ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ: ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ: ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುದ್ದೇಬಿಹಾಳ : ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ ನಡೆಯಲಿದ್ದ ಬೃಹತ್ ರೈತರ ಪ್ರತಿಭಟನಾ ಸಮಾವೇಶಕ್ಕೆ ಮುದ್ದೇಬಿಹಾಳ ತಾಲ್ಲೂಕಿನಿಂದ ತೆರಳುತ್ತಿದ್ದ ರೈತ ಮುಖಂಡರನ್ನು ಬೆಳಗಾವಿ ಬಳಿಯ ಪಂಚಗಾವ ಬಳಿ ಪೊಲೀಸರು ತಡೆದು ನಿಲ್ಲಿಸಿ ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದ ಘಟನೆ ನಡೆದಿದೆ.

ತಾಲ್ಲೂಕಿನ ಹುಲ್ಲೂರಿನಲ್ಲಿ ರೈತ ಸಂಘದ ಹೋರಾಟ ಮುಕ್ತಾಯಗೊಳಿಸಿ ಗುರುವಾರ ಬೆಲೆ ನಿಗದಿ ಖಚಿತವೆಂದು ತೆರಳಿದ್ದ ರೈತ ಮುಖಂಡರುಗಳಿಗೆ ಮತ್ತೆ ನಿರಾಸೆ ಉಂಟಾಗಿದೆ.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನೇತೃತ್ವದಲ್ಲಿ ಎರಡ್ಮೂರು ಟ್ರಾö್ಯಕ್ಸ್ಗಳಲ್ಲಿ ಬೆಳಗಾವಿಗೆ ತೆರಳುತ್ತಿದ್ದ ಜಿಲ್ಲಾ,ತಾಲ್ಲೂಕು ಮುಖಂಡರುಗಳನ್ನು ಪೊಲೀಸರು ತಡೆದು ನಿಲ್ಲಿಸಿ ಮುಂದೆ ಹೋಗದಂತೆ ತಡೆಯೊಡ್ಡಿದರು.

ಈ ವೇಳೆ ಮಾತನಾಡಿದ ತಾಳಿಕೋಟಿ ತಾಲ್ಲೂಕು ಅಧ್ಯಕ್ಷ ದೇವರಾಜ ಗುಂಡಕನಾಳ, ನಾವು ಎಲ್ಲಿಯೇ ಹೋದರು ಬಂಧನಕ್ಕೆ ಒಳಗಾಗುವುದು ಶತಃಸಿದ್ಧ ಮುಂದೆ ಹೋಗಲು ಬಿಡಿ ಎಂದು ಪೊಲೀಸರಿಗೆ ತಿಳಿಸಿದರು.ಇದೇ ರಾಜ್ಯ ಕಮೀಟಿಯ ಪದಾಧಿಕಾರಿಯಾಗಿದ್ದ ಶಾಂತಗೌಡ ಪಾಟೀಲ ಅವರನ್ನು ಪೊಲೀಸರು ಸೌಜನ್ಯಯುತವಾಗಿ ಮಾತನಾಡಿಸುತ್ತಲೇ ವಶಕ್ಕೆ ಪಡೆದುಕೊಂಡು ಗುಪ್ತಸ್ಥಳದಲ್ಲಿರಿಸಿ ನಂತರ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮುದ್ದೇಬಿಹಾಳದಿAದ ಹೋರಾಟಗಾರರಾದ ಹುಲಗಪ್ಪ ನಾಯ್ಕಮಕ್ಕಳ, ಬಸವರಾಜ ಬಳವಾಟ,ಅರಳದಿನ್ನಿಯ ಶಿವಯ್ಯ ಹಿರೇಮಠ ,ಶರಣಪ್ಪ ಕೊಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಹೋರಾಟ ಹತ್ತಿಕ್ಕಲು ಡಿಕೆಶಿ ಸರ್ಕಾರದ ಹುನ್ನಾರ-ಶಾಂತಗೌಡ : ಕರ್ನಾಟಕ ರಾಜ್ಯ ರೈತ ಸಂಘದ ಬೇಡಿಕೆಗಳನ್ನು ಸಹಾನಾಭೂತಿಯಿಂದ ಆಲಿಸಿ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ರೈತರ ಹೋರಾಟವನ್ನು ಪೊಲೀಸರ ಬಲ ಪ್ರಯೋಗಿಸಿ ಹತ್ತಿಕ್ಕುವ ಪ್ರಯತ್ನ ನಡೆಸಿದ್ದಾರೆ ಎಂದು ಮುಖಂಡ ಶಾಂತಗೌಡ ಪಾಟೀಲ ಆರೋಪಿಸಿದರು.

ದೂರವಾಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಂಘದ ರಾಜ್ಯಾಧ್ಯಕ್ಷ ಚುನಪ್ಪ ಪೂಜಾರಿ,ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರನ್ನು ಪೊಲೀಸರು ಬಂಧಿಸಿರುವುದು ಅಕ್ಷಮ್ಯ ಅಪರಾಧ.ಎಂಎಸ್‌ಪಿ ಗಾಗಿ ರೈತರು ಹೋರಾಟ ಮಾಡಿದರೆ ರಾಜ್ಯ ಸರ್ಕಾರ ಬೆಂಬಲ ಕೊಡುತ್ತದೆ.ಯಾವ ಟೋಲ್ ನಾಕಾ ಬಂದ್ ಮಾಡಿದರೂ ಕೇಸು,ಸೆಕ್ಷನ್ ಕಾಯ್ದೆ ಹಾಕುವುದಿಲ್ಲ.ಆದರೆ ರಾಜ್ಯದ ಎಸ್‌ಎಪಿ ಕೇಳಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡಿದಂತೆ ಎಂದು ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದು ಮುಂದಿನ ಚುನಾವಣೆಗಳಲ್ಲಿ ಈ ಸರ್ಕಾರಕ್ಕೆ ರೈತರು ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು. 3650 ರೂ.ದರ ಕೊಡಲು ಮಾತುಕತೆ ಆಗಿದ್ದು ಅದನ್ನು ಲಿಖಿತಾಗಿ ಬರೆದುಕೊಟ್ಟು ರೈತರ ಮುಂದೆಯೆ ಹೇಳಿಸುವುದಕ್ಕೆ ಯೋಜನೆ ರೂಪಿಸಲಾಗಿತ್ತು.ಆದರೆ ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ನಡೆದಿದ್ದು ರೈತರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

Latest News

ಟೆನ್ನಿಸ್‌ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್:                      ಆರ್.ಎ.ಸಿ.ಸಿ ತಂಡ ಚಾಂಪಿಯನ್-ಒಂದು ಲಕ್ಷ ರೂ.ಬಹುಮಾನ

ಟೆನ್ನಿಸ್‌ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್: ಆರ್.ಎ.ಸಿ.ಸಿ ತಂಡ ಚಾಂಪಿಯನ್-ಒಂದು ಲಕ್ಷ ರೂ.ಬಹುಮಾನ

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ನಡೆದ ಮುದ್ದೇಬಿಹಾಳ ಟೆನ್ನಿಸ್ ಕ್ರಿಕೇಟ್

ಹುಲ್ಲೂರಿನಲ್ಲಿ ಕಬ್ಬು ಬೆಳೆಗಾರರ ಧರಣಿ:                                 ನಾಳೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನಿರೀಕ್ಷೆ-ಶಾಂತಗೌಡ ಪಾಟೀಲ್

ಹುಲ್ಲೂರಿನಲ್ಲಿ ಕಬ್ಬು ಬೆಳೆಗಾರರ ಧರಣಿ: ನಾಳೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನಿರೀಕ್ಷೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿoದ

ನಿಯೋಜಿತ ಕನ್ನಡ ಸಾಹಿತ್ಯಭವನ ನಿರ್ಮಾಣಕ್ಕೆ ಸ್ಥಳ ನಿಗದಿ

ನಿಯೋಜಿತ ಕನ್ನಡ ಸಾಹಿತ್ಯಭವನ ನಿರ್ಮಾಣಕ್ಕೆ ಸ್ಥಳ ನಿಗದಿ

ಮುದ್ದೇಬಿಹಾಳ : ಸಾಹಿತ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಪಟ್ಟಣದ ಆಲಮಟ್ಟಿ ರಸ್ತೆಯ ಬಳಿ ಇರುವ ಸಾಯಿಮಂದಿರ

