ಸಜ್ಜನ ಗಾಣಿಗ ಸಮಾಜದಿಂದ ಸನ್ಮಾನ : ಗಾಣಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ-ದೇಸಾಯಿ

ಸಜ್ಜನ ಗಾಣಿಗ ಸಮಾಜದಿಂದ ಸನ್ಮಾನ : ಗಾಣಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ-ದೇಸಾಯಿ

ಮುದ್ದೇಬಿಹಾಳ : ಐದು ಸಾವಿರ ರೂ.ಕೊಡುವ ಮುನ್ನ ಪತ್ರಕರ್ತರನ್ನು ಕರೆದು ಎಲ್ಲರಿಗೂ ತೋರಿಸುವಂತೆ ಪ್ರಚಾರಗಿಟ್ಟಿಸಿಕೊಳ್ಳುವ ಜನರ ಮಧ್ಯೆ ಯಾವುದೇ ಸ್ವಾರ್ಥವಿಲ್ಲದೇ ಎಕರೆಗಟ್ಟಲೆ ಜಮೀನು ದಾನ ಮಾಡಿದರೂ ಅದನ್ನು ಹೇಳಿಕೊಳ್ಳುವ ಕಾರ್ಯ ಸಜ್ಜನ ಗಾಣಿಗ ಸಮಾಜದವರು ಮಾಡಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.

ಪಟ್ಟಣದ ಏಪಿಎಂಸಿ ಸಭಾಂಗಣದಲ್ಲಿ ತಾಲ್ಲೂಕು ವೀರಶೈವ ಸಜ್ಜನ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಜ್ಜನ ಸಮಾಜದವರು ಸಹೃದಯಿಗಳು.ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡವರು.ಅವರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಒತ್ತಾಯಿಸುತ್ತಿರುವುದು ನ್ಯಾಯಯುತವಾಗಿದ್ದು ಸರ್ಕಾರ ಅದನ್ನು ಈಡೇರಿಸಬೇಕು ಎಂದು ಹೇಳಿದರು.

ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿ, ವೀರಶೈವ ಲಿಂಗಾಯತರು ರಾಜ್ಯದಲ್ಲಿ 1.20 ಕೋಟಿ ಸಂಖ್ಯೆಯಲ್ಲಿ ಇದ್ದೇವೆ.ಸಮಾಜದ ಎಲ್ಲ ಪಂಗಡಗಳನ್ನು ಒಂದೂಗುಡಿಸುವ ಪ್ರಯತ್ನ ನಡೆದಿವೆ.ಭಿನ್ನಾಭಿಪ್ರಾಯ ಬದಿಗೊತ್ತಿ ಸಮಾಜದ ಏಳ್ಗೆಗೆ ಒಟ್ಟಾರೆ ಪ್ರಯತ್ನ ಮಾಡುವುದು ಬಹಳ ಮುಖ್ಯವಾಗಿದೆ.ದಾನಕ್ಕೆ ಮುಂದಾದ ಸಮಾಜ ಸಜ್ಜನರ ಸಮಾಜ.ಉಪಜಾತಿಗಳ ಪಿಡುಗು ಹೋಗಬೇಕು.ಒಗ್ಗೂಡಿದರೆ ಶಕ್ತಿ ಬರುತ್ತದೆ ಎಂದು ಹೇಳಿದರು.

ಸಜ್ಜನ ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಸುರೇಶ ಸಜ್ಜನ ಮಾತನಾಡಿ,ಗಾಣಿಗ ಸಮಾಜವನ್ನು 2ಎ ಪ್ರವರ್ಗದಿಂದ ತಗೆಯುವ ಹುನ್ನಾರ ನಡೆದಾಗ ಹಿಂದೆ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪನವರು ಅದನ್ನು ತಡೆದಿದ್ದರು.ಸಮಾಜ ಅವರಿಗೆ ಸದಾ ಸಮಾಜ ಋಣಿಯಾಗಿರಲಿದೆ.ಸಜ್ಜನ ಗಾಣಿಗ ಸಮಾಜದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದವರು ಅಲ್ಲಿ ನಮ್ಮ ಸಮಾಜದ ಮಕ್ಕಳಿಗೆ ಕನಿಷ್ಠ ಶುಲ್ಕ ವಿಧಿಸಿಯೋ,ಉಚಿತ ಶಿಕ್ಷಣ ನೀಡುವ ಮೂಲಕ ಸಮಾಜದ ಆರ್ಥಿಕ,ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಗುಂಡಕನಾಳ ಬ್ರಹನ್ಮಠದ ಗುರುಲಿಂಗ ಶಿವಾಚಾರ್ಯರು,ಹುಬ್ಬಳ್ಳಿ ಅ.ಭಾ.ವೀ.ಸಜ್ಜನ ಸಮಾಜದ ಅಧ್ಯಕ್ಷ ಸಂಗನಬಸಪ್ಪ ಸಜ್ಜನ,ಹೆಸ್ಕಾಂ ಎಇಇ ಆರ್.ಆರ್.ಹಂಡಿ,ಘನಮಠೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಶರಣಪ್ಪ ಸಜ್ಜನ ಮಾತನಾಡಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ನಿರ್ದೇಶಕ ಶರಣು ಸಜ್ಜನ,ಉಪ ನೋಂದಣಾಧಿಕಾರಿ ಸಚಿನ ಖೈನೂರ,ತಾಳಿಕೋಟಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕಾಶೀನಾಥ ಸಜ್ಜನ,ಬಿದರಕುಂದಿ ಪಿಕೆಪಿಎಸ್ ಅಧ್ಯಕ್ಷ ಶಂಕ್ರಪ್ಪ ಸಜ್ಜನ,ಸಮಾಜದ ಭೂದಾನಿ ಬಸವರಾಜ ಸಜ್ಜನ ಅವರನ್ನು ಸನ್ಮಾನಿಸಲಾಯಿತು.

