KSRTC bus overturned; Two injured

ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಇಬ್ಬರಿಗೆ ಗಾಯ

ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಇಬ್ಬರಿಗೆ ಗಾಯ

ಮುದ್ದೇಬಿಹಾಳ : ಘಟಕದಿಂದ ಬಾಗಲಕೋಟೆಗೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿರುವ ಘಟನೆ ತಾಲ್ಲೂಕಿನ ಗೆದ್ದಲಮರಿ ತಾಂಡಾ ಬಳಿ ಬುಧವಾರ ನಡೆದಿದೆ.

ಬಾಗಲಕೋಟ ಘಟಕಕ್ಕೆ ಸೇರಿದ ಈ ಬಸ್‌ನಲ್ಲಿ ಐವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದರಲ್ಲಿ ದೇವೂರು ಗ್ರಾಮದ ಈರಮ್ಮ ಕಂಬಾರ(42), ಸಂಗೀತಾ ಕಂಬಾರ(26) ಅವರಿಗೆ ಗಂಭೀರವಾದ ಗಾಯಗಳಾಗಿದ್ದು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟ ಆಸ್ಪತ್ರೆಗೆ ಕಳಿಸಲಾಗಿದೆ. ಚಾಲಕ, ನಿರ್ವಾಹಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಕುರಿತು ಮಾಹಿತಿ ನೀಡಿದ ಪಿಎಸ್‌ಐ ಸಂಜಯ ತಿಪರೆಡ್ಡಿ, ಸಾರಿಗೆ ಘಟಕ ವ್ಯವಸ್ಥಾಪಕ ಎ. ಎಚ್. ಮದಭಾವಿ ಬಸ್ ಚಾಲಕ ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧೆಗೆ ಬಸ್ ಹಾಯಿವುದರಿಂದ ಬಚಾವ್ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Latest News

ಶಿವಕುಮಾರಗೆ ಶಾರದಳ್ಳಿ ಉತ್ತಮ ಜಿಲ್ಲಾ ಅಧ್ಯಕ್ಷ ಪ್ರಶಸ್ತಿ ಪ್ರಧಾನ

ಶಿವಕುಮಾರಗೆ ಶಾರದಳ್ಳಿ ಉತ್ತಮ ಜಿಲ್ಲಾ ಅಧ್ಯಕ್ಷ ಪ್ರಶಸ್ತಿ ಪ್ರಧಾನ

ಮುದ್ದೇಬಿಹಾಳ: ವಿಜಯನಗರ ಜಿಲ್ಲೆಯಲ್ಲಿ ಜರುಗಿದ ರಾಜ್ಯ ಕರಾಟೆ ಶಿಕ್ಷಕರ ಸಂಘದ 7ನೇ ಮಹಾಸಭೆ ಕಾರ್ಯಕ್ರಮದಲ್ಲಿ

ನೀತಿ ವಿಜ್ಞಾನ ಬೋಧನೆಗೆ ನಿರ್ಧಾರ:ಮೇ.29 ರಿಂದ ಶಾಲೆಗಳು ಆರಂಭ-ಸಚಿವ ಬಂಗಾರಪ್ಪ

ನೀತಿ ವಿಜ್ಞಾನ ಬೋಧನೆಗೆ ನಿರ್ಧಾರ:ಮೇ.29 ರಿಂದ ಶಾಲೆಗಳು ಆರಂಭ-ಸಚಿವ ಬಂಗಾರಪ್ಪ

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ) : ಮೇ.29 ರಿಂದ ರಾಜ್ಯಾದ್ಯಂತ ಶಾಲೆಗಳು ಆರಂಭಗೊಳ್ಳಲಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು

ಹೊಸ ಜೀವನ ಆರಂಭವಾಗುವ ಮೊದಲೇ, ಬದುಕಿಗೆ ಕೊನೆ ವಿದಾಯ ಹೇಳಿದ ವಿಧಿ

ಹೊಸ ಜೀವನ ಆರಂಭವಾಗುವ ಮೊದಲೇ, ಬದುಕಿಗೆ ಕೊನೆ ವಿದಾಯ ಹೇಳಿದ ವಿಧಿ

ಜಮಖಂಡಿ: ತಾಳಿ ಕಟ್ಟಿದ ಹದಿನೈದು ನಿಮಿಷದಲ್ಲಿ ವರ ಸಾವನಪ್ಪಿರುವ ಘಟನೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿ

