ಬೆಳೆಗಾರರ ಜೊತೆ ಕೇಂದ್ರದ ಚರ್ಚೆ ವಿಫಲ: ಅ.13 ರಿಂದ ನಿಡಗುಂದಿ-ಆಲಮಟ್ಟಿ ಹೈವೆಯಲ್ಲಿ ರಸ್ತೆ ತಡೆ

ವಿಜಯಪುರ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅ.13ರಿಂದ ನಿಡಗುಂದಿ-ಆಲಮಟ್ಟಿ ರಾಷ್ಟ್ರೀಯ

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಮುದ್ದೇಬಿಹಾಳ : ರಾಜ್ಯದ ಸಕ್ಕರೆ ಕಾರ್ಖಾನೆಗಳ ಅಸೋಶಿಯೇಷನ್‌ದಲ್ಲಿ ಯಾವ ತೀರ್ಮಾನ ಕೈಗೊಂಡಿದೆಯೋ ಅದರಂತೆ ನಮ್ಮ

ವಣಕಿಹಾಳ ಗ್ರಾಮದಲ್ಲಿ ಘಟನೆ :                                                   ವಿದ್ಯುತ್ ಶಾಟ್ ಸರ್ಕಿಟ್: 12 ಎಕರೆಗೆ ಕಬ್ಬು ಬೆಂಕಿಗೆ ಆಹುತಿ

ವಣಕಿಹಾಳ ಗ್ರಾಮದಲ್ಲಿ ಘಟನೆ : ವಿದ್ಯುತ್ ಶಾಟ್ ಸರ್ಕಿಟ್: 12 ಎಕರೆಗೆ ಕಬ್ಬು ಬೆಂಕಿಗೆ ಆಹುತಿ

ಮುದ್ದೇಬಿಹಾಳ : ವಿದ್ಯುತ್ ಶಾಟ್ ಸರ್ಕಿಟ್‌ನಿಂದಾಗಿ ಹನ್ನೆರಡು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿನ ಬೆಳೆ ಹಾನಿಯಾಗಿರುವ ಘಟನೆ ತಾಲ್ಲೂಕಿನ ವಣಕಿಹಾಳ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ವಣಕಿಹಾಳ ಗ್ರಾಮದ ಶಾಂತಗೌಡ ಬಿರಾದಾರಗೆ ಸೇರಿದ 3.32 ಎಕರೆ,ಗೀತಾ ಬಿರಾದಾರಗೆ ಸೇರಿದ 2.02 ಎಕರೆ , ಶಿವನಗೌಡ ಬಿರಾದಾರಗೆ ಸೇರಿದ 4 ಎಕರೆ,ನಾಗಪ್ಪ ಹುಮನಾಬಾದ ಅವರಿಗೆ ಸೇರಿದ 5.10 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ.

ಕೆರೆಗಳಿಗೆ ನೀರು ಹರಿಸಲು ಆಗ್ರಹ:                                                                                                ಶಾಸಕ ನಾಡಗೌಡರಿಂದ ಸಚಿವ ಕಾಶಪ್ಪನವರಿಗೆ ಪತ್ರ

ಕೆರೆಗಳಿಗೆ ನೀರು ಹರಿಸಲು ಆಗ್ರಹ: ಶಾಸಕ ನಾಡಗೌಡರಿಂದ ಸಚಿವ ಕಾಶಪ್ಪನವರಿಗೆ ಪತ್ರ

ಮುದ್ದೇಬಿಹಾಳ : ವಿಜಯಪುರ ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಗಿದ್ದು, ಮುದ್ದೇಬಿಹಾಳ ಮತ್ತು ತಾಳಿಕೋಟಿ ತಾಲೂಕುಗಳಲ್ಲಿ ಬರದ ಛಾಯೆ ಗಾಢವಾಗಿದೆ. ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿದು ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ತೊಂದರೆಯಾಗಿದ್ದು ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಪತ್ರ ಬರೆದಿದ್ದಾರೆ. ಬರದ ಪರಿಸ್ಥಿತಿಯನ್ನು ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