Murder Case Image of murder symbol

Crime news: ಪಾಗಲ್ ಪ್ರೇಮಿಯಿಂದ ಹುಡುಗಿ ತಾಯಿಗೆ ಚಾಕು ಇರಿತ!

Crime news: ಪಾಗಲ್ ಪ್ರೇಮಿಯಿಂದ ಹುಡುಗಿ ತಾಯಿಗೆ ಚಾಕು ಇರಿತ!

ಹುಬ್ಬಳ್ಳಿ: ಪ್ರೀತ್ಸೆ ಪ್ರೀತ್ಸೆ ಅಂತ ಹುಡುಗಿಯ ಹಿಂದ ಬಿದ್ದ ಪಾಗಲ್ ಪ್ರೇಮಿ, ತಾನು ಪ್ರೀತಿಸುತ್ತಿರುವ ಹುಡುಗಿಯ ತಾಯಿಗೆ ಚಾಕು ಇರಿದ ಘಟನೆ ನಗರದ ಲೋಹಿಯಾ ನಗರದಲ್ಲಿ ನಡೆದಿದೆ. (Crime news)

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ‌ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ಮಹೇಶ್ (24) ಎಂಬಾತನೇ ನೀಲಾ ಹಂಪಣ್ಣವ‌ರ್ ಎಂಬ ಮಹಿಳೆಗೆ ಹೊಟ್ಟೆ ಭಾಗಕ್ಕೆ ಚಾಕು ಇರಿದು ಪರಾರಿಯಾಗಿದ್ದ. ಘಟನೆ ನಡೆದ ಕೆಲವೊತ್ತಿನಲ್ಲೇ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿರುವ ಪ್ರಕರಣ ನಡೆದಿದೆ.

ನೀಲಾ ಹಂಪಣ್ಣನವರ ಎಂಬ ಮಹಿಳೆಯ ಮೇಲೆ ಸಂಜೆ 4 ಗಂಟೆಯ ಸುಮಾರಿಗೆ ಮಹೇಶ ಚಾಕು ಇರಿದುಪರಾರಿಯಾಗಿದ್ದಾನೆ. ಕೂಡಲೇ ಸ್ಥಳೀಯರ ಸಹಾಯದಿಂದ ಗಾಯಗೊಂಡ ಮಹಿಳೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾ‌ರ್ ಭೇಟಿ ನೀಡಿ ಗಾಯಾಳು ಹಾಗೂ ಆಕೆಯ ಕುಟುಂಬಸ್ಥರಿಂದ ಮಾಹಿತಿ ಪಡೆದ ಕೆಲವೊತ್ತಿನಲ್ಲಿ ಆರೋಪಿಯನ್ನ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಂಡು ತಿಂದಿರುವ ಆರೋಪಿ ಹಾಗೂ ಗಾಯಾಳು ಅಧಿಕಾರಿಯನ್ನ ಕಿಮ್ಸ್‌ಗೆ ದಾಖಲು ಮಾಡಲಾಗಿದೆ.

ಮಹೇಶನನ್ನು ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲಾರಿ – ಕಾರು ಮುಖಾಮುಖಿ ಡಿಕ್ಕಿ, ನಾಲ್ವರು ಸ್ಥಳದಲ್ಲೇ ದುರ್ಮರಣ

Latest News

ಕಬ್ಬು ಬೆಳೆಗಾರರ ಜೊತೆ ಕೇಂದ್ರದ ಚರ್ಚೆ ವಿಫಲ:              ಅ.13 ರಿಂದ ನಿಡಗುಂದಿ-ಆಲಮಟ್ಟಿ ಹೈವೆಯಲ್ಲಿ ರಸ್ತೆ ತಡೆ

ಕಬ್ಬು ಬೆಳೆಗಾರರ ಜೊತೆ ಕೇಂದ್ರದ ಚರ್ಚೆ ವಿಫಲ: ಅ.13 ರಿಂದ ನಿಡಗುಂದಿ-ಆಲಮಟ್ಟಿ ಹೈವೆಯಲ್ಲಿ ರಸ್ತೆ ತಡೆ

ವಿಜಯಪುರ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅ.13ರಿಂದ ನಿಡಗುಂದಿ-ಆಲಮಟ್ಟಿ ರಾಷ್ಟ್ರೀಯ

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಮುದ್ದೇಬಿಹಾಳ : ರಾಜ್ಯದ ಸಕ್ಕರೆ ಕಾರ್ಖಾನೆಗಳ ಅಸೋಶಿಯೇಷನ್‌ದಲ್ಲಿ ಯಾವ ತೀರ್ಮಾನ ಕೈಗೊಂಡಿದೆಯೋ ಅದರಂತೆ ನಮ್ಮ

ಮಾಜಿ ಶಾಸಕ ಎ.ಎಸ್;ಪಾಟೀಲ ನಡಹಳ್ಳಿ ಆಕ್ರೋಶ:         ಆಲಮಟ್ಟಿ ಆಣೆಕಟ್ಟು ಎತ್ತರ ವಿರೋಧಿಸಿದ ತೆಲಂಗಾಣಕ್ಕೆ ಕೃಷ್ಣೆ ನೀರು..!

