Murder Case Image of murder symbol

Murder: ಶೆಡ್ಡಿನಲ್ಲಿ ಜೋಡಿ ಕೊಲೆ! ಮತ್ತೊಮ್ಮೆ ಬೆಚ್ಚಿಬಿದ್ದ ರಾಜಧಾನಿ

Murder: ಶೆಡ್ಡಿನಲ್ಲಿ ಜೋಡಿ ಕೊಲೆ! ಮತ್ತೊಮ್ಮೆ ಬೆಚ್ಚಿಬಿದ್ದ ರಾಜಧಾನಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಶೆಡ್‌ನಲ್ಲಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಸಿಂಗಹಳ್ಳಿಯಲ್ಲಿ ನಡೆದಿದೆ.

ಸಿಂಗಹಳ್ಳಿ ಗ್ರಾಮದ ಬಳಿ ಎಸ್‌ಆರ್‌ಎಸ್ ಟ್ರಾವೆಲ್ಸ್ ಬಸ್‌ಗಳ ಪಾರ್ಕ್‌ ಮಾಡುವ ಜಾಗದಲ್ಲಿ ಇಬ್ಬರು ವ್ಯಕ್ತಿಗಳ ಶವ ಪತ್ತೆಯಾಗಿದೆ. ಮೃತರನ್ನು ಖಾಸಗಿ ಬಸ್ ಕ್ಲೀನರ್‌ಗಳಾಗಿ ಕೆಲಸ ಮಾಡುತ್ತಿದ್ದ ನಾಗೇಶ್ (55) ಹಾಗೂ ಮಂಜುನಾಥ್ (50) ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ ಇಬ್ಬರೂ ಕುಡಿದಿದ್ದು, ಗಲಾಟೆ ಮಾಡಿಕೊಂಡು ಪರಸ್ಪರ ಹೊಡೆದಾಡಿ ಮೃತಪಟ್ಟಿದ್ದಾರೋ ಅಥವಾ ಬೇರೆ ಯಾರೋ ಕೊಲೆ ಮಾಡಿ ಪರಾರಿಯಾಗಿದ್ದಾರೋ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

Latest News

ಪಿಎಸ್‌ಐ ಸಂಜಯ ತಿಪರೆಡ್ಡಿಗೆ ಸನ್ಮಾನ:                                       ಜೀವ ಪಣಕ್ಕಿಟ್ಟು ಕಳ್ಳರನ್ನು ಬಂಧಿಸಿದ ದಕ್ಷ ಅಧಿಕಾರಿ ತಿಪರೆಡ್ಡಿ

ಪಿಎಸ್‌ಐ ಸಂಜಯ ತಿಪರೆಡ್ಡಿಗೆ ಸನ್ಮಾನ: ಜೀವ ಪಣಕ್ಕಿಟ್ಟು ಕಳ್ಳರನ್ನು ಬಂಧಿಸಿದ ದಕ್ಷ ಅಧಿಕಾರಿ ತಿಪರೆಡ್ಡಿ

ಮುದ್ದೇಬಿಹಾಳ : ಜೀವ ಪಣಕ್ಕಿಟ್ಟು ಅಂತರಾಜ್ಯದ ಕಳ್ಳರನ್ನು ಹೆಡೆಮುರಿ ಕಟ್ಟಿದ ದಕ್ಷ ಅಧಿಕಾರಿ ಸಂಜಯ

ಹೆಸ್ಕಾಂ ಎಇಇ ಆರ್.ಆರ್.ಹಂಡಿ ಭಾಗಿ :                                              ಹೆಸ್ಕಾಂ ಕಚೇರಿಯಲ್ಲಿ ನಾರಾಯಣಗುರು,ನೂಲಿಯ ಚಂದಯ್ಯ ಜಯಂತಿ