ವೀರಶೈವ ವಿದ್ಯಾವರ್ಧಕ ಸಂಘದ ಚೇರಮನ್ ಎಂ.ಎಸ್.ನಾವದಗಿ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಬಸವಜ್ಯೋತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಇಸ್ಲಾಂಪೂರ,ತಾಳಿಕೋಟಿ ಸಜ್ಜನ ಗಾಣಿಗರ ಸೇವಾ ಸಂಘದ ಅಧ್ಯಕ್ಷ ಪ್ರಕಾಶ ಸಜ್ಜನ,ಕರ್ನಾಟಕ ಅರ್ಬನ್ ಬ್ಯಾಂಕ್ ನಿರ್ದೇಶಕ ಶೇಖಪ್ಪ ಸಜ್ಜನ,ಪ್ರಶಾಂತ ಸಜ್ಜನ ಇದ್ದರು.

ಸಂಗಮೇಶ ಶಿವಣಗಿ ಪ್ರಾರ್ಥಿಸಿದರು.ಶರಣಪ್ಪ ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕಿ ಸುಮಲತಾ ಗಡಿಯಪ್ಪನವರ,ಸಿದ್ಧನಗೌಡ ಬಿಜ್ಜೂರ ನಿರೂಪಿಸಿದರು.ಎಸ್.ಎಸ್.ಸಜ್ಜನ ವಂದಿಸಿದರು.ಕಾರ್ಯಕ್ರಮದಲ್ಲಿ ಸಜ್ಜನ ಸಮಾಜದ ಬಾಂಧವರು,ಇತರೆ ಸಮಾಜದ ಬಾಂಧವರು ಉದ್ಯಮಿ ಶರಣು ಸಜ್ಜನ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

Latest News

ಪ್ರಧಾನಿ ಮೋದಿ ಹೆಸರು ಕೆಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ಇಂಚಗೇರಿ ಮಠದ ಶಶಿಕಾಂತ ಗುರೂಜಿ ವಾಗ್ದಾಳಿ

ಪ್ರಧಾನಿ ಮೋದಿ ಹೆಸರು ಕೆಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ಇಂಚಗೇರಿ ಮಠದ ಶಶಿಕಾಂತ ಗುರೂಜಿ ವಾಗ್ದಾಳಿ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರು

ಬಿಜೆಪಿ ಕಾರ್ಯಕರ್ತರಿಂದ ಕೂಲಿ ಪ್ರಹಾರ :                             ಸರ್ಕಾರದ ಪ್ರತಿಕೃತಿಗೆ ಚಿಲ್ಲರೆ ನೋಟಿನ ಹಾರ ಹಾಕಿ ಪ್ರತಿಭಟನೆ

ಬಿಜೆಪಿ ಕಾರ್ಯಕರ್ತರಿಂದ ಕೂಲಿ ಪ್ರಹಾರ : ಸರ್ಕಾರದ ಪ್ರತಿಕೃತಿಗೆ ಚಿಲ್ಲರೆ ನೋಟಿನ ಹಾರ ಹಾಕಿ ಪ್ರತಿಭಟನೆ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಬರ ಪರಿಹಾರದ ಹಣವಾಗಿ 2500 ರೂ.ನೀಡಲು ಮುಂದಾಗಿರುವ ಕ್ರಮವನ್ನು

Dasara Vacation 2026: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಈ ಬಾರಿ ಬರೋಬ್ಬರಿ 20 ದಿನ ರಜೆ, ಯಾವಾಗಿಂದ?

