ಮರ ಬಿದ್ದು ಕೆಎಸ್‌ಆರ್‌ಟಿಸಿ ನಿವೃತ್ತ ಕಂಟ್ರೋಲರ್ ಸ್ಥಳದಲ್ಲೇ ಸಾವು

ಮರ ಬಿದ್ದು ಕೆಎಸ್‌ಆರ್‌ಟಿಸಿ ನಿವೃತ್ತ ಕಂಟ್ರೋಲರ್ ಸ್ಥಳದಲ್ಲೇ ಸಾವು

ಮುದ್ದೇಬಿಹಾಳ : ಭಾರಿ ಬಿರುಗಾಳಿಗೆ ಬೃಹತ್ ಬೇವಿನ ಮರವೊಂದು ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಅಸುನೀಗಿದ ಘಟನೆ ತಾಲ್ಲೂಕಿನ ಢವಳಗಿ-ವಿಜಯಪುರ ರಸ್ತೆಯಲ್ಲಿ ಢವಳಗಿ ಗ್ರಾಮದ ಹತ್ತಿರ ಗುರುವಾರ ನಡೆದಿದೆ.

ಬಿದರಕುಂದಿ ಗ್ರಾಮದ ಕೆಎಸ್‌ಆರ್‌ಟಿಸಿ ನಿವೃತ್ತ ಕಂಟ್ರೋಲರ್ ಬಸಲಿಂಗಪ್ಪ ದೊಡ್ಡಬಸಪ್ಪ ಕಡೂರ(64)
ಅವರ ಮೇಲೆ ಭಾರಿ ಪ್ರಮಾಣದ ಮರ ಬಿದ್ದು ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.ಸಾಯಂಕಾಲ ಒಮ್ಮಿಂದೊಮ್ಮೆಲೆ ಬಿರುಗಾಳಿ ಬೀಸಿದೆ.ಇದರ ರಭಸಕ್ಕೆ ರಸ್ತೆ ಬದಿ ಇದ್ದ ಮರ ಉರುಳಿ ಬಿದ್ದಿದೆ.ಅದರ ಬುಡದಲ್ಲಿ ಬಸಲಿಂಗಪ್ಪ ಸಿಲುಕಿಕೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರ ಬಿದ್ದು ಸಂಚಾರ ಸ್ಥಗಿತಕೊಂಡಿದ್ದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪಿಎಸೈ ಸಂಜಯ ತಿಪರೆಡ್ಡಿ,ಪೊಲೀಸರು,ಅರಣ್ಯ ಇಲಾಖೆಯ ಸಿಬ್ಬಂದಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

Latest News

ಮಹಿಳೆ ಕಳೆದುಕೊಂಡ ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ತೋರಿದ ಯುವಕರು

ಮಹಿಳೆ ಕಳೆದುಕೊಂಡ ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ತೋರಿದ ಯುವಕರು

ಮುದ್ದೇಬಿಹಾಳ : ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುದ್ದೇಬಿಹಾಳ ನಗರದಿಂದ ಹಿರೇಮುರಾಳ ಗ್ರಾಮಕ್ಕೆ ತೆರಳುತ್ತಿದ್ದ

ಬಿಜೆಪಿ ರೈತ ಮೋರ್ಚಾ ಸ್ಥಾನಕ್ಕೆ ನಡಹಳ್ಳಿ ರಾಜೀನಾಮೆ ನೀಡಲಿ-ಸದ್ದಾಂ ಕುಂಟೋಜಿ

ಬಿಜೆಪಿ ರೈತ ಮೋರ್ಚಾ ಸ್ಥಾನಕ್ಕೆ ನಡಹಳ್ಳಿ ರಾಜೀನಾಮೆ ನೀಡಲಿ-ಸದ್ದಾಂ ಕುಂಟೋಜಿ

ಮುದ್ದೇಬಿಹಾಳ : ಬಾಗಲಕೋಟ ಉಪಚುನಾವಣೆಯಲ್ಲಿ ಬಾಗಲಕೋಟ ಜಿಲ್ಲೆಯ ರಾಂಪೂರ ಜಿಲ್ಲಾ ಪಂಚಾಯಿತಿಯಿAದ ಬಿಜೆಪಿಗೆ ಲೀಡ್

ಮುದ್ದೇಬಿಹಾಳ : ಮೇ.4 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ಮುದ್ದೇಬಿಹಾಳ : ಮೇ.4 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ಮುದ್ದೇಬಿಹಾಳ : ತಾಲೂಕಿನ ದೇವೂರ ಜಾಕ್‌ವೆಲ್‌ನಿಂದ ಮುದ್ದೇಬಿಹಾಳ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಮುಖ್ಯ

