Vijayalakshmi Ilakalla Electd President, Gangana Gowdra Electd Unopposed As Vice President

ವಿಜಯಲಕ್ಷ್ಮಿ ಇಲಕಲ್ಲ ಅಧ್ಯಕ್ಷೆ, ಗಂಗನಗೌಡ್ರ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ವಿಜಯಲಕ್ಷ್ಮಿ ಇಲಕಲ್ಲ ಅಧ್ಯಕ್ಷೆ, ಗಂಗನಗೌಡ್ರ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ/ನಾಲತವಾಡ : ಪಟ್ಟಣ ಪಂಚಾಯತ್ ಆಡಳಿತ ನಿರೀಕ್ಷೆಯಂತೆ ಕಾಂಗ್ರೆಸ್ ಸದಸ್ಯರ ಪಾಲಾಗಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

14 ಸದಸ್ಯರ ಬಲದ ಪಟ್ಟಣ ಪಂಚಾಯತ್‌ನಲ್ಲಿ ಸೋಮವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು.

ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮಿ ಇಲಕಲ್ಲ, ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಗಂಗನಗೌಡರ ಅವರಿಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇಬ್ಬರ ನಾಮಪತ್ರಗಳು ಕ್ರಮಬದ್ಧವಾಗಿದ್ದು ವಿಜಯಲಕ್ಷ್ಮಿ ಇಲಕಲ್ ಅಧ್ಯಕ್ಷರಾಗಿ, ಬಸವರಾಜ ಗಂಗನಗೌಡರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರ್ರು ಆಗಿರುವ ಚುನಾವಣಾಧಿಕಾರಿ ಬಲರಾಮ ಕಟ್ಟಿಮನಿ ಘೋಷಿಸಿದರು.

ಶಾಸಕ ನಾಡಗೌಡರ ಭಾಗಿ:

ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ವಿಧಾನಸಭೆ, ಲೋಕಸಭೆ ಸದಸ್ಯರಿಗೂ ಪಾಲ್ಗೊಳ್ಳಲು ಅವಕಾಶ ಇರುತ್ತದೆ. ಈ ಹಿನ್ನೆಲೆಯಲ್ಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾದರು.

ಅಧ್ಯಕ್ಷ ಸ್ಥಾನಕ್ಕೆ ಎಸ್.ಬಿ.ಗಂಗನಗೌಡರ ಸೂಚಕರಾಗಿ ಸಹಿ ಮಾಡಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಸಂಗಣ್ಣ ಬಾರಡ್ಡಿ ಸೂಚಕರಾಗಿ ಸಹಿ ಮಾಡಿದರು. ಪಪಂ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಹಿಸಿದರು.

ವಿಜಯೋತ್ಸವದ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ನಾಲತವಾಡ ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರದಿಂದ ಬಂದಿರುವ ಯೋಜನೆಗಳನ್ನು ಬಡವರಿಗೆ ತಲುಪಿಸುವ ಕೆಲಸ ಮಾಡಬೇಕು. ಒಳ್ಳೆಯ ಆಡಳಿತ ನೀಡುವಂತೆ ಶುಭ ಹಾರೈಸಿದರು.

ಇದನ್ನೂ ಓದಿ: ಶರೀಫ್ ಅಜ್ಜರ ಹೋಲುವ ಗಣೇಶ ಮೂರ್ತಿ ಪ್ರತಿಷ್ಠಾಪನೆ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ಶಂಕರರಾವ ದೇಶಮುಖ, ಗುರುಪ್ರಸಾದ ದೇಶಮುಖ, ರಾಯನಗೌಡ ತಾತರೆಡ್ಡಿ, ಪಟ್ಟಣದ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪೃಥ್ವಿರಾಜ ನಾಡಗೌಡ್ರ ಸೇರಿದಂತೆ ಸದಸ್ಯರು, ಕಾಂಗ್ರೆಸ್ ಮುಖಂಡರು ಇದ್ದರು.

Latest News

4 ತಿಂಗಳ ಗರ್ಭಿಣಿ ಆತ್ಮಹತ್ಯೆ..!

4 ತಿಂಗಳ ಗರ್ಭಿಣಿ ಆತ್ಮಹತ್ಯೆ..!

ಕಲಬುರಗಿ: ಪ್ರೀತಿಸಿ ಮದುವೆಯಾದ ಪತಿಯ ನಿರಂತರ ಕಿರುಕುಳಕ್ಕೆ ಬೇಸತ್ತು 4 ತಿಂಗಳ ಗರ್ಭಿಣಿಯೊಬ್ಬರು ತವರು

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ:            ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸನ್ 2026-31ನೇ ಅವಧಿಗೆ

ನಾಗರಬೆಟ್ಟದಲ್ಲಿ ಜೂನ್ ಮೊದಲ ವಾರದಲ್ಲಿ ಹೋರಾಟ ನಡೆಸಲು ನಿರ್ಧಾರ

ನಾಗರಬೆಟ್ಟದಲ್ಲಿ ಜೂನ್ ಮೊದಲ ವಾರದಲ್ಲಿ ಹೋರಾಟ ನಡೆಸಲು ನಿರ್ಧಾರ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸಲು

