ನಾಡು ನುಡಿ ವಿಚಾರದಲ್ಲಿ ರಾಜಿ ಪ್ರಶ್ನೆ ಇಲ್ಲ ಎಂದ ಕೇಂದ್ರ ಸಚಿವರು

ನಾಡು ನುಡಿ ವಿಚಾರದಲ್ಲಿ ರಾಜಿ ಪ್ರಶ್ನೆ ಇಲ್ಲ ಎಂದ ಕೇಂದ್ರ ಸಚಿವರು

ನವದೆಹಲಿ: ಉತ್ತರ ಪ್ರದೇಶದ ನೋಯ್ಡಾದಲ್ಲಿ ದೆಹಲಿ ಕರ್ನಾಟಕ ಸಂಘಕ್ಕೆ ಜಾಗ ಕೊಡಿಸುವ ಬಗ್ಗೆ ಆ ರಾಜ್ಯದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರ ಜತೆ ಚರ್ಚೆ ಮಾಡಲಾಗುವುದು ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದರು.

ರಾಜ್ಯದ ಕೇಂದ್ರ ಸಚಿವರು, ಸಂಸದರಿಗೆ ದೆಹಲಿ ಕರ್ನಾಟಕ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡು ಮಾತನಾಡಿದರು.

ಈಗಾಗಲೇ ನೋಯ್ಡಾದಲ್ಲಿ ಜಾಗ ಪಡೆಯುವ ಬಗ್ಗೆ ಸಂಘದ ವತಿಯಿಂದ ಪ್ರಯತ್ನಗಳು ನಡೆದಿವೆ. ಹೀಗಾಗಿ ಕೇಂದ್ರ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಎಲ್ಲಾ ಸಚಿವರು, ಸಂಸದರ ಜತೆ ಸೇರಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿ ಮನವಿ ಮಾಡಲಾಗುವುದು ಇಂದು ಅವರು ಹೇಳಿದರು.

ನಾವು ಎಲ್ಲಿಯೇ ಇದ್ದರೂ ಕನ್ನಡಿಗರಿಗೆ ಉಳಿಯಬೇಕು. ನಮ್ಮ ಭಾಷೆ, ಸಂಸ್ಕೃತಿ, ನಾಡು ನುಡಿಯನ್ನು ಬಿಟ್ಟು ಬದುಕಬಾರದು. ಈ ನಿಟ್ಟಿನಲ್ಲಿ ದೆಹಲಿ ಕನ್ನಡಿಗರ ಬದ್ಧತೆ, ಕನ್ನಡತನದ ಬಗ್ಗೆ ನನಗೆ ಸಂತಸವಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಾಡು ನುಡಿ, ನೆಲ ಜಲದ ವಿಷಯ ಬಂದಾಗ ರಾಜಿ ಪ್ರಶ್ನೆ ಇಲ್ಲ. ಎಲ್ಲರೂ ಒಟ್ಟಾಗಿ ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು. ಅಲ್ಲದೆ; ದೆಹಲಿ ಕರ್ನಾಟಕ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದ ಹೆಚ್.ಡಿ. ಕುಮಾರಸ್ವಾಮಿ ಅವರೂ ಸೇರಿದಂತೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ ಹಾಗೂ ಸಂಸದರಾದ ಸಿ.ಎನ್.ಮಂಜುನಾಥ್, ಮಲ್ಲೇಶ್ ಬಾಬು, ಸುಧಾಕರ್, ಮಲ್ಲೇಶ್ ಬಾಬು, ವಿಶ್ವೇಶ್ವರ ಹೆಗಡೆ ಕಾಗೇರಿ, ಪಿ.ಸಿ.ಮೋಹನ್, ಸಾಗರ ಖಂಡ್ರೆ, ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ನಾರಾಯಣ ಸಾ ಭಾಂಢಗೆ ಅವರನ್ನು ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.

