ತನಿಖೆಗೆ ಶಾಸಕ ಸಿ.ಎಸ್.ನಾಡಗೌಡರ ಸೂಚನೆ: ನಾಗರಬೆಟ್ಟ ಏತ ನೀರಾವರಿ ಯೋಜನೆ ಪೈಪಲೈನ್ ಕಾಮಗಾರಿ ಕಳಪೆ

ತನಿಖೆಗೆ ಶಾಸಕ ಸಿ.ಎಸ್.ನಾಡಗೌಡರ ಸೂಚನೆ: ನಾಗರಬೆಟ್ಟ ಏತ ನೀರಾವರಿ ಯೋಜನೆ ಪೈಪಲೈನ್ ಕಾಮಗಾರಿ ಕಳಪೆ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಯಡಿ ಅಳಡಿಸಿರುವ ಪೈಪಲೈನ್ ಕಳಪೆ ಗುಣಮಟ್ಟದ್ದಾಗಿದೆ ಎಂಬ ರೈತರ ಆರೋಪಗಳ ಹಿನ್ನೆಲೆಯಲ್ಲಿ ಕ್ವಾಲಿಟಿ ಕಂಟ್ರೋಲರ್‌ರಿoದ ತಪಾಸಣೆ ನಡೆಸಿ ವರದಿ ಸಲ್ಲಿಸಲು ತಿಳಿಸಿದ್ದು ಎಲ್ಲೆಲ್ಲಿ ಪೈಪ್‌ಗಳು ಒಡೆದಿವೆ ಅವುಗಳನ್ನು ಬದಲಾಯಿಸುವಂತೆ ತಿಳಿಸಿದ್ದೇವೆ.ಬರಗಾಲದ ಸಮಯದಲ್ಲಿ ನೀರಾವರಿ ಯೋಜನೆಗಳಿಗೆ ರೈತರು ಸಹಕಾರ ನೀಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಸಮೀಪದ ನಾಗರಬೆಟ್ಟ ಬೆಟ್ಟದಲ್ಲಿರುವ ಪರಮಾನಂದ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಕೆಬಿಜೆಎನ್‌ಎಲ್ ಹಾಗೂ ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಒಳಪಡುವ ಗ್ರಾಮಗಳ ರೈತರ ಸಮಾಲೋಚನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಟ್ರಯಲ್ ರನ್ ಮಾಡುವ ಹಂತದಲ್ಲಿ ಕೆಲವೆಡೆ ಪೈಪ್ ಒಡೆದಿದ್ದವು.ರೈತರು ಆತಂಕಗೊoಡಿದ್ದರು.ಗುತ್ತಿಗೆದಾರರದ್ದು ಎರಡು ವರ್ಷ ನಿರ್ವಹಣಾ ಅವಧಿ ಇದ್ದು ಅದನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ತಿಳಿಸಿದ್ದೇವೆ.ರೈತರು ಸಹಕಾರ ನೀಡಿದರೆ ಕೆಲಸ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಹೇಳಿದರು.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕನ್ಸೆಂಟ್ ಅವಾರ್ಡ್ ಆದರೂ ಪರಿಹಾರ ಬಂದಿಲ್ಲ ಎಂದು ರೈತರು ಗಮನಕ್ಕೆ ತಂದಿದ್ದಾರೆ.ಅದನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು ಜವಾಬ್ದಾರಿ ತಗೆದುಕೊಂಡಿದ್ದು ಶೀಘ್ರದಲ್ಲಿ ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದಾಗಿ ತಿಳಿಸಿದ್ದಾರೆ.ಪ್ರತಿ ಶುಕ್ರವಾರ ಮುದ್ದೇಬಿಹಾಳದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಇರುತ್ತಾರೆ.ರೈತರನ್ನು ಕರೆಯಿಸಿ ಅವರ ಪ್ರಕರಣಗಳ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಹೇಳಿದರು.

ಕೆರೆಗಳಿಗೆ ನೀರು ಹರಿಸಬೇಕು ಎಂಬ ಆಗ್ರಹಗಳ ಕುರಿತು 7 ಟಿಎಂಸಿ ನೀರು ಕಾಯ್ದಿರಿಸಿದ್ದು ತಿಂಗಳಿಗೊಮ್ಮೆ ನೀರು ಹರಿಸುತ್ತೇವೆ.ಯೋಜನೆ ಪೂರ್ಣಗೊಂಡ ಬಳಿಕ ಸಿಎಂ ಕರೆಯಿಸಿ ಉದ್ಘಾಟನೆ ಮಾಡಿಸುತ್ತೇವೆ ಎಂದು ಉತ್ತರಿಸಿದರು.