‘ಹೃದಯದ ಅಂತರoಗದ ಗೋಡೆಯಲ್ಲಿ ಕನ್ನಡ ಶಾಶ್ವತವಾಗಿ ನೆಲೆಸಲಿ’

‘ಹೃದಯದ ಅಂತರoಗದ ಗೋಡೆಯಲ್ಲಿ ಕನ್ನಡ ಶಾಶ್ವತವಾಗಿ ನೆಲೆಸಲಿ’

ಮುದ್ದೇಬಿಹಾಳ : ಇಂದಿನ ಆಧುನಿಕ ಕಾಲದಲ್ಲಿ ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದೆ ಎಂಬುದನ್ನು ನಾವು

ಅ.30 ರಂದು ಗಂಗೂರಿನಲ್ಲಿ ಅಂಕಲಿಮಠದ ಶ್ರೀಗಳ ತುಲಾಭಾರ

ಅ.30 ರಂದು ಗಂಗೂರಿನಲ್ಲಿ ಅಂಕಲಿಮಠದ ಶ್ರೀಗಳ ತುಲಾಭಾರ

ಮುದ್ದೇಬಿಹಾಳ : ದಸರಾ  ನಿಮಿತ್ಯವಾಗಿ  ತಾಲ್ಲೂಕಿನ  ಗಂಗೂರ  ಗ್ರಾಮದಲ್ಲಿ ಅ.30  ರಂದು ಬೆಳಗ್ಗೆ 11.30ಕ್ಕೆ  ಸಾಮೂಹಿಕ  ವಿವಾಹ, 108 ಮುತೈದೆಯರಿಗೆ  ಉಡಿ  ತುಂಬುವ ಕಾರ್ಯಕ್ರಮ ಹಾಗೂ ಅಂಕಲಿಮಠದ ಸ್ವಾಮೀಜಿಗಳ ತುಲಾಭಾರ,ಧರ್ಮಸಭೆ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಅಂಕಲಿಮಠದ ವೀರಭದ್ರ ಸ್ವಾಮೀಜಿಗಳು ,ಯರಝರಿ ಮಲ್ಲಾರಲಿಂಗ ಸ್ವಾಮೀಜಿ,ಕುಂಟೋಜಿ ಚೆನ್ನವೀರ ಶಿವಾಚಾರ್ಯರು,ತುರುವಿಹಾಳದ ಅಮರಗುಂಡ ಶಿವಾಚಾರ್ಯರು,ಹೊಸಮಠದ ಅಮರೇಶ್ವರ ದೇವರು,ಸರೂರಿನ ಕಾಡಯ್ಯ ಗುರುವಿನ,ಅಡಿವಯ್ಯ ಹಿರೇಮಠ ದಿವ್ಯ ಸಾನಿಧ್ಯ ವಹಿಸುವರು. ವಿಜಯಪುರ ಸಿಕ್ಯಾಬ್ ಕಾಲೇಜಿನ  ಉಪನ್ಯಾಸಕ ಯು.ಎನ್.ಕುಂಟೋಜಿ ಉಪನ್ಯಾಸ ನೀಡುವರು.ಶಾಸಕ ಸಿ.ಎಸ್.ನಾಡಗೌಡ

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ:                    ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ: ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಮುದ್ದೇಬಿಹಾಳ : ಬಿಜೆಪಿಗೆ ಮರಳಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಾಪಸ್ ಕರೆತರುವ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿರುವ ವಿಚಾರ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಹೇಳಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಮುದ್ದೇಬಿಹಾಳ ನಗರಕ್ಕೆ ಸೋಮವಾರ ಆಗಮಿಸಿದ್ದ ಅವರಿಗೆ ಮುದ್ದೇಬಿಹಾಳ ಬಿಜೆಪಿ ಮಂಡಲದ ವತಿಯಿಂದ ನೀಡಲಾದ ಅದ್ದೂರಿ ಸ್ವಾಗತದ ಬಳಿಕ ಅಂಬೇಡ್ಕರ್ ವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಸಕ ಯತ್ನಾಳ ಹಾಗೂ