ಹೆಸ್ಕಾಂ ಎಇಇ ಆರ್.ಆರ್.ಹಂಡಿ ಭಾಗಿ : ಹೆಸ್ಕಾಂ ಕಚೇರಿಯಲ್ಲಿ ನಾರಾಯಣಗುರು,ನೂಲಿಯ ಚಂದಯ್ಯ ಜಯಂತಿ

ಮುದ್ದೇಬಿಹಾಳ : ಬ್ರಹ್ಮಶ್ರೀ ನಾರಾಯಣಗುರು ಹಾಗೂ ಶರಣ ನೂಲಿಯ ಚಂದಯ್ಯನವರು ಕಾಯಕದ ಮಹತ್ವ ಸಾರುವ

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

ಮುದ್ದೇಬಿಹಾಳ : ರಾಜ್ಯಾದ್ಯಂತ ಬರದ ಪರಿಸ್ಥಿತಿ ಇದ್ದರೂ ವಿಜಯಪುರ ಜಿಲ್ಲೆಯಲ್ಲಿ ಕೇವಲ ಮೂರು ತಾಲ್ಲೂಕುಗಳನ್ನು

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಎಂ.ಎಸ್.ಬಡದಾನಿ ಅವರಿಗೆ ತಾಲ್ಲೂಕಿನ ಅನುದಾನಿತ

ಕಲಾವಿದರ ಸಂಘ ಉದ್ಘಾಟನೆ:                                                           ಸಮಾಜ ಬಯಸುವುದನ್ನು ಕಲಾವಿದ ನೀಡುತ್ತಾನೆ-ಹೂಗಾರ

ಕಲಾವಿದರ ಸಂಘ ಉದ್ಘಾಟನೆ: ಸಮಾಜ ಬಯಸುವುದನ್ನು ಕಲಾವಿದ ನೀಡುತ್ತಾನೆ-ಹೂಗಾರ

ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿ ಜನಪದ ಹಾಡುಗಳಲ್ಲಿ ಅಶ್ಲೀಲತೆ ಹೆಚ್ಚುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕು ಎಂದು ಎಲ್ಲರೂ ಹೇಳುತ್ತಾರೆ.ಆದರೆ ಜನರು,ಸಮಾಜ ಬಯಸುವುದನ್ನೇ ಬಡ ಕಲಾವಿದರು ನೀಡುತ್ತಾರೆ.ಮೊದಲು ಸಮಾಜ ಯಾವುದನ್ನು ಕಲಾವಿದರಿಂದ ಬಯಸಬೇಕು ಎಂಬುದನ್ನು ಆತ್ಮಾವಲೋಕನಕ್ಕೆ ಇದು ಸಕಾಲ ಎಂದು ಹಾಸ್ಯ ಕಲಾವಿದ ಗೋಪಾಲ ಹೂಗಾರ ಹೇಳಿದರು. ಪಟ್ಟಣದ ಓಸ್ವಾಲ್ ಫಂಕ್ಷನ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಪಂ.ಪುಟ್ಟರಾಜ ಗವಾಯಿಗಳ ಜನಪದ ಹಾಗೂ ಸಾಂಸ್ಕೃತಿಕ ಕಲಾವಿದರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಬಹುತೇಕ ಕಡೆಗಳಲ್ಲಿ

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಸೇವೆಗೆ ನಾಗಲಕ್ಷ್ಮೀ ಚೌಧರಿ  ಮೆಚ್ಚುಗೆ

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಸೇವೆಗೆ ನಾಗಲಕ್ಷ್ಮೀ ಚೌಧರಿ ಮೆಚ್ಚುಗೆ

ಮುದ್ದೇಬಿಹಾಳ : ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಕೊಡುವ ಪ್ರಮಾಣ ಪತ್ರವೇ ನಿಮ್ಮ ಸೇವೆಯ ನಿಜವಾದ ಅರ್ಹತೆಯಾಗಿದೆ.ಒಳ್ಳೆಯ ಸೇವೆ ನೀಡುವುದನ್ನು ಮುಂದುವರೆಸಿಕೊoಡು ಸಾಗಿ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಆಸ್ಪತ್ರೆಯ ಮೂಲಸೌಕರ‍್ಯಗಳನ್ನು ವೀಕ್ಷಿಸಿ ಬಾಣಂತಿಯರ ಕೊಠಡಿ,ಹೆರಿಗೆ ಕೊಠಡಿಗಳನ್ನು ಪರಿಶೀಲನೆ ನಡೆಸಿದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ರೋಗಿಗಳನ್ನು ಅವರ ಸಂಬoಧಿಕರನ್ನು ಮಾತನಾಡಿಸಿ ಆಸ್ಪತ್ರೆಯ ಸೇವೆ ಬಗ್ಗೆ ಮೆಚ್ಚುಗೆ