Dasara Vacation 2026: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಈ ಬಾರಿ ಬರೋಬ್ಬರಿ 20 ದಿನ ರಜೆ, ಯಾವಾಗಿಂದ?

Dasara Vacation 2026: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಈ ಬಾರಿ ಬರೋಬ್ಬರಿ 20 ದಿನ ರಜೆ, ಯಾವಾಗಿಂದ?

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶಿಕ್ಷಣ ಇಲಾಖೆ ಭರ್ಜರಿ ಸಿಹಿಸುದ್ದಿಯೊಂದನ್ನ ನೀಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ಮುಂಬರುವ ದಸರಾ ಹಬ್ಬದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಬರೋಬ್ಬರಿ 19 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ.

ಪ್ರತಿದಿನ ಓದು, ಬರಹ, ಪರೀಕ್ಷೆ ಎಂದು ಸುಸ್ತಾಗಿರುವ ಮಕ್ಕಳಿಗೆ ಈ ದೀರ್ಘಾವಧಿಯ ರಜೆಯು ಖಂಡಿತವಾಗಿಯೂ ಹೊಸ ಉಲ್ಲಾಸ ತರಲಿದೆ. ಈ ರಜೆಯು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ (ಖಾಸಗಿ) ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೂ ಅನ್ವಯವಾಗಲಿದೆ.

ದಸರಾ ರಜೆ ದಿನಾಂಕಗಳು

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿರುವ ಅಧಿಕೃತ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ, 2026ರ ಅಕ್ಟೋಬರ್ 3ರ ಶನಿವಾರದಿಂದ ದಸರಾ ರಜೆ ಅಧಿಕೃತವಾಗಿ ಪ್ರಾರಂಭವಾಗಲಿದೆ. ವಿಶೇಷವೆಂದರೆ, ಅಕ್ಟೋಬರ್ 2ರಂದು ಗಾಂಧಿ ಜಯಂತಿ ಇರುವುದರಿಂದ ಅಂದು ಸಾರ್ವತ್ರಿಕ ರಜೆ ಇರಲಿದೆ. ಹೀಗಾಗಿ ಅಕ್ಟೋಬರ್ 2ರಿಂದಲೇ ಮಕ್ಕಳಿಗೆ ರಜೆಯ ಮಜಾ ಶುರುವಾಗಲಿದೆ.

ಅಕ್ಟೋಬರ್ 3ರಿಂದ ಆರಂಭವಾಗುವ ಈ ದಸರಾ ರಜೆಯು ಅಕ್ಟೋಬರ್ 21ರ ಬುಧವಾರದವರೆಗೆ ಅಂದರೆ ವಿಜಯದಶಮಿಯ ಹಬ್ಬದವರೆಗೂ ಮುಂದುವರೆಯಲಿದೆ. ಗಾಂಧಿ ಜಯಂತಿ ಸೇರಿ ಒಟ್ಟಾರೆಯಾಗಿ ಸತತ 20 ದಿನಗಳ ಕಾಲ ವಿದ್ಯಾರ್ಥಿಗಳಿಗೆ ಶಾಲೆಯಿಂದ ಬಿಡುವು ಸಿಗಲಿದ್ದು, ನಾಡಹಬ್ಬದ ಸಂಭ್ರಮವನ್ನ ಪೂರ್ಣವಾಗಿ ಸವಿಯಲು ಅವಕಾಶ ಸಿಕ್ಕಿದಂತಾಗಿದೆ.

