ಮುದ್ದೇಬಿಹಾಳ : ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಆಲ್ ಕಿದ್ಮತ್ ಫೌಂಡೇಶನ್ ವತಿಯಿಂದ ಜಿಲ್ಲಾ ಆರೋಗ್ಯ ರಕ್ತ ನಿಧಿ ಕೇಂದ್ರ ವಿಜಯಪುರ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಎಂ.ಎo. ಜೋಶಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಅಲ್ ಕಿದ್ಮತ್ ಫೌಂಡೇಶನ್ ಸದಸ್ಯರಾದ ಅಬ್ದುಲ್ಮಜೀದ ಶಿರೋಳ ಹಾಗೂ ಸಾಹಿಲ್ ತಾಳಿಕೋಟಿ ಗೆಳೆಯರ ಬಳಗದವರ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಂಜುಮನ್ ಕಮಿಟಿಯ ಅಧ್ಯಕ್ಷ ಅಲ್ಲಾಭಕ್ಷ ದೇಸಾಯಿ, ಇರ್ಫಾನ್ ಕೂಡಗಿ, ಅಬ್ದುಲಮಜೀದ ಮಕಾನದಾರ , ಸರ್ವ ಸದಸ್ಯರು, ಡಾ.ರಾಜಾ ಪಟೇಲ್,ತಾಲ್ಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರಂಗನಾಥ ವೈದ್ಯ, ನರ್ಸಿಂಗ್ ಆಫೀಸರ್ ಮಹಮ್ಮದರಫೀಕ ಬಾಗವಾನ, ಲ್ಯಾಬ್ ಟೆಕ್ನಿಷಿಯನ್ ಅಬ್ದುಲ ಹಮೀದ ಹಳ್ಯಾಳ, ಸುನೈನಾ ಬಾಗೇವಾಡಿ, ಜಿಲ್ಲಾ ರಕ್ತ ನಿಧಿ ಕೇಂದ್ರದ ಸಿಬ್ಬಂದಿ ವರ್ಗ ಇದ್ದರು.