ಮೇ.18 ರಂದು ಕಲ್ಯಾಣ ಮಹೋತ್ಸವ :ಪುತ್ರನ ಮದುವೆಯೊಂದಿಗೆ 46 ಜೋಡಿ ಸಾಮೂಹಿಕ ವಿವಾಹ

ಮೇ.18 ರಂದು ಕಲ್ಯಾಣ ಮಹೋತ್ಸವ :ಪುತ್ರನ ಮದುವೆಯೊಂದಿಗೆ 46 ಜೋಡಿ ಸಾಮೂಹಿಕ ವಿವಾಹ

ಮುದ್ದೇಬಿಹಾಳ : ಸಮಾಜ ಸೇವಕ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಎನ್.ಮದರಿ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಮುದ್ದೇಬಿಹಾಳ : ಕೆಬಿಜೆಎನ್‌ಎಲ್‌ದಿಂದ ಎ.ಎಲ್.ಬಿ.ಸಿ ಕಾಲುವೆಯ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೋರ್ವ ಸಿಡಿಲಿಗೆ ಬಲಿಯಾಗಿರುವ ಘಟನೆ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಮಂಗಳವಾರ ಮದ್ಯಾಹ್ನ ನಡೆದಿದೆ. ಮೃತಪಟ್ಟ ಕಾರ್ಮಿಕನನ್ನು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆ ಜತ್ತ ತಾಲ್ಲೂಕು ಮಣಿಕನಾಳ ಗ್ರಾಮದ ಶ್ರೀಶೈಲ ರಾಮಲಿಂಗ ಮುಗಳಕೋಡ(35)ಎಂದು ಗುರುತಿಸಲಾಗಿದೆ. ಜತ್ತ ತಾಲ್ಲೂಕಿನಿಂದ 20ಕ್ಕೂ ಹೆಚ್ಚು ಕಾರ್ಮಿಕರು ಕೇಸಾಪೂರ-ಆಲೂರು ಭಾಗದಲ್ಲಿ ನಡೆದಿರುವ ಕಾಲುವೆ ಮರುನವೀಕರಣ ಕೆಲಸಕ್ಕೆ ಬಂದಿದ್ದರು. ಮಂಗಳವಾರ ಮದ್ಯಾಹ್ನ ಏಕಾಏಕಿ ಆರಂಭವಾದ ಸಿಡಿಲು, ಗುಡುಗಿನಿಂದ ಮಳೆಯಿಂದ

ಗ್ರಾಮದೇವತೆ ಜಾತ್ರೆ ಯಶಸ್ವಿಗೆ ಅಧಿಕಾರಿಗಳು ಕೈ ಜೋಡಿಸಿ : ಶಾಸಕ ನಾಡಗೌಡ

ಗ್ರಾಮದೇವತೆ ಜಾತ್ರೆ ಯಶಸ್ವಿಗೆ ಅಧಿಕಾರಿಗಳು ಕೈ ಜೋಡಿಸಿ : ಶಾಸಕ ನಾಡಗೌಡ

ಮುದ್ದೇಬಿಹಾಳ : ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಮುದ್ದೇಬಿಹಾಳ ಪಟ್ಟಣದಲ್ಲಿ ಮೇ.30 ರಿಂದ ಆರಂಭಗೊಳ್ಳಲಿರುವ ಗ್ರಾಮದೇವತೆ ಜಾತ್ರೆಯನ್ನು ಯಶಸ್ವಿಗೊಳಿಸಲು ತಾಲ್ಲೂಕು ಆಡಳಿತ ಸಂಪೂರ್ಣ ತೊಡಗಿಸಿಕೊಳ್ಳುವ ಮೂಲಕ ಸಹಕಾರ ನೀಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದ ದಾಸೋಹ ಭವನದಲ್ಲಿ ಮಂಗಳವಾರ ಗ್ರಾಮದೇವತೆ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಇದು ಸಾರ್ವತ್ರಿಕವಾಗಿ ಎಲ್ಲ ಧರ್ಮೀಯರು ಸೇರಿಕೊಂಡು ಮಾಡುವ ಜಾತ್ರೆಯಾಗಿದ್ದು ಸರ್ಕಾರ ಎಂದರೆ ಸಾರ್ವಜನಿಕರು, ಸಾರ್ವಜನಿಕರೆಂದರೆ ಸರ್ಕಾರ