ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ: ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ: ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ವಿಶೇಷ ವರದಿ : ಶಂಕರ್ ಹೆಬ್ಬಾಳ

ಮುದ್ದೇಬಿಹಾಳ : ಹಲವು ಆಶಾಭಾವನೆ ಹಾಗೂ ಭರವಸೆಗಳೊಂದಿಗೆ ಆರಂಭಗೊoಡಿರುವ ಲಿಂಗಸುಗೂರು ತಾಲ್ಲೂಕಿನ ಸುಣಕಲ್‌ನಲ್ಲಿರುವ ಮಾಜಿ ಸಚಿವ ಆರ್.ಬಿ. ತಿಮ್ಮಾಪೂರ ಒಡೆತನದ ಆರ್.ಬಿ. ಶುಗರ್ಸ್ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಆದರೆ ಕಾರ್ಖಾನೆ ಆರಂಭವಾಗಿ ಕಬ್ಬು ನುರಿಸುವಿಕೆ ಪ್ರಗತಿಯಲ್ಲಿದ್ದರೂ ಟನ್ ಕಬ್ಬಿಗೆ ಎಷ್ಟು ದರ ನೀಡಲಾಗುತ್ತದೆ ಎಂಬುದನ್ನು ಆಡಳಿತ ಮಂಡಳಿ ಈವರೆಗೂ ಅಧಿಕೃತವಾಗಿ ಘೋಷಿಸದಿರುವುದು ಕಬ್ಬು ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಮುದ್ದೇಬಿಹಾಳ ತಾಲ್ಲೂಕಿನ ಸುಮಾರು 3 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿರುವ ರೈತರು ಆರ್.ಬಿ. ಶುಗರ್ಸ್ ಕಾರ್ಖಾನೆಯೊಂದಿಗೆ ಕಬ್ಬು ಪೂರೈಕೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ರೈತರು ಕಾರ್ಖಾನೆಯನ್ನು ನಂಬಿ ಕಬ್ಬು ಬೆಳೆದಿದ್ದರೂ, ಅವರಿಗೆ ಸಿಗುವ ದರದ ಕುರಿತು ಸ್ಪಷ್ಟ ಮಾಹಿತಿ ನೀಡದಿರುವುದು ಆಡಳಿತ ಮಂಡಳಿಯ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಾಗಿದೆ.