ಸಂಘದ ಅಧ್ಯಕ್ಷ ಸಿ.ಪಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಸೇರಿ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Latest News

ಹೈಕೋರ್ಟ್ ನ್ಯಾ.ಇಂದಿರೇಶ್ ಹೇಳಿಕೆ:                                           ಹಳೇ ಕೋರ್ಟ್ ಜಾಗೆ ಪುರಸಭೆಗೆ ಹಸ್ತಾಂತರಕ್ಕೆ ನಿರ್ಧಾರ

ಹೈಕೋರ್ಟ್ ನ್ಯಾ.ಇಂದಿರೇಶ್ ಹೇಳಿಕೆ: ಹಳೇ ಕೋರ್ಟ್ ಜಾಗೆ ಪುರಸಭೆಗೆ ಹಸ್ತಾಂತರಕ್ಕೆ ನಿರ್ಧಾರ

ಮುದ್ದೇಬಿಹಾಳ : ಪಟ್ಟಣದ ಮುಖ್ಯ ಬಜಾರ್‌ದಲ್ಲಿರುವ ಹಳೇ ಕೋರ್ಟ್ನ ಜಾಗೆಯನ್ನು ಪುರಸಭೆಗೆ ಹಸ್ತಾಂತರಿಸಲು ನಿರ್ಧಾರ

ತಾಲ್ಲೂಕು ಆಡಳಿತದಿಂದ ಕನಕ ಜಯಂತಿ:                      ಮಾನವೀಯತೆ, ಸಮಾನತೆಗೆ ಕನಕದಾಸರ ಬದುಕೇ ಮಾದರಿ-ಬಡದಾನಿ

ತಾಲ್ಲೂಕು ಆಡಳಿತದಿಂದ ಕನಕ ಜಯಂತಿ: ಮಾನವೀಯತೆ, ಸಮಾನತೆಗೆ ಕನಕದಾಸರ ಬದುಕೇ ಮಾದರಿ-ಬಡದಾನಿ

ಮುದ್ದೇಬಿಹಾಳ : 15ನೇ ಶತಮಾನದಲ್ಲಿಯೇ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕ ಸಂತ

ಸುಣಕಲ್‌ನ ಆರ್.ಬಿ.ಶುಗರ‍್ಸ; ಇನ್ನೂ ಆರಂಭವಾಗದ ಕಬ್ಬು ನುರಿಸುವ ಕಾರ್ಯ

ಸುಣಕಲ್‌ನ ಆರ್.ಬಿ.ಶುಗರ‍್ಸ; ಇನ್ನೂ ಆರಂಭವಾಗದ ಕಬ್ಬು ನುರಿಸುವ ಕಾರ್ಯ

ಮುದ್ದೇಬಿಹಾಳ : ಪಕ್ಕದ ಲಿಂಗಸ್ಗೂರು ತಾಲ್ಲೂಕಿನ ಸುಣಕಲ್‌ನಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ನೇತೃತ್ವದಲ್ಲಿ

ಕ್ರೀಡೆ ಮಕ್ಕಳ ದೈಹಿಕ, ಮಾನಸಿಕ ಸದೃಢತೆಗೆ ಸಹಕಾರಿ-ಡಿವೈಎಸ್ಪಿ ನಂದರೆಡ್ಡಿ

ಕ್ರೀಡೆ ಮಕ್ಕಳ ದೈಹಿಕ, ಮಾನಸಿಕ ಸದೃಢತೆಗೆ ಸಹಕಾರಿ-ಡಿವೈಎಸ್ಪಿ ನಂದರೆಡ್ಡಿ

ಮುದ್ದೇಬಿಹಾಳ : ಮಕ್ಕಳನ್ನು ಶೈಕ್ಷಣಿಕವಾಗಿ ಸದೃಢಗೊಳಿಸುವುದರ ಜೊತೆಗೆ ದೈಹಿಕವಾಗಿಯೂ ಸದೃಢಗೊಳಿಸಲು ಕ್ರೀಡೆಗಳು ಮುಖ್ಯ. ಕ್ರೀಡೆಗಳಲ್ಲಿ

ರವಿ ಹಂಜ್ ಚಿತ್ರಕ್ಕೆ ಬೆಂಕಿ:                                                                ಬಸವ ಪರಂಪರೆ ವಿನಾಶಕ್ಕೆ ಷಡ್ಯಂತ್ರ ನಡೆದಿದೆ-ಬಿದರಕುಂದಿ