  • ಶಾಲೆ ಪುನರಾರಂಭ ಮತ್ತು ಶೈಕ್ಷಣಿಕ ವೇಳಾಪಟ್ಟಿ
  • ಸುದೀರ್ಘ 19 ದಿನಗಳ ದಸರಾ ರಜೆಯ ನಂತರ ಅಕ್ಟೋಬರ್ 22ರ ಗುರುವಾರದಂದು ರಾಜ್ಯಾದ್ಯಂತ ಶಾಲೆಗಳು ಪುನರಾರಂಭಗೊಳ್ಳಲಿವೆ. ಅಕ್ಟೋಬರ್ 22ರಿಂದ ಪ್ರಸಕ್ತ ಶೈಕ್ಷಣಿಕ ವರ್ಷದ ಎರಡನೇ ಅವಧಿ ಅಧಿಕೃತವಾಗಿ ಶುರುವಾಗಲಿದೆ. ಈ ಎರಡನೇ ಅವಧಿಯ ತರಗತಿಗಳು ಏಪ್ರಿಲ್ 10, 2027ರವರೆಗೆ ನಿರಂತರವಾಗಿ ನಡೆಯಲಿವೆ ಎಂದು ಶಿಕ್ಷಣ ಇಲಾಖೆ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಏಪ್ರಿಲ್ 10ರಂದು ವಾರ್ಷಿಕ ಪರೀಕ್ಷೆಗಳು ಮುಕ್ತಾಯಗೊಂಡು, ಮರುದಿನ ಅಂದರೆ ಏಪ್ರಿಲ್ 11, 2027ರಿಂದ ಬೇಸಿಗೆ ರಜೆ ಪ್ರಾರಂಭವಾಗಲಿದೆ. ಈ ವೇಳಾಪಟ್ಟಿಯಿಂದಾಗಿ ಶಿಕ್ಷಕರಿಗೆ ಪಠ್ಯಕ್ರಮವನ್ನು ವಿಂಗಡಿಸಲು ಮತ್ತು ಪೋಷಕರಿಗೆ ತಮ್ಮ ಮುಂದಿನ ದಿನಚರಿಯನ್ನ ನಿರ್ವಹಿಸಲು ಅನುಕೂಲವಾಗಲಿದೆ.

Latest News

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಮುದ್ದೇಬಿಹಾಳ : ಔಷಧಗಳ ಬಳಕೆ, ಪ್ರಮಾಣ ಹಾಗೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ

ಥ್ರೋಬಾಲ್ : ಬಿದರಕುಂದಿ ಕೆಪಿಎಸ್ ಆದರ್ಶ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಥ್ರೋಬಾಲ್ : ಬಿದರಕುಂದಿ ಕೆಪಿಎಸ್ ಆದರ್ಶ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿಯ ಕೆಪಿಎಸ್ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಥ್ರೋಬಾಲ್ ಬಾಲಕರು,ಬಾಲಕಿಯರ ವಿಭಾಗದಲ್ಲಿ

ತೊಗರಿ ಖರೀದಿ ಕೇಂದ್ರಕ್ಕೆ ಪ್ರಸ್ತಾವನೆ :                                 ಕೇಸಾಪೂರ PKPSಗೆ ಪೆಟ್ರೋಲ್ ಬಂಕ್ ಮಂಜೂರಿ

ತೊಗರಿ ಖರೀದಿ ಕೇಂದ್ರಕ್ಕೆ ಪ್ರಸ್ತಾವನೆ : ಕೇಸಾಪೂರ PKPSಗೆ ಪೆಟ್ರೋಲ್ ಬಂಕ್ ಮಂಜೂರಿ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ರೈತರಿಗೆ ಅನುಕೂಲ ಒದಗಿಸಿಕೊಡಲು ನಮ್ಮ ಸಂಘಕ್ಕೆ ಮಂಜೂರಾಗಿದ್ದ ಮದ್ಯದಂಗಡಿಯನ್ನು

ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆ ಹೊಸ ಇತಿಹಾಸ:   ಟೀಕೆಗಳಿಗೆ ಸಾಧನೆಯೇ ಉತ್ತರ : ಒಂದೇ ಶಾಖೆಯಿಂದ 225 ಮೆಡಿಕಲ್ ಸೀಟು..!

ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆ ಹೊಸ ಇತಿಹಾಸ: ಟೀಕೆಗಳಿಗೆ ಸಾಧನೆಯೇ ಉತ್ತರ : ಒಂದೇ ಶಾಖೆಯಿಂದ 225 ಮೆಡಿಕಲ್ ಸೀಟು..!