ಈ ಹಿಂದೆ ಮುದ್ದೇಬಿಹಾಳದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಾರ್ಖಾನೆಯ ಉಪಪ್ರಧಾನ ವ್ಯವಸ್ಥಾಪಕ ಎಸ್.ಎಂ.ಕುoದರಗಿ,ಡಿಜಿಎAoಬಿ.ಬಿ.ಪಾಟೀಲ ಹಾಗೂ ಪಿಆರ್‌ಒ ಅಮಿತ ನಲವಡೆ, ಕಬ್ಬು ನುರಿಸುವ ಕಾರ್ಯ ಆರಂಭವಾಗುವ ದಿನವೇ ದರ ಘೋಷಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆ ಆರಂಭವಾಗಿ ಮೂರು ದಿನ ಕಳೆದಿದ್ದರೂ ಆ ಭರವಸೆ ಈಡೇರಿಲ್ಲ. ರೈತರಿಗೆ ನೀಡಿದ ಮಾತು ಕೇವಲ ಸುದ್ದಿಗೋಷ್ಠಿಯ ಹೇಳಿಕೆಯಾಗಿಯೇ ಉಳಿಯಲಿದೆಯೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಇನ್ನೊಂದೆಡೆ ಮುದ್ದೇಬಿಹಾಳ ತಾಲ್ಲೂಕಿನ ಯಾರಗಲ್‌ನಲ್ಲಿರುವ ಬಾಲಾಜಿ ಶುಗರ್ಸ್ ಕಾರ್ಖಾನೆ ಕಬ್ಬು ನುರಿಸುವ ಹಂಗಾಮು ಆರಂಭವಾದ ಕೇವಲ 15 ದಿನಗಳಲ್ಲಿಯೇ ಕಬ್ಬು ಪೂರೈಸಿದ ರೈತರ ಖಾತೆಗಳಿಗೆ ಟನ್‌ಗೆ ₹3,600 ಮೂಲ ದರ ಹಾಗೂ ₹200 ಹೆಚ್ಚುವರಿ ಸೇರಿ ಒಟ್ಟು ₹3,800 ಪಾವತಿಸುವ ಮೂಲಕ ರೈತರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದೆ. ಒಂದು ಕಾರ್ಖಾನೆ ರೈತರಿಗೆ ಪಾವತಿ ಮಾಡುವ ಮೂಲಕ ತನ್ನ ಬದ್ಧತೆ ತೋರಿಸುತ್ತಿದ್ದರೆ, ಮತ್ತೊಂದು ಕಾರ್ಖಾನೆ ದರ ಘೋಷಣೆ ಮಾಡುವುದಕ್ಕೂ ಹಿಂದೇಟು ಹಾಕುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಹೊಸದಾಗಿ ಕಾರ್ಖಾನೆ ಆರಂಭಿಸಿ ಈ ಭಾಗದ ರೈತರಿಗೆ ಉದ್ಯೋಗ, ಆರ್ಥಿಕ ಭದ್ರತೆ ಹಾಗೂ ಬದುಕು ಕಟ್ಟಿಕೊಡುವ ಭರವಸೆ ನೀಡಿದ್ದ ಆರ್.ಬಿ. ತಿಮ್ಮಾಪೂರ ಅವರ ಕಾರ್ಖಾನೆಯೇ ಈಗ ರೈತರ ಕಬ್ಬಿಗೆ ಎಷ್ಟು ಬೆಲೆ ನೀಡಲಿದೆ ಎಂಬುದನ್ನು ತಿಳಿಸಲು ಮೌನ ವಹಿಸಿರುವುದು ವಿಪರ್ಯಾಸವೇ ಸರಿ. ರೈತರು ತಮ್ಮ ಕಬ್ಬನ್ನು ಕಾರ್ಖಾನೆಗೆ ಪೂರೈಸಬೇಕೋ ಬೇಡವೋ ಎಂಬ ನಿರ್ಧಾರ ಕೈಗೊಳ್ಳಲು ದರದ ಮಾಹಿತಿ ಅತ್ಯಗತ್ಯ. ಇಂತಹ ಸಂದರ್ಭದಲ್ಲಿ ದರ ಘೋಷಿಸದೆ ಕಬ್ಬು ನುರಿಸುವ ಕಾರ್ಯ ಮುಂದುವರಿಸುವುದು ರೈತರನ್ನು ಅನಿಶ್ಚಿತತೆಗೆ ದೂಡಿದಂತಾಗಿದೆ.

ಕಬ್ಬು ಬೆಳೆಗಾರರ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆಗಾರಿಕೆ ಕಾರ್ಖಾನೆ ಆಡಳಿತ ಮಂಡಳಿಯ ಮೇಲಿದೆ. ವ್ಯವಸ್ಥಾಪಕ ನಿರ್ದೇಶಕ ವಿನಯಕುಮಾರ ತಿಮ್ಮಾಪೂರ ಅವರು ಇನ್ನಾದರೂ ಮೌನ ಮುರಿದು ಟನ್ ಕಬ್ಬಿಗೆ ಎಷ್ಟು ದರ ನೀಡಲಾಗುತ್ತದೆ? ಯಾವ ದಿನದಿಂದ ಪಾವತಿ ಆರಂಭವಾಗಲಿದೆ? ರೈತರಿಗೆ ಹಣ ಪಾವತಿಸುವ ಕಾಲಮಿತಿ ಏನು? ಎಂಬುದನ್ನು ಬಹಿರಂಗಪಡಿಸಬೇಕು.ಕಾರ್ಖಾನೆ ಆರಂಭದ ದಿನದಂದೇ ಕಬ್ಬು ಬೆಳೆಗಾರರಿಗೆ ದರ ಘೋಷಣೆ ಮೂಲಕ ಉಡುಗೊರೆ ನೀಡಬೇಕಿದ್ದ ಕಾರ್ಖಾನೆಯು ಭರವಸೆಗಳಿಂದ ಮಾತ್ರ ರೈತರ ವಿಶ್ವಾಸ ಉಳಿಯುವುದಿಲ್ಲ.ನ್ಯಾಯಯುತ ದರ ಘೋಷಣೆ ಮತ್ತು ಸಕಾಲಿಕ ಪಾವತಿಯಿಂದಲೇ ಅದನ್ನು ಗಳಿಸಬೇಕಿದೆ ಎಂಬ ಮಾತುಗಳು ರೈತರಿಂದ ಕೇಳಿ ಬಂದಿವೆ.