ರವಿ ಹಂಜ್ ಚಿತ್ರಕ್ಕೆ ಬೆಂಕಿ: ಬಸವ ಪರಂಪರೆ ವಿನಾಶಕ್ಕೆ ಷಡ್ಯಂತ್ರ ನಡೆದಿದೆ-ಬಿದರಕುಂದಿ

ಮುದ್ದೇಬಿಹಾಳ : ವೀರಶೈವ ಲಿಂಗಾಯತರ ಹೆಗಲ ಮೇಲೆ ಬಂದೂಕು ಇಟ್ಟು ಬಸವ ಪರಂಪರೆಯನ್ನು ಹಾಳು ಮಾಡುವ ಕುತಂತ್ರ ಪುರೋಹಿತಶಾಹಿ ವ್ಯವಸ್ಥೆಯಿಂದ ನಡೆದಿದೆ.ಬಸವ ಪರಂಪರೆಯ ವಿನಾಶಕ್ಕೆ ಷಡ್ಯಂತ್ರ ಹಂಜಿಯoತಹ ಸಾಹಿತಿಯೇ ಅಲ್ಲದ ವ್ಯಕ್ತಿಗಳು ಬಸವಣ್ಣನವರ ವ್ಯಕ್ತಿತ್ವದ ತೇಜೋವಧೆಗೆ ಹೊರಟಿರುವುದು ಖಂಡನೀಯ ಎಂದು ಹಿರಿಯ ಸಾಹಿತಿ ಅಬ್ದುಲರಹೆಮಾನ್ ಬಿದರಕುಂದಿ ಹೇಳಿದರು. ಪಟ್ಟಣದಲ್ಲಿ ವಿವಾದಿತ ಬಸವ ಮಂಟಪ ಪುಸ್ತಕದ ಲೇಖಕ ರವಿ ಹಂಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ವಿವಿಧ ಸಂಘಟನೆಗಳಿoದ ಮಂಗಳವಾರ

ತನಿಖೆಗೆ ಶಾಸಕ ಸಿ.ಎಸ್.ನಾಡಗೌಡರ ಸೂಚನೆ:                       ನಾಗರಬೆಟ್ಟ ಏತ ನೀರಾವರಿ ಯೋಜನೆ ಪೈಪಲೈನ್ ಕಾಮಗಾರಿ ಕಳಪೆ

ತನಿಖೆಗೆ ಶಾಸಕ ಸಿ.ಎಸ್.ನಾಡಗೌಡರ ಸೂಚನೆ: ನಾಗರಬೆಟ್ಟ ಏತ ನೀರಾವರಿ ಯೋಜನೆ ಪೈಪಲೈನ್ ಕಾಮಗಾರಿ ಕಳಪೆ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಯಡಿ ಅಳಡಿಸಿರುವ ಪೈಪಲೈನ್ ಕಳಪೆ ಗುಣಮಟ್ಟದ್ದಾಗಿದೆ ಎಂಬ ರೈತರ ಆರೋಪಗಳ ಹಿನ್ನೆಲೆಯಲ್ಲಿ ಕ್ವಾಲಿಟಿ ಕಂಟ್ರೋಲರ್‌ರಿoದ ತಪಾಸಣೆ ನಡೆಸಿ ವರದಿ ಸಲ್ಲಿಸಲು ತಿಳಿಸಿದ್ದು ಎಲ್ಲೆಲ್ಲಿ ಪೈಪ್‌ಗಳು ಒಡೆದಿವೆ ಅವುಗಳನ್ನು ಬದಲಾಯಿಸುವಂತೆ ತಿಳಿಸಿದ್ದೇವೆ.ಬರಗಾಲದ ಸಮಯದಲ್ಲಿ ನೀರಾವರಿ ಯೋಜನೆಗಳಿಗೆ ರೈತರು ಸಹಕಾರ ನೀಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಸಮೀಪದ ನಾಗರಬೆಟ್ಟ ಬೆಟ್ಟದಲ್ಲಿರುವ ಪರಮಾನಂದ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಕೆಬಿಜೆಎನ್‌ಎಲ್ ಹಾಗೂ ನಾಗರಬೆಟ್ಟ ಏತ ನೀರಾವರಿ ಯೋಜನೆಗೆ