ಜನರಲ್ ಅವಾರ್ಡ್ ಮಾಡಲು ಅವಕಾಶ ಇಲ್ಲ.ಕನ್ಸೆಂಟ್ ಅವಾರ್ಡ್ಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಪಾಟೀಲ,ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ,ರೈತ ಮುಖಂಡರಾದ ಬಸನಗೌಡ ಸಿದರೆಡ್ಡಿ,ಮಲ್ಲಿಕಾರ್ಜುನ ಸಿದರೆಡ್ಡಿ ಮತ್ತಿತರರು ಮಾತನಾಡಿ, ಮೊದಲು ನಾಗರಬೆಟ್ಟ ಏತ ನೀರಾವರಿ ಯೋಜನೆ ಗುಣಮಟ್ಟದಿಂದ ನಿರ್ವಹಿಸಲು ಸಂಬoಧಿಸಿದವರಿಗೆ ಸೂಚನೆ ನೀಡಬೇಕು.ನೀರು ಪೋಲಾಗದಂತೆ ಯಾರಿಗೂ ಅನ್ಯಾಯವಾಗದಂತೆ ಎಲ್ಲರಿಗೂ ನೀರು ದೊರೆಯಬೇಕು.ರೈತರ ಬೇಡಿಕೆಯಂತೆ ಅವರ ಭೂಮಿಗಳಿಗೆ ಒಪ್ಪಿತ ದರದಂತೆ ಪರಿಹಾರ ನೀಡಬೇಕು.ನಾಗರಬೆಟ್ಟ ಭಾಗದ ಕೆರೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ವಿಶೇಷ ಭೂಸ್ವಾಧೀನಾಧಿಕಾರಿ ಎಂ.ಎಸ್.ನಾಗಠಾಣ ಮಾತನಾಡಿ, ನಾಗರಬೆಟ್ಟ ಏತ ನೀರಾವರಿ ಯೋಜನೆಗೆ 150.34 ಎಕರೆ ಜಮೀನು ಕನ್ಸೆಂಟ್ ಅವಾರ್ಡ್ಗೆ ಪರಿಗಣಿಸಲಾಗಿದ್ದು ಈಗಾಗಲೇ 39.9 ಎಕರೆ ಜಮೀನು ಅಂತಿಮ ಹಂತದ ಅವಾರ್ಡ್ಗೆ ಸಲ್ಲಿಸಲಾಗಿದೆ.111.25 ಎಕರೆ ಕನ್ಸೆಂಟ್ ಅವಾರ್ಡ್ಗೆ ಬಾಕಿ ಉಳಿಸಿದೆ ಎಂದು ತಿಳಿಸಿದರು.ಯೋಜನೆಯ ಕುರಿತು ಈಗಾಗಲೇ ಗೆಜೆಟ್ ಆಗಿದ್ದು ಅವಾರ್ಡ್ ಅಪ್ರೂವ್ ಹಂತದಲ್ಲಿವೆ.ನೀರಾವರಿ ಜಮೀನಿಗೆ ಎಕರೆಗೆ 30 ಲಕ್ಷ ರೂ.ಒಣಬೇಸಾಯದ ಜಮೀನಿಗೆ 25 ಲಕ್ಷ ರೂ.ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೆಬಿಜೆಎನ್‌ಎಲ್ ಎಸ್‌ಇ ಬಿ.ಎಸ್.ಪಾಟೀಲ ಮಾತನಾಡಿ, ಆದ್ಯತೆ ಮೇರೆಗೆ ಕಾಲುವೆಗೆ ನೀರು ಹರಿಸುವ ಕಾರ್ಯ ಮಾಡಲಾಗುತ್ತದೆ.ರಿಪೇರಿ ಕೆಲಸ ಮುಗಿದ ಬಳಿಕ ನೀರು ಮತ್ತೆ ಹರಿಸಿ ತಪಾಸಣೆ ನಡೆಸಲಾಗುತ್ತದೆ.ಯಾವುದೇ ಸಮಸ್ಯೆ ಉಂಟಾಗದಿದ್ದರೆ ನೀರು ಹರಿಸುವ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.