ರೈತ ಸಂಘಟನೆಗಳ ಮೌನ: ಕರ್ನಾಟಕದಲ್ಲಿ ಯಾವುದೇ ಕಾರ್ಖಾನೆ ಕಬ್ಬು ನುರಿಸುವ ಕಾರ್ಯ ಆರಂಭಿಸುವ ಮುನ್ನ ದರ ಘೋಷಿಸಿಯೇ ಕಾರ್ಖಾನೆ ಆರಂಭಿಸಬೇಕು ಎಂಬ ಒತ್ತಾಯವನ್ನು ಮಾಡಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ,ಗೌರವಾಧ್ಯಕ್ಷ ಶಶಿಕಾಂತ ಗುರೂಜಿ,ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ,ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಸೇರಿದಂತೆ ಹಲವು ರೈತಪರ ಸಂಘಟನೆಯವರು ಆರ್.ಬಿ.ಶುರ‍್ಸ್ ಅವರ ಕಾರ್ಖಾನೆ ದರ ಘೋಷಿಸದೇ ಕಬ್ಬು ನುರಿಸಲು ಆರಂಭಿಸಿರುವುದನ್ನು ಕಂಡೂ ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Latest News

ಸಹಕಾರ ಸಪ್ತಾಹ ಸಮಾರೋಪ:                                                   ಸಹಕಾರ ತತ್ವದಿಂದ ಗ್ರಾಮೀಣರ ಆರ್ಥಿಕಾಭಿವೃದ್ಧಿ-ಬಿರಾದಾರ

ಸಹಕಾರ ಸಪ್ತಾಹ ಸಮಾರೋಪ: ಸಹಕಾರ ತತ್ವದಿಂದ ಗ್ರಾಮೀಣರ ಆರ್ಥಿಕಾಭಿವೃದ್ಧಿ-ಬಿರಾದಾರ

ಮುದ್ದೇಬಿಹಾಳ : ಸಹಕಾರ ಚಳುವಳಿಯಿಂದ ಗ್ರಾಮೀಣ ಪ್ರದೇಶದಲ್ಲಿ ರೈತರು,ದುರ್ಬಲ ವರ್ಗದವರ ಏಳ್ಗೆಗೆ ಆಸರೆಯಾಗಿದೆ ಎಂದು

ಬಸವಣ್ಣನವರ ಅವಹೇಳನ : ಬಸವಾಭಿಮಾನಿಗಳ ಆಕ್ರೋಶ

ಬಸವಣ್ಣನವರ ಅವಹೇಳನ : ಬಸವಾಭಿಮಾನಿಗಳ ಆಕ್ರೋಶ

ಮುದ್ದೇಬಿಹಾಳ : ಬಸವಣ್ಣನವರ ಬಗ್ಗೆ ಬಂದಿರುವಷ್ಟು ಸಾಹಿತ್ಯ ಬೇರೆಯವರ ಬಗ್ಗೆ ಬಂದಿಲ್ಲ.ಆದರೆ ಕೆಲವು ಕುತ್ಸಿತ

ನ.24 ರಂದು ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ

ನ.24 ರಂದು ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಹಾಗೂ

ಬಾಲಾಜಿ ಸಕ್ಕರೆ ಕಾರ್ಖಾನೆ: ಮೊದಲ ಕಂತಿನಲ್ಲೇ 3800 ರೂ.ಪಾವತಿ..!

ಬಾಲಾಜಿ ಸಕ್ಕರೆ ಕಾರ್ಖಾನೆ: ಮೊದಲ ಕಂತಿನಲ್ಲೇ 3800 ರೂ.ಪಾವತಿ..!