ಮಾಜಿ ಶಾಸಕ ಎ.ಎಸ್;ಪಾಟೀಲ ನಡಹಳ್ಳಿ ಆಕ್ರೋಶ: ಆಲಮಟ್ಟಿ ಆಣೆಕಟ್ಟು ಎತ್ತರ ವಿರೋಧಿಸಿದ ತೆಲಂಗಾಣಕ್ಕೆ ಕೃಷ್ಣೆ ನೀರು..!

ಮುದ್ದೇಬಿಹಾಳ : ತೆಲಂಗಾಣಕ್ಕೆ ಅಧಿಕೃತ ಆದೇಶವಿಲ್ಲದೆ ಸಿಎಂ ಮೌಖಿಕ ಸೂಚನೆ ಮೇರೆಗೆ ಕೃಷ್ಣಾ ನದಿ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ:                           ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ: ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಮುದ್ದೇಬಿಹಾಳ : ದೆಹಲಿಯಲ್ಲಿ ಕೇಂದ್ರ ಸರ್ಕಾರ ರೈತ ಸಂಘಟನೆಗಳೊAದಿಗೆ ಅ.12 ರಂದು ನಡೆಯಲಿರುವ ಉನ್ನತಮಟ್ಟದ

ಸಜ್ಜನ ಗಾಣಿಗ ಸಮಾಜದಿಂದ ಸನ್ಮಾನ :                                     ಗಾಣಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ-ದೇಸಾಯಿ

ಸಜ್ಜನ ಗಾಣಿಗ ಸಮಾಜದಿಂದ ಸನ್ಮಾನ : ಗಾಣಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ-ದೇಸಾಯಿ

ಮುದ್ದೇಬಿಹಾಳ : ಐದು ಸಾವಿರ ರೂ.ಕೊಡುವ ಮುನ್ನ ಪತ್ರಕರ್ತರನ್ನು ಕರೆದು ಎಲ್ಲರಿಗೂ ತೋರಿಸುವಂತೆ ಪ್ರಚಾರಗಿಟ್ಟಿಸಿಕೊಳ್ಳುವ ಜನರ ಮಧ್ಯೆ ಯಾವುದೇ ಸ್ವಾರ್ಥವಿಲ್ಲದೇ ಎಕರೆಗಟ್ಟಲೆ ಜಮೀನು ದಾನ ಮಾಡಿದರೂ ಅದನ್ನು ಹೇಳಿಕೊಳ್ಳುವ ಕಾರ್ಯ ಸಜ್ಜನ ಗಾಣಿಗ ಸಮಾಜದವರು ಮಾಡಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು. ಪಟ್ಟಣದ ಏಪಿಎಂಸಿ ಸಭಾಂಗಣದಲ್ಲಿ ತಾಲ್ಲೂಕು ವೀರಶೈವ ಸಜ್ಜನ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ಮುದ್ದೇಬಿಹಾಳ : ನಮ್ಮ ತಾಲ್ಲೂಕಿನ ರೈತರನ್ನು ಅಡ್ಡ ಹಾದಿಗೆಳೆಯುವ ಕುತಂತ್ರ ನಡೆದಿವೆ. ಕುತಂತ್ರಿಗಳ ಪ್ರಚೋದನೆಗೆ ಒಳಗಾಗಬೇಡಿ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾನೂ ಸಹ ರೈತನೇ, ವೇದಿಕೆಯಲ್ಲಿರುವ ಇವರೆಲ್ಲ ಅಧಿಕಾರಿಗಳು ರೈತರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಇಲ್ಲ ಸಲ್ಲದ ಅಪಪ್ರಚಾರ ನಡೆದಿದೆ. ಸರಕಾರ ನಿಮ್ಮ ಪರವಾಗಿಯೇ ಇರುತ್ತದೆ ಎನ್ನುವುದನ್ನು ಮರೆಯಬೇಡಿ. ಶಾಸಕ ನಾಡಗೌಡರಿಗೆ