ಮುದ್ದೇಬಿಹಾಳ : ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಯೊoದು ಶೈಕ್ಷಣಿಕ ಕ್ಷೇತ್ರದಲ್ಲಿ ಅಭೂತಪೂರ್ವ ಇತಿಹಾಸ ನಿರ್ಮಿಸಿದೆ.

ಕಲಾಂ ಮೈನಾರಿಟಿ ಪತ್ತಿನ ಸಹಕಾರಿ ಸಂಘದಿoದ 3ಕೋಟಿ ಗೂ ಅಧಿಕ ರೂ.ಸಾಲ ಹಂಚಿಕೆ

ಕಲಾಂ ಮೈನಾರಿಟಿ ಪತ್ತಿನ ಸಹಕಾರಿ ಸಂಘದಿoದ 3ಕೋಟಿ ಗೂ ಅಧಿಕ ರೂ.ಸಾಲ ಹಂಚಿಕೆ

ಮುದ್ದೇಬಿಹಾಳ : ತಾಲೂಕಿನ ಹಿರೇಮುರಾಳದ ಕಲಾಂ ಅಲ್ಪಸಂಖ್ಯಾತ ಪತ್ತಿನ ಸಹಕಾರ ಸಂಘ ನಿಯಮಿತ 9 ನೇ ವಾರ್ಷಿಕ ಮಹಾಸಭೆ ಮಂಗಳವಾರ ಸಂಘದ ಸಭಾ ಭವನದಲ್ಲಿ ಜರುಗಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಾಬುಸಾಬ ಮುಲ್ಲಾ, ನಿರ್ದೇಶಕ ಹುಸೇನ್ ಮುಲ್ಲಾ , ಸಂಘವು 2025_26 ನೇ ಸಾಲಿನಲ್ಲಿ 4.50 ಲಕ್ಷ ರೂ ನಿವ್ವಳ ಲಾಭವನ್ನು ಗಳಿಸಿದೆ 8 ಲಕ್ಷ ರೂ ನೀರಿಕ್ಷೆ ಹೊಂದಿದ್ದೇವು. ಸಂಘವು ವಿವಿಧ ಸಾಲ ಸೌಲಭ್ಯಕ್ಕಾಗಿ

ಉದ್ಯಮಿ ಶರಣು ಸಜ್ಜನರಿಗೆ ಅಭಿನಂದನೆ:                                       ‘ನಿನ್ನ ನೋಡಿಕೊಳ್ತೀನಿ ಅನ್ನೋರು ಯಾರೂ ಉಳಿದಿಲ್ಲ’-ಕೂಚಬಾಳ

ಉದ್ಯಮಿ ಶರಣು ಸಜ್ಜನರಿಗೆ ಅಭಿನಂದನೆ: ‘ನಿನ್ನ ನೋಡಿಕೊಳ್ತೀನಿ ಅನ್ನೋರು ಯಾರೂ ಉಳಿದಿಲ್ಲ’-ಕೂಚಬಾಳ

ಮುದ್ದೇಬಿಹಾಳ : ಸಮಾಜದಲ್ಲಿ ನಿನ್ನ ನೋಡಿಕೊಳ್ತೀನಿ ಎಂದವರು ಯಾರೂ ಉಳಿದಿಲ್ಲ. ಬಾಗಿದ್ದು ಮಾತ್ರ ಬಹಳ ದಿನ ಉಳಿಯುತ್ತದೆ.ಬೀಗಿದ್ದು ಬಹಳ ದಿನ ಉಳಿಯುವುದಿಲ್ಲ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು. ಪಟ್ಟಣದ ಏಪಿಎಂಸಿಯಲ್ಲಿರುವ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹುಬ್ಬಳ್ಳಿ ಚೇಂರ‍್ಸ್ ಆಫ್ ಕಾಮರ್ಸ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಉದ್ಯಮಿ ಶರಣು ಸಜ್ಜನ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಉದ್ಯಮ ಕ್ಷೇತ್ರದಲ್ಲಿ ಬೆಳವಣಿಗೆ ಕಂಡಿರುವ,