ಇಳಕಲ್: ನಗರದ ನಿಸರ್ಗ ಸಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆಯ ಆಕ್ಟಿವ್ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಛಾಯಾಗ್ರಹಕ ಕಿರಣ ಮಿಣಜಿಗಿ ಅವರು ನೆರವೇರಿಸಿದ್ರು.
Join Our Telegram: https://t.me/dcgkannada
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರಣ್ ಕುಮಾರ್ ಮೆಣಜಿಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಾಮದೇವ ಪಾಣಿಬಾತೆ ಜೊತೆಗೆ ಇಳಕಲ್ ಛಾಯಾಚಿತ್ರ ಸಮೋಹದ ನಾಗರಾಜ್ ನಗರಿ, ಪರಶುರಾಮ್ ಯಂಗಾಲಿ, ಗಂಗಾಧರ್ ಯರಗೇರಿ ರಾಘವೇಂದ್ರ ಮೈಲಿ, ಸಂಗಮೇಶ ಕತ್ತಿ, ಚಿದಾನಂದ ಮೈಲಿ. ನಿಸರ್ಗ ಸಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶರಣು ನಾಗಪ್ಪ ನೀಲಿ, ಸದಸ್ಯರಾದ ಮಂಜುನಾಥ್ ನೀಲಿ ಬಸವರಾಜ್ ನೀಲಿ ಶಾಲೆಯ ಮುಖ್ಯೋಪಾಧ್ಯಾಯನಿ ಸವಿತಾ ಶರಣು ನೀಲಿ ಶಿಕ್ಷಕಿಯರಾದ ಉಮಾ, ದೀಪ, ಮಂಜುಳ, ಅಂಜುಮ, ಸಂಗೀತ, ಪಲ್ಲವಿ, ಪ್ರಮೋದಿನಿ, ತುಳಸಿ ಸೇರಿದಂತೆ ಶಾಲೆಯ ಮುದ್ದು ಮಕ್ಕಳು ಪಾಲ್ಗೊಂಡಿದ್ದರು.