Dasara Vacation 2026: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಈ ಬಾರಿ ಬರೋಬ್ಬರಿ 20 ದಿನ ರಜೆ, ಯಾವಾಗಿಂದ?

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶಿಕ್ಷಣ ಇಲಾಖೆ ಭರ್ಜರಿ ಸಿಹಿಸುದ್ದಿಯೊಂದನ್ನ ನೀಡಿದೆ. ಶಾಲಾ

ಔಷಧ ತಜ್ಞರು ಜೀವ ಉಳಿಸುವ ಮಾರ್ಗದರ್ಶಕರು-ಸಿದ್ಧಲಿಂಗ ದೇವರು

ಔಷಧ ತಜ್ಞರು ಜೀವ ಉಳಿಸುವ ಮಾರ್ಗದರ್ಶಕರು-ಸಿದ್ಧಲಿಂಗ ದೇವರು

ಮುದ್ದೇಬಿಹಾಳ : ಔಷಧ ತಜ್ಞರು ವೈದ್ಯರ ಬೆನ್ನೆಲುಬಾಗಿದ್ದು ಜೀವ ಉಳಿಸುವ ಮಾರ್ಗದರ್ಶಕರಂತೆ ಕೆಲಸ ಮಾಡುತ್ತಿದ್ದಾರೆ

ತೊಗರಿ ಖರೀದಿ ಕೇಂದ್ರಕ್ಕೆ ಪ್ರಸ್ತಾವನೆ :                                 ಕೇಸಾಪೂರ PKPSಗೆ ಪೆಟ್ರೋಲ್ ಬಂಕ್ ಮಂಜೂರಿ

ತೊಗರಿ ಖರೀದಿ ಕೇಂದ್ರಕ್ಕೆ ಪ್ರಸ್ತಾವನೆ : ಕೇಸಾಪೂರ PKPSಗೆ ಪೆಟ್ರೋಲ್ ಬಂಕ್ ಮಂಜೂರಿ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ರೈತರಿಗೆ ಅನುಕೂಲ ಒದಗಿಸಿಕೊಡಲು ನಮ್ಮ ಸಂಘಕ್ಕೆ ಮಂಜೂರಾಗಿದ್ದ ಮದ್ಯದಂಗಡಿಯನ್ನು ನಿರಾಕರಿಸಿ ಪೆಟ್ರೋಲ್ ಬಂಕ್‌ನ್ನು ನಡೆಸಲು ಅನುಮತಿ ಪಡೆದುಕೊಂಡಿದ್ದೇವೆ ಎಂದು ತಾಲ್ಲೂಕಿನ ಕೇಸಾಪೂರ ಶ್ರೀ ಸಂಗಮೇಶ್ವರ ವಿವಿಧೋದ್ಧೇಶಗಳ ಗ್ರಾಮೀಣ ಕೃಷಿ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಆರ್.ಬಿ.ಖಾನಾಪೂರ ಹೇಳಿದರು. ತಾಲ್ಲೂಕಿನ ಕೇಸಾಪೂರದ ಪಟ್ಟಣದ ಶ್ರೀ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ಶುಕ್ರವಾರ 26ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.ವಿಜಯಪುರ ಸಹಕಾರ ಸಂಘಗಳ

ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆ ಹೊಸ ಇತಿಹಾಸ:   ಟೀಕೆಗಳಿಗೆ ಸಾಧನೆಯೇ ಉತ್ತರ : ಒಂದೇ ಶಾಖೆಯಿಂದ 225 ಮೆಡಿಕಲ್ ಸೀಟು..!

ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆ ಹೊಸ ಇತಿಹಾಸ: ಟೀಕೆಗಳಿಗೆ ಸಾಧನೆಯೇ ಉತ್ತರ : ಒಂದೇ ಶಾಖೆಯಿಂದ 225 ಮೆಡಿಕಲ್ ಸೀಟು..!

ಮುದ್ದೇಬಿಹಾಳ : ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಯೊoದು ಶೈಕ್ಷಣಿಕ ಕ್ಷೇತ್ರದಲ್ಲಿ ಅಭೂತಪೂರ್ವ ಇತಿಹಾಸ ನಿರ್ಮಿಸಿದೆ. ತಾಲ್ಲೂಕಿನ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯು ಸನ್ 2025-26ನೇ ಸಾಲಿನಲ್ಲಿ ಒಂದೇ ಶಾಖೆಯಿಂದ ಬರೊಬ್ಬರಿ 225 ವೈದ್ಯಕೀಯ (ಮೆಡಿಕಲ್) ಸೀಟುಗಳು ಪಡೆದುಕೊಳ್ಳುವ ಮೂಲಕ ಇಡೀ ರಾಜ್ಯಕ್ಕೆ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸoಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ್ ಹೇಳಿದರು. ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುವಾರ ಕರೆದಿದ್ದ