ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಯಡಿ ಅಳಡಿಸಿರುವ ಪೈಪಲೈನ್ ಕಳಪೆ ಗುಣಮಟ್ಟದ್ದಾಗಿದೆ ಎಂಬ ರೈತರ ಆರೋಪಗಳ ಹಿನ್ನೆಲೆಯಲ್ಲಿ ಕ್ವಾಲಿಟಿ ಕಂಟ್ರೋಲರ್ರಿoದ ತಪಾಸಣೆ ನಡೆಸಿ ವರದಿ ಸಲ್ಲಿಸಲು ತಿಳಿಸಿದ್ದು ಎಲ್ಲೆಲ್ಲಿ ಪೈಪ್ಗಳು ಒಡೆದಿವೆ ಅವುಗಳನ್ನು ಬದಲಾಯಿಸುವಂತೆ ತಿಳಿಸಿದ್ದೇವೆ.ಬರಗಾಲದ ಸಮಯದಲ್ಲಿ ನೀರಾವರಿ ಯೋಜನೆಗಳಿಗೆ ರೈತರು ಸಹಕಾರ ನೀಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಸಮೀಪದ ನಾಗರಬೆಟ್ಟ ಬೆಟ್ಟದಲ್ಲಿರುವ ಪರಮಾನಂದ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಕೆಬಿಜೆಎನ್ಎಲ್ ಹಾಗೂ ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಒಳಪಡುವ ಗ್ರಾಮಗಳ ರೈತರ ಸಮಾಲೋಚನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಟ್ರಯಲ್ ರನ್ ಮಾಡುವ ಹಂತದಲ್ಲಿ ಕೆಲವೆಡೆ ಪೈಪ್ ಒಡೆದಿದ್ದವು.ರೈತರು ಆತಂಕಗೊoಡಿದ್ದರು.ಗುತ್ತಿಗೆದಾರರದ್ದು ಎರಡು ವರ್ಷ ನಿರ್ವಹಣಾ ಅವಧಿ ಇದ್ದು ಅದನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ತಿಳಿಸಿದ್ದೇವೆ.ರೈತರು ಸಹಕಾರ ನೀಡಿದರೆ ಕೆಲಸ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಹೇಳಿದರು.
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕನ್ಸೆಂಟ್ ಅವಾರ್ಡ್ ಆದರೂ ಪರಿಹಾರ ಬಂದಿಲ್ಲ ಎಂದು ರೈತರು ಗಮನಕ್ಕೆ ತಂದಿದ್ದಾರೆ.ಅದನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು ಜವಾಬ್ದಾರಿ ತಗೆದುಕೊಂಡಿದ್ದು ಶೀಘ್ರದಲ್ಲಿ ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದಾಗಿ ತಿಳಿಸಿದ್ದಾರೆ.ಪ್ರತಿ ಶುಕ್ರವಾರ ಮುದ್ದೇಬಿಹಾಳದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಇರುತ್ತಾರೆ.ರೈತರನ್ನು ಕರೆಯಿಸಿ ಅವರ ಪ್ರಕರಣಗಳ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಕೆರೆಗಳಿಗೆ ನೀರು ಹರಿಸಬೇಕು ಎಂಬ ಆಗ್ರಹಗಳ ಕುರಿತು 7 ಟಿಎಂಸಿ ನೀರು ಕಾಯ್ದಿರಿಸಿದ್ದು ತಿಂಗಳಿಗೊಮ್ಮೆ ನೀರು ಹರಿಸುತ್ತೇವೆ.ಯೋಜನೆ ಪೂರ್ಣಗೊಂಡ ಬಳಿಕ ಸಿಎಂ ಕರೆಯಿಸಿ ಉದ್ಘಾಟನೆ ಮಾಡಿಸುತ್ತೇವೆ ಎಂದು ಉತ್ತರಿಸಿದರು.