ಮುದ್ದೇಬಿಹಾಳ : ತಾಲೂಕಿನ ಯರಗಲ್‌ನಲ್ಲಿರುವ ಬಾಲಾಜಿ ಸಕ್ಕರೆ ಕಾರ್ಖಾನೆಯು 2026–27ನೇ ಸಾಲಿನ ಕಬ್ಬು ನುರಿಸುವ

ಬೀರಪ್ಪನ ಬೆಟ್ಟದ ದೇವಸ್ಥಾನಗಳ ಅಭಿವೃದ್ಧಿಗೆ 35 ಲಕ್ಷ ರೂ. ದೇಣಿಗೆ ; ಸಿ.ಬಿ.ಅಸ್ಕಿ ಭರವಸೆ

ಬೀರಪ್ಪನ ಬೆಟ್ಟದ ದೇವಸ್ಥಾನಗಳ ಅಭಿವೃದ್ಧಿಗೆ 35 ಲಕ್ಷ ರೂ. ದೇಣಿಗೆ ; ಸಿ.ಬಿ.ಅಸ್ಕಿ ಭರವಸೆ

ಮುದ್ದೇಬಿಹಾಳ : ಹಾಲಿ,ಮಾಜಿ ಶಾಸಕರು,ಸರ್ಕಾರಗಳಿಂದ ಬೀರಪ್ಪನ ಬೆಟ್ಟದ ದೇವಸ್ಥಾನ ಹಾಗೂ ಸಂಪರ್ಕ ರಸ್ತೆಯ ಅಭಿವೃದ್ಧಿಪಡಿಸಲು ಆಗುವುದಿಲ್ಲವೆಂದು ಘೋಷಿಸಿದರೆ ನಾನು ಸ್ವತಃ 35 ಲಕ್ಷ ರೂ.ದೇಣಿಗೆ ನೀಡಿ ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಭರವಸೆ ನೀಡಿದರು. ತಾಲ್ಲೂಕಿನ ಅಡವಿ ಹುಲಗಬಾಳದ ಬೀರಪ್ಪನ ಬೆಟ್ಟದಲ್ಲಿ ಮಂಗಳವಾರ ದೀಪಾವಳಿ ಪಾಡ್ಯದಂಗವಾಗಿ ಸಿಡಿಯಾನ ದ್ಯಾಮವ್ವ ದೇವಿ ,ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿ ವರ್ಷವೂ ಜಾತ್ರೆ ಇಲ್ಲಿ

ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ; ಆಕ್ಷೇಪಣೆ ಸಲ್ಲಿಕೆಗೆ ಸೂಚನೆ

ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ; ಆಕ್ಷೇಪಣೆ ಸಲ್ಲಿಕೆಗೆ ಸೂಚನೆ

ಮುದ್ದೇಬಿಹಾಳ : ಮುದ್ದೇಬಿಹಾಳ ಉಪ ನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಸ್ಥಿರಾಸ್ತಿಗಳ 2026-27ನೇ ಸಾಲಿನ ಮಾರ್ಗಸೂಚಿ ಬೆಲೆಗಳನ್ನು (ಗೈಡಲೈನ್ಸ್ ವ್ಯಾಲ್ಯೂ) ಪರಿಷ್ಕರಿಸಲಾಗಿದ್ದು, ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ನವೆಂಬರ್ 28 ಕೊನೆಯ ದಿನವಾಗಿದೆ. ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಹಶೀಲದಾರರ ಅಧ್ಯಕ್ಷತೆಯಲ್ಲಿ ನವೆಂಬರ್ 7 ರಂದು ನಡೆದ ಮಾರುಕಟ್ಟೆ ಮೌಲ್ಯ ನಿರ್ಧರಣಾ ಉಪಸಮೀತಿ ಸಭೆಯಲ್ಲಿ ಈ ಬೆಲೆ ಪರಿಷ್ಕರಣೆಯ ತೀರ್ಮಾನ ಕೈಗೊಳ್ಳಲಾಗಿದೆ. ಪರಿಷ್ಕೃತ ಬೆಲೆ ಪಟ್ಟಿಯ ಕರಡು