ಮೇ.20 ರಂದು ರಾಷ್ಟ್ರವ್ಯಾಪಿ ಔಷಧಿ ವ್ಯಾಪಾರಸ್ಥರಿಂದ ಬಂದ್‌ಗೆ ಕರೆ

ಮೇ.20 ರಂದು ರಾಷ್ಟ್ರವ್ಯಾಪಿ ಔಷಧಿ ವ್ಯಾಪಾರಸ್ಥರಿಂದ ಬಂದ್‌ಗೆ ಕರೆ

ಮುದ್ದೆಬಿಹಾಳ : ಆನ್‌ಲೈನ್ ಪೋರ್ಟಲ್‌ಗಳ ಅನಿಯಂತ್ರಿತ ಕಾರ್ಯನಿರ್ವಹಣೆ ಮತ್ತು ದರೋಡೆಕೋರತನದ ಬೆಲೆ ಅಕ್ರಮಗಳು ಸೇರಿದಂತೆ

SSLC RE VALUVETION RESULT :                                                            ಮೈಲೇಶ್ವರ ಬ್ರಿಲಿಯಂಟ್ ಶಾಲೆ ವಿದ್ಯಾರ್ಥಿನಿ ಗಂಗಮ್ಮ ರಾಜ್ಯಕ್ಕೆ ಫಸ್ಟ್ ರ‍್ಯಾಂಕ್

SSLC RE VALUVETION RESULT : ಮೈಲೇಶ್ವರ ಬ್ರಿಲಿಯಂಟ್ ಶಾಲೆ ವಿದ್ಯಾರ್ಥಿನಿ ಗಂಗಮ್ಮ ರಾಜ್ಯಕ್ಕೆ ಫಸ್ಟ್ ರ‍್ಯಾಂಕ್

ತಾಳಿಕೋಟಿ : ಎಸ್.ಎಸ್.ಎಲ್.ಸಿ ಮರು ಮೌಲ್ಯಮಾಪನದಲ್ಲಿ ಈ ಮೊದಲು ರಾಜ್ಯಕ್ಕೆ ಮೂರನೆ ಸ್ಥಾನ ಪಡೆದುಕೊಂಡಿದ್ದ ತಾಲ್ಲೂಕಿನ ಮೈಲೇಶ್ವರದ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಗಂಗಮ್ಮ ಕೋಳೂರುಗೆ ಮತ್ತೆ ಎರಡು ಅಂಕಗಳು ಬಂದಿದ್ದು ಅದರೊಂದಿಗೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ತಾಳಿಕೋಟಿ ಪಟ್ಟಣದ ನಿವಾಸಿಯಾಗಿರುವ ಗಂಗಮ್ಮ ಅಶೋಕ ಕೋಳೂರ ಈ ಮೊದಲು ಫಲಿತಾಂಶ ಬಂದಾಗ 623 ಅಂಕ ಪಡೆದುಕೊಂಡು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದ್ದಳು.ಆದರೆ ಶಾಲೆಯ

ಆಕ್ಸಫರ್ಡ್ ಪಾಟೀಲ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿಗೆ ಪೂರ್ಣ ಅಂಕ:                                                                  ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನದಲ್ಲಿ ಸೃಷ್ಟಿ ಪಾಟೀಲ್ ರಾಜ್ಯಕ್ಕೆ ಪ್ರಥಮ ಸ್ಥಾನ

ಆಕ್ಸಫರ್ಡ್ ಪಾಟೀಲ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿಗೆ ಪೂರ್ಣ ಅಂಕ: ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನದಲ್ಲಿ ಸೃಷ್ಟಿ ಪಾಟೀಲ್ ರಾಜ್ಯಕ್ಕೆ ಪ್ರಥಮ ಸ್ಥಾನ

ಮುದ್ದೇಬಿಹಾಳ : ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್ ಸ್ಥಾನ ಗಳಿಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ. ತಾಲ್ಲೂಕಿನ ನಾಲತವಾಡದ ನಿವಾಸಿ ಸೃಷ್ಟಿ ಎಸ್.ಪಾಟೀಲ ವಿದ್ಯಾರ್ಥಿನಿ ಇದೀಗ 625ಕ್ಕೆ 625 ಅಂಕ ಪಡೆದುಕೊಂಡು ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದುಕೊಂಡಿದ್ದಾಳೆ.ಮೊದಲು ಫಲಿತಾಂಶ ಪ್ರಕಟಗೊಂಡಾಗ ಕನ್ನಡ 125,ಗಣಿತ 100,ಹಿಂದಿ 100,ಸಮಾಜ ವಿಜ್ಞಾನ 100, ಇಂಗ್ಲಿಷ್‌ಗೆ 99 ಹಾಗೂ ವಿಜ್ಞಾನ ವಿಷಯದಲ್ಲಿ 97