ಜನರಲ್ ಅವಾರ್ಡ್ ಮಾಡಲು ಅವಕಾಶ ಇಲ್ಲ.ಕನ್ಸೆಂಟ್ ಅವಾರ್ಡ್ಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಪಾಟೀಲ,ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ,ರೈತ ಮುಖಂಡರಾದ ಬಸನಗೌಡ ಸಿದರೆಡ್ಡಿ,ಮಲ್ಲಿಕಾರ್ಜುನ ಸಿದರೆಡ್ಡಿ ಮತ್ತಿತರರು ಮಾತನಾಡಿ, ಮೊದಲು ನಾಗರಬೆಟ್ಟ ಏತ ನೀರಾವರಿ ಯೋಜನೆ ಗುಣಮಟ್ಟದಿಂದ ನಿರ್ವಹಿಸಲು ಸಂಬoಧಿಸಿದವರಿಗೆ ಸೂಚನೆ ನೀಡಬೇಕು.ನೀರು ಪೋಲಾಗದಂತೆ ಯಾರಿಗೂ ಅನ್ಯಾಯವಾಗದಂತೆ ಎಲ್ಲರಿಗೂ ನೀರು ದೊರೆಯಬೇಕು.ರೈತರ ಬೇಡಿಕೆಯಂತೆ ಅವರ ಭೂಮಿಗಳಿಗೆ ಒಪ್ಪಿತ ದರದಂತೆ ಪರಿಹಾರ ನೀಡಬೇಕು.ನಾಗರಬೆಟ್ಟ ಭಾಗದ ಕೆರೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ವಿಶೇಷ ಭೂಸ್ವಾಧೀನಾಧಿಕಾರಿ ಎಂ.ಎಸ್.ನಾಗಠಾಣ ಮಾತನಾಡಿ, ನಾಗರಬೆಟ್ಟ ಏತ ನೀರಾವರಿ ಯೋಜನೆಗೆ 150.34 ಎಕರೆ ಜಮೀನು ಕನ್ಸೆಂಟ್ ಅವಾರ್ಡ್ಗೆ ಪರಿಗಣಿಸಲಾಗಿದ್ದು ಈಗಾಗಲೇ 39.9 ಎಕರೆ ಜಮೀನು ಅಂತಿಮ ಹಂತದ ಅವಾರ್ಡ್ಗೆ ಸಲ್ಲಿಸಲಾಗಿದೆ.111.25 ಎಕರೆ ಕನ್ಸೆಂಟ್ ಅವಾರ್ಡ್ಗೆ ಬಾಕಿ ಉಳಿಸಿದೆ ಎಂದು ತಿಳಿಸಿದರು.ಯೋಜನೆಯ ಕುರಿತು ಈಗಾಗಲೇ ಗೆಜೆಟ್ ಆಗಿದ್ದು ಅವಾರ್ಡ್ ಅಪ್ರೂವ್ ಹಂತದಲ್ಲಿವೆ.ನೀರಾವರಿ ಜಮೀನಿಗೆ ಎಕರೆಗೆ 30 ಲಕ್ಷ ರೂ.ಒಣಬೇಸಾಯದ ಜಮೀನಿಗೆ 25 ಲಕ್ಷ ರೂ.ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೆಬಿಜೆಎನ್ಎಲ್ ಎಸ್ಇ ಬಿ.ಎಸ್.ಪಾಟೀಲ ಮಾತನಾಡಿ, ಆದ್ಯತೆ ಮೇರೆಗೆ ಕಾಲುವೆಗೆ ನೀರು ಹರಿಸುವ ಕಾರ್ಯ ಮಾಡಲಾಗುತ್ತದೆ.ರಿಪೇರಿ ಕೆಲಸ ಮುಗಿದ ಬಳಿಕ ನೀರು ಮತ್ತೆ ಹರಿಸಿ ತಪಾಸಣೆ ನಡೆಸಲಾಗುತ್ತದೆ.ಯಾವುದೇ ಸಮಸ್ಯೆ ಉಂಟಾಗದಿದ್ದರೆ ನೀರು ಹರಿಸುವ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.
ನಾಲತವಾಡದ ಮುಖಂಡ ಅಮರೇಶ ದೇಶಮುಖ,ಹಣಮಂತ ಕುರಿ,ಮಹಾಂತೇಶ ಮನೆದಾಳಮಠ ಸೇರಿದಂತೆ ಕೆಬಿಜೆಎನ್ಎಲ್ ಅಧಿಕಾರಿಗಳು,ನಾಗರಬೆಟ್ಟ ಗ್ರಾಪಂ ಅಧಿಕಾರಿಗಳು,ನಾಗರಬೆಟ್ಟ, ,ಹಿರೇಮುರಾಳ ,ನಾಲತವಾಡ, ಅರಸನಾಳ, ಜಂಗಮುರಾಳ, ಮಾವಿನಬಾವಿ, ಬೂದಿಹಾಳ ಪಿಎನ್,ಸರೂರ ಭಾಗದ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.ತಾಳಿಕೋಟಿ,ಮುದ್ದೇಬಿಹಾಳ ಠಾಣೆಯ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯ: ನಾಗರಬೆಟ್ಟ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಅದನ್ನು ಸರಿಪಡಿಸುವಂತೆ ಗ್ರಾಮಸ್ಥರು ಶಾಸಕರ ಮೇಲೆ ಒತ್ತಡ ಹೇರಿದರು.ಆಗ ಸ್ಥಳದಲ್ಲಿದ್ದ ಆರ್ಡಬ್ಲೂö್ಯಎಸ್ ಎಇಇ ಆರ್.ಎಸ್.ಹಿರೇಗೌಡರ ಅವರನ್ನು ಕರೆದ ಶಾಸಕರು, ಕುಡಿವ ನೀರಿನ ಸಮಸ್ಯೆ ಆಗದಂತೆ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.