ಈ ಭಾಗದ ಶಾಸಕರು ಏನು ಮಾಡುತ್ತಿದ್ದಾರೆ ? – ಚೂನಪ್ಪ ಪೂಜಾರಿ ಪ್ರಶ್ನೆ

ಈ ಭಾಗದ ಶಾಸಕರು ಏನು ಮಾಡುತ್ತಿದ್ದಾರೆ ? – ಚೂನಪ್ಪ ಪೂಜಾರಿ ಪ್ರಶ್ನೆ

ಮುದ್ದೇಬಿಹಾಳ : ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡು ಸ್ಥಗಿತಗೊಂಡಿರುವ ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವುದಕ್ಕಾಗಿ

ಕ್ರೀಡಾಸ್ಫೂರ್ತಿಯಿಂದ ಆಟವಾಡಿ-ಶಾಸಕ ನಾಡಗೌಡ

ಕ್ರೀಡಾಸ್ಫೂರ್ತಿಯಿಂದ ಆಟವಾಡಿ-ಶಾಸಕ ನಾಡಗೌಡ

ಮುದ್ದೇಬಿಹಾಳ : ಬಿಸಿಲಿನ ತೀವ್ರತೆಯ ಮಧ್ಯೆ ಆರಂಭಗೊAಡಿರುವ ಹಾರ್ಡ ಟೆನ್ನಿಸ್‌ಬಾಲ್ ಕ್ರಿಕೇಟ್ ಟೂರ್ನಾಮೆಂಟ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಆರೋಗ್ಯದ ಕಡೆ ಲಕ್ಷö್ಯವಿಟ್ಟು ಕ್ರೀಡಾಸ್ಫೂರ್ತಿಯಿಂದ ಆಟವಾಡಿ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಎಂಬಿಎಲ್ ಗ್ರೂಪ್ಸ್ನಿಂದ ಚಾಂಪಿಯನ್ ಟ್ರೋಫಿ-2026 ಹಾರ್ಡಬಾಲ್ ಟೆನ್ನಿಸ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಗೆಳೆಯರ ಬಳಗದಿಂದ ಆಯೋಜಿಸಿದ ಕ್ರಿಕೇಟ್ ಟೂರ್ನಾಮೆಂಟ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಅಹಿಲ್ಯಾದೇವಿ

ಮೇ.3 ರಂದು ಮುದ್ದೇಬಿಹಾಳದಲ್ಲಿ ಬೃಹತ್ ಉದ್ಯೋಗಮೇಳ

ಮೇ.3 ರಂದು ಮುದ್ದೇಬಿಹಾಳದಲ್ಲಿ ಬೃಹತ್ ಉದ್ಯೋಗಮೇಳ

ಮುದ್ದೇಬಿಹಾಳ : ಬಿಎಎಸ್ ಸ್ಟಾಫಿಂಗ್ ಸಲೂಷನ್ಸ್ ಪ್ರೆöÊವೆಟ್ ಲಿಮಿಟೆಡ್ ಕಂಪನಿಯಿoದ ಮೇ.3 ರಂದು ಮುದ್ದೇಬಿಹಾಳದಲ್ಲಿ ಬೃಹತ್ ಉದ್ಯೋಗಮೇಳ ಆಯೋಜಿಸಲಾಗಿದೆ ಎಂದು ಬಿಎಎಸ್ ಇಂಟರನ್ಯಾಶನಲ್ ಸ್ಕೂಲ್ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಹೇಳಿದರು. ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ನರ್ಸರಿಯಿಂದ ನೌಕರಿಯವರೆಗೆ ಕಲ್ಪನೆಯಡಿ ದೇಶದ ಪ್ರಮುಖ ಯಂತ್ರೋಪಕರಣ ತಯಾರಿಕೆ ಘಟಕಗಳಾದ ಟಾಟಾ,ಐಫೊನ್ ಫಾಕ್ಸಕಾನ್,ಮಹೀಂದ್ರಾ ಸೇರಿದಂತೆ ಹತ್ತಕ್ಕೂ ಹೆಚ್ಚು ಕಂಪನಿಗಳಲ್ಲಿ ಉದ್ಯೋಗವಕಾಶ ಕಲ್ಪಿಸಲಾಗುತ್ತಿದ್ದು ಅಭ್ಯರ್ಥಿಗಳಿಗೆ