ನಾಲತವಾಡದ ಮುಖಂಡ ಅಮರೇಶ ದೇಶಮುಖ,ಹಣಮಂತ ಕುರಿ,ಮಹಾಂತೇಶ ಮನೆದಾಳಮಠ ಸೇರಿದಂತೆ ಕೆಬಿಜೆಎನ್‌ಎಲ್ ಅಧಿಕಾರಿಗಳು,ನಾಗರಬೆಟ್ಟ ಗ್ರಾಪಂ ಅಧಿಕಾರಿಗಳು,ನಾಗರಬೆಟ್ಟ, ,ಹಿರೇಮುರಾಳ ,ನಾಲತವಾಡ, ಅರಸನಾಳ, ಜಂಗಮುರಾಳ, ಮಾವಿನಬಾವಿ, ಬೂದಿಹಾಳ ಪಿಎನ್,ಸರೂರ ಭಾಗದ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.ತಾಳಿಕೋಟಿ,ಮುದ್ದೇಬಿಹಾಳ ಠಾಣೆಯ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯ: ನಾಗರಬೆಟ್ಟ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಅದನ್ನು ಸರಿಪಡಿಸುವಂತೆ ಗ್ರಾಮಸ್ಥರು ಶಾಸಕರ ಮೇಲೆ ಒತ್ತಡ ಹೇರಿದರು.ಆಗ ಸ್ಥಳದಲ್ಲಿದ್ದ ಆರ್‌ಡಬ್ಲೂö್ಯಎಸ್ ಎಇಇ ಆರ್.ಎಸ್.ಹಿರೇಗೌಡರ ಅವರನ್ನು ಕರೆದ ಶಾಸಕರು, ಕುಡಿವ ನೀರಿನ ಸಮಸ್ಯೆ ಆಗದಂತೆ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.

Latest News

ಎರಡು ದಿನಗಳಲ್ಲಿ ಕಾಲುವೆಗಳಿಗೆ ನೀರು:  ಅಧಿಕಾರಿಗಳೊಂದಿಗೆಶಾಸಕ ನಾಡಗೌಡರ ಸಮಾಲೋಚನೆ

ಎರಡು ದಿನಗಳಲ್ಲಿ ಕಾಲುವೆಗಳಿಗೆ ನೀರು: ಅಧಿಕಾರಿಗಳೊಂದಿಗೆಶಾಸಕ ನಾಡಗೌಡರ ಸಮಾಲೋಚನೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ರೈತರ ಜಮೀನುಗಳಿಗೆ ನೀರು ಸಿಗದೆ ತೀವ್ರ ತೊಂದರೆಯಾಗುತ್ತಿರುವ

ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಗೆ ಅದ್ದೂರಿ ಸ್ವಾಗತ

ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಗೆ ಅದ್ದೂರಿ ಸ್ವಾಗತ

ಮುದ್ದೇಬಿಹಾಳ : ಕಳ್ಳತನವಾಗಿದ್ದ ಬೆಳ್ಳಿ ಮೂರ್ತಿ ಪೊಲೀಸರ ಚುರುಕಾದ ತನಿಖೆಯಿಂದ ಗಟ್ಟಿ ಬೆಳ್ಳಿ ರೂಪದಲ್ಲಿ

ಸಹಕಾರ ಸಪ್ತಾಹ ಸಮಾರೋಪ:                                                   ಸಹಕಾರ ತತ್ವದಿಂದ ಗ್ರಾಮೀಣರ ಆರ್ಥಿಕಾಭಿವೃದ್ಧಿ-ಬಿರಾದಾರ

ಸಹಕಾರ ಸಪ್ತಾಹ ಸಮಾರೋಪ: ಸಹಕಾರ ತತ್ವದಿಂದ ಗ್ರಾಮೀಣರ ಆರ್ಥಿಕಾಭಿವೃದ್ಧಿ-ಬಿರಾದಾರ

ಮುದ್ದೇಬಿಹಾಳ : ಸಹಕಾರ ಚಳುವಳಿಯಿಂದ ಗ್ರಾಮೀಣ ಪ್ರದೇಶದಲ್ಲಿ ರೈತರು,ದುರ್ಬಲ ವರ್ಗದವರ ಏಳ್ಗೆಗೆ ಆಸರೆಯಾಗಿದೆ ಎಂದು

ಬಸವಣ್ಣನವರ ಅವಹೇಳನ : ಬಸವಾಭಿಮಾನಿಗಳ ಆಕ್ರೋಶ

ಬಸವಣ್ಣನವರ ಅವಹೇಳನ : ಬಸವಾಭಿಮಾನಿಗಳ ಆಕ್ರೋಶ

ಮುದ್ದೇಬಿಹಾಳ : ಬಸವಣ್ಣನವರ ಬಗ್ಗೆ ಬಂದಿರುವಷ್ಟು ಸಾಹಿತ್ಯ ಬೇರೆಯವರ ಬಗ್ಗೆ ಬಂದಿಲ್ಲ.ಆದರೆ ಕೆಲವು ಕುತ್ಸಿತ

ವಿಜಯಪುರ ಜಿಲ್ಲೆಯ ಮೊದಲ ಕಾರ್ಖಾನೆ ಹೆಗ್ಗಳಿಕೆ:       ಯರಗಲ್ ಬಾಲಾಜಿ ಶುಗರ‍್ಸ್’ನಿಂದ  ಟನ್ ಕಬ್ಬಿಗೆ ನಾಲ್ಕು ಸಾವಿರ ರೂ.ಘೋಷಣೆ

ವಿಜಯಪುರ ಜಿಲ್ಲೆಯ ಮೊದಲ ಕಾರ್ಖಾನೆ ಹೆಗ್ಗಳಿಕೆ: ಯರಗಲ್ ಬಾಲಾಜಿ ಶುಗರ‍್ಸ್’ನಿಂದ ಟನ್ ಕಬ್ಬಿಗೆ ನಾಲ್ಕು ಸಾವಿರ ರೂ.ಘೋಷಣೆ

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸಿರುವ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ –ಮದರಿ ಬಾಲಾಜಿ ಶುಗರ‍್ಸ್ ಅಂಡ್ ಕೆಮಿಕಲ್ಸ್ ಪ್ರೆವೇಟ್ ಲಿಮಿಟೆಡ್ ಕಾರ್ಖಾನೆಯು ಟನ್ ಕಬ್ಬಿಗೆ ಒಟ್ಟು ನಾಲ್ಕು ಸಾವಿರ ರೂ.ಘೋಷಣೆ ಮಾಡುವ ಮೂಲಕ ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿದೆ. ಕಾರ್ಖಾನೆಯು ಸನ್ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ಒಟ್ಟು 4,000 ರೂ.ದರ ನಿಗದಿಪಡಿಸಿದೆ.ಈ ಕುರಿತು ನ.13ರಂದು ಕಾರ್ಖಾನೆಯ ಆಡಳಿತ ಮಂಡಳಿಯು ವಿಜಯಪುರ ಜಿಲ್ಲಾಧಿಕಾರಿಗಳಿಗೆ

ಕಬ್ಬು ಪೂರೈಸಲು ರೈತರಿಗೆ ಮನವಿ:                                                                 ನ.20 ಕ್ಕೆ ಸುಣಕಲ್ ಆರ್.ಬಿ.ಶುಗರ‍್ಸ್ ಕಾರ್ಯಾರಂಭ

ಕಬ್ಬು ಪೂರೈಸಲು ರೈತರಿಗೆ ಮನವಿ: ನ.20 ಕ್ಕೆ ಸುಣಕಲ್ ಆರ್.ಬಿ.ಶುಗರ‍್ಸ್ ಕಾರ್ಯಾರಂಭ

ಮುದ್ದೇಬಿಹಾಳ : ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಒಡೆತನದ ಆರ್.ಬಿ.ಶುಗರ‍್ಸ್ನಲ್ಲಿ ನ.20 ರಂದು ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದ್ದು ಈ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಪೂರೈಕೆ ಮಾಡಿ ಕಾರ್ಖಾನೆಯೊಂದಿಗೆ ಸಹಕರಿಸಬೇಕು ಎಂದು ಸುಣಕಲ್ ಆರ್.ಬಿ.ಶುರ‍್ಸ್ನ ತಾಂತ್ರಿಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಎಸ್.ಆರ್.ಕುಂದರಗಿ ತಿಳಿಸಿದರು. ಪಟ್ಟಣದ ಪಂಜುರ್ಲಿ ಹೊಟೇಲ್ ಸಭಾಂಗಣದಲ್ಲಿ ಬುಧವಾರ ಅವರು ಮಾತನಾಡಿದರು.ನಿತ್ಯವೂ 5000 ಟನ್ ಕಬ್ಬು ನುರಿಸುವ ಸಾಮರ್ಥ್ಯವನ್ನು ಕಾರ್ಖಾನೆ ಹೊಂದಿದೆ.ಮುದ್ದೇಬಿಹಾಳ ತಾಲ್ಲೂಕಿನಲ್ಲಿ